ಈ ಬಾರಿಯ ಬಿಗ್ಬಾಸ್(Big boss) ಹಲವಾರು ವಿಷಯಗಳಿಂದ ವಿಭಿನ್ನವಾಗಿದೆ ಅಂತ ಹೇಳಬಹುದು. ಸ್ಪರ್ಧೆಗಳ ಆಯ್ಕೆಯಿಂದ ಹಿಡಿದು ಟಾಸ್ಕ್ ನಾಮಿನೆಷನ್ ಹೀಗೆ ಪ್ರತಿಯೊಂದರಲ್ಲೂ ಬಿಗ್ ಬಾಸ್ ಸೀಸನ್ 10 (Big boss season 10) ವಿಶೇಷ ಅನ್ಸುತ್ತೆ. ಅದ್ರಲ್ಲೂ ಬಿಗ್ ಬಾಸ್ ಮನೆಗೆ ಟ್ರಾನ್ಸ್ಜೆಂಡರ್ ಮಹಿಳೆ ನೀತು ವನಜಾಕ್ಷಿ(Neethu Vanajakshi) ಎಂಟ್ರಿ ಎಲ್ಲರ ಗಮನ ಸೆಳೆದಿತ್ತು. ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿನಿಂತು ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗುವಂಥಹಾ ಉದ್ಯಮಿಯಾಗಿ ಬೆಳೆದಿದ್ದಾರೆ. ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ ನೀತು ವನಜಾಕ್ಷಿ, ತನ್ನಂಥಹಾ ಅನೇಕರ ಬದುಕಿನಲ್ಲಿ ಸ್ಪೂರ್ತಿ ತುಂಬಲೆಂದು ತಾವಿಲ್ಲಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಹೌದು ಗದಗದಲ್ಲಿ ಮಂಜುನಾಥನಾಗಿ ಹುಟ್ಟಿ ಬಳಿಕ ಹೆಣ್ಣಾಗಿ ಬದಲಾಗಿ ನೀತು ಎಂದಾದರು. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ನೀತು ಅದನ್ನೇ ಬಂಡವಾಳವಾಗಿಟ್ಟುಕೊಂಡು ಟ್ಯಾಟೂ ಕಲಾವಿದೆ ಆದರು. ಅದರಿಂದ ಬಂದ ಹಣದಲ್ಲಿ ಬ್ಯೂಟಿ ಪಾರ್ಲರ್ ತೆರೆದರು. ಅದಾದ ಬಳಿಕ ಉತ್ತರ ಕರ್ನಾಟಕದ ಸೊಗಡಿನ ಆಹಾರವನ್ನು ಗ್ರಾಹಕರಿಗೆ ಉಣಬಡಿಸುವ ಹೋಟೆಲ್ ಒಂದನ್ನು ಅಮ್ಮನೊಂದಿಗೆ ಸೇರಿ ತೆರೆದರು. ಮಾಡೆಲಿಂಗ್ ಮಾಡಿದರು, ಫ್ಯಾಷನ್ ಶೋಗಳಲ್ಲಿ ಟ್ರ್ಯಾನ್ಸ್ಜೆಂಡರ್ ಬ್ಯೂಟಿ ಪ್ರಾಜೆಕ್ಟ್ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋ ನೀತು ಬಗ್ಗೆ ಅವ್ರ ಅಮ್ಮಾ ಬಹಳ ಹೆಮ್ಮೆಯಿಂದ ಮನ ಬಿಚ್ಚಿ ಮಾತನಾಡಿದ್ದಾರೆ.
ಹೌದು ಮಂಗಳಮುಖಿಯವರನ್ನು ಸಮಾಜ ನೋಡುವ ವಿಧಾನವನ್ನು ಬದಲಾಯಿಸಬೇಕು ಎಂಬ ಅಪಾರ ಆಸೆಯಿಟ್ಟುಕೊಂಡಿರುವ ನೀತು, ತಮ್ಮ ಸಮುದಾಯವರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಎಂದು ಗಮನಿಸಿ, ಅದಕ್ಕೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ನಾನು ಗೆದ್ದಿದ್ದೀನಿ ಎಂದು ಹಲವರಿಗೆ ಗೊತ್ತಿದೆ. ಆದರೆ ಆ ಗೆಲುವಿನ ಹಾದಿಯಲ್ಲಿ ಏನೇನು ಅಡ್ಡಿ ಇತ್ತು ಎಂಬುದನ್ನು ನಾನು ಹೇಳಬೇಕಿದೆ. ಅಲ್ಲಿ ನೀತು ನನ್ನಂಥಹಾ ಹಲವರಿಗೆ ನಾನು ಸ್ಪೂರ್ತಿ ತುಂಬಬೇಕಿದೆ ಅಂತ ಅಂದುಕೊಂಡಿರುವ ನೀತು ತಮ್ಮ ತಾಯಿ ತಮಗೆ ನೀಡಿರುವ ಬೆಂಬಲದಿಂದ ತಮ್ಮ ತಾಯಿ ವನಜಾಕ್ಷಿ ಹೆಸರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ.
ಇನ್ನು ನೀತು ಅವರನ್ನು ಬಿಗ್ ಬಾಸ್ ಮನೆಯ ಒಳಗೆ ಕಳಿಸುವ ಮುಂಚೆ ನಟಿ, ಮಾಜಿ ಬಿಗ್ಬಾಸ್ ವಿನ್ನರ್ ಶ್ರುತಿ ಮಾತನಾಡಿ, ಮಹಿಳೆಯರಿಗೇ ಸವಾಲುಗಳು ಇರುತ್ತವೆ, ಅದರಲ್ಲಿ ನೀವು ಎದುರಿಸಿರುವ ಸವಾಲುಗಳನ್ನು ಊಹಿಸಬಹುದು, ನೀವು ಸಾಧ್ಯವಾದಷ್ಟು ಹೆಚ್ಚು ಸಮಯ ಆ ಮನೆಯಲ್ಲಿ ಕಳೆಯಿರಿ, ನೀವು ಅಲ್ಲಿ ಹೆಚ್ಚು ಸಮಯ ಕಳೆದಷ್ಟು ಹೆಚ್ಚು ಜನರಿಗೆ ಸ್ಪೂರ್ತಿ ತುಂಬುತ್ತೀರಿ, ನಿಮ್ಮನ್ನು ಅಲ್ಲಿನ ಜನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನೂ ಸಹ ರಾಜ್ಯದ ಜನ ನೋಡುತ್ತಿರುತ್ತಾರೆ ಅಂತ ಶುಭ ಹಾರೈಸಿದರು. ಇನ್ನು ಮನೆಯಲ್ಲಿಯೂ ನೀತು ತಮ್ಮ ಬದಲಾವಣೆಯ ಬಗ್ಗೆ ಅದರಿಂದಾದ ನೋವು ಅವಮಾನದ ಬಗ್ಗೆ ಹೇಳಿಕೊಂದು ಕಣ್ಣೀರಿಟ್ಟಿದ್ರು. ಇದೀಗ ಈ ವಿಚಾರವಾಗಿಯೇ ನೀತು ಅವ್ರ ತಾಯಿ ಮಾತನಾಡಿದ್ದು ಬಹಳ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಮಗ ಮಗಳಾಗಿ ಬದಲಾವಣೆ ಆದ ಬಗ್ಗೆ ನೀತು ತಾಯಿ ಹೇಳಿದ್ದೇನು?
ಇದೀಗ ಬಿಗ್ ಬಾಸ್ ಮನೆಗೆ ಹೋಗಿರ್ತಕಂತ ನೀತು(Neethu Vanajakshi) ಬಗ್ಗೆ ಅವರ ತಾಯಿ ವನಜಾಕ್ಷಿ ಮನಮೆಚ್ಚಿ ಮಾತನಾಡಿದ್ದು, ಮಗ ಮಗಳಾಗಿ ಬದಲಾಗಿದ್ದು ಹೇಗೆ ಇದರಿಂದಾದ ಸಮಸ್ಯೆಗಳೇನು ಎಲ್ಲವನ್ನು ಕೂಡ ಹೇಳಿಕೊಂಡಿದ್ದಾರೆ. ಹೌದು ಮೊದಲಿಗೆ ನೀತು ಹುಡುಗನಾಗೆ ಇದ್ದದ್ದು ಅದಾದ ನಂತರ ಹುಡುಗಿಯಾಗಿ ಬದಲಾಗಿದ್ದು ಕುಟುಂಬಕ್ಕೆ ಆಘಾತ ತಂತು. ಆದರೂ ಕೂಡ ನಾವೆಲ್ಲರೂ ಕೂತು ಚರ್ಚಿಸಿ ಅದಾದ ನಂತರ ನಾವು ಇದರ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡು, ಆಗ ನನ್ನ ಮಗ ಕೂಡ ನಿಮಗೆ ಅವಮಾನ ಆಗೋ ಕೆಲಸವನ್ನು ನಾನು ಮಾಡುವುದಿಲ್ಲ ನಾನು ನಿಮಗೆ ಹೆಮ್ಮೆ ತರುವಂತಹ ಕೆಲಸ ಮಾಡ್ತೀನಿ ಅಂತ ಹೇಳಿದ್ದ. ಅದ್ರಂತೆ ಇದೀಗ ಎಲ್ಲದ್ರಲ್ಲೂ ಕೂಡ ಮುಂದೆ ಇದ್ದಾನೆ. ನನಗೆ ಖುಷಿಯಾಗುತ್ತೆ ಇನ್ನೊಂದು ವಿಚಾರ ಅಂತ ಅಂದ್ರೆ ನಾವು ಅವನಿಗೆ ಹುಡುಗಿ ನೋಡೋಕು ಕೂಡ ಶುರು ಮಾಡ್ಬಿಟ್ಟಿದ್ವಿ ಆದ್ರೆ ಅಷ್ಟರಲ್ಲಿ ಅವನು ಹುಡುಗಿಯಾಗಿ ಬದಲಾದ 24ನೇ ವರ್ಷದಲ್ಲಿ ಅವನು ಹುಡುಗಿಯಾಗಿ ಬದಲಾದ ಅಂತ ತನ್ನ ಮಗನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಇನ್ನು ಮಗ ಮಗಳಾಗಿ ಬದಲಾವಣೆ ಆಗೋದನ್ನ ಮೊದಲಿಗೆ ನಾವು ಸಹಿಸಲಿಲ್ಲ. ಆಮೇಲೆ ಮನೆಯಲ್ಲಿ ನಾವೆಲ್ಲರೂ ಕೂತು ಚರ್ಚಿಸುವುದು, ಯಾಕಂತ ಅಂದ್ರೆ ನಾವು ಬಡತನದಲ್ಲೇ ಬೆಳೆದು ಬಂದಂತಹ ಕುಟುಂಬದವರು ಹೀಗಾಗಿ ಸಮಾಜ ಏನನ್ನುತ್ತದೆ ನಮ್ಮನ್ನು ಯಾವ ರೀತಿ ನೋಡುತ್ತೆ ಅನ್ನೋ ಭಯ ಕಾಡಿತ್ತು. ಆದರೆ ನನ್ನ ಮಗ ಅವತ್ತು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾನೆ. ಇವತ್ತಿಗೂ ನಮ್ಮ ಮರ್ಯಾದೆಗೆ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದ್ದಾನೆ ನಿಜಕ್ಕೂ ಹೆಮ್ಮೆ ಅನ್ಸುತ್ತೆ ಅಂತ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬೇಕಾ ಹಾಗಾದರೆ ಈ ಕೃಷಿಯನ್ನು ಆರಂಭಿಸಿ
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡಿ. ಐದು ವರ್ಷದ ಒಳಗೆ ನೀವು ಮೂರು ಪಟ್ಟು ಹಣವನ್ನು ಗಳಿಸಬಹುದು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram