ಭಾಗ್ಯ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ

Bhagya Lakshmi scheme

ಕರ್ನಾಟಕ ಸರ್ಕಾರವು ಜನರ ಅನುಕೂಲಕ್ಕೆ ಸಹಾಯ ಧನ ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳು ರಾಜ್ಯದ ಜನರ ಗಮನ ಸೆಳೆದಿದೆ. ಈಗ ಭಾಗ್ಯಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರ ಮರು ಜಾರಿಗೆ ತರುತ್ತಿದೆ. ಇದರ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಏನಿದು ಭಾಗ್ಯಲಕ್ಷ್ಮಿ ಯೋಜನೆ?: ಹೆಣ್ಣು ಮಕ್ಕಳ ಭವಿಷ್ಯ ನಿಧಿ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರವು ಬಡ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಹೆಣ್ಣು ಮಕ್ಕಳ ಆರ್ಥಿಕ ಸ್ವಾತಂತ್ರ್ಯ ಮತ್ತು ಹೆಣ್ಣು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು ಹಾಗೂ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ಧನವನ್ನು ಸರ್ಕಾರ ನೀಡುತ್ತದೆ. 

ಭಾಗ್ಯಲಕ್ಷ್ಮಿ ಯೋಜನೆಯ ಯಾರು ಅರ್ಹರು?

  1. ಹೆಣ್ಣು ಮಗುವಿನ ವಯಸ್ಸು 1 ವರ್ಷದ ಒಳಗೆ ಇದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  2. ಹೆಣ್ಣು ಮಗುವಿನ ಪಾಲಕರು ಬಿಪಿಎಲ್ ಕಾರ್ಡ್ ಹೊಂದಿರಬೇಕು.
  3. ಒಂದು ಮನೆಯಲ್ಲಿ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಸಿಗುತ್ತದೆ.
  4. ಭಾಗ್ಯಲಕ್ಷ್ಮಿ ಯೋಜನೆಯ ಲಾಭವನ್ನು 31 ಮಾರ್ಚ್ 2006 ರ ನಂತರ ಜನಿಸಿದ BPL card ಹೊಂದಿದ್ದರೆ ಸಾಧ್ಯವಿದೆ.

Bhagya Lakshmi scheme ಅರ್ಜಿ ಸಲ್ಲಿಸುವ ವಿಧಾನ ಹೇಗೆ?: ಈ ಯೋಜನೆಗೆ ಅರ್ಜಿ ಹಾಕಲು ಆನ್ಲೈನ್ ನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ ಹೋಗಿ ಅರ್ಜಿ ನಮೂನೆಯ ಲಿಂಕ್ ಓಪನ್ ಮಾಡಿದಾಗ ನಿಮಗೆ ಅರ್ಜಿ ನಮೂನೆಯ ಪಿಡಿಎಫ್ ನಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಭಾಗ್ಯಲಕ್ಷ್ಮಿ ಯೋಜನೆಯ ಲಾಭಗಳು:-

  • ವಿಮಾ ಸೌಲಭ್ಯ :- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳಿಗೆ 25,000 ರೂಪಾಯಿಗಳ ವಿಮಾ ಸೌಲಭ್ಯ ನೀಡಲಾಗುತ್ತದೆ.
  • ಆರ್ಥಿಕ ನೆರವು :- ಹೆಣ್ಣು ಮಕ್ಕಳಿದ್ದರೆ 300 ರೂಪಾಯಿಯಿಂದ 1000 ವರೆಗೆ ಆರ್ಥಿಕ ನೆರವನ್ನು ನೀಡುತ್ತಾರೆ.
  • ಸಹಾಯ ಧನ :-:ಹೆಣ್ಣು ಮಗುವಿನ ಪೋಷಕರು ಅಥವಾ ಪೋಷಕರು ಅಪಘಾತದಲ್ಲಿ ಮೃತಪಟ್ಟರೆ ಹೆಣ್ಣು ಮಕ್ಕಳ ಪೋಷಣೆಗೆ 1 ಲಕ್ಷದವರೆಗೆ ಸಹಾಯ ಧನ ನೀಡಲಾಗುತ್ತದೆ. ಹಾಗೂ ಅಪಘಾತದ ಹೊರತು ಪಡಿಸಿ 42,500 ರೂಪಾಯಿಗಳ ವರೆಗೆ ಸಹಾಯಧನ ನೀಡುತ್ತಾರೆ.

ಭಾಗ್ಯಲಕ್ಷ್ಮಿ ಯೋಜನೆಯ ಉದ್ದೇಶ ಏನು?

  • ಆರ್ಥಿಕ ಪ್ರೋತ್ಸಾಹ :- ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣು ಮಕ್ಕಳ ಮಕ್ಕಳನ್ನು ಆರ್ಥಿಕವಾಗಿ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ.
  • ಹೆಣ್ಣು ಭ್ರೂಣ ಹತ್ಯೆ ತಡೆಯುವುದು :- ಭಾಗ್ಯಲಕ್ಷ್ಮಿ ಯೋಜನೆಯ ಸಹಾಯ ಧನ ನೀಡುವುದರಿಂದ ಹೆಣ್ಣು ಮಗುವಿನ ಭ್ರೂಣ ಹತ್ಯೆ ಕಡಿಮೆ ಮಾಡಲು ಈ ಯೋಜನೆ ಉದ್ದೇಶ ಆಗಿದೆ.
  • ಆರ್ಥಿಕ ನೆರವು:- ಪಾಲಕರು ಮೃತರಾದರೆ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶ ಆಗಿದೆ.
  • ಸ್ಥಾನ ಮಾನ :- ಸಮಾಜದಲ್ಲಿ ಹೆಣ್ಣಿಗೆ ಸ್ಥಾನ ಮಾನ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.
  • ಶಿಕ್ಷಣಕ್ಕೆ ನೆರವು :- ಹೆಣ್ಣು ಮಕ್ಕಳಿಗೆ ನೀಡುವ ಸಹಾಯ ಧನವು ಶಿಕ್ಷಣದಿಂದ ವಂಚಿತ ಆಗುವುದನ್ನು ತಪ್ಪಿಸಲು ಸಹಾಯ ಆಗಿದೆ.

ಇದನ್ನೂ ಓದಿ: ಎಟಿಎಂ ಅಥವಾ ಬ್ಯಾಂಕ್ ಗೆ ಹೋಗದೆ ಮನೆಯಿಂದಲೇ ನಗದು ಕ್ಯಾಶ್ ಪಡೆಯುವ ವಿಧಾನ ತಿಳಿಯಿರಿ

ಇದನ್ನೂ ಓದಿ: ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!