ಬ್ಯಾಂಕ್ ನೌಕರರಿಗೆ ವೇತನ ಹೆಚ್ಚಳ ಹಾಗೂ ವಾರದ ಎರಡು ದಿನ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ

Salary Hike

ಐಟಿ ಕಂಪನಿಗಳಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಆದರೆ ಬ್ಯಾಂಕ್ ಮತ್ತು ಸರ್ಕಾರಿ ನೌಕರರಿಗೆ ಮಾತ್ರ ವಾರದ ಅರು ದಿನಗಳು ಆಫೀಸ್ ಗೆ ಹೋಗಲೇ ಬೇಕು. ಇದು ಬ್ಯಾಂಕ್ ಮತ್ತು ಸರ್ಕಾರಿ ನೌಕರಿಗೆ ಬಹಳ ಬೇಸರದ ವಿಷಯ ಆಗಿತ್ತು. ಬ್ಯಾಂಕ್ ನೌಕರರ ಮನವಿಗೆ ಸ್ಪಂದಿಸಿ ಈಗಾಗಲೇ ತಿಂಗಳಿನ ಎರಡನೇ ಮತ್ತು ನಾಲ್ಕನೇ ಶನಿವಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳಿಗೆ ರಜೆ ಇದೆ. ಆದರೆ ಅದರ ಜೊತೆಗೆ ಈಗ ಮೊದಲನೇ ಮತ್ತು ಮೂರನೇ ಶನಿವಾರ ಸಹ ರಜೆ ಘೋಷಣೆ ಆಗುವ ಸಾಧ್ಯತೆ ಇದೆ. ಈ ಯೋಜನೆಯು ಈ ವರ್ಷವೇ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ.

WhatsApp Group Join Now
Telegram Group Join Now

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕೇಂದ್ರಕ್ಕೆ ಸಲ್ಲಿಸಿರುವ ಮನವಿ ಏನು?: ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ) ಎಂಬುದು ಭಾರತೀಯ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಯು ಬಿ ಐ ಮತ್ತು ವಿವಿಧ ಬ್ಯಾಂಕ್ ಗಳ ಒಕ್ಕೂಟಗಳು ಬ್ಯಾಂಕ್ ನೌಕರರಿಗೆ ವಾರದ 5 ದಿನಗಳು ಮಾತ್ರ ಕೆಲಸ ಮಾಡುವಂತೆ ಉಳಿದ ಎರಡು ದಿನಗಳು ರಜೆ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಪ್ರತಿ ದಿನವೂ ಕೆಲಸದ ಸಮಯ ಮೊದಲಿನಂತೆ ಇರಲಿದೆ. ಕೆಲಸದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಯುಬಿಐ ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವಾಗ ಜಾರಿ ಆಗಲಿದೆ ಹೊಸ ಕಾನೂನು?: ಮನವಿಯನ್ನು ಪರಿಗಣಿಸಿ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಕೇಂದ್ರ ಸಚಿವಾಲಯವು ಅನುಮೋದನೆ ನೀಡಿದ ಬಳಿಕ ಜಾರಿಯಾಗಲಿದೆ. ಇದರ ಜೊತೆಗೆ ಬ್ಯಾಂಕ್ ಉದ್ಯೋಗೀಗಳ ಬಹು ದಿನಗಳ ನಿರೀಕ್ಷೆಯ ವೇತನ ಏರಿಕೆಯು ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟವು ತಿಳಿಸಿದೆ. 

ಇದನ್ನೂ ಓದಿ: ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಅವರು ಹೊಸ ಯೋಜನೆ ಜಾರಿ ಮಾಡಿದ್ದಾರೆ 

ವಾರದಲ್ಲಿ ಎರಡು ದಿನ ಬ್ಯಾಂಕ್ ಗಳಿಗೆ ರಜೆ ಘೋಷಣೆ ಮಾಡಿದರೆ ಗ್ರಾಹಕರಿಗೆ ಆಗುವ ತೊಂದರೆಗಳು ಏನು?

ಎರಡು ದಿನ ರಜೆಯ ಘೋಷಣೆ ಬ್ಯಾಂಕ್ ಗೆ ಬರುವ ಗ್ರಾಹಕರಿಗೆ ಬಹಳ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಅದರ ಜೊತೆಗೆ ಉದ್ಯೋಗಿಗಳಿಗೆ ಸಹ ಕೆಲವು ತೊಂದರೆಗಳು ಉಂಟಾಗಬಹುದು. ಹಾಗಾದರೆ ಗ್ರಾಹಕರಿಗೆ ಯಾವ ರೀತಿಯ ತೊಂದರೆ ಉಂಟಾಗಬಹುದು ಎಂದು ನೋಡೋಣ.

  • ಬ್ಯಾಂಕ್ ಗೆ ಬರುವ ಗ್ರಾಹಕರಿಗೆ ನಗದು ಠೇವಣಿ ಮಾಡಲು, ಹಣವನ್ನು ವಿತ್‌ಡ್ರಾ ಮಾಡಲು ಚೆಕ್ ನೀಡಿ ಹಣ ಪಡೆಯಲು ಹಾಗೂ ಡಿಮ್ಯಾಂಡ್ ಡ್ರಾಫ್ಟ್ ಖರೀದಿ ಹೀಗೆ ಮುಂತಾದ ದೈನಂದಿನ ಹಣಕಾಸು ವ್ಯವಹಾರಗಳಿಗೆ ತೊಂದರೆ ಉಂಟಾಗಬಹುದು.
  • ಎರಡು ದಿನ ರಜೆ ನೀಡಿದರೆ ರಜೆಯ ನಂತರದ ದಿನದಂದು ಬ್ಯಾಂಕ್‌ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಗ್ರಾಹಕರು ಹೆಚ್ಚಿನ ಸಮಯ ಕಾಯುವ ಪರಿಸ್ಥಿತಿ ಎದುರಾಗಬಹುದಾಗಿದೆ.
  • ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾದರೆ ತಕ್ಷಣ ಬ್ಯಾಂಕ್ ಗೆ ಕರೆ ಮಾಡಿ ಅಥವಾ ಬ್ಯಾಂಕ್ ಗೆ ಭೇಟಿನೀಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳುವುದು ಕಷ್ಟ ಆಗಬಹುದು. ಹಾಗು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಕೆಲಸ ಮಾಡಿರಬಹುದು.
  • ಗ್ರಾಹಕರ ಹಣದ ತೊಂದರೆಗೆ ಬ್ಯಾಂಕ್ ಗಳು ಸಹಾಯಕವಾಗಿದೆ. ಎರಡು ದಿನದ ರಜೆ ಘೋಷಣೆ ಮಾಡಿದರೆ ತಕ್ಷಣದ ಹಣದ ನಿರ್ವಹಣೆಗೆ ಅಗತ್ಯವಾದ ಸಂದರ್ಭಗಳಲ್ಲಿ ಹಣವೂ ದೊರೆಯದೆ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಿದೆ.
  • ಎಟಿಎಂ ಗಳಲ್ಲಿ ಹಣ ಸಿಗದೇ ಜನರು ನಗದು ವ್ಯವಹಾರಗಳಿಗೆ ಸಂಬಂಧ ಪಟ್ಟಂತೆ ಕೆಲವು ಸಮಸ್ಯೆಗಳು ಎದುರಾಗಬಹುದು.

ಇದನ್ನೂ ಓದಿ: ವಾವ್ ಸ್ಕೂಟರ್ ಅಂದ್ರೆ ಇದು, ಇದರ ವೈಶಿಷ್ಟತೆಗಳನ್ನು ತಿಳಿದರೆ ಶೋರೂಮ್ ಮುಂದೆ ಕ್ಯೂ ನಿಲ್ತೀರಾ !