ರೈತರಿಗೆ ಸಿಹಿ ಸುದ್ದಿ; ರಾಜ್ಯ ಸರ್ಕಾರ ಬೆಳೆ ಪರಿಹಾರದ ಮೊದಲ ಕಂತಿನ ಹಣ ಒಂದು ವಾರದೊಳಗೆ ರೈತರ ಖಾತೆಗೆ ಜಮಾ

ರೈತ ದೇಶದ ಆಸ್ತಿ. ಅವನಿಗೆ ತೊಂದರೆ ಆದರೆ ಇಡೀ ದೇಶಕ್ಕೆ ತೊಂದರೆ ಆಗುತ್ತದೆ. ಪ್ರತಿ ವರ್ಷ ಹೆಚ್ಚಿನ ಮಳೆಯಿಂದ ಅಥವಾ ಬರಗಾಲದಿಂದ ತಾನು ಬೆಳೆದ ಬೆಳೆಯ ನಾಶ ಅನುಭವಿಸುತ್ತಾನೆ. ಹಲವು ಬಗೆಯ ಯೋಜನೆಗಳು ಈಗಾಗಲೇ ರೈತರ ಬದುಕಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ಅಂತೆಯೇ ಈಗ ರಾಜ್ಯ ಸರ್ಕಾರವು ರೈತರಿಗೆ ಬೆಳೆ ವಿಮೆಯ ಹಣವನ್ನು ಬಿಡುಗಡೆ ಮಾಡಿದೆ. ಬೆಳೆ ವಿಮೆಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ.

WhatsApp Group Join Now
Telegram Group Join Now

ಮೊದಲ ಹಂತದಲ್ಲಿ ಬಿಡುಗಡೆ ಆಗಿರುವ ಮೊತ್ತ ಏಷ್ಟು?: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ ಕನಿಷ್ಟ 30 ಲಕ್ಷ ರೈತರಿಗೆ ಒಂದು ವಾರದ ಒಳಗೆ ಬೆಳೆ ವಿಮೆ ಮಾಡಲಾಗುವುದು ಎಂದು ತಿಳಿಸಿದರು. ಹಾಗೆಯೇ ಜಿಲ್ಲೆಯ ಅಧಿಕಾರಿಗಳಿಗೆ ರೈತರಿಗೆ ಶೀರ್ಘದಲ್ಲಿ ಹಣ ತಲುಪಬೇಕು ಎಂದು ಆದೇಶ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು.  ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಫ್ರೂಟ್ಸ್ ತಂತ್ರಾಂಶದಲ್ಲಿ ಇರುವ ರೈತರ ವಿವರಗಳು:- ಈಗಾಗಲೇ ರೈತರ ಮಾಹಿತಿಯನ್ನು ಆನ್ಲೈನ್ ನಲ್ಲಿ ಭರ್ತಿ ಮಾಡುವ ಕಾರ್ಯ ಎಲ್ಲಾ ತಾಲೂಕಿನಲ್ಲಿ ನಡೆದಿದೆ. ಈಗಾಗಲೇ ಫ್ರೂಟ್ಸ್ ತಂತ್ರಾಂಶಕ್ಕೆ 7.7 ರೈತರ 34 ಲಕ್ಷ ಹಿಡುವಳಿ ಪ್ರದೇಶವು ಸೇರ್ಪಡೆ ಆಗಿದೆ. ಶೇಕಡಾ 78 ರಷ್ಟು ರೈತರ ವಿವರ ಈ ತಂತ್ರಾಂಶದಲ್ಲಿ ದಾಖಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಆಹ್ವಾನ ..

ಬೆಳೆ ವಿಮೆಯನ್ನು ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:-

  • ಆಧಾರ್ ಕಾರ್ಡ್.
  • ಮೊಬೈಲ್ ಸಂಖ್ಯೆ(mobile number).
  • ನಷ್ಟವಾದ ಬೆಳೆಯ ಬಗ್ಗೆ ನಿಖರವಾದ ಮಾಹಿತಿ.
  • ಒಟ್ಟು ನಷ್ಟವಾದ ಬೇಳೆಯ ಅಂದಾಜು ಮೊತ್ತ.
  • ವಾರ್ಷಿಕ ಆದಾಯದ ವಿವರ.
  • ಬ್ಯಾಂಕ್ ಖಾತೆಯ ವಿವರ( bank account details).
  • ಫ್ರೂಟ್ಸ್ ಕಾರ್ಡ್ ನಂಬರ್ (FID number)

ಬೆಳೆ ವಿಮೆಯಿಂದ ರೈತರಿಗೆ ಏನು ಅನುಕೂಲ?: ಈ ವರ್ಷ ಮಳೆ ಇಲ್ಲದೆಯೇ ರೈತ ಬೆಳೆದ ಬೆಳೆ ನಷ್ಟವಾಗಿದೆ. ಒಂದು ಕಡೆ ಅತಿಯಾದ ಮಳೆಯಾಗಿ ಬೆಳೆ ನಾಶವಾದರೆ ಇನ್ನೊಂದೆಡೆ ಸರಿಯಾದ ಸಮಯಕ್ಕೆ ಮಳೆಯೇ ಆಗದೆ ರೈತ ಹಾಕಿದ ಬೆಳೆ ಬೆಳೆಯದೆ ನಷ್ಟವಾಗಿದೆ. ಬೆಳೆ ವಿಮೆ ನೀಡುವುದರಿಂದ ರೈತ ಹಾಕಿರುವ ಬಂಡವಾಳದ ಸ್ವಲ್ಪ ಹಣವಾದರೂ ಅವನಿಗೆ ಸಿಗುತ್ತದೆ. ಇದರಿಂದ ಅವನ ಜೀವನಕ್ಕೆ ಸ್ವಲ್ಪ ಮಟ್ಟಿಗೆ ಸಹಾಯ ಆದಂತೆ ಆಗುತ್ತದೆ. 

ಫ್ರೂಟ್ಸ್ ಕಾರ್ಡ ಹೊಂದಿರುವುದರಿಂದ ಆಗುವ ಲಾಭಗಳು:- ಫ್ರೂಟ್ಸ್ ಕಾರ್ಡ್ ರೈತರ ಎಲ್ಲಾ ದಾಖಲೆಗಳನ್ನು ಹೊಂದಿರುವ ಒಂದು ಸೈಟ್. ಈಗ ರೈತರ ಸಾಲ ಮನ್ನಾ, ರೈತರ ಬೆಳೆಯ ಬಗ್ಗೆ ಮಾಹಿತಿ , ರೈತರ ಬಳಿ ಇರುವ ಜಮೀನಿನ ವಿವರ , ಬೆಳೆಯುವ ಬೆಳಗಳ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ನೋಡಬಹುದು. ಫ್ರೂಟ್ಸ್ ಕಾರ್ಡ್ ಹೊಂದಿರುವುದರಿಂದ ಹಲವಾರು ಲಾಭಗಳು ಇವೆ ಅವುಗಳೇನೆಂದರೆ..,

  • ಯಾವ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಮಾಹಿತಿ ಸುಲಭವಾಗಿ ಸಿಗುತ್ತದೆ.
  • ರೈತರಿಗೆ ತಮ್ಮ ದೂರುಗಳನ್ನು ಸುಲಭವಾಗಿ ಸಲ್ಲಿಸಲು ಸಾಧ್ಯ.
  • ಫಸಲ ಭೀಮಾ ಯೋಜನೆಗಳಂತಹ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲವಾಗುತ್ತದೆ.
  • ಭಾರತದ ರೈತ ಭೂಮಿಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಹೇಗಿದೆ? ಚಿನ್ನ ಖರೀದಿ ಮಾಡುವವರು ಈ ಸುದ್ದಿಯನ್ನು ಓದಲೇಬೇಕು. 

ಇದನ್ನೂ ಓದಿ: 2025 ರ ವೇಳೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊತ್ತು ಬರಲಿದೆ Tata Altroz EV, ಅದೂ ನೀವು ಬಯಸಿದ ಸೌಲಭ್ಯಗಳೊಂದಿಗೆ