Day Care Incident: ಡೇ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ ಬಿಡುವ ಮೊದಲು ಎಚ್ಚರ, ಸಂಪಾದನೆಗೆ ಜೋತುಬಿದ್ದು ಮಗುವನ್ನ ಕಳೆದುಕೊಳ್ಳಬೇಡಿ..

Day Care Incident: ಇತ್ತೀಚ್ಚಿನ ದಿನಗಳಲ್ಲಿ ಎಲ್ಲಿಯೂ ಕುಡು ಕುಟುಂಬಗಳು ಕಾಣ ಸಿಗದು. ಸಿಕ್ಕರೂ ಕೂಡ ಅಲ್ಲೊಂದು ಇಲ್ಲೊಂದು ಎಂಬಂತಿವೆ. ಹೌದು ಈ ಆಧುನಿಕತೆಗೆ ಅಂಟಿಕೊಂಡಿರೋ ನಾವುಗಳು ಜೀವನದ ಮೌಲ್ಯಗಳನ್ನ ಗಾಳಿಗೆ ತೂರಿ ಸಂಪಾದನೆಯ ಭೂತವನ್ನ ಮೈಗಂಟ್ಟಿಸಿಕೊಂಡು, ತೋರಿಕೆಯ ಜೀವನವನ್ನ ಸಾಗಿಸುತ್ತಿದ್ದೀವಿ. ಇಂತಹ ಪರಿಸ್ಥಿಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಕೂಡು ಕುಟುಂಬದಲ್ಲಿ ಸಿಗುತ್ತಿದ್ದ ಪ್ರೀತಿ, ವಾತ್ಸಲ್ಯ ಮೇಲಾಗಿ ಸೆಕ್ಯೂರಿಟಿ ಅಂದ್ರೆ ಸುರಕ್ಷತೆಯ ಆ ಭದ್ರತೆ ಈಗೀನ ಆಧುನಿಕ ಭರಾತೆಯ ಶಾಲೆ, ಡೇ ಕೇರ್ ಸೆಂಟರ್ ಗಳಲ್ಲಿ ಸಿಗೋದು ಅಕ್ಷರಶ ನಮ್ಮ ಭ್ರಮೆ. ಹೌದು ಈಗ ಕೂಡು ಕುಟುಂಬಗಳು ಮರೆಯಾಗಿದ್ದು, ಚಿಕ್ಕ ಕುಟುಂಬಗಳು ಅದ್ರಲ್ಲಿ ಗಂಡ ಹೆಂಡತಿ ಮಗು ಮಾತ್ರ ಇರಲು ಇಷ್ಟ ಪಡ್ತಾರೆ ಅದ್ರಲ್ಲೂ ಗಂಡ ಹೆಂಡತಿ ಇಬ್ಬರು ಕೆಲ್ಸಕ್ಕೆ ಹೋಗುತ್ತಿದ್ರೆ ಮಗುವನ್ನ ಏನ್ ಮಾಡೋದು ಅಂದಾಗ ದುಡಿಯೋ ನಮ್ಮ ಪೋಷಕರಿಗೆ ನೆನಪಾಗೋದು ಡೇ ಕೇರ್ ಹೆಸರಿನ ಮಕ್ಕಳನ್ನ ದುಡ್ಡು ತೆಗೆದುಕೊಂಡು ಕಾಳಜಿ ಮಾಡೋ ಸೆಂಟರ್ ಗಳು. ಇಷ್ಟೆಲ್ಲ ಪೀಠಿಕೆ ಯಾಕೆ ಅಂದ್ರೆ ಇದೀಗ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಅದನ್ನ ನೋಡಿದವರು ಯಾರು ಕೂಡ ಇನ್ಮುಂದೆ ಮಕ್ಕಳನ್ನ ಇಂತಹ ಡೇ ಕೇರ್ ಸೆಂಟರ್ ಗಳಿಗೆ ಹಾಕೋದೇ ಬೇಡ ಅಂದುಕೊಳ್ಳುವಂತೆ ಮಾಡೋದ್ರಲ್ಲಿ ಅನುಮಾನವಿಲ್ಲ.

WhatsApp Group Join Now
Telegram Group Join Now

ನಿಮಗೆಲ್ಲ ಗೊತ್ತಿರುವಂತೆ ನಗರ ಜೀವನದಲ್ಲಿ ಅಪ್ಪ ಅಮ್ಮನ ಬದಲು ಮಗುವನ್ನ ಮತ್ತೊಬ್ಬರು ನೋಡಿಕೊಳ್ಳೋದೇ ಹೆಚ್ಚು. ಅದರಲ್ಲೂ ಬೆಂಗಳೂರು ನಗರದಲ್ಲಿ ಬಹುತೇಕ ಪೋಷಕರು ಇಬ್ಬರೂ ಕೆಲಸ ಮಾಡುತ್ತಾರೆ. ಹಾಗಾಗಿ ಮಕ್ಕಳನ್ನು ಡೇ ಕೇರ್​ ಸೆಂಟರ್ ಗೆ ಸೇರಿಸಿ ಕೆಲಸಕ್ಕೆ ಹೋಗುವುದು ಮಾಮೂಲಿಯಾಗಿಬಿಟ್ಟಿದೆ. ಆದರೆ ಈ ಡೇ ಕೇರ್​ನಲ್ಲಿನ ಸಿಬ್ಬಂದಿ ಮಕ್ಕಳನ್ನು ಹೇಗೆ ಕೇರ್ ಮಾಡುತ್ತಾರೆ ಅನ್ನುವ ಅನುಮಾನ ಮೂಡುವಂತ ಘಟನೆಯೊಂದು ಸದ್ಯ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್​ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್​ ಆಗಿದೆ. ಹೌದು ಈ ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಆ ಕೊಠಡಿಯ ಬಾಗಿಲನ್ನ ಮುಚ್ಚಿಕೊಂಡು ಅಲ್ಲಿಂದ ಹೊರಗೆ ಹೋಗುತ್ತಾರೆ. ಅನಂತರ ಅಂದ್ರೆ ಬಾಗಿಲು ಮುಚ್ಚಿದ ನಂತರ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ನಾಲ್ಕೈದು ನಿಮಿಷ ಹೊಡೆದು, ಆ ಚಿಕ್ಕ ಮಗುವಿಗೆ ಕಚ್ಚಿ, ಕಾಲಿನಿಂದ ಒದ್ದು, ಸಾಕಷ್ಟು ದಂಧಲೆಯನ್ನೇ ಮಾಡಿದೆ ಆದರೂ ಕೂಡ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರುವುದಿಲ್ಲ.

ಇದನ್ನೂ ಓದಿ: ಟೈಟಾನಿಕ್ ದುರಂತದ ಬಗ್ಗೆ ತಿಳಿಯಲು ಹೋಗಿ ಅಂತ್ಯವಾದ್ರು. ಟೈಟಾನಿಕ್ ದುರಂತವನ್ನ ನೆನಪಿಸುತ್ತೆ ಸಬ್ ಮೇರಿನ್ ದುರಂತ

ಸ್ವಲ್ಪ ಯಾಮಾರಿದ್ರು ಮಗುವಿನ ಜೀವಕ್ಕೆ ಆಪತ್ತು

ಇನ್ನು ಆ ಪುಟ್ಟ ಮಗು ಮನೆಯಲ್ಲಿ ಈ ಬಗ್ಗೆ ತೊದಲು ಮಾತಿನಲ್ಲೇ ತನ್ನಗಾಗಿರುವ ಗಾಯದ ನೋವಿನ ಬಗ್ಗೆ ಹೇಳಿಕೊಂಡಿದೆ. ಗಾಬರಿಕೊಂಡ ಪೋಷಕರು ಡೇ ಕೇರ್ ಸೆಂಟರ್ ಗೆ ಬಂದು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಸತ್ಯ ಘಟನೆ ಬಯಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿಯ ದೃಶ್ಯಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಡೇ ಕೇರ್ ಸೆಂಟರ್ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಗೆ ನಗರ ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ದು ಆದರೆ ಘಟನೆ ಕುರಿತು ಠಾಣೆಗೆ ದೂರು ನೀಡಲು ಬಾಲಕಿ ಪೋಷಕರು ನಿರಾಕರಿಸಿದ್ದಾರೆ. ಹಾಗಾಗಿ ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾಂಟೆಸ್ಸರಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿರೋದ್ರ ಜೊತೆಗೆ, ಘಟನೆ ಸಂಬಂಧ ಮುಂದಿನ ಕ್ರಮದ ಕುರಿತು ಪೊಲೀಸರು ಕಾನೂನು ತಜ್ಞರ ಮೊರೆಹೋಗಿದ್ದಾರೆ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: ಅಣ್ಣನನ್ನ ಕಳೆದುಕೊಂಡ ಭಾವುಕ ಪತ್ರ ಬರೆದ ಶ್ವೇತಾ ಚಂಗಪ್ಪ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram