ಬಳ್ಳಾರಿಯ ನ್ಯಾಯಾಲಯದಲ್ಲಿ ಹುದ್ದೆಗಳು ಖಾಲಿ ಇದ್ದು. ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಹುದ್ದೆಗೆ ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಉದ್ಯೋಗದ ಪೂರ್ಣ ಮಾಹಿತಿ ಇಲ್ಲಿದೆ.
ಖಾಲಿ ಇರುವ ಹುದ್ದೆಗಳ ವಿವರ :- ಬಳ್ಳಾರಿ ಜಿಲ್ಲೆಯ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇರುವ 1 ಬೆರಳಚ್ಚುಗಾರ ಹುದ್ದೆಗಳು ಹಾಗೂ 01 ಬೆರಳಚ್ಚು ನಕಲುಗಾರ ಹುದ್ದೆಗಳು ಹಗುಬ್ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 12 ಬೆರಳಚ್ಚುಗಾರರು, 7 ಬೆರಳಚ್ಚು ನಕಲುಗಾರ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು ಮುಂದಾಗಿದೆ.
ಅರ್ಜಿದಾರರ ವಿದ್ಯಾರ್ಹತೆ ಮಾಹಿತಿ :-
- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ ಪಿಯುಸಿ ಉತ್ತೀರ್ಣರಗಿರಬೇಕು. ಇಲ್ಲವೇ 3 ವರ್ಷಗಳ ಡಿಪ್ಲೊಮ ಕಮರ್ಸಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
ವಯಸ್ಸಿನ ಮಿತಿ :- ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ. ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ಮೀಸಲಾತಿ ನಿಯಮದಂತೆ ಅನ್ವಯ ಆಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ಇರುತ್ತದೆ. ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ. ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸಿನ ಮಿತಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಫೀ ವಿವರ :- ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 250 ರೂಪಾಯಿ ಹಾಗೂ 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ 100 ರೂಪಾಯಿ ಹಾಗೂ ಎಸ್‌ಸಿ ಹಾಗೂ ಎಸ್‌ಟಿ ಹಾಗೂ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಹುದ್ದೆಯ ತಿಂಗಳ ವೇತನ :-
- ಬೆರಳಚ್ಚುಗಾರ ಹುದ್ದೆಗೆ 21400 ರೂಪಾಯಿಯಿಂದ 42000 ರೂಪಾಯಿ.
- ಬೆರಳಚ್ಚು ನಕಲುಗಾರರು ಹುದ್ದೆಗೆ 21400 ರೂಪಾಯಿಯಿಂದ 42000 ರೂಪಾಯಿ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :-
https://ballari.dcourts.gov.in/ ವೆಬ್ಸೈಟ್ ಗೆ ತೆರಳಿ ಆನ್ಲೈನ್ ನೇಮಕಾತಿ ಬಟನ್ ಆಯ್ಕೆ ಮಾಡಿ ನಂತರ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಅಭ್ಯರ್ಥಿಗಳಿಗೆ ಸಾಮಾನ್ಯ ಸೂಚನೆಗಳು ಎಂಬ ಆಯ್ಕೆ ಸಿಗುತ್ತದೆ. ಅದನ್ನು ಓಪನ್ ಮಾಡಿ ಸೂಚನೆಗಳನ್ನು ಓದಿ. ನಂತರ ಟೈಪಿಸ್ಟ್ ಹುದ್ದೆ (ಹೈದರಾಬಾದ್ ಕರ್ನಾಟಕ ಸ್ಥಳೀಯ ಕೇಡರ್), ಟೈಪಿಸ್ಟ್-ನಕಲುದಾರರ ಹುದ್ದೆ (ಹೈದರಾಬಾದ್ ಕರ್ನಾಟಕ ಸ್ಥಳೀಯ ಕೇಡರ್), ಟೈಪಿಸ್ಟ್ ಹುದ್ದೆ (ಉಳಿದ ಪೋಷಕ ವರ್ಗ), ಟೈಪಿಸ್ಟ್-ನಕಲುದಾರರ ಹುದ್ದೆ (ಉಳಿದ ಪೋಷಕ ವರ್ಗ) ನಾಲ್ಕು ಆಪ್ಷನ್ ಸಿಗುತ್ತದೆ. ನೀವು ಯಾವ ಹುದ್ದೆಗೆ ಅರ್ಜಿ ಹಾಕುತ್ತೀರಿ ಅದರ ಆನ್ಲೈನ್ ಅಪ್ಲಿಕೇಶನ್ ಗೆ ತೆರಳಿ ನಂತರ ನಿಮ್ಮ ಹೆಸರು ವಿಳಾಸ ವಿದ್ಯಾರ್ಹತೆ ಹಾಗೂ ನಿಮ್ಮ ಲಿಂಗ ಹಾಗೂ ನಿಮ್ಮ ವಯಸ್ಸು ಎಲ್ಲವನ್ನೂ ಭರ್ತಿ ಮಾಡಿ ನಿಮಗೆ ನೀಡಲಾದ ಶುಲ್ಕವನ್ನು ಆನ್ಲೈನ್ ಮೂಲಕ ತುಂಬಿ ಅರ್ಜಿ ಸಲ್ಲಿಸಿ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SBI ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 2 ವರ್ಷಗಳಲ್ಲಿ ಹಣವು ಡಬಲ್ ಆಗುತ್ತದೆ!
ಇದನ್ನೂ ಓದಿ: ಗ್ರಾಹಕರ ಮನೆ ಮನೆಗೆ ಬರಲಿದೆ ಮಾವಿನ ಹಣ್ಣು?