ಪ್ರತಿ ದಿನ ಬ್ಯಾಂಕ್ ವ್ಯವಹಾರಕ್ಕೆ ತೆರಳುವಾಗ ನಾವು ಇಂದು ಬ್ಯಾಂಕ್ ಗೆ ರಜೆ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಸಾಮಾನ್ಯವಾಗಿ ಪ್ರತಿ ಭಾನುವಾರ ಹಾಗೂ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗೆ ರಜೆ ಇರುತ್ತದೆ. ಇದನ್ನು ಹೊರತು ಪಡಿಸಿ ಬ್ಯಾಂಕ್ ಗೆ ಸ್ಥಳೀಯ ಹಬ್ಬಗಳಿಗೆ ಹಾಗೂ ರಾಷ್ಟ್ರೀಯ ಹಬ್ಬಗಳಿಗೆ ರಜೆ ಇರುತ್ತದೆ. ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಯಾವ ಯಾವ ದಿನಾಂಕದಂದು ಬ್ಯಾಂಕ್ ಗೆ ರಜೆ ಇರುತ್ತದೆ ಎಂಬುದನ್ನು ತಿಳಿಯೋಣ.
ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಬ್ಯಾಂಕ್ ಗೆ ಏಷ್ಟು ದಿನಗಳ ರಜೆ ಇರುತ್ತದೆ?: ಜೂನ್ ತಿಂಗಳಲ್ಲಿ ಒಟ್ಟು 8 ದಿನಗಳು ಬ್ಯಾಂಕ್ ಗೆ ರಜೆ ಇರುತ್ತದೆ. ಒಟ್ಟು 5 ಭಾನುವಾರ ಹಾಗೂ ಎರಡು ಶನಿವಾರ ಹಾಗೂ ಸ್ಥಳೀಯ ರಜೆ ಇರುತ್ತದೆ. ವಿಶೇಷ ಏನೆಂದರೆ ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಜೂನ್ 14 ರಿಂದ ಸತತವಾಗಿ ನಾಲ್ಕು ದಿನ ಎಂದರೆ ಜೂನ್ 17 ರ ವರೆಗೆ ರಜೆ ಇರುತ್ತದೆ.
ಬೇರೆ ಬೇರೆ ರಾಜ್ಯಗಳಲ್ಲಿ ಜೂನ್ ತಿಂಗಳ ರಜೆ ಏಷ್ಟು?: ಕರ್ನಾಟಕ ಹೊರತು ಪಡಿಸಿ ಕೆಲವು ರಾಜ್ಯಗಳಲ್ಲಿ ಜೂನ್ ತಿಂಗಳಲ್ಲಿ 13 ದಿನಗಳ ಬ್ಯಾಂಕ್ ರಜೆ ಇದೆ. ವಿಶೇಷವಾಗಿ ಒಡಿಶಾ ಮತ್ತು ಪಂಜಾಬ್ ನಲ್ಲಿ ಹೆಚ್ಚಿನ ರಜೆ ಇದೆ.
ಕರ್ನಾಟಕದಲ್ಲಿ ಜೂನ್ ತಿಂಗಳ ರಜೆಯ ಪಟ್ಟಿ ಹೀಗಿದೆ :-
- ಜೂನ್ 2 2024 – ಮೊದಲನೇ ಭಾನುವಾರ.
- ಜೂನ್ 8 2024 – ಎರಡನೆ ಶನಿವಾರ.
- ಜೂನ್ 9 2024 – ಎರಡನೇ ಭಾನುವಾರ.
- ಜೂನ್ 16 2024 – ಮೂರನೇ ಭಾನುವಾರ.
- ಜೂನ್ 17, 2024 – ಬಕ್ರೀದ್ ಹಬ್ಬ.
- ಜೂನ್ 22 2024 – ನಾಲ್ಕನೇ ಶನಿವಾರ,
- ಜೂನ್ 23 2024 – ನಾಲ್ಕನೇ ಭಾನುವಾರ.
- ಜೂನ್ 30 2024 – ಐದನೇ ಭಾನುವಾರ.
ಕರ್ನಾಟಕ ಹೊರತು ಪಡಿಸಿ ಜೂನ್ ತಿಂಗಳ ಬ್ಯಾಂಕ್ ರಜೆಯ ಪಟ್ಟಿ :-
- ಜೂನ್ 2 2024- ಮೊದಲನೇ ಭಾನುವಾರ.
- ಜೂನ್ 8 2024- ಎರಡನೆ ಶನಿವಾರ.
- ಜೂನ್ 9 2024 – ಎರಡನೇ ಭಾನುವಾರ.
- ಜೂನ್ 10 2024 – ಗುರು ಅರ್ಜುನ್ ದೇವ್ ಬಲಿದಾನ ದಿನದ ಪ್ರಯುಕ್ತ ಪಂಜಾಬ್ ರಾಜ್ಯದಲ್ಲಿ ರಜೆ.
- ಜೂನ್ 14 2024 – ಪಹಿಲಿ ರಾಜ ದಿನದ ಪ್ರಯುಕ್ತ ಒಡಿಶಾ ರಾಜ್ಯದಲ್ಲಿ ರಜೆ ಇರಲಿದೆ.
- ಜೂನ್ 15 2024 – ವೈಎಂಎ ದಿನ ಮತ್ತು ರಾಜ ಸಂಕ್ರಾಂತಿ ಹಬ್ಬ ದ ಅಂಗವಾಗಿ ಮಿಜೋರಾಂ ಹಾಗೂ ಒಡಿಶಾದಲ್ಲಿ ಬ್ಯಾಂಕ್ ರಜೆ ಇರಲಿದೆ.
- ಜೂನ್ 16 2024 – ಮೂರನೇ ಭಾನುವಾರ.
- ಜೂನ್ 17, 2024 : ಬಕ್ರೀದ್ ಹಬ್ಬದ ಪ್ರಯುಕ್ತ ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.
- ಜೂನ್ 18, 2024 : ಬಕ್ರೀದ್ ಹಬ್ಬ ದ ಅಂಗವಾಗಿ ಜಮ್ಮು ಕಾಶ್ಮೀರದಲ್ಲಿ ಬ್ಯಾಂಕ್ ರಜೆ ಇರುತ್ತದೆ.
- ಜೂನ್ 21 2024 : ವಟ ಸಾವಿತ್ರ ವ್ರತದ ಪ್ರಯುಕ್ತ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.
- ಜೂನ್ 22 2024 : ನಾಲ್ಕನೇ ಶನಿವಾರ.
- ಜೂನ್ 23 2024 : ನಾಲ್ಕನೇ ಭಾನುವಾರ.
- ಜೂನ್ 30 2024: ಐದನೇ ಭಾನುವಾರ.
ಬ್ಯಾಂಕ್ ರಜಾದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಇರುತ್ತದೆ ಹಾಗೂ ಎಟಿಎಂ ಕೇಂದ್ರಗಳು ಓಪನ್ ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 20 ವರ್ಷಗಳ ಅವಧಿಗೆ ಹೊಮ್ ಲೋನ್ ತೆಗೆದುಕೊಂಡರೆ EMI ಎಷ್ಟು ಪಾವತಿಸಬೇಕು ಎಂಬುದನ್ನು ತಿಳಿಯೋಣ
ಇದನ್ನೂ ಓದಿ: ತಿಂಗಳಿಗೆ ದಿನಕ್ಕೆ 333 ರೂಪಾಯಿ ಹೂಡಿಕೆ ಮಾಡಿ 17 ಲಕ್ಷ ರೂಪಾಯಿ ಹಿಂಪಡೆಯುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯೋಣ.