ಈಗ ಆರೋಗ್ಯವಾಗಿ ಇರಬೇಕು ಎಂಬುದು ಜನರ ಆಶಯ. ಹಿಂದೆ ಇರುವಂತೆ ಪೌಷ್ಟಿಕ ಆಹಾರ ಹಾಗೂ ವಿಷಪೂರಿತ ಅಲ್ಲದ ಆಹಾರಗಳು ಈಗ ಇಲ್ಲ. ಎಲ್ಲ ರೀತಿಯ ಹಣ್ಣು ತರಕಾರಿಗಳು ಕೆಡಬಾರದು ಎಂದು ಔಷಧಿ ಸಿಂಪಡಣೆ ಮಾಡುವುದು ಸಹಜ ಆಗಿದೆ. ಹೀಗಿರುವಾಗ ನಾವು ದಿನವೂ ಮುಂಜಾನೆ ಮೂರು ಖರ್ಜೂರ ಸೇವನೆಯ ಮಾಡಿದರೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಖರ್ಜೂರ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹೆಚ್ಚಿನ ಪೋಷಕಾಂಶ ಸಿಗುತ್ತದೆ :- ದಿನವೂ ನೀವು ಖರ್ಜೂರ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಹೆಚ್ಚಿನ ಪೋಷಕಾಂಶ ಸಿಗುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಹಾಗು ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ಜೊತೆಗೆ ಫೈಬರ್ ಸಹ ಇರುವುದರಿಂದ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗುತ್ತದೆ. ಖರ್ಜೂರವನ್ನು ನಿತ್ಯವೂ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಜೊತೆಗೆ ಸ್ವತಂತ್ರ ರಾಡಿಕಲ್ಗಳಿಂದ ಹಾನಿಯಾಗುವ ದೇಹದ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಮೋದಿ ಸರಕಾರದ ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.
ಜೀರ್ಣ ಕ್ರಿಯೆಗೆ ಇದು ರಾಮಬಾಣ :-
ಜೀರ್ಣಾಂಗ ವ್ಯವಸ್ಥೆಯಲ್ಲಿ ಆಗುವ ಯಾವುದೇ ವ್ಯತ್ಯಾಸಕ್ಕೆ ಇದು ಉತ್ತಮ ರಾಮಬಾಣ. ದಿನವೂ ಖರ್ಜೂರ ಸೇವನೆಯ ಮಾಡುವುದು ಜೀರ್ಣಾಂಗ ಕ್ರಿಯೆಗೆ ಬಹಳ ಸಹಕಾರಿ. ಹೆಚ್ಚಿನ ಫೈಬರ್ ಅಂಶ ಇರುವ ಕಾರಣ ದಿಂದಾಗಿ ಇದು ಜೀರ್ಣಾಂಗ ಕ್ರಿಯೆಯನ್ನು ಉತ್ತಮ ರೀತಿಯಲ್ಲಿ ಸಹಾಯ ಆಗಿದೆ.
ದೇಹದ ಶಕ್ತಿ ಹೆಚ್ಚುತ್ತದೆ :- ಖರ್ಜೂರದಲ್ಲಿ ಇರುವ ಹೆಚ್ಚಿನ ಗ್ಲೂಕೋಸ್ ಪ್ರಮಾಣ ಫ್ರಕ್ಟೋಸ್ ಮತ್ತು ಸುಕ್ರೋಸ್‌ನಂತಹ ನೈಸರ್ಗಿಕ ಸಕ್ಕರೆ ಇಂದ ಕಾರ್ಬೋಹೈಡ್ರೇಟ್ ಅಂಶದ ಪರಿಣಾಮವಾಗಿ ದೇಹದಲ್ಲಿ ನಿರಂತರ ಶಕ್ತಿಯ ಉತ್ಪಾದನೆ ಹೆಚ್ಚುತ್ತದೆ. ಕೆಲವು ಸಂಶೋಧನೆಯ ಪ್ರಕಾರ ವ್ಯಾಯಾಮದ ಮೊದಲು ಖರ್ಜೂರ ಸೇವನೆ ಮಾಡುವುದರಿಂದ ನಿಮಗೆ ಇನ್ನಷ್ಟು ಸಮಯ ಉತ್ಸಾಹದಿಂದ ವ್ಯಾಯಾಮ ಮಾಡಲು ಸಾಧ್ಯ ಆಗುತ್ತದೆ.
ಹೃದಯವನ್ನು ಕಾಪಾಡುತ್ತದೆ. :- ನಮ್ಮ ದೇಹದ ಹೃದಯದ ಆರೋಗ್ಯಕ್ಕೆ ಖರ್ಜೂರ ಬಹಳ ಉಪಯೋಗ ಆಗುತ್ತದೆ. ಖರ್ಜೂರವು ನಮ್ಮ ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡತ್ತದೆ ಇದರಿಂದ ಹೃದ್ರೋಗದ ಅಪಾಯವೂ ಕಡಿಮೆ ಆಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿರುವ ವಿಷಯ ಆಗಿದೆ. ಜೊತೆಗೆ ದಿನವೂ ಖರ್ಜೂರ ಸೇವನೆಯ ಮಾಡುವುದರಿಂದ ಎಲ್‌ಡಿಎಲ್ ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣವನ್ನು ಮಾಡುತ್ತದೆ ಇದರಿಂದ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣ ಆಗುತ್ತದೆ.
ಮೆದುಳಿನ ಶಕ್ತಿ ಹೆಚ್ಚುತ್ತದೆ :-
ದಿನವೂ ಖರ್ಜೂರ ಸೇವನೆಯ ಮಾಡುವುದರಿಂದ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಖರ್ಜುರದಲ್ಲಿ ಇರುವ ಪೋಷಕಾಂಶಗಳು ಮೆದುಳನ್ನು ಕಾಪಾಡುತ್ತವೆ. ಪೊಟ್ಯಾಸಿಯಂ ಸಮೃದ್ಧವಾಗಿ ಇರುವ ಕಾರಣದಿಂದ ಖರ್ಜೂರ ಸೇವನೆಯ ಮೆದುಳಿನ ಆರೋಗ್ಯ ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯಕ ಆಗಿದೆ. ಜ್ವೈಜ್ಞಾನಿಕ ಸಂಶೋಧನೆಯ ಪ್ರಕಾರ ಪೊಟ್ಯಾಸಿಯಮ್ ಹೆಚ್ಚಾಗಿ ಇರುವ ಆಹಾರಗಳನ್ನು ಸೇವನೆ ಮಾಡುವುದರಿಂದ ಪಾರ್ಶ್ವವಾಯು ಅಂತಹ ರೋಗಕ್ಕೆ ತುತ್ತಾಗುವ ಪ್ರಮಾಣ ಕಡಿಮೆ ಆಗುತ್ತದೆ. ಜೊತೆಗೆ ವಯಸ್ಸು ಹೆಚ್ಚಾದಂತೆ ಬರುವ ಮರೆವಿನ ಖಾಯಿಲೆ ಕಡಿಮೆ ಮಾಡಲು ಸಹಾಯ ಆಗುತ್ತದೆ.
ಸಕ್ಕರೆ ಖಾಯಿಲೆ ನಿಯಂತ್ರಣ ಆಗುತ್ತದೆ :- ಸಕ್ಕರೆ ಖಾಯಿಲೆ ಇರುವ ಜನರು ಸಿಹಿ ಅಂಶ ಇದ್ದರೂ ಸಹ ಖರ್ಜೂರವನ್ನು ಸೇವನೆ ಮಾಡ್ಬಹುದು. ಅಧ್ಯಯನದ ಪ್ರಕಾರ ಖರ್ಜೂರ ಸೇವನೆಯಿಂದ ಸ್ಕಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ: ಬೆಂಗಳೂರಿನ ಮೆಟ್ರೋದಲ್ಲಿ ಹುದ್ದೆಗಳು ಖಾಲಿ ಇವೆ.