LIC ಲೈಫ್ ಇನ್ಸೂರೆನ್ಸ್ 5 ವಿಮಾ ಉತ್ತಮ ಸ್ಕೀಮ್ ಗಳ ಬಗ್ಗೆ ತಿಳಿಯಿರಿ.

Best LIC Insurance Plans

ಹಣವನ್ನು ಉಳಿತಾಯ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಹೇಗೆ ಎಂಬುದು ಮಾತ್ರ ಬಹಳ ಜನರಿಗೆ ಗೊಂದಲ ಇರುತ್ತದೆ. ಎಲ್ಲಿ ಹಣ ಹೂಡಿಕೆ ಮಾಡಿದರೆ ನಮಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ ಎಂಬುದನ್ನು ನೋಡಿ ಹಣ ಹೂಡಿಕೆ ಮಾಡಬೇಕು. ಇಂದು ಹಣ ಉಳಿತಾಯ ಮಾಡಲು ಹಲವಾರು ಬಗೆಯ ಯೋಜನೆಗಳು ಲಭ್ಯವಿದೆ. ಇನ್ಸೂರೆನ್ಸ್ ಪಾಲಿಸಿಗಳು ಷೇರು ಮಾರುಕಟ್ಟೆ ಬ್ಯಾಂಕ್ ನಲ್ಲಿ ಹಲವು ಸ್ಕೀಮ್ ಗಳು ಹಣವನ್ನು ಹೂಡಿಕೆ ಮಾಡಲು ಇವೆ. ಆದರೆ ನಮಗೆ ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಇದೆ ಎಂಬುದನ್ನು ಅರಿತು ಹಣವನ್ನು ಉಳಿತಾಯ ಮಾಡಬೇಕು. Lic ಯ ಹಲವಾರು ಯೋಜನೆಗಳು ಇವೆ. ಆದರೆ ಅದರಲ್ಲಿ ಇರುವ 5 ಉತ್ತಮ ಯೋಜನೆಗಳ ಬಗ್ಗೆ ತಿಳಿಯೋಣ. 

WhatsApp Group Join Now
Telegram Group Join Now

ಉತ್ತಮ 5 ವಿಮಾ ಯೋಜನೆಗಳು ಯಾವುದು?

1) LIC ಜೀವನ್ ಅಮರ್ (LIC Jeevan Amar): ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಪಡೆಯಲು ಸಾಧ್ಯ. ಇದು ಉತ್ತಮ ವಿಮಾ ಯೋಜನೆ ಆಗಿದೆ. ಈ ವಿಮಾ ಯೋಜನೆಯಲ್ಲಿ ನಿಗದಿತ ಅವಧಿಗೆ ಹೆಚ್ಚಿನ ಹಣವೂ ಸಿಗುತ್ತದೆ. ಹೆಚ್ಚಿನ ವಿಮಾ ಹಣವನ್ನು ಕಡಿಮೆ ಬಂಡವಾಳ ಹಾಕಿ ಪಡೆಯಬೇಕು ಎಂದು ಇಚ್ಚಿಸುವವರು ಇದು ಬೆಸ್ಟ್ ಯೋಜನೆ ಆಗಿದೆ. ಈ ವಿಮಾ ಪಾಲಿಸಿಯ 10 ರಿಂದ 40 ವರ್ಷಗಳ ವರೆಗೆ ವಿಮಾ ಯೋಜನೆಯ ಅವಧಿ ನಿಗದಿ ಮಾಡಬಹುದು. ಪಾಲಿಸಿ ಮಾಡಿಸಲು ವಯಸ್ಸಿನ ಅವಧಿ 18 ರಿಂದ 65 ವರ್ಷ. 80 ವರ್ಷ ವಯಸ್ಸಿಗೆ ನಿಮ್ಮ ಪಾಲಿಸಿಯ ಹಣವೂ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2) ಎಲ್ಐಸಿ ಟೆಕ್ ಟರ್ಮ್ ಪ್ಲಾನ್ (LIC tech term plan): ಇದು ಸಹ ಉತ್ತಮ ವಿಮಾ ಯೋಜನೆಗಳಲ್ಲಿ ಒಂದಾಗಿದೆ. ಕಡಿಮೆ ಹಣವನ್ನು ಕಂತಿನ ಮೂಲಕ ಕಟ್ಟಿ ಹೆಚ್ಚಿನ ಹಣವನ್ನು ಪಡೆಯಲು ಸಾಧ್ಯ. ನಿಮ್ಮ ರಿಟೈರ್ಮೆಂಟ್ ಲೈಫ್( retairment life) ನಲ್ಲಿ ಹಣ ನಿಮ್ಮ ಬಳಿ ಇರುತ್ತದೆ. 18 ರಿಂದ 65 ವರ್ಷಗಳ ವರೆಗೆ ಈ ಪಾಲಿಸಿಯನ್ನು ಪಡೆಯಬಹುದು. ಪಾಲಿಸಿಯನ್ನು 10 ವರ್ಷದಿಂದ ರಿಂದ 40 ವರ್ಷಗಳ ಅವಧಿಯಲ್ಲಿ ಹಣ ಹೂಡಿಕೆ ಮಾಡಬಹುದಾದ ಸ್ಕೀಮ್ ಇದಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

3) LIC ನ್ಯೂ ಚಿಲ್ದ್ರನ್‌ ಮನಿ-ಬ್ಯಾಕ್ ಯೋಜನೆ ( LIC new children’s money back Scheme): ಮಕ್ಕಳ ಹೆಚ್ಚಿನ ವಿಧ್ಯಾಭ್ಯಾಸ ಅಥವಾ ಮದುವೆಯ ಉಳಿತಾಯಕ್ಕೆ ಇದು ಉತ್ತಮ ಯೋಜನೆ ಆಗಿದೆ. ತಮ್ಮ ಮಕ್ಕಳ ಮುಂದಿನ ಜೀವನಕ್ಕೆ ಹಣ ಉಳಿತಾಯ ಮಾಡಬೇಕು ಎಂದು ಬಯಸುವ ಪೋಷಕರಿಗೆ ಇದು ಉನ್ನತವಾದ ಯೋಜನೆಯಾಗಿದೆ. ಈ LIC ಪಾಲಿಸಿ ಅವಧಿಯು 25 ವರ್ಷ. ಈ ಯೋಜನೆಯಲ್ಲಿ ಮಗು ಹುಟ್ಟಿದಾಗಿನಿಂದ 12 ವರ್ಷಗಳ ವರೆಗೆ ಈ ಯೋಜನೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಮಿನಿಮಮ್ 1 ಲಕ್ಷ ರೂಪಾಯಿಗಳ ವರೆಗೆ LIC ಮಾಡಿಸಬಹುದು. ಹಾಗೆಯೇ ಗರಿಷ್ಠ ಪಾಲಿಸಿ ಅಮೌಂಟ್ ಗೆ ಯಾವುದೇ ಮಿತಿ ಇಲ್ಲ. ಈ ಪಾಲಿಸಿಯ ಮೆಚ್ಯೂರಿಟಿ ಅವಧಿ 25 ವರ್ಷ.

ಇದನ್ನೂ ಓದಿ: ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣವಾದ Motorola Razr Plus 250 RAM ನೊಂದಿಗೆ

4) ಎಲ್ಐಸಿ ನ್ಯೂ ಜೀವನ್ ಆನಂದ್ (LIC new jeevan anand):

ಈ ವಿಮಾ ಯೋಜನೆಯು ವಿಮಾ ಸೆಕ್ಯೂರಿಟಿ ಮತ್ತು ಹಣ ಉಳಿತಾಯ ಮಾಡುವಲ್ಲಿ ಇದು ಉತ್ತಮವಾಗಿದೆ. ಇದು ಉತ್ತಮ ರಿಟೈರ್ಮೆಂಟ್ ಪ್ಲಾನ್ ಆಗಿದೆ. ಈ ಯೋಜನೆ ಪಡೆಯಲು ವಿಮದಾರರ ವಯಸ್ಸು 18 ರಿಂದ 50 ವರ್ಷ. ಪಾಲಿಸಿ ಅವಧಿಯನ್ನು 15 ರಿಂದ 35 ವರ್ಷಗಳ ವರೆಗೆ ಮಾಡಬಹುದು. ಈ ಯೋಜನೆಯಡಿ ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂಪಾಯಿ. ಗರಿಷ್ಠ ಹಣ ಇಡಲು ಯಾವುದೇ ಮಿತಿ ಇರುವುದಿಲ್ಲ. ಈ ಸ್ಕೀಮ್ ನ ಮೆಚ್ಯೂರಿಟಿ ವಯಸ್ಸು 75 ವರ್ಷ. 

5) ಎಲ್ಐಸಿ ಜೀವನ್ ಉಮಂಗ್ (LIC jeevan umang): ಇದು ಜೀವಿತಾವಧಿಯವರೆಗೆ ರಕ್ಷಣೆ ನೀಡುವ ಯೋಜನೆ ಆಗಿದೆ. ಉಳಿತಾಯದ ಭಧ್ರತೆ ನೀಡುವ ಜೀವ ವಿಮೆಯನ್ನು ಬಯಸುವವರಿಗೆ ಈ ಯೋಜನೆಯು ಉತ್ತಮವಾಗಿದೆ. ಈ ಯೋಜನೆಯ ಪಾಲಿಸಿ ಅವಧಿ 100 ವರ್ಷ. ಈ ಯೋಜನೆಯ ವಯಸ್ಸು ಮಗು ಜನಿಸಿದ 90 ದಿನಗಳಿಂದ 55 ವರ್ಷಗಳು. ಈ ಯೋಜನೆಯ ಮುಕ್ತಾಯ ಅವಧಿ 100 ವರ್ಷ. ವಿಮಾ ಮೊತ್ತ ಕನಿಷ್ಠ 2 ಲಕ್ಷ ರೂಪಾಯಿಗಳು.

ಇದನ್ನೂ ಓದಿ: ರಾಮ ಮಂದಿರಕ್ಕೆ ಹನುಮಾನ್ ಚಿತ್ರತಂಡದಿಂದ ದೊಡ್ಡ ಪ್ರಮಾಣದ ಹಣ ದೇಣಿಗೆ!