ಈಗಾಗಲೇ ಭಾರತ್ ಬ್ರಾಂಡ್ ಬಗ್ಗೆ ನೀವು ಕೇಳಿರಬಹುದು. ಸರ್ಕಾರ ಕಡಿಮೆ ದರದಲ್ಲಿ ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ, ಬಡ ಮತ್ತು ಮಧ್ಯಮ ವರ್ಗಗಳಿಗೆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ. ಭಾರತ್ ಬ್ರಾಂಡ್ ಎಂಬ ಹೆಸರಿನಲ್ಲಿ ಜನರಿಗೆ ಕಡಿಮೆ ದರದಲ್ಲಿ ದಿನಸಿ ವಸ್ತುಗಳನ್ನು ನೀಡುತ್ತಿದೆ. ಈಗಾಗಲೇ ಭಾರತ್ ಬ್ರಾಂಡ್ ನ ಅಕ್ಕಿ ಬೇಳೆ ಮತ್ತು ಗೋಧಿ ಹಿಟ್ಟನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ.
ಇಷ್ಟು ದಿನ ಕೇವಲ ಬೆಂಗಳೂರಿನಂತಹ ಮಹಾನಗರಗಳಲ್ಲಿ ಭಾರತ್ ಬ್ರಾಂಡ್ ಈಗ ಸಣ್ಣ ನಗರಗಳಲ್ಲಿ ಸಹ ಲಭ್ಯವಿದೆ. ಊಟಕ್ಕೆ ಬೇಕಾದ ಅಕ್ಕಿಯ ಬೆಲೆಯೇ 50 ರೂಪಾಯಿಗಿಂತ ಹೆಚ್ಚಾಗಿದೆ. ಇದು ಮಧ್ಯಮ ಮತ್ತು ಕಡು ಬಡವರ ಬದುಕಿಗೆ ಕೊಳ್ಳಿ ಇಟ್ಟಹಾಗೆ ಆಗಿದೆ. ಇದನ್ನು ಮನಗಂಡ ಸರ್ಕಾರವು ಉಚಿತವಾಗಿ ನೀಡುವ ಬದಲು ಜನರಿಗೆ ಕಡಿಮೆ ಬೆಲೆಯಲ್ಲಿ ನೀಡಿದರೆ ಹಣದ ಮೌಲ್ಯದ ಜೊತೆಗೆ ಆರ್ಥಿಕ ಹೊರೆ ಕಡಿಮೆ ಮಾಡಬಹುದು ಎಂದು ಭಾರತ್ ಬ್ರಾಂಡ್ ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭಾರತ್ ಬ್ರಾಂಡ್ ನ ದಿನಸಿ ಬೇಕೆ ಏಷ್ಟು?
ಭಾರತ್ ಬ್ರಾಂಡ್ ನ ಒಂದು ಕೆಜಿ ಅಕ್ಕಿ ಯ ಬೆಲೆ 29 ರೂಪಾಯಿ. ಮಾರುಕಟ್ಟೆಯಲ್ಲಿ 5ಕೆಜಿ ಮತ್ತು ಹತ್ತು ಕೆಜಿ ಯ ಅಕ್ಕಿ ಚೀಲಗಳು ಲಭ್ಯವಿದೆ. ಫೆಬ್ರುವರಿ 6 2024 ರಂದು ಭಾರತ್ ಬ್ರಾಂಡ್ ಅಕ್ಕಿಯನ್ನು ಸಚಿವ ಪಿಯುಲ್ ಗೋಯಲ್ ಅವರು ಭಾರತ್ ರೈಸ್ ಗೆ ಚಾಲನೆ ನೀಡಿದರು. ಇನ್ನು ಭಾರತ್ ಅಟ್ಟಾ ಒಂದು ಕೆಜಿ ಗೆ 27.50 ರೂಪಾಯಿ ಹಾಗೂ ಭಾರತ್ ದಾಲ್ ಕೆ.ಜಿ ಗೆ 60 ರೂಪಾಯಿ ಆಗಿದೆ.
ಬೆಂಗಳೂರು ನಗರ ಒಂದರಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಗೋಧಿ ಮಾರಾಟವಾಗಿದೆ. ಭಾರತ್ ದಾಲ್ ಮತ್ತು ಭಾರತ್ ಅಟ್ಟಾ ಹಾಗೂ ಭಾರತ್ ಅಕ್ಕಿ ಈಗ ಆನ್ಲೈನ್ ನಲ್ಲಿ ಲಭ್ಯವಿದೆ. ನೀವು Flipkart, amazon, JioMart ಗಳಲ್ಲಿ ಆರ್ಡರ್ ಮಾಡಬಹುದು. ಭಾರತ್ ದಾಲ್ ಮತ್ತು ಭಾರತ್ ಅಟ್ಟಾ ವನ್ನೂ ದಿ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED), ನ್ಯಾಷನಲ್ ಕನ್ಸ್ಯೂಮರ್ಸ್ ಕೋ ಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF), ಕೇಂದ್ರೀಯ ಭಂಡಾರ್ ಮತ್ತು ಸಫಲ್ಹಾಗೂ ವಿವಿಧ ಚಿಲ್ಲರೆ ಅಂಗಡಿಗಳಿಂದ ವಿತರಿಸಲಾಗುತ್ತಿದೆ.
ಭಾರತ್ ಬ್ರಾಂಡ್ ಮಳಿಗೆಯಲ್ಲಿ ದಿನಸಿ ಜೊತೆಗೆ ಕೋಲ್ಡ್ ಡ್ರಿಂಕ್ಸ್ ಹಾಗೂ ದೇವರ ಪೂಜೆಯ ಸಾಮಗ್ರಿಗಳು ಔಷಧಿ ಗಳು ದೊರೆಯುತ್ತವೆ. ಬ್ಲ್ಯಾಕ್ ಸಾಲ್ಟ್ ಸಣ್ಣ ಪ್ಯಾಕ್ ಬೆಲೆ 15 ರೂಪಾಯಿ ಒಂದು ಪ್ಯಾಕ್ ಕಲ್ಲುಪ್ಪಿನ ಬೆಲೆ 15 ರೂಪಾಯಿ, ಪ್ಲಾಕ್ಸ್ ಸಿಡ್ ಗೆ 35 ರೂಪಾಯಿ, ಲಿನ್ಸೆಡ್ ಎಣ್ಣೆ ಗೆ 150 ರೂಪಾಯಿ, ಬೆಲ್ಲದ ಪುಡಿ ಕೇವಲ 95 ರೂಪಾಯಿಗೆ ಸಿಗುತ್ತದೆ. ನಾಲ್ಕು ಗ್ರಾಂ ಬೆಲ್ಲದ ಕ್ಯೂಬ್ ಗೆ 120 ರೂಪಾಯಿ ಇದೆ. ಹಾಗೂ ಆಯುರ್ವೇದಿಕ್ ಟೀ ಪ್ಯಾಕ್ ಗೆ 250 ರೂಪಾಯಿ , ತುಳಸಿ ಗ್ರೀನ್ ಟೀ ಪೌಡರ್ ಬೆಲೆ 360 ರೂಪಾಯಿ ಇದೆ ಹಾಗೂ ನಿಂಬು ಮಸಾಲಾ ಚಾಯ್ 150 ರೂಪಾಯಿ, ಆ್ಯಪಲ್ ಸೈಡರ್ ವಿನೆಗರ್ 350 ರೂಪಾಯಿ ಇದೆ.
ಇದನ್ನೂ ಓದಿ: Airtel ಹಾಗೂ jio ಟೆಲಿಕಾಂ ಕಂಪನಿಗಳು 666 ರೂಪಾಯಿಯ ಹೊಸ ಪ್ಲಾನ್ ಬಿಡುಗಡೆ ಮಾಡಿವೆ. ಒಂದೇ ದರದ ಪ್ಲಾನ್ ಗಳಲ್ಲಿ ಯಾವುದು ಬೆಸ್ಟ್
ಇದನ್ನೂ ಓದಿ: 3000 ರಿಯಾಯಿತಿಯೊಂದಿಗೆ ಬಿಡುಗಡೆಯಾದ POCO X6 5G 12GB RAM, 256GB ಸ್ಟೋರೇಜ್ ನೊಂದಿಗೆ, ಇದರ ಬೆಲೆಯನ್ನು ತಿಳಿಯಿರಿ