ಯಾವ ಸಮಯದಲ್ಲಿ ನೀರು ಕುಡಿದರೆ ನಮ್ಮ ದೇಹದ ಆರೋಗ್ಯಕ್ಕೆ ಉತ್ತಮ?

Best Time to Drink Water

ನಮ್ಮ ದೇಹಕ್ಕೆ ನೀರು ಬಹಳ ಮುಖ್ಯ ನಾವು ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಹೆಚ್ಚಾಗಿ ಸೇವಿಸಬೇಕು ಎಂದು ವೈದ್ಯರು ನಮಗೆ ತಿಳಿಸುತ್ತಾರೆ. ಆದರೆ ಯಾವ ಸಮಯದಲ್ಲಿ ನೀರನ್ನು ಸೇವಿಸಿದರೆ ನಮ್ಮ ದೇಹಕ್ಕೆ ಹೆಚ್ಚು ಉಪಯೋಗ ಎನ್ನುವುದು ನಮಗೆ ತಿಳಿದಿಲ್ಲ. ನಮ್ಮ ದೇಹದ ಸಮತೋಲನ ಕಾಪಾಡಲು ಯಾವ ಸಮಯದಲ್ಲಿ ನೀರು ಕುಡಿಯಬೇಕು ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಯಾವ ಯಾವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು?

1) ಎದ್ದ ನಂತರ: ನೀವು ರಾತ್ರಿ ಮಲಗಿದ ಮೇಲೆ ನಿಮ್ಮ ದೇಹಕ್ಕೆ ಯಾವುದೇ ಆಹಾರ ಮತ್ತು ನೀರು ಸೇವನೆ ಮಾಡುವುದು ಕಡಿಮೆ ನೀವು ಬೆಳಗ್ಗೆ ಎದ್ದ ನಂತರದಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹದ ಆಂತರಿಕ ಅಂಗಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.

2) ವ್ಯಾಯಾಮದ ನಂತರ: ನಿಮಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ಇದ್ದಲ್ಲಿ ನೀವು ವ್ಯಾಯಾಮದ ನಂತರ ನೀರು ಕುಡಿಯಲೇ ಬೇಕು. ಏಕೆಂದರೆ ವ್ಯಾಯಮ ಮಾಡಿದ ನಂತರ ನೀರು ಕುಡಿಯುವುದರಿಂದ ನಿಮ್ಮ ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

3) ಊಟಕ್ಕೆ 30 ನಿಮಿಷಗಳು: ಮಧ್ಯಾನ್ಹ ಮತ್ತು ರಾತ್ರಿಯ ಊಟದ ಮೊದಲು ನೀರು ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

4) ಸ್ನಾನ ಮಾಡುವ ಮೊದಲು: ಹೆಚ್ಚು ಹೃದಯ ಆಘಾತಗಳು ಸ್ನಾನ ಮಾಡುವಾಗ ಆಗುತ್ತವೆ. ಏಕೆಂದರೆ ನಮ್ಮ ದೇಹಕ್ಕೆ ಬಿಸಿ ನೀರಿನ ಸ್ನಾನದಿಂದ ಹೆಚ್ಚು ಸುಸ್ತು ಆಗುತ್ತದೆ. ಅದರಲ್ಲೂ ಈ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದ ಸುಸ್ತು ಆಗುತ್ತದೆ. ಇದೇ ಕಾರಣಕ್ಕೆ ಸ್ನಾನ ಮಾಡುವ ಮೊದಲು ಒಂದು ಗ್ಲಾಸ್ ನೀರು ಕುಡಿದು ಸ್ನಾನ ಮಾಡಬೇಕು.

5) ಮಲಗುವ ಮುನ್ನ: ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ನೀರು ಕುಡಿಯಿರಿ ಇದು ನಿಮ್ಮ ದೇಹದ ಯಾವುದೇ ದ್ರವದ ನಷ್ಟವನ್ನು ತುಂಬಲು ಸಹಾಯ ಮಾಡುತ್ತದೆ.

6) ನೀವು ದಣಿದಿರುವಾಗ: ನಿಮ್ಮ ದೇಹಕ್ಕೆ ಹೆಚ್ಚು ದಣಿವು ನೀವು ನೀರು ಕುಡಿಯುವುದರಿಂದ  ನಿಮ್ಮ ದೇಹವನ್ನು ರೀಚಾರ್ಜ್ ಮಾಡಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

7) ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ: ನೀವು ಜ್ವರ ಕೆಮ್ಮು ಅಥವಾ ಯಾವುದೇ ಖಾಯಿಲೆಯಿಂದ ಬಳಲುತ್ತಾ ಇರುವಾಗ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಿ ನಿಮ್ಮ ದೇಹ ಮೊದಲಿನಂತೆ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳು:-

  1. ತ್ಯಾಜ್ಯವನ್ನು ತೆಗೆದುಹಾಕುತ್ತದೆ: ಮೂತ್ರ ಮತ್ತು ವಾಂತಿಯ ಮೂಲಕ ದೇಹದಲ್ಲಿ ಇರುವ ಕಲಪ್ಮಶಗಳನ್ನು ಅಥವಾ ದೇಹಕ್ಕೆ ಬೇಡವಾದ ಪದಾರ್ಥಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  2. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ: ಹೆಚ್ಚು ನೀರು ಕುಡಿಯುವುದರಿಂದ ನೀರು ಬೆವರಿನ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  3. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ: ನೀವು ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹದ ಚರ್ಮವನ್ನು ಹೈಡ್ರೀಕರಿಸಲು ಸಹಾಯಕ ಆಗಿದೆ. ಜೊತೆಗೆ ನಿಮ್ಮ ದೇಹದ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
  4. ಕಿಡ್ನಿ ಕಲ್ಲು ಆಗುವುದನ್ನು ತಪ್ಪಿಸಲು:- ನೀವು ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹದ ಕಿಡ್ನಿಯಲ್ಲಿ ಕಲ್ಲು ಆಗುವುದು ತಪ್ಪುತ್ತದೆ.

ಇದನ್ನೂ ಓದಿ: ಬಿಎಂಟಿಸಿ ಬರೋಬ್ಬರಿ 2500 ಕಂಡಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಏರುತ್ತಿರುವ ಚಿನ್ನದ ಬೆಲೆ, ಇಲ್ಲಿದೆ ಅಸಲಿ ಕಾರಣಗಳು!