ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಪ್ಯೂನ್, ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ

Bengaluru Rural District Court Recruitment 2024

ಯಾವುದೇ ಸರ್ಕಾರಿ ಹುದ್ದೆ ಸಿಕ್ಕಿದರೆ ಜೀವನ ಬಹಳ ಆರಾಮದಾಯಕವಾಗಿ ಇರುತ್ತದೆ. ಯಾಕೆ ಅಂದ್ರೆ ಪ್ರೈವೇಟ್ ಆಗಿ ಕೆಲಸ ಮಾಡುವವರಿಗೆ ಹೋಲಿಸಿದರೆ ಸರ್ಕಾರಿ ಹುದ್ದೆಯ ನೌಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತದೆ. ಪ್ರೈವೇಟ್ ಜಾಬ್ ಗಿಂತ ಹೆಚ್ಚಿನ ವೇತನ, ಹಾಗೂ ಆರೋಗ್ಯ ವಿಮೆ ಸೌಲಭ್ಯ ಪಿಂಚಣಿ ಯೋಜನೆ ಮತ್ತು ಹೆಚ್ಚಿನ ರಜಾದಿನ ಸಿಗುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದ ಬಗ್ಗೆ ಖಾತರಿ ಇರುತ್ತದೆ. ಆದರೆ ಪ್ರೈವೇಟ್ ನಲ್ಲಿ ಯಾವಾಗ ಬೇಕಾದರೂ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು ಅಥವಾ ಕಂಪನಿ ಯಾವುದೇ ಸಮಯದಲ್ಲಿ ನಷ್ಟ ಆಗಿ ಕಂಪನಿ ಕ್ಲೋಸ್ ಆಗಬಹುದು. ಅದರಿಂದ ಪ್ರತಿಯೊಬ್ಬರೂ ಸರ್ಕಾರಿ ಕೆಲಸ ಸಿಗಬೇಕು ಎಂದು ಬಯಸುತ್ತಾರೆ. ಈಗಾಗಲೇ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಹಾಕುವವರಿಗೆ ಈಗ ಒಂದು ಅವಕಾಶ ಇದೆ. ಕೆಲಸದ ಬಗ್ಗೆ ಪೂರ್ಣ ವಿವರಗಳನ್ನು ತಿಳಿದು ನಿಮ್ಮ ಕೌಶಲ್ಯಕ್ಕೆ ಉದ್ಯೋಗ ಹೊಂದಿಕೆ ಆದರೆ ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

ಉದ್ಯೋಗದ ಬಗ್ಗೆ ಪೂರ್ಣ ವಿವರ

ಬೆಂಗಳೂರು ಗ್ರಾಮಾಂತರದ ಜಿಲ್ಲಾ ನ್ಯಾಯಾಲಯದಲ್ಲಿ SSLC , ಪಿಯುಸಿ, ಡಿಪ್ಲೋಮಾ ಓದಿದವರಿಗೆ ಒಟ್ಟು 58 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. 28 ಪ್ಯೂನ್ ಹುದ್ದೆ ಹಾಗೂ 30 ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಅರ್ಜಿ ಸಲ್ಲಿಸಬಹುದು.

ಪ್ಯಿನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಟ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಹಾಗೂ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪಿಯುಸಿ ನಂತರ ಡಿಪ್ಲೊಮಾ ಕೋರ್ಸ್ ಮುಗಿಸಿರಬೇಕು. ಅರ್ಜಿದಾರರ ವಯಸ್ಸಿನ ಮಿತಿ 18 ರಿಂದ 35 ವರ್ಷ. ನಿಯಮದ ಪ್ರಕಾರ 2A ಅಥವಾ 2B ಅಥವಾ 3A ಅಥವಾ 3B ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC ಅಥವಾ ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ. SC ಅಥವಾ ST ಅಥವ Cat-I ಅಥವಾ PwBD ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ಫೀ ಕಟ್ಟಬೇಕಾಗಿಲ್ಲ. 2A ಅಥವಾ 2B ಅಥವಾ 3A ಅಥವಾ 3B ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು 100 ರೂಪಾಯಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು 200 ರೂಪಾಯಿ ಫೀ ಕಟ್ಟಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಮಾರ್ಚ್ 20 2024.

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸಲು ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿನೀಡಿ. ನಂತರ ವೆಬ್ಸೈಟ್ ನಲ್ಲಿ ಇರುವ ಪ್ಯೂನ್ ಮತ್ತು ಟೈಪಿಸಿ ಹುದ್ದೆ 09.02.2024 ಎಂಬ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ , ನಂತರ ನಿಮಗೆ ಆಫ್ಲೈನ್ ಹಾಗೂ ಆನ್ಲೈನ್ ಅರ್ಜಿ ಗಳು ಸಿಗುತ್ತವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ “ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ” ಎಂಬ ಆಪ್ಷನ್ ಕ್ಲಿಕ್ ಮಾಡಿ. ನಂತರ ಅಪ್ಲ್ಲಿಕೇಷನ್ ಫಾರ್ಮ್ ನಲ್ಲಿ ನಿಮ್ಮ ಹೆಸರು ,mail I’d, ಆಧಾರ್ ಕಾರ್ಡ್ ನಂಬರ್, ಮೊಬೈಲ್ ನಂಬರ್ ಲಿಂಗ ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಿ. ನಂತರ ನಿಮ್ಮ ಫೋಟೋ ಹಾಗೂ ನಿಮ್ಮ ವಿದ್ಯಾರ್ಹತೆಯ ಸರ್ಟಿಫಿಕೇಟ್ ಗಳನ್ನು ಸ್ಕ್ಯಾನ್ ಮಾಡಿ ಭರ್ತಿ ಮಾಡಿ. ನಂತರ ನೀವು ಫೀ ಪಾವತಿಸಬೇಕು ಎಂದರೆ ಅಲ್ಲಿ ಆನ್ಲೈನ್ ಪೇಮೆಂಟ್ ಆಪ್ಷನ್ ಇರುತ್ತದೆ. ಅಲ್ಲಿ ಫೀ ಕಟ್ಟಿ ಒಮ್ಮೆ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂದು ನೋಡಿ submitted ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; HRA 3% ಏರಿಕೆ ಯಾವಾಗ ಎಂದು ಸರ್ಕಾರ ತಿಳಿಸಿದೆ.