ಫಿಟ್ನೆಸ್ ಕಾಯ್ದುಕೊಳ್ಳಲು ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಉತ್ತಮ?

best Time To Exercise

ಆರೋಗ್ಯ ಕಾಪಾಡಿಕೊಳ್ಳಲು ನಾವು ನಿತ್ಯ ವ್ಯಾಯಾಮ ಮಾಡಬೇಕು ಎಂದು ಡಾಕ್ಟರ್ಸ್ ಹಾಗೆ ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ನಾವು ದಿನ ನಿತ್ಯ ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವ್ಯಾಯಾಮ ಮಾಡಬೇಕು. ನಮ್ಮ ಆರೋಗ್ಯ ವೃದ್ಧಿಗೆ ಯಾವ ಸಮಯ ವ್ಯಾಯಾಮಕ್ಕೆ ಸೂಕ್ತವಾಗಿದೆ ಎಂದುದನ್ನು ತಿಳಿಯೋಣ.

WhatsApp Group Join Now
Telegram Group Join Now

ಆರೋಗ್ಯವೇ ಭಾಗ್ಯ. ಆರೋಗ್ಯ ವೃದ್ಧಿಗೆ ಆಹಾರ ಕ್ರಮ ಏಷ್ಟು ಮುಖ್ಯ ಹಾಗೆಯೇ ವಾಕಿಂಗ್ ವ್ಯಾಯಾಮ ಪ್ರಾಣಾಯಾಮ ಇವು ಸಹ ಆರೋಗ್ಯಕ್ಕೆ ಬಹಳ ಮುಖ್ಯ ಆಗಿದೆ. ನಾವು ಒಂದು ದಿನ ಬೆಳಗ್ಗೆ ವ್ಯಾಯಾಮ ಮಾಡುತ್ತೇವೆ. ಹಾಗೆ ಇವತ್ತು ಸಮಯವಿಲ್ಲ ಸಂಜೆ ಮಾಡೋಣ ಎಂದು ಸಂಜೆ ವ್ಯಾಯಾಮ ಮಾಡುತ್ತೇವೆ. ಹಾಗೆಯೇ ಒಂದು ದಿನ ಆಗುವುದಿಲ್ಲ ಎಂದು ವ್ಯಾಯಾಮ ಮಾಡುವುದನ್ನು ಬಿಡುತ್ತೇವೆ. ಆದರೆ ಆರೋಗ್ಯ ತಜ್ಞರ ಅಭಿಪ್ರಾಯದ ಪ್ರಕಾರ. ಬೆಳಗಿನ ವ್ಯಾಯಾಮ ಆರೋಗ್ಯ ವೃದ್ಧಿಗೆ ಕೆಲವು ಸಹಾಯ ಮಾಡಿದರೆ ಸಂಜೆಯ ವ್ಯಾಯಾಮ ಆರೋಗ್ಯಕ್ಕೆ ವೃದ್ಧಿಗೆ ಸಹಕಾರಿ ಆಗಿದೆ.

ಬೆಳಗ್ಗಿನ ವ್ಯಾಯಾಮ ಆರೋಗ್ಯ ವೃದ್ಧಿಗೆ ಹೇಗೆ ಸಹಾಯಕ?

1.ಮಾನಸಿಕ ಆರೋಗ್ಯಕ್ಕೆ ಉತ್ತಮ:- ದಿನವೂ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ನಮ್ಮ ಮನಸ್ಸು ಮತ್ತು ದೇಹಕ್ಕೆ ಆರಾಮದಾಯಕವಾದ. ಬೆಳಗಿನ ವ್ಯಾಯಾಮವು ದಿನವಿಡೀ ದುಡಿಯುವ ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ದಿನವಿಡೀ ಮನಸ್ಸು ಶಾಂತಿಯಿಂದ ಇರಲು ಬೆಳಗ್ಗಿನ ವ್ಯಾಯಾಮ ಸಹಾಯಕ. ಕೆಲಸದ ಒತ್ತಡ, ಮನೆಯ ಸಮಸ್ಯೆಗಳು, ಓದುವುದು ಬರೆಯುವುದು ಹೀಗೆ ನಾನಾ ಕೆಲಸಗಳ ಸ್ಟ್ರೆಸ್ ದೂರಮಾಡಲು ಬೆಳಗಿನ ವ್ಯಾಯಾಮ ಸಹಾಯಕ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2.ರಾತ್ರಿ ನಿದ್ರೆ ಬರುತ್ತದೆ.:- ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ಸಿರ್ಕಾಡಿಯನ್ ರಿದಮ್ ಅನ್ನು ನಿಯಂತ್ರಿಸಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಹಾಯಕವಾಗಿದೆ. ಹಾಗೂ ಬೆಳಗ್ಗೆ ತುಕಾಡಿಸುವುದು ತಪ್ಪುತ್ತದೆ. ನಿದ್ರೆ ಚೆನ್ನಾಗಿ ಆದರೆ ದೇಹ ಮತ್ತು ಮನಸ್ಸಿನ ಆರೋಗ್ಯವೂ ಸಹ ವೃದ್ಧಿ ಆಗುತ್ತದೆ. 

3. ತೂಕ ಕಡಿಮೆ ಆಗುತ್ತದೆ :- ದೇಹದ ತೂಕ ಇಳಿಸಲು ಅಥವಾ ಕೊಬ್ಬಿನಂಶ ಕಡಿಮೆ ಮಾಡಲು ಬೆಳಗ್ಗಿನ ವ್ಯಾಯಾಮ ಉಪಯೋಗವಾಗಿದೆ. ಬೆಳಗ್ಗಿನ ವ್ಯಾಯಾಮ ನಮ್ಮ ದೇಹದಲ್ಲಿ ಇರುವ ಹೆಚ್ಚಾದ ಕ್ಯಾಲೋರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದರ ಜೊತೆಗೆ ಬೆಳಗ್ಗಿನ ವ್ಯಾಯಾಮವು ಕೆಲವರಿಗೆ ಅಪಾಯವನ್ನು ಮಾಡಬಹುದು, ವಿಶ್ರಾಂತಿ ಇಂದ ಎದ್ದು ಹಾಗೆಯೇ ವ್ಯಾಯಾಮ ಮಾಡುವುದರಿಂದ ಕೆಲವರಿಗೆ ಸ್ನಾಯುಗಳ ಸೆಳೆತ ಉಂಟಾಗಬಹುದು. ಕೆಲವರಿಗೆ ಬೆಳಗಿನ ವ್ಯಾಯಾಮದಿಂದ ಸುಸ್ತು ಉಂಟಾಗಬಹುದು.

ಸಂಜೆಯ ವ್ಯಾಯಾಮದಿಂದ ಆರೋಗ್ಯಕ್ಕೆ ಏನು ಲಾಭ?

1.ಒತ್ತಡ ಕಡಿಮೆ ಮಾಡುತ್ತದೆ.:- ದಿನವಿಡೀ ಕೆಲಸಗಳು, ಒತ್ತಡ ಪರಿಸ್ಥಿತಿಗಳು, ಆರ್ಥಿಕ ಮತ್ತು ಸಾಮಾಜಿಕ ಅಡಚಣೆಗಳು ಎಲ್ಲದರಿಂದ ನಮ್ಮ ಮನಸ್ಸು ಚೈತನ್ಯವನ್ನು ಕಳೆದುಕೊಂಡು ಇರುತ್ತದೆ. ಅಂತಹ ಸಮಯದಲ್ಲಿ ಒತ್ತಡ ನಿವಾರಣೆಗೆ ಸಂಜೆ ವ್ಯಾಯಾಮ ಮಾಡುವುದು ಉತ್ತಮ.

2.ನೋವು ನಿವಾರಕ :- ಈ ಸಮಯದಲ್ಲಿ ಸ್ನಾಯುಗಳು ಗಟ್ಟಿ ಆಗುವುದನ್ನು ತಡೆಯುತ್ತದೆ. ಇದರಿಂದ ಗಾಯದ ಅಪಾಯವನ್ನು ತಡೆಯಲು ಸಾಧ್ಯ. 

ವ್ಯಾಯಾಮಗಳು ನಮ್ಮ ನಿತ್ಯ ಜೀವನದಲ್ಲಿ ಬಹಳ ಉಪಯೋಗ. ಆದರೆ ನಾವು ವ್ಯಾಯಾಮ ಮಾಡುವ ಮೊದಲು ಉತ್ತಮ ಟ್ರೈನರ್ ಬಳಿ ಹೋಗಿ ಕಲಿತು ಮಾಡುವುದು ಉತ್ತಮ. ನಾವು ಯೂಟ್ಯೂಬ್ ಅಥವಾ ಬುಕ್ ನೋಡಿ ವ್ಯಾಯಾಮ ಮಾಡಿದರೆ ನಮ್ಮ ದೇಹದ ನರಗಳಿಗೆ ಹಾನಿಯಾಗಬಹುದು. ಇದರಿಂದ ನಿಮ್ಮ ದೇಹಕ್ಕೆ ಅಪಾಯ ಆಗಬಹುದು.

ಇದನ್ನೂ ಓದಿ: ಮಹಿಳೆಯರು ತೆಗೆದುಕೊಳ್ಳುವ ಗೃಹ ಸಾಲಕ್ಕೆ ಹಲವು ರೀತಿಯ ಪ್ರಯೋಜನಗಳು ಇವೆ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದ RBI; ಗ್ರಾಹಕರಿಗೆ ಉತ್ತಮ ಲಾಭ