ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ 41 ಸ್ಟೆನೋಗ್ರಾಫರ್ ಮತ್ತು ಪ್ಯೂನ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

Belagavi District Court Recruitment 2024

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಹುದ್ದೆಗಳಿಗೆ ನೇಮಕಾತಿಯ ಅರ್ಹತೆ ಮತ್ತು ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.

WhatsApp Group Join Now
Telegram Group Join Now

ಹುದ್ದೆಯ ಬಗ್ಗೆ ಪೂರ್ಣ ವಿವರ :- ಖಾಲಿ ಇರುವ ಶೀಘ್ರಲಿಪಿಗಾರರು, ಆದೇಶ ಜಾರಿಕಾರರು ಮತ್ತು ಸಿಪಾಯಿ/ಜವಾನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 5 ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆ, 1 ಟೈಪಿಸ್ಟ್ ಹುದ್ದೆ 2 ಪ್ರಕ್ರಿಯೆ ಸರ್ವರ್ ಹುದ್ದೆ ಹಾಗೂ 33 ಪ್ಯೂನ್ ಹಡ್ಡೆ. ಒಟ್ಟು 41 ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಎಜುಕೇಷನ್ ಕ್ವಾಲಿಫಿಕೇಷನ್ :- ಸ್ಟೆನೋಗ್ರಾಫರ್ ಗ್ರೇಡ್-III ಹಾಗೂ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪಿಯುಸಿ ಅಥವಾ ಡಿಪ್ಲೊಮಾ ಪಾಸ್ ಆಗಿರಬೇಕು. ಹಾಗೂ ಪ್ರಕ್ರಿಯೆ ಸರ್ವರ್ ಮತ್ತು ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಹತ್ತನೇ ತರಗತಿ ಉತ್ತೀರ್ಣ ಆಗಿರಬೇಕು.

ವೇತನ ಮಾಹಿತಿ :-

  • ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆಗೆ ತಿಂಗಳ ವೇತನ ರೂ.27650-52650/-
  • ಟೈಪಿಸ್ಟ್ ಹುದ್ದೆಗೆ ತಿಂಗಳ ವೇತನ ರೂ.21400-42000/-
  • ಪ್ರಕ್ರಿಯೆ ಸರ್ವರ್ ಹುದ್ದೆಗೆ ತಿಂಗಳ ವೇತನ ರೂ.19950-37900/-
  • ಪ್ಯೂನ್ ಹುದ್ದೆಗೆ ತಿಂಗಳ ವೇತನ ರೂ.17000-28950/-

ವಯಸ್ಸಿನ ಮಿತಿ :- ಬೆಳಗಾವಿ ಇ-ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸನ್ನು ಹೊಂದಿರಬೇಕು. ಸರಕಾರದ ಮೀಸಲಾತಿಯ ಅನ್ವಯ SC/ST/Cat-I ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 3 ವರ್ಷ, ಹಾಗೂ pwd ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶುಲ್ಕ ವಿವರ :- SC/ST/Cat-I/PWD ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ. ಹಾಗೆಯೇ ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳಿಗೆ 300 ರೂಪಾಯಿ ಹಾಗೂ ಪ್ರಕ್ರಿಯೆ ಸರ್ವರ್, ಪ್ಯೂನ್ ಹುದ್ದೆಗೆ 200 ರೂಪಾಯಿ ಶುಲ್ಕ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ :-

ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ನಿಮ್ಮ education certificates ಮತ್ತು ನಿಮ್ಮ experience ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಕಾರ್ಡ್ ನಂಬರ್, ಹಾಗೂ ನಿಮ್ಮ ವಿಳಾಸ ನಿಮ್ಮ ಪೂರ್ಣ ಹೆಸರು , ನಿಮ್ಮ ಲಿಂಗ, ನೀವು ಯಾವ ಹುದ್ದೆಗೆ ಅರ್ಜಿ ಹಾಕುತ್ತಾ ಇರುವಿರಿ ಹಾಗೂ ನಿಮ್ಮ ವಯಸ್ಸಿನ ಪುರಾವೆ, ಹಾಗೂ ನಿಮ್ಮ ಜಾತಿ ಪ್ರಮಾಣ ಪತ್ರ ಇದ್ದರೆ ಎಲ್ಲಾ ಮಾಹಿತಿಗಳನ್ನು ನೀಡಬೇಕು.

ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿ ಅಥವಾ ಸುಳ್ಳು ಮಾಹಿತಿಗಳನ್ನು ನೀಡಬಾರದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 14-03-2024 ರಿಂದ 14-04-2024 ರ ರಾತ್ರಿ 11-59 ರವರೆಗೆ ಅವಕಾಶ ನೀಡಲಾಗಿದೆ. ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿ. ಆನ್ಲೈನ್ ಮೂಲಕ ನಿಮಗೆ ಅಧಿಸೂಚನೆಯಲ್ಲಿ ನೀಡಲಾಗಿರುವ ಫೀ ಕಟ್ಟಬೇಕು. ಶುಲ್ಕ ಪಾವತಿಸಲು 15-04-2024 ರ ರಾತ್ರಿ 11-59 ರವರೆಗೆ ಸಮಯ ಅವಕಾಶ ಇದೆ. ನಿಗದಿತ ಸಮಯದ ಒಳಗೆ ಶುಲ್ಕ ಪಾವತಿ ಮಾಡದೇ ಇದ್ದಲ್ಲಿ ನಿಮ್ಮ ಏನು ತಿರಸ್ಕಾರ ಆಗುತ್ತದೆ.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: EPFO PF ಬ್ಯಾಲೆನ್ಸ್; ಇಂಟರ್ನೆಟ್ ಇಲ್ಲದೆ PF ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? 

ಇದನ್ನೂ ಓದಿ: ಯುಪಿಐ ಪಿನ್ ಮರೆತು ಹೋದರೆ ಚಿಂತೆ ಬೇಡ! ಬದಲಾಯಿಸಲು ಇಲ್ಲಿದೆ ಸುಲಭ ವಿಧಾನಗಳು