BBMP: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ವಿನುತನ ಪ್ರಯತ್ನಕ್ಕೆ ಕೈ ಹಾಕಿದ್ದು ಆರ್ಥಿಕವಾಗಿ ಹಿಂದುಳಿದವರನ್ನ ಮೇಲೇತ್ತಲು ಪ್ರಸಕ್ತ ಸಾಲಿನಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು, ಆರೋಗ್ಯ ಕಾರ್ಯಕ್ರಮಗಳು, ಆರ್ಥಿಕ ಸಹಾಯ ಅಥವಾ ಪ್ರೋತ್ಸಾಹಧನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇವುಗಳ ಪೈಕಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಧನ, ಕ್ರೀಡಾ ಪಟುಗಳಿಗೆ ಪ್ರೋತ್ಸಾಹಧನ, ಸ್ವಂತ ಸಣ್ಣ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹಧನ, ಇತರೆ ಆರ್ಥಿಕ ಸಹಾಯಧನ ಕಾರ್ಯಕ್ರಮಗಳು ಜಾರಿಯಾಗ್ತಿದ್ದು, ಬಿಬಿಎಂಪಿಯು ತನ್ನ 9 ವಲಯ ವ್ಯಾಪ್ತಿಯಲ್ಲಿನ ಆರ್ಥಿಕವಾಗಿ ಹಿಂದುಳಿದ ಒಬಿಸಿ, ಎಸ್‌ಸಿ, ಎಸ್‌ಟಿ ವರ್ಗಗಳ ಅಭ್ಯರ್ಥಿಗಳು, ವಿಶೇಷ ಚೇತನರು ಹಾಗೂ ಇತರೆ ಅಭ್ಯರ್ಥಿಗಳಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಹೌದು ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಒಟ್ಟು 9 ವಲಯ ಇದ್ದು, ಆಯಾ ವಲಯದ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ವರ್ಗ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು, ವಿಶೇಷ ಚೇತನರ, ತೃತೀಯ ಲಿಂಗಿಗಳ ಮತ್ತು ಮಹಿಳೆಯರ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬಿಬಿಎಂಪಿ ಕಲ್ಯಾಣ ಚಟುವಟಿಕೆಗಳ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ. ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಥವಾ ತಮ್ಮ ವಲಯಕ್ಕೆ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಿಂದ ಪಡೆಯಬಹುದು. ನಂತರ ಭರ್ತಿ ಮಾಡಿದ ಅರ್ಜಿಯನ್ನು ಆಯಾ ವಲಯದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗೆ ತಲುಪಿಸಬೇಕು. ಹಾಗಾದ್ರೆ ಪ್ರೋತ್ಸಾಹ ಧನ ಯಾರಿಗೆ ಸಿಗುತ್ತೆ? ಆಸಕ್ತರು ಮಾಡಬೇಕಾದ ಕೆಲಸ ಏನು ನೋಡೋಣ ಬನ್ನಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಯಾರಿಗೆ ಸಿಗಲಿದೆ ಯೋಜನೆಯ ಲಾಭ! ಏನ್ ಮಾಡ್ಬೇಕು ಗೊತ್ತಾ?
ಹೌದು ಇದೀಗ ಬಿಬಿಎಂಪಿಯಿಂದ ಸ್ವ ಉದ್ಯೋಗ ಮಾಡುವಂತವರಿಗೆ ಒಂದು ಲಕ್ಷದ ವರೆಗೆ ಧನ ಸಹಾಯ ಸಿಗುತ್ತಿದ್ದೂ, ಅದರಲ್ಲಿ ಮುಖ್ಯವಾಗಿ ಐಟಿಐ(ITI) ಉತ್ತೀರ್ಣರಾಗಿರುವ ವಿಶೇಷ ಚೇತನ ವಿದ್ಯಾರ್ಥಿಗಳು ಸ್ವಂತ ಸಣ್ಣ ಕೈಗಾರಿಕೋದ್ಯಮ ಪ್ರಾರಂಭಿಸಲು ಗರಿಷ್ಠ ರೂ.1,00,000 ಲಕ್ಷಗಳ ಸಹಾಯಧನ ಪಡಿಯಬಹುದು. ಡಿ-ಫಾರ್ಮಾ ಪರವಾನಗಿ ಹೊಂದಿರುವ ವಿಶೇಷ ಚೇತನರು ‘ಮೆಡಿಕಲ್ ಶಾಪ್’ ಅನ್ನು ಪ್ರಾರಂಭಿಸಲು ಗರಿಷ್ಠ ರೂ.1,00,000 ವರೆಗೆ ಗರಿಷ್ಠ ಸಹಾಯಧನ ಪಡೆಯಬಹುದು. ಇನ್ನು ಈಗಾಗಲೇ ಸಣ್ಣ ಉದ್ಯಮ ಅಥವಾ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿ ಜೀವನ ನಡೆಸುತ್ತಿರುವ ವಿಶೇಷ ಚೇತನ ಮತ್ತು ತೃತೀಯ ಲಿಂಗಿಗಳಿಗೆ ರೂ.1,00,000 ವರೆಗೆ ಪ್ರೋತ್ಸಾಹಧನ ಸಿಗಲಿದೆ. ಅಂಧ ಮತ್ತು ದೃಷ್ಟಿಮಾಂದ್ಯರಿಗೆ ಸಂಗೀತ ಸಾಧನಗಳನ್ನು ಖರೀದಿಸಲು ಸಹಾಯಧನ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿರುವ ವಿಶೇಷ ಚೇತನ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಧನ ನೀಡಲು ಬಿಬಿಎಂಪಿ ಮುಂದಾಗಿದೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಶೇಷ ಚೇತನ ಕ್ರೀಡಾ ಪಟುಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾ ಕಿಟ್ ನೀಡಲಿದ್ದು, ಕ್ರೀಡೆಗೆ ತಕ್ಕಂತೆ ಕೀಟ್ ಗಳನ್ನ ನೀಡಲಿದೆ. ಅಲ್ದೇ ಪೌರಕಾರ್ಮಿಕರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ಟ್ರಿಕಲ್ ದ್ವಿಚಕ್ರ(Electric Vehicle) ವಾಹನ ವಿತರಣೆ ಮುಖ್ಯವಾಗಿ ಗಾರ್ಮೆಂಟ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಮೊದಲ ಆಧ್ಯತೆಯನ್ನು ನೀಡಲಾಗುವುದು ಅಂತ ತಿಳಿಸಿದ್ದಾರೆ. ಪಾಲಿಕೆಯ ಹೊಲಿಗೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡುವುದು ಸೇರಿದಂತೆ, ವಿಶೇಷ ಚೇತನರಿಗೆ ಹೆಚ್ಚುವರಿಯಾಗಿ ಅಳವಡಿಸಿರುವ ದ್ವಿಚಕ್ರ ವಾಹನ ಸೌಲಭ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ, ನಡೆಸುವ ಸಂಘ ಸಂಸ್ಥೆಗಳಿಗೆ ಮತ್ತು ವಿಶೇಷ ಚೇತನ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡಲು ಪ್ರೋತ್ಸಾಹ ಧನದ ರೂಪದಲ್ಲಿ ಬಿಬಿಎಂಪಿ ಹಣ ನೀಡಲು ಅರ್ಜಿ ಆಹ್ವಾನಿಸಿದೆ.
ಹೀಗಾಗಿ ಆಸಕ್ತರು ಬಿಬಿಎಂಪಿ(BBMP) ಕಲ್ಯಾಣ ಚಟುವಟಿಕೆಗಳ ವೆಬ್ಸೈಟ್ಗೆ ನೀವು ಒಂದ್ಸಲ ಭೇಟಿ ಕೊಟ್ಟು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಜೊತೆಗೆ ಅಲ್ಲಿ ನಿಮಗೆ ಅರ್ಜಿ ಸಿಗುತ್ತೆ ಅದನ್ನ ಡೌನ್ಲೋಡ್ ಮಾಡಿಕೊಂಡು ಎಲ್ಲವನ್ನು ಕೂಡ ಫೀಲ್ ಮಾಡಿ ಅಂದ್ರೆ ಅಗತ್ಯ ಮಾಹಿತಿಗಳನ್ನ ನೀವು ಫಿಲ್ ಮಾಡಿದ ನಂತರ ಅದನ್ನು ನೀವು ಅಪ್ಲೋಡ್ ಮಾಡಬಹುದು ಇಲ್ಲವೇ ನೀವು ಬಿಬಿಎಂಪಿ ಕಲ್ಯಾಣ ಚಟುವಟಿಕೆಗಳ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅದಾದ ನಂತರ ಸಂಬಂಧ ಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗೆ ಹೋಗಿ ನೀವು ಅಲ್ಲಿಯೇ ಸಲ್ಲಿಸಬಹುದು ಇದಾದ ನಂತರ ನೀವು ಅರ್ಹರ ಇಲ್ಲವ ಅನ್ನೋದನ್ನ ಸಂಬಂಧಪಟ್ಟವರು ಚೆಕ್ ಮಾಡಿ ನಂತರ ನಿಮಗೆ ಪ್ರೋತ್ಸಾಹ ಧನವನ್ನ ವಿತರಣೆ ಮಾಡುತ್ತಾರೆ. ಹೀಗಾಗಿ ನಿಮಗೇನಾದರೂ ಅವಶ್ಯಕತೆ ಇದ್ದರೆ ನೀವು ಈ ಪ್ರೋತ್ಸಾಹ ಧನವನ್ನ ಪಡೆಯಲು ಅರ್ಹರಾಗಿದ್ರೆ ಕೂಡಲೇ ವೆಬ್ಸೈಟ್ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. ವೆಬ್ ಸೈಟ್ ಓಪನ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಈ ಸ್ಕೀಮ್ ನ ಅಡಿಯಲ್ಲಿ ಹೂಡಿಕೆ ಮಾಡುವ ಮುಖಾಂತರ 9000 ರೂ. ಗಳ ತಿಂಗಳ ಆದಾಯವನ್ನು ಪಡೆಯುವುದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram