ಪಿಜಿಗಳಿಗೆ ಶುರುವಾಯ್ತು ಹೊಸ ಗೈಡ್ ಲೈನ್ಸ್ ಕಂಟಕ; ಪಿಜಿಗಳಿಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಬಿಎಂಪಿ

ಬೆಂಗಳೂರು ಐಟಿ ಸಿಟಿ, ಎಲ್ಲೆಲ್ಲಿಂದಲೂ ಬಂದು ಇಲ್ಲಿ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿ ಕೊಳ್ಳುತ್ತಿರೋರ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ. ಹೀಗೆ ಉದ್ಯೋಗ ಮಾಡುತ್ತಿರುವ ಬಹುತೇಕರು ಪಿಜಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಪಿಜಿಗಳಿಗೂ ಪಾಲಿಕೆ ಪರ್ಮಿಷನ್ ಪಡೆಯಬೇಕು. ಮಾನದಂಡಗಳನ್ನ ಪಾಲಿಸಿಬೇಕು. ಆದ್ರೆ ನಗರದಲ್ಲಿನ ಕೆಲ ಪಿಜಿಗಳು ಕಾನೂನು‌ ಬಾಹಿರವಾಗಿ ಹಾಗೂ ಸುರಕ್ಷಿತ ಮಾನದಂಡ ಉಲ್ಲಂಘಿಸುತ್ತಿವೆ ಅನ್ನೋ ಆರೋಪವಿದೆ. ಇಂಥ ಕಾನೂನು ಬಾಹಿರ ಪಿಜಿಗಳ ವಿರುದ್ಧ ಈಗ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಹೊಸ ವರ್ಷಕ್ಕೂ ಮುಂಚಿತವಾಗಿ ವಲಯವಾರು ಇರುವ ಪಿಜಿಗಳ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸಲು ಪಾಲಿಕೆ ನಿರ್ಧರಿಸಿದೆ. ಹೌದು ಸಿಲಿಕಾನ್ ಸಿಟಿ ಪಿಜಿಗಳಿಗೆ ಬಿಗ್ ಶಾಕ್ ಅಂತಲೇ ಹೇಳಬಹುದು, ಬೆಂಗಳೂರಿನ ಪಿಜಿ‌ ಮಾಲೀಕರಿಗೆ ಬಿಬಿಎಂಪಿ‌ ಶಾ‌ಕ್ ಕೊಟ್ಟಿದೆ. ನಗರದಲ್ಲಿ ಕಾನೂನು‌ ಬಾಹಿರವಾಗಿ ಹಾಗೂ ಸುರಕ್ಷಿತ ಮಾನದಂಡ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಪಿಜಿಗಳಿಗೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದೆ. ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಹಿನ್ನಲೆಯಲ್ಲಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಮೂಲಕ ಬಿಬಿಎಂಪಿ ಪರಿಶೀಲನೆ ನಿರ್ಧಾರಕ್ಕೆ ಮುಂದಾಗಿದೆ.

WhatsApp Group Join Now
Telegram Group Join Now

ಬಿಬಿಎಂಪಿ ಹೊಸ ಗೈಡ್ ಲೈನ್ಸ್‌ ಮೂಲಕ ಪರಿಶೀಲನೆ ಮುಂದಾಗಿದ್ದು, ನಗರದ ಪಿಜಿ ಉದ್ಯಮದ ಮೇಲೆ ಪಾಲಿಕೆ ಕಣ್ಣು ಬಿದ್ದಿದೆ. ಇನ್ನು ಅರ್ಧಕ್ಕರ್ಧ ಪಿಜಿಗಳು ಅಕ್ರಮವಾಗಿವೆಯಂತೆ. ಈಗ ಬಿಬಿಎಂಪಿ ಆಪರೇಷನ್ ಪಿಜಿ ಶುರು ಮಾಡ್ತಿದೆ. ಹೌದು ವಾಣಿಜ್ಯ ಪರವಾನಗಿ ಪಡೆಯದೆ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಿ ವಾಣಿಜ್ಯ ತೆರಿಗೆ ಸಂಗ್ರಹಿಸಲು ಅಧಿಕಾರಿಗಳಿಗೆ ಬಿಬಿಎಂಪಿ ಚೀಫ್ ಕಮಿಷನರ್ ಸೂಚಿಸಿದ್ದಾರೆ.

ಹೌದು ಪಿಜಿ ನಡೆಸಲು ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪಡೆಯುವ ಜೊತೆಗೆ ಸುಕರಕ್ಷತೆಯ ಅಧಿಕೃತ ಪತ್ರವೂ ಪಡೆದುಕೊಳ್ಳಬೇಕು. ಇದು ತೆರಿಗೆ ಸಂಗ್ರಹದ ವೇಳೆ ಪಾಲಿಕೆಗೆ ಅನುಕೂಲವಾಗಲಿದೆ. ಆದರೆ ನಗರದ ಬಹುತೇಕ ಪಿಜಿಗಳು ವಾಣಿಜ್ಯ ತೆರಿಗೆ ಕಟ್ಟಲು ಮೀನಾಮೇಷ ಎಣಿಸುತ್ತಿವಿಯಂತೆ. ಇನ್ನು ಪಿಜಿ ಅಸೋಸಿಯೇಷನ್ ಪ್ರಕಾರ ನಗರದಲ್ಲಿ ಒಟ್ಟು 25 ಸಾವಿರಕ್ಕೂ ಅಧಿಕ ಪಿಜಿಗಳು ಕಾರ್ಯಾಚರಣೆಯಲ್ಲಿವೆ. ಆದರೆ ಪಾಲಿಕೆ‌ ಅಧಿಕಾರಿಗಳು, ಬೆಸ್ಕಾಂ ಹಾಗೂ ಜಲಮಂಡಳಿಯ ದಾಖಲೆ ಪ್ರಕಾರ ನಗರದಲ್ಲಿ ಒಟ್ಟು 50 ಸಾವಿರಕ್ಕೂ ಅಧಿಕ ಪಿಜಿಗಳಿವೆಯಂತೆ. ಹೀಗಾಗಿ ಪಾಲಿಕೆ ಕಣ್ತಪ್ಪಿಸಿ ಪಿಜಿ ನಡೆಸುತ್ತಿರುವವರ ವಿರುದ್ಧ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಅಲ್ಲದೇ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಪಿಜಿಗಳ ನಿಯಂತ್ರಣಕ್ಕೆ ಪಾಲಿಕೆ ಹೊಸ ಗೈಡ್ ಲೈನ್ಸ್ ಜಾರಿಗೆ ನಿರ್ಧರಿಸಿದೆ. ಆದ್ರೆ ಪಿಜಿಗಳು ಪರವಾನಗೆ ಪಡೆದು ಬೆಸ್ಕಾಂ ಹಾಗೂ ಜಲಮಂಡಳಿಯಿಂದ ವಾಣಿಜ್ಯವಾಗಿ ಪರಿವರ್ತನೆ ಮಾಡಿ ನಡೆಸಿಕೊಂಡು ಹೋಗುತ್ತಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸಾರ್ವಜನಿಕರಿಂದ ದೂರು ಹಿನ್ನಲೆ ಕ್ರಮಕ್ಕೆ ಮುಂದಾದ ಬಿಬಿಎಂಪಿ

ಪಿಜಿಗೆ ಬರುವಂತಹವರು ಹಣ ಕೊಟ್ಟು ಇರುತ್ತಾರೆ. ಬೇಡವಾದರೆ ಬೇರೆ ಕಡೆ ಹೋಗುತ್ತಾರೆ. ದುಡ್ಡು ಕೊಟ್ಟಂತವರು ಚೆನ್ನಾಗಿರದಿದ್ದರೆ ಬೇರೆ ಕಡೆ ಹೋಗುತ್ತಾರೆ ಹೀಗಿರುವಾಗ ಈ ಪ್ರಶ್ನೆ ಯಾಕೆ ಬಂತು ಅನ್ನೋದು ಗೊತ್ತಾಗುತ್ತಿಲ್ಲ. ಲಕ್ಷಾಂತರ ಜನರು ಪಿಜಿಯಲ್ಲಿ ಇದ್ದಾರೆ. ಪಿಜಿಯಲ್ಲಿರುವವರು ಖಾಸಗಿಯಾಗಿ ಮನೆ ಮಾಡಿಕೊಂಡು ಇರಬೇಕಾದರೆ ಕಷ್ಟ ಸಾಧ್ಯವಾಗುತ್ತಿತ್ತು ಸಾರ್ವಜನಿಕ ಸೇವೆ ಅನ್ನೋ ತರಹ ಕೆಲಸ ಮಾಡುತ್ತಿದ್ದೇವೆ. ಎಲ್ಲಿ ಕಂಪ್ಲೇಂಟ್ ಬಂದಿದೆ, ಬಂದಿದ್ರು ಅದು ಬೆರಳೆಣಿಕೆಯಷ್ಟು ಇರಬಹುದು ಅವುಗಳಿಗೆ ಬೇಕಾದರೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿ. ಆದರೆ ಎಲ್ಲಾ ಪಿಜಿಗಳನ್ನ ಪರವಾನಗಿ ಪಡೆದು ಕಾನೂನು ಬದ್ಧವಾಗಿರುವ ಪಿಜಿಗಳ ಪರಿಶೀಲನೆ ಮಾಡುವುದು ಎಷ್ಟು ಸರಿ ಎಂದು ಪಿಜಿ ಮಾಲೀಕರ ಸಂಘ ಅಸಮಾಧಾನ ಹೊರ ಹಾಕಿದೆ.

ತೆರಿಗೆ ಪರವಾನಿಗೆ ಮಾತ್ರವಲ್ಲದೆ, ಪಿಜಿಗಳಿರುವ ಅಕ್ಕ- ಪಕ್ಕದವರಿಂದ ಪಾಲಿಕೆಗೆ ದೂರುಗಳು ಬರುತ್ತಿವಯಂತೆ, ಹೀಗಾಗಿ ಬಿಬಿಎಂಪಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾಗಿದೆ. ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ‌ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇನ್ನು ಮಾನವ ಸಂಪನ್ಮೂಲಗಳಿಗೆ ಅನುಗುಣವಾಗುವಂತ ರೀತಿಯಲ್ಲಿ ಪಿಜಿಯನ್ನ ನಿರ್ವಾಹಿಸುತ್ತಿಲ್ಲ. ದುಡ್ಡಿನ ಆಸೆಗೆ ನಿಯಮ‌ ಮೀರಿ ಒಂದು ರೂಂನಲ್ಲಿ ಹೆಚ್ಚಿನ ಜನರನ್ನು ಹಾಕಲಾಗುತ್ತಿದೆ. ಮೂಲ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ.

ಒಂದು ಪಿಜಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗೆ ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಬಂದಿವೆ. ಈ ನಿಟ್ಟಿನಲ್ಲಿ ಪಿಜಿಗಳಿಗೆ ಬಿಬಿಎಂಪಿಯಿಂದ ಹೊಸ ಗೈಡ್ ಲೈನ್ ರಿಲೀಸ್ ಮಾಡಲು ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಎಚ್ಚೆತ್ತುಕೊಂಡ ಬಿಬಿಎಂಪಿ ಪಿಜಿ ನಡೆಸಲು ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಸೇರಿದಂತೆ ಹೊಸ ಗೈಡ್ ಲೈನ್ಸ್ ಹೊರಡಿಸಲು ಮುಂದಾಗಿದ್ದು, ಇದು ತೆರಿಗೆ ಸಂಗ್ರಹದ ವೇಳೆ ಪಾಲಿಕೆಗೆ ಅನುಕೂಲವಾಗಲಿದೆ. ಆದರೆ ನಗರದ ಬಹುತೇಕ ಪಿಜಿಗಳು ವಾಣಿಜ್ಯ ತೆರಿಗೆ ಕಟ್ಟಲು ಮೀನಾಮೇಷ ಎಣಿಸುತ್ತಿದೆ. ನಗರದ ಪಿಜಿಗಳ ಮಾಹಿತಿ ಕಲೆಹಾಕಿದ ಬಳಿಕ ಪಿಜಿಗಳಿಗೆ ಪ್ರತ್ಯೇಕ ನೀತಿ ಜಾರಿಯಾಗಲಿದ್ದು ಇದರಿಂದ ಪಾಲಿಕೆಗೆ ಅದಾಯವೂ ಹೆಚ್ಚಲಿದೆ. ಹೀಗಾಗಿ ಬಿಬಿಎಂಪಿ ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತೋ ಗೋತ್ತಿಲ್ಲಾ, ಅದು ಪಿಜಿ ಮಾಲೀಕರಿಗೆ ಹೊರೆಯಾಗಿತ್ತೋ ಇಲ್ವೋ ಕಾದು ನೋಡಬೇಕಿದೆ.

ಇದನ್ನೂ ಓದಿ: RBI ನಿಂದ ಹೊಸ ರೂಲ್ಸ್ ಜಾರಿ, ಇನ್ನು ಮುಂದೆ ಪರ್ಸನಲ್ ಲೋನ್ ಎಂಬುದು ಮರೀಚಿಕೆ ಆಗಲಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram