ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಅಲ್ಲಿನ ಟ್ರಾಫಿಕ್. ದಿನದ 24 ಗಂಟೆಗಳಲ್ಲಿ 16-18 ಗಂಟೆಯೂ ಬೆಂಗಳೂರು ಟ್ರಾಫಿಕ್ ನಿಂದ ತುಂಬಿರುತ್ತದೆ. ಹಲವರಿಗೆ ಬೆಂಗಳೂರು ಬೇಸರ ಆಗುವುದು ಇದೆ ಕಾರಣಕ್ಕೆ. ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಬಂದರೂ ಬೆಂಗಳೂರಿನ ಟ್ರಾಫಿಕ್ ಮಾತ್ರ ಹಾಗೆಯೇ ಇದೆ. ಹಾಗಿದ್ದಾಗ ಈಗ ಸುರಂಗ ಮಾರ್ಗದ ರಸ್ತೆಯನ್ನು ನಿರ್ಮಿಸುವ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದೆ. ಆದರೆ ಈ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಆಗುತ್ತದೆಯಾ ಎಂಬುದನ್ನು ತಿಳಿಯೋಣ.
ಬಿಬಿಎಂಪಿ ಹೊಸ ಪ್ಲಾನ್ ಏನು ?
ರಾಜ್ಯ ಸಾರಿಗೆ ಇಲಾಖೆಯು ಅಷ್ಟೇ ಪ್ರಯತ್ನ ಪಟ್ಟರೂ ಸಹ ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಮಾತ್ರ ಕಡಿಮೆ ಆಗಲಿಲ್ಲ. ದಿನದಿಂದ ದಿನಕ್ಕೆ ವಾಹನಗಳನ್ನು ಖರೀದಿ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಈ ಬಗ್ಗೆ ಯೋಚಿಸಿದ ಬಿಬಿಎಂಪಿ ಗುರುವಾರದ ಬಜೆಟ್ ನಲ್ಲಿ ಹೊಸದಾಗಿ ಸುರಂಗ ಮಾರ್ಗ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದರ ಬಗ್ಗೆ ವಿಶೇಷ ಹಣಕಾಸು ಆಯುಕ್ತರಾದ ಶಿವಾನಂದ ಎಚ್ ಕಲಕೇರಿ ಅವರು ಬಜೆಟ್ ಮಂಡನೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಗರ ಸುರಂಗ ಯೋಜನೆ ಸೇರಿದಂತೆ ವಿವಿಧ ರಸ್ತೆ ಯೋಜನೆಗಳಿಗೆ ವಿವರವಾದ ಯೋಜನೆ ವರದಿ (ಡಿಪಿಆರ್) ಸಿದ್ಧಪಡಿಸಲು ಪರಿಣಿತ ಯೋಜನೆ ಸಲಹೆಗಾರರಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಬೆಂಗಳೂರು ನಗರದ ಸುರಂಗ ಯೋಜನೆಯ ಸಲುವಾಗಿಯೇ ಬಿಬಿಎಂಪಿ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡುತ್ತಿದೆ.
ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ :-
ಬೆಂಗಳೂರು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕನಕಪುರ ಮುಖ್ಯರಸ್ತೆಯೊಂದಿಗೆ ಬನ್ನೇರುಘಟ್ಟ ಮುಖ್ಯರಸ್ತೆ ಹಾಗೂ ಹೆಣ್ಣೂರಿನಿಂದ ಬಾಗಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಮತ್ತು ರಸ್ತೆಯನ್ನು ಅಗಲೀಕರಣ ಮಾಡುವ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಹಾಗೂ ಇದರ ಜೊತೆಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಾದರಾಯನಪುರ ಪ್ರದೇಶದ ಕಿರಿದಾದ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು.
ಇದರ ಸಲುವಾಗಿ ಈಗಾಗಲೇ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 130 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಸಾದಹಳ್ಳಿ ಗೇಟ್ ನಿಂದ ಬೇಗೂರು ಮತ್ತು ಸಾತನೂರು ಮೀಸಗಾನಹಳ್ಳಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ರಸ್ತೆ ಮೂಲಕ ಮಾರ್ಗಗಳನ್ನು ಕಲ್ಪಿಸುವ ದೃಷ್ಟಿಯಿಂದ ಟಿಡಿಆರ್ ಆಧಾರದಲ್ಲೀ ಭೂಮಿಯನ್ನು ಪಡೆದುಕೊಳ್ಳಲಾಗುವುದು ಎಂಬುದಾಗಿ ಶಿವಾನಂದ ಎಚ್ ಕಲಕೇರಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್; ಸಬ್ಸಿಡಿ ಎಷ್ಟು ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ?
ಲಘು ವಾಹನ ಸಂಚಾರಕ್ಕೆ 600 ಕೋಟಿ ಮೀಸಲಿಡಲಾಗಿದೆ :-
15 ನೇ ಹಣಕಾಸು ಆಯೋಗದ “ಕ್ಲೀನ್ ಏರ್” ಯೋಜನೆಯ ಅಡಿಯಲ್ಲಿ 2024-25 ರ ಬಿಬಿಎಂಪಿ ಬಜೆಟ್‌ನಲ್ಲಿ ಈಗಾಗಲೇ 135 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕೊನೆಯ ಮೈಲಿ ಸಂಪರ್ಕವನ್ನು ಸ್ಥಾಪಿಸುವ ಸಲುವಾಗಿ 45 ಕಿಲೋ ಮೀಟರ್ ಉದ್ದವಾದ ಪಾದಚಾರಿ ಸ್ನೇಹಿ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡಲಾಗುವುದು. ನಗರದಲ್ಲಿ ಮೂಲಸೌಕರ್ಯಗಳನ್ನ ಸರಿಯಾಗಿ ನೀಡಬೇಕು ಎಂಬ ಉದ್ದೇಶದಿಂದ ರಾಜಕಾಲುವೆಯ ಬಫರ್ ಜಾಗವನ್ನು ಟಿಡಿಆರ್ ಆಧಾರದ ಮೇಲೆ ಹಾಗೂ ಲಘು ವಾಹನಗಳ ಸಂಚಾರದ ಜೊತೆಗೆ ಸೈಕಲ್ ಸಂಚಾರಕ್ಕಾಗಿ ರಸ್ತೆ ಮಾರ್ಗಗಳನ್ನು ನಿರ್ಮಾಣ ಮಾಡಲಾಗುವುದು. ಮೂರು ವರ್ಷಗಳ ಅವಧಿಯಲ್ಲಿ 600 ಕೋಟಿ ರೂಪಾಯಿ ವೆಚ್ಚದಲ್ಲಿ 300 ಕಿಲೋ ಮೀಟರ್ ಉದ್ದವಾದ ರಾಜಕಾಲುವೆಯನ್ನು ರಸ್ತೆಯ ಎರಡೂ ಬದಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.