ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಬಗ್ಗೆ ಈಗಾಗ್ಲೇ ನಿಮಗೆ ತಿಳಿದಿದೆ. ಇದೀಗ ಈ ರೈಲು ಸಂಚಾರದ ಕುರಿತು ಗುಡ್ ನ್ಯೂಸ್ ಒಂದು ಬಂದಿದ್ದು, ಇದೆ ತಿಂಗಳು ಅಂದ್ರೆ ಜೂನ್ ತಿಂಗಳ ಕೊನೆಗೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ವೇಗದ ರೈಲು ಬೆಂಗಳೂರು ಹಾಗೂ ಹುಬ್ಬಳ್ಳಿಯ ನಡುವೆ ಸಂಪರ್ಕವನ್ನು ಕಲ್ಪಿಸಿಕೊಡಲು ಜೂನ್ 26ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿಲಿದ್ದಾರೆ. ನಂತರ ಚಾಲನೆ ನೀಡಿದ ಎರಡು ದಿನಗಳ ಬಳಿಕ ತನ್ನ ಸಂಚಾರವನ್ನ ಪ್ರಾರಂಭ ಮಾಡಲಿದೆ ಅನ್ನುವ ಸುದ್ದಿಗಳು ವೈರಲ್ ಆಗ್ತಿವೆ. ಇನ್ನು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆಯನ್ನು ನೀಡುತ್ತಾರೆ. ಚಾಲನೆ ನೀಡಿದ ಎರಡು ದಿನಗಳ ನಂತರ ಬೆಂಗಳೂರು-ಹುಬ್ಬಳ್ಳಿ ಧಾರವಾಡ ನಡುವಿನ ಸಂಪರ್ಕ ಕಲ್ಪಿಸಲಾಗುತ್ತದೆ ಎಂಬುವುದರ ಕುರಿತು ಇದೀಗ ಸುದ್ದಿಗಳು ಹರಿದಾಡುತ್ತಿವೆ.
ಹುಬ್ಬಳ್ಳಿ – ಬೆಂಗಳೂರು ಮಾರ್ಗವಾಗಿ ಸಂಚಾರ ಪ್ರಾರಂಭ
ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಅತಿ ಹೆಚ್ಚು ಪ್ರಯಾಣಿಸುವ ಪ್ರದೇಶ ಹುಬ್ಬಳ್ಳಿ- ಧಾರವಾಡ. ಹೀಗಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ವಂದೇ ಭಾರತ್ ಪ್ರಯಾಣದ ಅವಕಾಶವನ್ನು ಕಲ್ಪಿಸಿ ಕೊಡುವುದು ಬಹುಕಾಲದ ಬೇಡಿಕೆಯಾಗಿತ್ತು. ಪ್ರಸ್ತುತ, ಹುಬ್ಬಳ್ಳಿ ತಲುಪಲು 7 ಗಂಟೆಗಳ ಪ್ರಯಾಣದ ಅವಶ್ಯಕತೆ ಇದೆ, ಆದ್ರೆ ಜೂನ್ 28 ರ ನಂತರ, ಇದು ಕೇವಲ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಅಂತ ಹೇಳಲಾಗುತ್ತಿದ್ದು, 2ಗಂಟೆಗಳ ಸಮಯ ಉಳಿತಾಯವಾಗಲಿದ್ದು, ಹುಬ್ಬಳ್ಳಿ-ಬೆಂಗಳೂರು ನಡುವಿನ 470 ಕಿ.ಮೀ ಉದ್ದಕ್ಕೂ ವಿದ್ಯುದ್ದೀಕರಣ ಮಾಡಲಾಗಿದೆ. ಇನ್ನು ಹುಬ್ಬಳ್ಳಿ-ಬೆಂಗಳೂರು ನಡುವಿನ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಪರಿಶೀಲನೆ, ಪರೀಕ್ಷೆ ಮತ್ತು ಫೈನ್ ಟ್ಯೂನಿಂಗ್ ಕಾರ್ಯಗಳು ಕೂಡ ಬಹುತೇಕ ಮಟ್ಟದಲ್ಲಿ ಪೂರ್ಣಗೊಂಡಿದೆ ಅಂತ ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದು, ಜೂನ್ ಕೊನೆಯಿಂದ ವಂದೇ ಭಾರತ್ ಸಂಚಾರ ಶುರುವಾಗಲಿದೆ.
ಇದನ್ನೂ ಓದಿ: ಫೇಸ್ ಬುಕ್ ನ್ನು ಭಾರತದಲ್ಲಿ ಬ್ಯಾನ್ ಮಾಡಿಬಿಡ್ತೇವೆ, ಹೈಕೋರ್ಟ್ ಖಡಕ್ ಎಚ್ಚರಿಕೆ..
ವಂದೇ ಭಾರತ್ ಟ್ರೈನ್ ನಲ್ಲಿ ಏನೆಲ್ಲಾ ಸೌಕರ್ಯಗಳಿವೆ ನೋಡಿ?
ಹುಬ್ಬಳ್ಳಿ ಧಾರವಾಡ ನಡುವೆ ಅತಿವೇಗದ ಸಂಪರ್ಕ ಕಲ್ಪಿಸಿ ಕೊಡುತ್ತಿರುವ ಈ ರೈಲು ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಸಂಚಾರವನ್ನ ಆರಂಭಿಸುತ್ತಿದ್ದು, ವಂದೇ ಭಾರತ್ ಎಕ್ಸ್ಪ್ರೆಸ್ 16 ಹವಾನಿಯಂತ್ರಿತ ಕೋಚ್ಗಳನ್ನು ಹೊಂದಿದ್ದು ಅವುಗಳಲ್ಲಿ ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್ಗಲಿವೆ. ಒಟ್ಟು 1,128 ಪ್ರಯಾಣಿಕರು ಆಸನಗಳಲ್ಲಿ ಕೂರಬಹುದಾಗಿದ್ದು, ಎಲ್ಲಾ ತರಬೇತುದಾರರು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದಾರೆ. GPS-ಆಧಾರಿತ ಆಡಿಯೋ-ದೃಶ್ಯ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ವೈ-ಫೈ ಹಾಟ್ಸ್ಪಾಟ್ ಮತ್ತು ಆರಾಮದಾಯಕ ಆಸನಗಳನ್ನ ಕಲ್ಪಿಸಲಾಗಿದೆ. ಕಾರ್ಯನಿರ್ವಾಹಕ ವರ್ಗದಲ್ಲಿ ತಿರುಗುವ ಕುರ್ಚಿಗಳಿದ್ದು, ಎಲ್ಲಾ ಶೌಚಾಲಯಗಳು ಜೈವಿಕವಾಗಿದ್ದು, ಡ್ಯುಯಲ್ ಮೋಡ್ ನಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.ಒಟ್ಟಿನಲ್ಲಿ ಬಹು ನಿರೀಕ್ಷಿತ ವಂದೇ ಭಾರತ್ ರೈಲು ಸಂಚಾರಕ್ಕೆ ದಿನ ಗಣನೆ ಶುರುವಾಗಿದ್ದು, ಪ್ರಯಾಣಿಕರ ಮತ್ತು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ, ನಿರೀಕ್ಷೆಗಳನ್ನ ಈಡೇರಿಸುತ್ತ ಕಾದು ನೋಡಬೇಕಿದೆ.
ಬೆಂಗಳೂರಿನಿಂದ ಧಾರಾವಾಡಕ್ಕೆ ಹೋಗುವ ವಂದೇ ಭಾರತ್ ರೈಲಿನ ವೇಳಾಪಟ್ಟಿ
- ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬೆಂಗಳೂರು – ಬೆಳಗ್ಗೆ 5:45 AM
- ಯಶವಂತಪುರ – 5:55 AM
- ದಾವಣಗೆರೆ – 9:58 AM
- ಹುಬ್ಬಳ್ಳಿ – 12:10 PM
- ಧಾರವಾಡ – 12:40 PM
ಧಾರವಾಡದಿಂದ ಬೆಂಗಳೂರಿಗೆ ಬರುವ ವೇಳಾಪಟ್ಟಿ
- ಧಾರವಾಡ – ಮಧ್ಯಾಹ್ನ 1:15 PM
- ಹುಬ್ಬಳ್ಳಿ – 1:35 PM
- ದಾವಣಗೆರೆ – 3:48 PM
- ಯಶವಂತಪುರ – 7:45 PM
- ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬೆಂಗಳೂರು – ರಾತ್ರಿ 8:10 PM
ಇದನ್ನೂ ಓದಿ: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram