ಒಂದು ವರ್ಷದ FD ಯೋಜನೆಗೆ ಯಾವ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರಗಳು ಇವೆ.

Best 1 Year FD Rates

ಪ್ರತಿಯೊಬ್ಬರೂ ಯಾವುದೇ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಲ್ಲಿ ಹೆಚ್ಚಿನ ಬಡ್ಡಿದರಗಳು ಇವೆ ಎಂಬುದನ್ನು ಮೊದಲು ತಿಳಿದುಕೊಂಡು ನಂತರ ಹೂಡಿಕೆ ಮಾಡುತ್ತಾರೆ. ಈಗ ಹೂಡಿಕೆ ಮಾಡಲು ಹಲವು ಮಾರ್ಗಗಳು ಇದ್ದರೂ ಸಹ ಬ್ಯಾಂಕ್ ನಲ್ಲಿ FD ಖಾತೆಯ ಹೂಡಿಕೆಯ ಹೆಚ್ಚಿನ ಭದ್ರತೆ ಹೊಂದಿದೆ ಹಾಗೂ ನಮಗೆ ಯಾವಾಗ ಬೇಕಾದರೂ ನಮ್ಮ ಹಣದ ಅವಶ್ಯಕತೆಗೆ ತಕ್ಕಂತೆ ಹಣವನ್ನು ಬಳಸಲು ಅನುಕೂಲ ಆಗುತ್ತದೆ ಎಂಬ ಉದ್ದೇಶದಿಂದ ಹೆಚ್ಚಿನ ಜನರು ಬ್ಯಾಂಕ್ FD ಖಾತೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ. ದೇಶದ ತುಂಬ ಈಗ ಹಲವಾರು ಬ್ಯಾಂಕ್ ಇವೆ. ಆದರೆ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರಗಳು ಸಿಗುತ್ತವೆ ಎಂಬ ಮಾಹಿತಿ ಇರುವುದಿಲ್ಲ. ಅಂತವರಿಗೆ ಈಗ ಒಂದು ವರ್ಷದ ವರೆಗೆ FD ಖಾತೆಯಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿದರ ಏಷ್ಟು ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಕನಿಷ್ಠ ಏಷ್ಟು ದಿನಗಳ FD ಖಾತೆ ತೆರೆಯಲು ಅವಕಾಶ ಇದೆ?: ಸಾಮಾನ್ಯವಾಗಿ ದೇಶದ ಎಲ್ಲ ಬ್ಯಾಂಕ್ ನಲ್ಲಿ ಕನಿಷ್ಠ 7 ದಿನಗಳ ಕಲಾವಧಿಯಲ್ಲಿ FD ಖಾತೆಯನ್ನು ತೆರೆಯಲು ಅವಕಾಶ ಇರುತ್ತದೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ದಿನಗಳು ಖಾತೆಯಲ್ಲಿ ಹಣ ಹೂಡಿಕೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರ ಸಿಗುತ್ತದೆ :-

HDFC ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡಾ 3% ರಿಂದ ಶೇಕಡಾ 6% ವರೆಗೆ ಬಡ್ಡಿದರ ಸಿಗುತ್ತದೆ. ಕನಿಷ್ಠ 7 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ನೀವು ಹಣ ಹೂಡಿಕೆ ಮಾಡಲು ಅವಕಾಶ ಇದೆ.

ICICI ಬ್ಯಾಂಕ್: ಈ ಬ್ಯಾಂಕ್ ನಲ್ಲಿಯೂ ಸಹ ಸಾಮಾನ್ಯ ನಾಗರಿಕರಿಗೆ ಶೇಕಡಾ 3% ರಿಂದ 6% ವರೆಗೆ ಬಡ್ಡಿದರ ಸಿಗುತ್ತದೆ. ಈ ಬ್ಯಾಂಕ್ ನಲ್ಲಿ 7 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ಹಣ ಹೂಡಿಕೆ ಮಾಡುವ ಅವಕಾಶ ಇದೆ.

ಯೆಸ್ ಬ್ಯಾಂಕ್(Yes Bank): ಈ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಕನಿಷ್ಠ 7 ದಿನಗಳಿಂದ ಒಂದು ವರ್ಷದ ಅವಧಿಗೆ ಹಣ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ಬಡ್ಡಿದರಗಳು ಶೇಕಡಾ 3.25% ಇಂದ 7.25% ಸಿಗುತ್ತದೆ.

ಎಸ್‌ಬಿಐ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ನಲ್ಲಿ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಶೇಕಡಾ 3 % ಇಂದ ಶೇಕಡಾ 5.75% ವರೆಗೆ ಬಡ್ಡಿದರ ಸಿಗುತ್ತದೆ.

ಕೆನರಾ ಬ್ಯಾಂಕ್: ಈ ಬ್ಯಾಂಕ್ ನಲ್ಲಿನಲ್ಲಿಯೂ ಸಹ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ ಒಂದು ವರ್ಷದ ಅವಧಿಯ ವರೆಗೆ ಹಣ ಹೂಡಿಕೆ ಮಾಡಿದರೆ ಶೇಕಡಾ 4% ಇಂದ ಶೇಕಡಾ 6.85/% ವರೆಗೆ ಬಡ್ಡಿದರ ಸಿಗುತ್ತದೆ.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ ಒಂದು ವರ್ಷದವರೆಗಿನ ಅವಧಿಗಯ ವರೆಗೆ ಹಣ ಹೂಡಿಕೆ ಮಾಡಿದರೆ ಶೇಕಡಾ 4.50% ಇಂದ 7.85% ವರೆಗೆ ಬಡ್ಡಿದರವು ಸಿಗುತ್ತದೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯೊಂದಿಗೆ ಪ್ರತಿ ತಿಂಗಳು ರೂ 20,500 ಪಡೆಯಿರಿ! 

ಇದನ್ನೂ ಓದಿ: ಮಾಸಿಕ ರೂ 10,000 ಪಿಂಚಣಿ ಪಡೆಯಲು ಪತಿ, ಪತ್ನಿ ಒಟ್ಟಿಗೆ ಈ ಖಾತೆಯನ್ನು ತೆರೆಯಿರಿ!