ಭಾರತದ ಹಲವು ರಾಜ್ಯಗಳ ಸಿಟಿಯಲ್ಲಿ ಮೆಟ್ರೋ ಸಾಮಾನ್ಯ ಆಗಿದೆ. ಹಾಗೆಯೇ ನಮ್ಮ ಮಹಾ ನಗರಿ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಮೆಟ್ರೋ ಟ್ರೈನ್ ಓಡಾಡುತ್ತಿದೆ. ಈ ಟ್ರಾಫಿಕ್ ನಲ್ಲಿ ಓಡಾಡುವ ಬದಲು ಮೆಟ್ರೋ ದಲ್ಲಿ ಓಡಾಡುವುದು ಆರಾಮದಾಯಕ ಎಂದು ಮಹಾನಗರಿಯ ಬಹುಪಾಲು ಜನರು ದಿನನಿತ್ಯ ತಮ್ಮ ವ್ಯವಹಾರಗಳಿಗೆ ಮೆಟ್ರೋ ಬಳಸುತ್ತಾರೆ. ಈಗ ಹೊಸದಾಗಿ ಮೆಟ್ರೋ ಬೆಂಗಳೂರಿನಿಂದ ಬೇರೆ ಜಿಲ್ಲೆಗೆ ಓಡಾಡುವ ಸುದ್ದಿ ಎಲ್ಲೆಡೆ ಹರಿದಾಡುತ್ತಿವೆ.
ರಾಜ್ಯ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ:- ರಾಜ್ಯ ಸರ್ಕಾರದಿಂದ ಬೆಂಗಳೂರು ಮತ್ತು ತುಮಕೂರಿಗೆ ಮೆಟ್ರೋ ಸೌಲಭ್ಯ ಕಲ್ಪಿಸುವ ಬಗ್ಗೆ ಚಾಲನೆ ದೊರೆತಿದೆ. ಬ್ಲೂ ಪ್ರಿಂಟ್ ಪ್ರಕಾರ ಬೆಂಗಳೂರಿಂದ ತುಮಕೂರಿಗೆ ಒಟ್ಟು 19 ನಿಲ್ದಾಣಗಳು ಇರಲಿವೆ. ಒಟ್ಟು 52.41 ಕಿಲೋ ಮೀಟರ್ ಮೆಟ್ರೋ ರೈಲು ಹಳಿ ವಿಸ್ತರಣೆ ಆಗಲಿದೆ.
ಟೆಂಡರ್ ಆಹ್ವಾನಿಸಲಿದೆ :- BMRCL ಶೀಘ್ರದಲ್ಲೇ ಸಮಗ್ರ ಯೋಜನಾ ವರದಿ (DPR) ಗಾಗಿ ಟೆಂಡರ್‌ಗಳನ್ನು ಆಹ್ವಾನಿಸಲಿದೆ. ಈ ಮಹತ್ವದ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಯೋಜನೆಯು ಪ್ರಯಾಣವನ್ನು ಸುಲಭಗೊಳಿಸುವುದರ ಜೊತೆಗೆ ತುಮಕೂರು ರಸ್ತೆಯಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ನಿರೀಕ್ಷೆ ಹೆಚ್ಚಾಗಿದೆ. ಮೆಟ್ರೋ ತುಮಕೂರು ಕೇಂದ್ರ ಭಾಗದವರೆಗೆ ನಿರ್ಮಾಣ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಯದೇವ ಮೆಟ್ರೋ ನಿಲ್ದಾಣದಲ್ಲಿ ಲೋಡ್ ಪರೀಕ್ಷೆ:
ಈ ವರ್ಷಾದ ಅಂತ್ಯಕ್ಕೆ ಸಂಚಾರ ಮಾಡುವ ನಿರೀಕ್ಷೆಯಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಇಂಟೆರ್ ಚೇಂಜ್ ಜಯದೇವ ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು ಈಗ ಗುಲಾಬಿ ಮಾರ್ಗದ ಲೋಡ್ ಟೆಸ್ಟಿಂಗ್ ನಡೆಯುತ್ತಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ಹಳದಿ ಮಾರ್ಗದ ಮೆಟ್ರೋ ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದ ಗುಲಾಬಿ ಮಾರ್ಗ ಮೆಟ್ರೋ ಸಂಚರಿಸುತ್ತಿದ್ದು, ಇವೆರಡು ಮಾರ್ಗಗಳ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಪ್ರಯಾಣಿಕರು ಮಾರ್ಗ ಬದಲಾವಣೆ ಮಾಡಿಕೊಳ್ಳಲು ಈ ನಿಲ್ದಾಣದಲ್ಲಿ ಸಹಾಯ ಆಗಲಿದೆ. ಕಳೆದ ತಿಂಗಳಲ್ಲಿ ಹಳದಿ ಮಾರ್ಗದ ಮಟ್ಟದಲ್ಲಿ ಲೋಡ್ ಟೆಸ್ಟ್ ನಡೆಸಲಾಯಿತು. ಉಸುಕು ತುಂಬಿದ ಸಾವಿರಕ್ಕೂ ಹೆಚ್ಚು ಚೀಲಗಳನ್ನಿಟ್ಟು ಮೆಟ್ರೋ ನಿಲ್ದಾಣದ ಸಾಮರ್ಥ್ಯವನ್ನು ಪರೀಕ್ಷೆ ಮಾಡಿದರು. ಇದೀಗ ಗುಲಾಬಿ ಮಾರ್ಗದ ಲೋಡ್ ಟೆಸ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ವಿದ್ಯುತ್ ದರ ಇಳಿಕೆ ಆಗಲಿದೆ.
ಈ ನೂತನ ಮಾರ್ಗದಿಂದ ಏನು ಉಪಯೋಗ?:
- ತುಮಕೂರಿನಿಂದ ಬೆಂಗಳೂರಿಗೆ ಪ್ರತಿ ದಿನ ಸಾವಿರಾರು ಮಂದಿ ಕೆಲಸಕ್ಕೆ ಎಂದು ದಿನವೂ ಪ್ರಯಾಣ ಮಾಡುತ್ತಾರೆ. ಅವರಿಗೆ ಇದು ಬಹಳ ಉಪಯೋಗ ಆಗಲಿದೆ. ರೈಲು ಅಥವಾ ಬಸ್ ಪ್ರಯಾಣದಲ್ಲಿ ಒಂದು ತಾಸಿಗೂ ಅಧಿಕ ಸಮಯವನ್ನು ಅವರು ಟ್ರಾವೆಲಿಂಗ್ ನಲ್ಲಿ ಕಳೆಯುವುದು ತಪ್ಪಿಸಲು ಈ ನೂತನ ಮೆಟ್ರೋ ಮಾರ್ಗವು ಅನುಕೂಲ ಆಗಲಿದೆ.
- ಹಲವರು ರೀತಿಯ ಬ್ಯುಸಿನೆಸ್ ಮಾಡುವವರಿಗೆ ಇದು ಅನುಕೂಲ ಆಗಲಿದೆ. ಮೆಟ್ರೋ ಸ್ಟೇಷನ್ ಬಳಿ ಅಂಗಡಿಗಳು ಹಾಗೂ ಚಿಕ್ಕ ಪುಟ್ಟ ಬ್ಯುಸಿನೆಸ್ ಮಾಡಲು ಅನುಕೂಲ ಆಗಲಿದೆ. ಇದರ ಜೊತೆಗೆ ಈಗಾಗಲೇ ರಿಯಲ್ ಎಸ್ಟೇಟ್ ವ್ಯವಹಾರ ತುಂಬಾ ಹೆಚ್ಚಿನ ಲಾಭ ನೀಡುತ್ತಾ ಇದ್ದು. ಇನ್ನು ಮೆಟ್ರೋ ಸ್ಟೇಷನ್ ಬಳಿ ಇರುವ ಎಲ್ಲ ಪ್ರದೇಶಗಳ ಬೆಲೆ ಜಾಸ್ತಿ ಆಗಲಿದೆ.
ಇದರ ಜೊತೆಗೆ ಪ್ರಯಾಣದ ಮೊತ್ತವು ಪರಿಣಾಮ ಬೀರಲಿದೆ. ಯಾಕೆ ಎಂದರೆ ದಿನವೂ ಪ್ರಯಾಣ ಮಾಡುವ ಚಿಕ್ಕ ಪುಟ್ಟ ಕೆಲಸಗಾರರಿಗೆ ಮೆಟ್ರೋ ಪ್ರಯಾಣದ ಬೆಲೆ ಹೆಚ್ಚಾದರೆ ಅವರು ಮೊದಲಿನ ಹಾಗೆ ಬಸ್ ಅಥವಾ ರೈಲು ಪ್ರಯಾಣವನ್ನು ಅವಲಂಬಿಸಬಹುದು.
ಇದನ್ನೂ ಓದಿ: Audi Q7 ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ಇದರ ಬೆಲೆ ಎಷ್ಟು ಗೊತ್ತಾ?