ರಾಜ್ಯ ಸರಕಾರದ ಬೇಡಿಕೆಯ ಮೇರೆಗೆ ಕೇಂದ್ರ ಸರ್ಕಾರವು ರಾಜ್ಯದ ಬರ ಪ್ರಮಾಣವನ್ನು ಪರಿಶೀಲನೆ ಮಾಡಿ ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಈಗ ರಾಜ್ಯ ಸರ್ಕಾರವು ರೈತರ ಖಾತೆಗೆ ಬೆಳೆ ಪರಿಹಾರದ ಹಣವನ್ನು ಹಾಕುತ್ತಿದೆ. ನೀವು ನಿಮ್ಮ ಖಾತೆಗೆ ಹಣ ಬಂದಿರುವುದನ್ನು ತಿಳಿಯುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಿಂದ ತಿಳಿಯೋಣ.
ಈಗಾಗಲೇ ರೈರತ ಖಾತೆಗೆ 2,000 ರೂಪಾಯಿ ಜಮಾ ಮಾಡಿದೆ :- ರಾಜ್ಯ ಸರ್ಕಾರವು ತುರ್ತಾಗಿ ರೈತರ ಖಾತೆಗಳಿಗೆ ಮೊದಲ ಹಂತದಲ್ಲಿ 2,000 ರೂಪಾಯಿಗಳನ್ನು ಜಮಾ ಮಾಡಿದೆ. ಎರಡನೇ ಹಂತದಲ್ಲಿ ರೈತರ ಖಾತೆಗೆ ಹಾಳಾಗಿರುವ ಬೆಳೆಯ ಪ್ರಮಾಣದ ಮೇಲೆ ಈ ಹಣವನ್ನು ಕಡಿತ ಗೊಳಿಸಿ ಉಳಿದ ಹಣವನ್ನು ಜಮಾ ಮಾಡಲಾಗುತ್ತದೆ.
ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗಲಿದೆ :- ಈ ಹಿಂದೆ ಯಾವುದೇ ಬೆಳೆ ಪರಿಹಾರದ ಹಣ ಸರ್ಕಾರ ಬಿಡುಗಡೆ ಮಾಡಿದರೆ ಮಧ್ಯವರ್ತಿ ಗಳು ಅರ್ಧ ಹಣವನ್ನು ತೆಗೆದುಕೊಂಡು ಫಲಾನುಭವಿಗಳಿಗೆ ಅಲ್ಪ ಹಣವನ್ನು ನೀಡುತ್ತಿದ್ದರು. ಈಗ ಎಲ್ಲರ ಬಳಿ ಬ್ಯಾಂಕ್ ಖಾತೆ ಇರುವುದರಿಂದ ಸರ್ಕಾರವು ನೇರವಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಕಾಟ ಇಲ್ಲದೆಯೇ ಸರ್ಕಾರ ಬಿಡುಗಡೆ ಮಾಡಿರುವ ಹಣವೂ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ಪರಿಹಾರದ ಹಣ ಜಮಾ ಆಗಿರುವ ಮಾಹಿತಿ ತಿಳಿಯುವುದು ಹೇಗೆ?
ಇಂದಿನ ಆನ್ಲೈನ್ ಜಮಾನದಲ್ಲಿ ನಾವು ಮನೆಯಲ್ಲಿಯೇ ಕುಳಿತು ಎಲ್ಲಾ ಮಾಹಿತಿಗಳನ್ನು ಪಡೆಯಲು ಸಾಧ್ಯವಿದೆ. ಈಗ ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಮೊದಲು ನೀವು FRUITS ID ಹೊಂದಿರಬೇಕು. ಹಾಗೂ ರೈತರು ಖಾತೆಗೆ NPCI ಲಿಂಕ್ ಮಾಡಿಸಿರಬೇಕು. ಹಾಗಿದ್ದರೆ ಮಾತ್ರ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ.ಆನ್ಲೈನ್ ಮೂಲಕ ಬೆಳೆ ಪರಿಹಾರದ ಹಣ ಜಮಾಗಿದೆಯೇ ಎಂಬುದನ್ನು ನೋಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:-
- ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ https://parihara.karnataka.gov.in/service92/ ಭೇಟಿ ನೀಡಿ.
- ನಿಮ್ಮ ಗ್ರಾಮ, ನಿಮ್ಮ ಹೋಬಳಿ, ಹಾಗೂ ನಿಮ್ಮ ತಾಲೂಕು ಹಾಗೂ ಜಿಲ್ಲೆ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮ್ಮ ಖಾತೆಗೆ ಬೆಳೆ ಪರಿಹಾರ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ.
ಬೆಳೆ ಪರಿಹಾರದ ಹಣ ಜಮಾ ಆಗದೆ ಇದ್ದಾರೆ ಹೀಗೆ ಮಾಡಿ :- ಈ ವರೆಗೆ ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣವೂ ಜಮಾ ಆಗದೆ ಇದ್ದಾರೆ ಈ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ FRUITS ID ಮಾಡಿಸಿಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ NPCI ಲಿಂಕ್ ಮಾಡಿಸಬೇಕು. ಇದರ ಜೊತೆಗೆ ರೈತರ ಆಧಾರ್ ಕಾರ್ಡ್ ಏನು ಹೆಸರು ಇದೆಯೋ ಅದೇ ಹೆಸರು, FRUITS ID ಯಲ್ಲಿ ಹಾಗೂ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರು ಇರಬೇಕು. ಈ ಎಲ್ಲಾ ಮಾಹಿತಿಗಳು ಸರಿಯಾಗಿ ಇದ್ದರೆ ಸಧ್ಯದಲ್ಲಿಯೇ ನಿಮ್ಮ ಬ್ಯಾಂಕ್ ಖಾತೆಗಳಿಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ.
ಇದನ್ನೂ ಓದಿ: ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!
ಇದನ್ನೂ ಓದಿ: ಕನಸಿನ ಮನೆ ಖರೀದಿಗೆ ಕೈಗೆಟುಕುವಂತಾಗಿದೆ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ!