BGMI unban in india: ಮತ್ತೆ ಮರಳಿ ಬಂದ BGMI ! ಯಾವಾಗ ಬರುತ್ತೆ ಮತ್ತು BGMI ಭಾರತಕ್ಕೆ ಬರುವುದರ ಬಗ್ಗೆ BGMI ನ ಕಂಪನಿಯವರು ಏನು ಹೇಳಿದ್ದಾರೆ?

BGMI unban in india: ಭಾರತದ ಗೇಮ್ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು BGMI(battlegrounds mobile india) ಅನ್ ಬ್ಯಾನ್ ಆಗುತ್ತಿದೆ ಎಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಈ ನ್ಯೂಸ್ ನಿಜನಾ ಅಥವಾ ಸುಳ್ಳ ಎಂದು ಎಷ್ಟೋ ಜನಕ್ಕೆ ಗೊತ್ತಾಗುತ್ತಿಲ್ಲ. ಆದರೆ ಈ ನ್ಯೂಸ್ ಸತ್ಯ ಹೌದು BGMI(battlegrounds mobile india) ಭಾರತಕ್ಕೆ ಮರಳಿ ಬರುತ್ತಿದೆ. ಈ ಸುದ್ದಿಯನ್ನು ಸ್ವತಃ ಕ್ರಾಫ್ಟನ್ (Krafton) ನವರೇ ತಮ್ಮ Official ಪೇಜ್ ಗಳಾದ ಇನ್ಸ್ಟಾಗ್ರಾಮ್ (Instagram), ಫೇಸ್ಬುಕ್ (Facebook), ಯೂಟ್ಯೂಬ್ (YouTube) ಮತ್ತು ಅವರದ್ದೇ ವೆಬ್ಸೈಟ್ (Website) ನಲ್ಲಿ‌ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಮೊದಲ ಪೋಸ್ಟ್ ನಲ್ಲಿ ಕ್ರಾಫ್ಟನ್ (Krafton) ನವರು BGMI (battlegrounds mobile india) ಭಾರತಕ್ಕೆ ಮರಳಿ ಬರಲು ಭಾರತದ ಗೇಮ್ ಅಥಾರಿಟಿಸ್(Authorities) ಅನುಮತಿಸಿದೆ, ಕಾನೂನಿಗೆ ಬದ್ಧವಾಗಿರುವ ಜವಾಬ್ದಾರಿಯುತ ದಕ್ಷಿಣ ಕೋರಿದ ಕಂಪನಿಯಾಗಿ ಎಲ್ಲಾ ಭಾರತೀಯ ಕಾನೂನುಗಳಿಗೆ ತೊಡಕುಗಳನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ, BGMI(battlegrounds mobile india) ಯಾವಾಗ ಭಾರತಕ್ಕೆ ಬರುತ್ತದೆ ಎಂದು ಅತಿ ಶೀಘ್ರದಲ್ಲೇ ಖಚಿತಪಡಿಸುತ್ತೇವೆ, ನಾವು ಭಾರತದ BGMI(battlegrounds mobile india) ಆಟಗಾರರಿಗೆ ಒಳ್ಳೆ ರೀತಿಯ ಅನುಭವ ನೀಡಲು ನಾವು ಹೆಚ್ಚು ಕೆಲಸ ಮಾಡುತ್ತೇವೆ ಮತ್ತು ಇನ್ನು ಹೆಚ್ಚು ಸುದ್ದಿಯನ್ನು ತಮ್ಮ ಮೊದಲನೇ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಇನ್ನೂ ಎರಡನೇ ಪೋಸ್ಟರ್ ಯನ್ನು ಕೂಡ ಬಿಡುಗಡೆ ಮಾಡಿದ್ದು ಆ ಪೋಸ್ಟ್ ನಲ್ಲಿ It’s time to switch on notification ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇನ್ನು ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ battlegrounds mobile india Official ಪೇಜ್ ಗೆ ಭೇಟಿ ನೀಡಿ.

BGMI (battlegrounds mobile india) ಯಾವ ಕಾರಣಕ್ಕಾಗಿ ಬ್ಯಾನ್ ಆಗಿತ್ತು?

ಭಾರತದಲ್ಲಿ Pubg ಯ ಹವಾ ಎಷ್ಟರ ಮಟ್ಟಿಗೆ ಇತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. pubg ಯ ಹವಾ ಹೆಚ್ಚು ಇದ್ದಾಗಲೇ. ಭಾರತ ಸರ್ಕಾರವು ಕೆಲವು ಚೀನಾ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತ್ತು ಅವುಗಳಲ್ಲಿ ಪ್ರಮುಖವಾಗಿ ಟಿಕ್ ಟಾಕ್(Tik tok), ಶೇರ್ ಇಟ್(Share it) ಇನ್ನೂ ಹಲವು ಅಪ್ಲಿಕೇಶನ್ ಗಳು ಬ್ಯಾನ್ ಮಾಡಿತ್ತು. ಅಷ್ಟು ಅಪ್ಲಿಕೇಶನ್ ಗಳು ಬ್ಯಾನ್ ಆದ ಸ್ವಲ್ಪ ದಿನಗಳಲ್ಲಿ pubg ಮತ್ತು Pubg lite ಗಳು ಕೂಡ ಬ್ಯಾನ್ ಆದವು. ಏಕೆಂದರೆ pubg ಕೋರಿಯನ್ ಗೇಮ್ ಆಗಿದ್ದರೂ ಕೂಡ ಆ ಗೇಮ್ ಡೆವಲಪ್ ಮಾಡುತ್ತಿದ್ದ ಕಂಪನಿ ಮಾತ್ರ ಚೀನಾದ ಟೆನ್ಸೆಂಟ್(Tencent) ಕಂಪನಿ. ಅದಾದ ನಂತರ Pubg ಯನ್ನು ಕ್ರಾಪ್ಟನ್(Krafton) ಅವರು ಡೆವಲಪ್ ಮಾಡಲು ಶುರು ಮಾಡಿ ಅದನ್ನು BGMI (battlegrounds mobile india) ಎಂಬ ಹೊಸ ಹೆಸರಿನಿಂದ ಭಾರತಕ್ಕೆ ಮತ್ತೆ ತಂದರು. ಆದರೆ ಕ್ರಾಪ್ಟನ್ (Krafton) ಅವರು BGMI (battlegrounds mobile india) ಆಟಗಾರರ ಡಾಟಾವನ್ನು ಟೆನ್ಸನ್ಟ್ (Tencent) ಅವರಿಗೆ ನೀಡುತ್ತಿದೆ ಎಂದು ಭಾರತದ ಗೇಮ್ ಅಸೋಸಿಯೇಷನ್(Association) ಗೆ ತಿಳಿದು ಬಂದಿತು. ನಂತರ BGMI(battlegrounds mobile india) ಕೂಡ ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಈಗ BGMI (battlegrounds mobile india) ಮರಳಿ ಭಾರತಕ್ಕೆ ಬರುತ್ತಿದೆ ಎಂದು ಕ್ರಾಪ್ಟನ್(Krafton) ಕಂಪನಿಯವರು ಸುದ್ದಿಯನ್ನು ಖಚಿತ ಪಡಿಸಿದ್ದಾರೆ . ಇನ್ನು BGMI (battlegrounds mobile india) ಭಾರತದಕ್ಕೆ ಯಾವಾಗ ಬರುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು? 

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್! 2ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram