ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್; ಒಂದು ಎಲೆಕ್ಟ್ರಿಕಲ್ ಸ್ಕೂಟರ್ ಕೊಂಡ್ರೆ ಮತ್ತೊಂದು ಫ್ರೀ

ಹಬ್ಬದ ಸೀಸನ್ ನಡೆಯುತ್ತಿದೆ. ಈಗ ಎಲ್ಲರ ಚಿತ್ತ ಮನೆಗೆ ಏನಾದ್ರೂ ಒಂದು ಅವಶ್ಯಕತೆ ಇರೋ ವಸ್ತುವಾಗಲಿ ಅಥವಾ ವಾಹನವಾಗಲಿ ತರಬೇಕು ಅಂತ ಇರುತ್ತದೆ. ಅದರಲ್ಲೂ ಇನ್ನೊಂದು ವಾರದಲ್ಲಿ ದೀಪಾವಳಿಯೂ ಬರಲಿದೆ. ಹೀಗಾಗಿ ಈ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಆಫರ್ ಗಳು ಜನರನ್ನ ಸೆಳೆಯುತ್ತಿರುತ್ತಾರೆ. ಆದ್ರೆ ಈಗ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಿಮಗಾಗಿ ಉತ್ತಮ ಆಫರ್​ ಇದೆ. ಗಮನ ಸೆಳೆಯುವ ಕೊಡುಗೆಗಳು ಲಭ್ಯವಿವೆ. ಆದ್ರೆ ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರಬಹುದು. ಹೌದು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ಬಿಗಾಸ್(BGauss) ತನ್ನ ಇತ್ತೀಚಿನ ಮಾಡೆಲ್ ಹೊರಹಾಕಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಯಲ್ಲಿ ವಿವಿಧ ರೀತಿಯ ಡೀಲ್‌ಗಳನ್ನು ಲಭ್ಯವಾಗುವಂತೆ ಮಾಡಿದೆ. ಈ ಒಪ್ಪಂದಗಳು ಖರೀದಿದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಬಿಗಾಸ್ ಕಂಪನಿ ದೀಪಾವಳಿ ಆಫರ್(Diwali Offer) ತಂದಿದೆ. BG C120 ಎಲೆಕ್ಟ್ರಿಕ್ ಸ್ಕೂಟರ್(Electric Scooter) ದೊಡ್ಡ ಕೊಡುಗೆಗಳೊಂದಿಗೆ ಲಭ್ಯವಿದೆ. ಈ ಸ್ಕೂಟರ್ ಖರೀದಿಯೊಂದಿಗೆ, ನೀವು ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯಬಹುದು.

WhatsApp Group Join Now
Telegram Group Join Now
Image Credit: Original Source

 

ಹೌದು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದರೆ, ನೀವು BG C12i EX ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯಬಹುದು. ಇದರ ಬೆಲೆ ರೂ. 1,05,000. ಕಂಪನಿಯು ದೀಪಾವಳಿಯ ಸಂದರ್ಭದಲ್ಲಿ ಸ್ಕ್ರ್ಯಾಚ್ ಮತ್ತು ವಿನ್ ಸ್ಪರ್ಧೆಯನ್ನು ನಡೆಸುತ್ತಿದೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಕ್ರ್ಯಾಚ್ ಮತ್ತು ವಿನ್ ಸ್ಪರ್ಧೆಯ ಭಾಗವಾಗಿ ಖರೀದಿದಾರರು BG C12i EX ಸ್ಕೂಟರ್ ಅನ್ನು ಸಹ ಗೆಲ್ಲಬಹುದು. ಅಂದರೆ ಒಂದು ಸ್ಕೂಟರ್ ಖರೀದಿಸಿದರೆ ಇನ್ನೊಂದು ಸ್ಕೂಟರ್ ಉಚಿತವಾಗಿ ಸಿಗುತ್ತದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಗ್ರಾಹಕರಿಗೆ ಬಿಗಾಸ್ ನೀಡುತ್ತಿದೆ ಭರ್ಜರೀ ಗಿಫ್ಟ್

ಹೌದು ದೀಪಾವಳಿ ಹಬ್ಬದ ಪ್ರಯುಕ್ತ ಬಿಗಾಸ್​ ಕಂಪನಿಯು ತನ್ನ ಗ್ರಾಹಕರಿಗೆ ಸ್ಕ್ರ್ಯಾಚ್ & ವಿನ್​ ಎಂಬ ಸ್ಪರ್ಧೆ ಆಯೋಜಿಸಿದ್ದು BG C120 ಎಲೆಕ್ಟ್ರಿಕ್​ ಬೈಕ್ ಖರೀದಿ ಮಾಡಿದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಗ್ರಾಹಕರಿಗೆ ಉಚಿತವಾಗಿ ಸಿಗಲಿರುವ BG C12i EX ಎಲೆಕ್ಟ್ರಿಕ್ ಸ್ಕೂಟರ್​ನ ಬೆಲೆ 1, 05, 000 ರೂಪಾಯಿ ಎಂದು ಬಿಗಾಸ್​ ಕಂಪನಿ ತಿಳಿಸಿದೆ. ಇನ್ನು ಸ್ಕ್ರ್ಯಾಚ್​ & ವಿನ್​ ಸ್ಪರ್ಧೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ಗಳ ಹೊರತಾಗಿ ಇನ್ನೂ ಅನೇಕ ಬಗೆಯ ಉತ್ಪನ್ನಗಳನ್ನು ಉಚಿತವಾಗಿ ಪಡೆಯುವ ಸದಾವಕಾಶ ನೀಡಲಾಗಿದೆ. 8750 ರೂಪಾಯಿ ಮೌಲ್ಯದ ವಿಐಪಿ ಟ್ರಾಲಿ ಬ್ಯಾಗ್​ ಕೂಡ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಟ್ರಾಲಿ ಬ್ಯಾಗುಗಳಿಗೆ ವಿಸ್ತ್ರತ ವ್ಯಾರಂಟಿ ಕೂಡ ಇರಲಿದೆ ಎಂದು ಬಿಗಾಸ್​ ಕಂಪನಿ ತಿಳಿಸಿದೆ.

ಅಂದಹಾಗೆ ಈ ಆಫರ್​ ದೀಪಾವಳಿ ಹಬ್ಬದವರೆಗೆ ಮಾತ್ರ ಲಭ್ಯವಿದೆ. ಇನ್ನು ಎಲೆಕ್ಟ್ರಿಕ್​ ಬೈಕ್​ಗಳ ತಯಾರಿಕಾ ಕಂಪನಿಗಳ ಪೈಕಿ ಜನಪ್ರಿಯ ಕಂಪನಿಗಳಲ್ಲಿ ಒಂದಾದ ಬಿಗಾಸ್ ತನ್ನ ಗ್ರಾಹಕರಿಗೆ ಇಂತಹದ್ದೊಂದು ಆಫರ್​ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಗಾಸ್​ ಎಲೆಕ್ಟ್ರಿಕ್​ ಬೈಕ್​ನ ಹೊಸ ಮಾಡೆಲ್​ನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಬಿಗಾಸ್​ ಕಂಪನಿಯು . BG C120 ಎಂಬ ಎಲೆಕ್ಟ್ರಿಕ್​ ಬೈಕ್​ಗಳ ಖರೀದಿಗೆ ನಿಮಗೆ ಇನ್ನೊಂದು ಸ್ಕೂಟರ್​ನ್ನು ಉಚಿತವಾಗಿ ಪಡೆಯುವ ಸುವರ್ಣಾವಕಾಶ ವನ್ನು ನೀಡುತ್ತದೆ. ಈ ಸ್ಕೂಟರ್​ ಖರೀದಿ ಮಾಡಿದವರ ಅದೃಷ್ಟ ಚೆನ್ನಾಗಿದ್ದರೆ ಅವರಿಗೆ BG C12i EX ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಉಚಿತವಾಗಿ ಸಿಗಲಿದೆ. ಅಲ್ಲದೇ ಆರ್ ಆರ್ ಬಿಎಲ್ ಡಿಸಿ ಸೀಲಿಂಗ್ ಫ್ಯಾನ್ ಪಡೆಯಲು ಅವಕಾಶವಿದೆ. ಇದರ ದರ ರೂ. 5,500. ಇದು ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡುತ್ತದೆ. 

ಒಂದು ಗ್ರಾಂ ಚಿನ್ನದ ನಾಣ್ಯವನ್ನು ಸಹ ಹೊಂದಬಹುದು. ಇದರ ಮೌಲ್ಯ ರೂ. 6 ಸಾವಿರ ಇದಲ್ಲದೆ, ಸ್ಕೂಟರ್ ಎಲ್ಲಾ ಮೆಟಲ್ ಬಾಡಿ, 16 ಇಂಚಿನ ಚಕ್ರಗಳು, ಐಪಿ 67 ಬ್ಯಾಟರಿ, ಮೋಟಾರ್, ಡಿಟಿಇ ಸ್ಮಾರ್ಟ್ ಕನೆಕ್ಟೆಡ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಮೊಬೈಲ್ ಅಪ್ಲಿಕೇಶನ್(Mobile Application) ಸಂಪರ್ಕವಿದೆ. ಅಲ್ಲದೆ, ಈ ಎಲೆಕ್ಟ್ರಿಕ್ ಸ್ಕೂಟರ್ ಮೂರು ವರ್ಷಗಳವರೆಗೆ ವಾರಂಟಿಯೊಂದಿಗೆ ಬರುತ್ತದೆ. ಆದರೆ ಈ ಆಫರ್‌ಗಳು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ದೆಹಲಿ, ಪುಚುಚೇರಿಯಲ್ಲಿ ಮಾತ್ರ ಲಭ್ಯವಿದೆ. ಹೀಗಾಗಿ ನೀವು ಹತ್ತಿರದ ಶೋರೂಮ್‌ಗೆ(Show Room) ಭೇಟಿ ನೀಡಬಹುದು ಮತ್ತು ಈ ಕೊಡುಗೆಗಳನ್ನು ಪಡೆಯಬಹುದು. 

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ? ತಪ್ಪದೆ ಈ ಕೆಲಸ ಮಾಡಿ; 3ತಿಂಗಳ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗುತ್ತೆ

ಇದನ್ನೂ ಓದಿ: ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್ ಫೀಲ್ಡ್ ಬೈಕ್ ಕೊಟ್ಟ ಉದ್ಯಮಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram