ರಾಜ್ಯದಲ್ಲಿ ಭೀಕರ ಬರಲಾಗದ ಪರಿಸ್ಥಿತಿ ಎದುರಾಗಿದೆ. ಎಲ್ಲ ಕಡೆಯಲ್ಲೂ ಮಾರ್ಚ್ ಮೊದಲನೇ ವಾರದಲ್ಲಿಯೇ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ರಾಜ್ಯ ಸರ್ಕಾರವು ಈಗಾಗಲೇ ಇದರ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಬಿಬಿಎಂಪಿ ವತಿಯಿಂದ ಬೆಂಗಳೂರಿನ ಜನರಿಗೆ ಕಡಿಮೆ ದರದ ನೀರಿನ ಟ್ಯಾಂಕರ್ ಸಿಗುವಂತೆ ಮಾಡಲು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಈಗ ಅದರ ಬೆನ್ನಲ್ಲೇ ಕೇವಲ 360 ರೂಪಾಯಿಗೆ 6 ಸಾವಿರ ಲೀಟರ್ ಬೆಂಗಳೂರಿನ ಜನರಿಗೆ ಸಿಗುತ್ತದೆ ಎಂಬ ಸುದ್ದಿ ರಾಜ್ಯ ರಾಜಧಾನಿಯ ಜನರಿಗೆ ಸಂತಸ ತಂದಿದೆ.
6 ಸಾವಿರ ಲೀಟರ್ ನೀರು ಕೇವಲ 360 ರೂಪಾಯಿಗೆ ಎಲ್ಲಿ ಸಿಗುತ್ತದೆ.?: ಪ್ರೈವೇಟ್ ಕಂಪನಿಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ನೀರಿನ ಟ್ಯಾಂಕರ್ ತರಿಸುವುದು ಸಾಮಾನ್ಯ ಜನರಿಗೆ ಕಷ್ಟ ಆಗುತ್ತದೆ. ಅದಕ್ಕೆ ಈಗ ಬಿಬಿಎಂಪಿ ನೀರು ಪೂರೈಕೆ ಮಾಡುವುದಾಗಿ ಹೇಳಿದೆ. ಆದರೆ ಬಿಬಿಎಂಪಿ ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಈಗ BWSSB ಸಂಸ್ಥೆಯು ನೀರು ಮಾರಾಟಕ್ಕೆ ಮುಂದಾಗಿದೆ. ಆದರೆ ಒಂದು ವಿಷಾದದ ವಿಷಯ ಏನೆಂದರೆ ಇದು ಕುಡಿಯಲು ಯೋಗ್ಯವಾದ ನೀರಲ್ಲ. ನೀವು ಈ ನೀರನ್ನು ಇತರ ಬಳಕೆಗೆ ಉಪಯೋಗಿಸಬಹುದು.
ಯಾವ ನೀರಿನ ಸಂಸ್ಕರಣೆ ಆಗುತ್ತದೆ?: BWSSB ಒದಗಿಸುವ ನೀರನ್ನು ಕುಡಿಯಲು ಮಾತ್ರ ಬಳಸಬೇಡಿ. 1440 MLD ನೀರನ್ನು ಸಂಸ್ಕರಿಸಿ ಮಾರಾಟ ಮಾಡಲು ಜಲಮಂಡಳಿ ಯೋಜಿಸಿದೆ. ರಾಜಧಾನಿಯಲ್ಲಿ ಉತ್ಪತ್ತಿಯಾಗುವ 1212 MLD ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆಗೆ ಜಲಮಂಡಲಿ ಮುಂದಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ನೀರಿನ ಹಾಹಾಕಾರದ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯೆ:-
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ನಿರ್ಮಾಣಗೊಂಡಿರುವ ನೀರಿನ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ 31,900 ಬೋರ್ವೆಲ್‌ಗಳ ಮೇಲಕ್ಕೆ 6,900 ಬತ್ತಿ ಹೋಗಿವೆ. ಈ ಬೋರ್ವೆಲ್ಗಳನ್ನು ದುರಸ್ತಿ ಮಾಡಲಾಗುವುದು. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಲಂಗಳಿಗೆ ಉಚಿತ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಅಪಾರ್ಟಮೆಂಟ್‌ಗಳಿಗೆ ನೀರಿನ ದರವನ್ನು ನಿಗದಿಪಡಿಸಲಾಗಿದೆ. ನೀರು ಪೂರೈಕೆಯ ಮಾಫಿಯಾಗೆ ಕಡಿವಾಣ ಹಾಕಬಹುದು ಎಂಬುದನ್ನು ತಿಳಿಸಿದ್ದಾರೆ.
1500 ಕ್ಕೂ ಹೆಚ್ಚು ಟ್ಯಾಂಕರ್‌ಗಳು ನೋಂದಾಯಿಸಲ್ಪಟ್ಟಿವೆ. ನೋಂದಣಿ ಇಲ್ಲದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲು ಅನುಮತಿ ಇಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ನಾವು ಕುಡಿಯುವ ನೀರು ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬಿಡಿ ಎಂದು ಡಿಸಿಎಂ ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ನಗರ 6 ಸಾವಿರ ಲೀಟರ್ ನೀರಿಗೆ 510 ರೂಪಾಯಿ ದರ ನಿಗದಿ ಮಾಡಿತ್ತು. ಈಗ, BWSSB ಉತ್ಪನ್ನವನ್ನು ಈ ದರಕ್ಕಿಂತ ಕಡಿಮೆ ದರದಲ್ಲಿ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲಾಗತ್ತದೆ ಎಂದು ತಿಳಿಸಿದೆ.
ಮಳೆ ಬಾರದೆ ಇದ್ದರೆ ಮುಂದುವರೆಯಲಿದೆ ಸಮಸ್ಯೆ :- ಶಿವರಾತ್ರಿ ಮುಗಿದರೂ ಮುಂಗಾರು ಮಳೆಯ ನಂತರ ಒಂದು ಮಳೆಯು ಆಗದೆ ಇರುವುದು ಈ ಬರಗಾಲ ಸ್ಥಿತಿಗೆ ಕಾರಣವಾಗಿದೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಬರಗಾಲ ಸ್ಥಿತಿಯನ್ನು ಎದುರಿಸುವುದು ಕಷ್ಟ ಆಗುತ್ತದೆ. ಈಗಾಗಲೇ ಈ ಬಗ್ಗೆ ರಾಜ್ಯದಲ್ಲಿ ನೀರಿನ ಸಂಸ್ಕರಣೆ ಬಗ್ಗೆ ಹೆಚ್ಚಿನ ಒತ್ತು ನೀಡಿ ಜನರಿಗೆ ನೀರಿನ ಪೂರೈಕೆ ಮಾಡಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇದನ್ನೂ ಓದಿ: ಬೆಂಗಳೂರು ಬಿಡಿಎ ಸೈಟ್ ಖರೀದಿಸಿ ಖಾಲಿ ಬಿಟ್ಟರೆ ಶೇ. 25% ಹೆಚ್ಚಿನ ಶುಲ್ಕ ಕಟ್ಟಬೇಕು?
ಇದನ್ನೂ ಓದಿ: ಮನೆಯಿಂದಲೇ ಹೆಚ್ಚಿನ ಲಾಭಗಳನ್ನು ನೀಡುವ 5 ಬ್ಯುಸಿನೆಸ್ ಐಡಿಯಾಗಳು