2006 ನೇ ಇಸವಿಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಭಾಗ್ಯಲಕ್ಷ್ಮೀ ಯೋಜನೆ(Bhagyalakshmi Scheme) ಜಾರಿಗೆ ಬಂದಿತ್ತು. ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭರವಸೆಯ ಬೆಳಕು ನೀಡಲು ಈ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಸುಕನ್ಯಾ ಸಮೃದ್ಧಿ ಹೆಸರಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದ್ರೆ ಈಗ ಗೃಹ ಲಕ್ಷ್ಮಿ ಯೋಜನೆ ಇರುವುದರಿಂದ ಈ ಯೋಜನೆಯನ್ನು ಸ್ಥಗಿತ ಗೊಳಿಸಲಾಗುವುದು ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ಏನು?: ವಿಧಾನಸಭೆಯ ಪ್ರಶೋತ್ತರ ಕಲಾಪದಲ್ಲಿ ಬಿಜೆಪಿಯ ಎನ್.ರವಿಕುಮಾರ್ ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತ ಹೆಣ್ಣು ಮಕ್ಕಳ ಭವಿಷ್ಯಕ್ಕೆ ನೆರವಾಗಲು ಜಾರಿ ಮಾಡಿರುವ ‘ಭಾಗ್ಯಲಕ್ಷ್ಮೀ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಸ್ತಾವವು ನಮ್ಮ ಸರ್ಕಾರದ ಮುಂದೆ ಇಲ್ಲ. ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯನ್ನು ಈಗಲೂ ಸಹ ಮುಂದುವರಿಸಲಾಗುತ್ತಿದೆ. ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡಿ ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು ನೆರವಾಗುತ್ತದೆ. ಇದನ್ನು ತೆಗೆದು ಹಾಕುವ ಯಾವುದೇ ಯೋಚನೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭಾಗ್ಯಲಕ್ಷ್ಮೀ ಯೋಜನೆ ಏನಿದು?: ಭಾಗ್ಯಲಕ್ಷ್ಮೀ ಯೋಜನೆಯಲ್ಲಿ(Bhagyalakshmi Scheme) ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್ ನೀಡುವ ಯೋಜನೆ ಆಗಿತ್ತು ಆದರೆ, ಕೆಲವು ಬದಲಾವಣೆಯನ್ನು ರಾಜ್ಯ ಸರ್ಕಾರವು ತಂದಿದೆ. ಹೆಣ್ಣು ಮಗು ಹುಟ್ಟಿದ ಕೂಡಲೇ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಈ ಯೋಜನೆಗೆ ಅರ್ಜಿ ಹಾಕಿದರೆ ಮಗುವಿನ ಹೆಸರಿನಲ್ಲಿ ಪ್ರತಿ ವರ್ಷ 3 ಸಾವಿರ ರೂಪಾಯಿನಂತೆ 15 ವರ್ಷಗಳವರೆಗೆ ಒಟ್ಟು 45 ಸಾವಿರ ರೂಪಾಯಿಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಿ
ಈ ಹಣವನ್ನು ಯಾವಾಗ ಪಡೆಯಬಹುದು?
18 ವರುಷ ಪೂರ್ಣಗೊಂಡ ನಂತರ ಉನ್ನತ ವಿಧ್ಯಾಭ್ಯಾಸ ಮಾಡುವ ದೃಷ್ಠಿಯಿಂದ 50% ಹಣವನ್ನು ಪಡೆಯಲು ಸಾಧ್ಯ ಇದೆ. ಆದರೆ ಉನ್ನತ ವಿದ್ಯಾಭ್ಯಾಸದ ಬಗ್ಗೆ ನಿಖರವಾದ ಮಾಹಿತಿಯನ್ನು ಸಲ್ಲಿಸಬೇಕು. ಯೋಜನೆಯ ಅವಧಿ ವುರ್ಣವಾಗುವ ಮುನ್ನ ಯಾವುದೇ ಅನಾರೋಗ್ಯ ಸಮಸ್ಯೆಗೆ ಹೆಚ್ಚಿನ ಚಿಕಿತ್ಸೆಗೆ ಹಣ ಬೇಕೆಂದರೆ ದಾಖಲೆಗಳನ್ನು ನೀಡಿದರೆ 50% ಹಣವನ್ನು ನೀಡಲಾಗುತ್ತದೆ. ನಂತರ 21 ವರ್ಷ ಪೂರ್ಣಗೊಂಡ ನಂತರ ಪೂರ್ಣ ಹಣವನ್ನು ನೀಡಲಾಗುತ್ತದೆ.
2006 ರಿಂದ 2024ವರೆಗೆ ಏಷ್ಟು ಅರ್ಜಿಗಳು ಬಂದಿವೆ?: ಇಲ್ಲಿಯವರೆಗೆ ಒಟ್ಟು 23 ಲಕ್ಷದ 22 ಸಾವಿರದ 267 ಅರ್ಜಿಗಳು ಸುಕನ್ಯಾ ಸಮೃದ್ಧಿ(ಭಾಗ್ಯಲಕ್ಷ್ಮೀ) ಯೋಜನೆಯ ಅರ್ಜಿಯನ್ನು ಸ್ವೀಕರಿಸಲಾಗಿದೆ. ಕಳೆದ 9 ತಿಂಗಳಲ್ಲಿ ಆನ್ಲೈನ್ ಮೂಲಕ 1 ಲಕ್ಷದ 12 ಸಾವಿರ ಅರ್ಜಿಗಳನ್ನು ನೋಂದಣಿ ಮಾಡಲಾಗಿದೆ. ಪೋಷಕರಲ್ಲಿ ಯಾವುದೇ ರೀತಿಯ ಭಯದ ಅಗತ್ಯ ಇಲ್ಲ. ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಇಲ್ಲಿಯವರೆಗೆ ಸಲ್ಲಿಸಲಾಗಿರುವ ಅರ್ಜಿಗಳು ಪೂರ್ಣವಾಗಿ ಸ್ವೀಕಾರ ಆಗಿವೆ ಎಂದು ಸಚಿವರು ತಿಳಿಸಿದರು. ಹೆಣ್ಣು ಮಕ್ಕಳ ತಂದೆ ತಾಯಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಈಗಲೂ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಇದೆ. ಈ ಯೋಜನೆಯ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ಕರ್ನಾಟಕದ ಯಾವುದೇ ಅಂಚೆ ಕಚೇರಿಗೆ ಭೇಟಿ ನೀಡಿದ ಹೆಚ್ಚಿನ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: fixed deposit ಗೆ 9% ಬಡ್ಡಿದರ ನೀಡುವ ಬ್ಯಾಂಕ್ ಗಳು ಯಾವುದು?