ನಮ್ಮ ಕನ್ನಡದ ಯೂಟ್ಯೂಬರ್ ಗಗನ್ ನಮ್ಮ ಕರ್ನಾಟಕದ ಕಂಪನ್ನ ಇಡೀ ವಿಶ್ವದಾದ್ಯಂತ ಹರಡಿಸುವ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಇಡೀ ವಿಶ್ವವೇ ಭಾರತ ಮತ್ತು ಭಾರತೀಯರತ್ತ ತಿರುಗಿ ನೋಡುವಂತೆ ಮಾಡ್ತಿದ್ದಾರೆ. ಈ ಮಧ್ಯೆ ಕೆಲ ವಿದೇಶಿ ಯೂಟ್ಯೂಬರ್ ಗಳು ಕೂಡ ಭಾರತದ ಕಳೆ ಸಂಸ್ಕೃತಿ ಆಚಾರ ವಿಚಾರ ಜನ ಜೀವನ ಎಲ್ಲವನ್ನ ತಮ್ಮ ದೇಶದ ಜನರಿಗೆ ತೋರಿಸುವ ಪ್ರಯತ್ನದಲ್ಲಿ ಭಾರತಕ್ಕೆ ಬಂದು ತಮ್ಮದೇ ಶೈಲಿಯಲ್ಲಿ, ತಮ್ಮದೇ ಭಾಷೆಯಲ್ಲಿ ವಿಡಿಯೋಗಳನ್ನ ಮಾಡ್ತಿದ್ದಾರೆ. ಆದರೆ ಇದೀಗ ಅಂತ ಒಬ್ಬ ವಿದೇಶಿ ಯೂಟ್ಯೂಬರ್ ಮೇಲೆ ಇದೀಗ ನಮ್ಮ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹಲ್ಲೆ ನಡೆದಿದೆ.
ಹೌದು ಇದೀಗ ನೆದರ್ಲ್ಯಾಂಡ್ ಮೂಲದ ಯೂಟ್ಯೂಬರ್ ಜೊತೆ ಅನುಚಿತವಾಗಿ ವರ್ತಿಸಿದ ಸ್ಥಳೀಯ ವ್ಯಾಪಾರಿಯನ್ನು ಬಂಧಿಸಲಾಗಿದೆ. ಕರ್ನಾಟಕ ಪ್ರವಾಸದಲ್ಲಿರುವ ಪೆಡ್ರೊ ಮೋಟಾ ಯೂಟ್ಯೂಬರ್ ತಮ್ಮ ಚಾನೆಲ್ ಮೂಲಕ ಭಾರತ, ಭಾರತದ ಸಂಸ್ಕೃತಿ ಬಗ್ಗೆ ಪಾಶ್ಷಿಮಾತ್ಯ ರಾಷ್ಟ್ರಗಳಿಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಆದರೆ ಚಿಕ್ಕಪೇಟೆಯ ಜನನಿಬಿಡ ಪ್ರದೇಶದಲ್ಲಿ ವ್ಲಾಗ್ ಮಾಡಿಕೊಂಡು ಹೋಗುವಾಗ ಸ್ಥಳೀಯ ವ್ಯಾಪಾರಿಯೊಬ್ಬ ಪೆಡ್ರೋ ಕೈ ಹಿಡಿದು ಎಳೆದಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಎಲ್ಲರು ಕೂಡ ಯೂಟ್ಯೂಬರ್ ಪರ ನಿಂತಿದ್ದಾರೆ.
ಇದೆ ರೀತಿಯಾದ ಘಟನೆಗಳು ನಮ್ಮ ಭಾರತ ದೇಶದಲ್ಲಿ ಇದೇ ಮೊದಲೇನಲ್ಲ,ಆದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ರಾಜಧಾನಿಯಲ್ಲಿ ಈ ರೀತಿಯ ಘಟನೆ ಆಗಬಾರದಿತ್ತು, ಆದರೆ ಆಗಿ ಹೋಗಿದೆ. ಹೌದು ನಮ್ಮ ದೇಶದಲ್ಲಿ ಈ ಹಿಂದೆ ಅಂದ್ರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ, ದಕ್ಷಿಣ ಕೊರಿಯಾದ ಯೂಟ್ಯೂಬರ್ ಒಬ್ಬರ ಮೇಲೆ ಮುಂಬೈ ಬೀದಿಯಲ್ಲಿ ಇಬ್ಬರು ವ್ಯಕ್ತಿಗಳು ಲೈವ್ ಸ್ಟ್ರೀಮಿಂಗ್ ಮಾಡುವಾಗ ಕಿರುಕುಳ ನೀಡಿದ್ದರು. ನಂತರ ಆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ರು. ಆದ್ರೆ ಇದೀಗ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪೆಡ್ರೊ ಮೋಟಾ ತನ್ನ ಪಾಡಿಗೆ ರಸ್ತೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹೋಗುವಾಗ ವ್ಯಾಪಾರಿಯೊಬ್ಬ ಆತನನ್ನು ಕೈ ಹಿಡಿದು ಎಳೆದಾಡಿದ್ದಾನೆ.
ಆಗ ಪೆಡ್ರೊ ನಮಸ್ತೆ ಸರ್ ಎಂದು ಹೇಳಿದಾಗ, ಆ ವ್ಯಕ್ತಿ ಹೇ ಕ್ಯಾ ಹೈ ಎಂದು ಹೇಳುತ್ತಾ ಆತನನ್ನು ತನ್ನ ಶಾಪ್ನತ್ತಾ ಎಳೆದುಕೊಂಡು ಹೋಗಿದ್ದಾನೆ. ಪೆಡ್ರೋ ದಯವಿಟ್ಟು ನನ್ನನ್ನು ಹೋಗುವುದಕ್ಕೆ ಬಿಡಿ ಸರ್ ಎಂದು ಮನವಿ ಮಾಡಿದರೂ, ಆ ವ್ಯಾಪಾರಿ ಕ್ಯಾಮರಾವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಹೇಗೋ ಯೂಟ್ಯೂಬರ್ ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ದೇಶಕ್ಕೆ ಬರುವ ಇಂತಹ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ಕಿಡಿ ಕಾರಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಎರಡನೇ ಮಗಳು ಆಭರಣ ಏನು ಓದುತ್ತಿದ್ದಾರೆ? ಮಗಳ ಬಗ್ಗೆ ಡಿಕೆಶಿ ಹೇಳಿದ್ದೇನು?
ಆರೋಪಿ ಅರೆಸ್ಟ್
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ನಮ್ಮ ಕರ್ನಾಟಕದ ಜನತೆ ಆ ವ್ಯಾಪಾರಿಯ ವಿರುದ್ಧ ಕೆಂಡಾಮಂಡಲಾರಾಗಿದ್ದು, ಪೊಲೀಸ್ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡಿದ್ರು ಸದ್ಯ ಇದೀಗ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳೀಯ ವ್ಯಾಪಾರಿ ನವಾಬ್ ಹಯಾತ್ ಷರೀಫ್ ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೇ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 92ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ಬಿ ನಿಂಬರಗಿ ಮಾಹಿತಿ ನೀಡಿದ್ದಾರೆ. ಅಲ್ದೇ ವೈರಲ್ ವಿಡಿಯೋವನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ವಿರುದ್ಧ ಸದ್ಯಕೆ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ವಿದೇಶಿ ಪ್ರವಾಸಿಗರೊಂದಿಗೆ ಇಂತಹ ಅನುಚಿತ ವರ್ತನೆಯನ್ನು ಕಂಡು ಬಂದ್ರೆ ಪೊಲೀಸ್ ಇಲಾಖೆ ಸುಮ್ಮನೆ ಕೂರೋದಿಲ್ಲ ಇಂತಹ ಘಟನೆಗಳು ಮರುಕಳಿಸಿದರೆ ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸರು ಎಚ್ಚರಿಸಿಕೆ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ: ಸೈಲೆಂಟ್ ಆಗಿ ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram