ಬಿಗ್ ಬಾಸ್ ಅಂಗಳದಿಂದ ಯಾರಿಗೆ ಸಿಗಲಿದೆ ಗೇಟ್ ಪಾಸ್; ಮೈಕಲ್, ಸಿರಿ, ಪವಿ ಮೂವರಲ್ಲಿ ಯಾರು ಔಟ್ ಆಗ್ತಾರೆ

Big Boss Kannada Elimination

ಬಿಗ್‌ ಬಾಸ್‌ ಸೀಸನ್ 10, 10 ವಾರ ಮುಗಿಸಿದ್ದು, ಮನೆಯಲ್ಲಿ ಈ ವಾರ ಒಟ್ಟು ಆರು ಮಂದಿ ನಾಮಿನೇಟ್‌ ಆಗಿದ್ದಾರೆ. ಪ್ರತಾಪ್, ಸಿರಿ, ಪವಿ, ಸಂಗೀತಾ, ವಿನಯ್, ಮೈಕಲ್ ಮೇಲೆ ಎಲಿಮಿನೇಷನ್‌ ತೂಗುಗತ್ತಿ ಇದೆ. ಈ ಪೈಕಿ ಒಬ್ಬರು ಎಲಿಮಿನೇಟ್​ ಆಗಿ ಮನೆಯಿಂದ ಹೊರ ನಡೆಯುತ್ತಾರೆ, ಹೋಗಲೇಬೇಕು. ಇನ್ನು ಪವಿ, ಸಿರಿ ಹಾಗೂ ಮೈಕಲ್ ಹೆಚ್ಚು ಡೇಂಜರ್‌ ಝೋನ್‌ನಲ್ಲಿರುವಂತೆ ತೋರುತ್ತಿದೆ. ಸಿರಿ ಅವರ ಸೈಲೆಂಟ್‌ ಆಟ ಅವರು ಎಲಿಮಿನೇಟ್‌ ಆಗಲು ಕಾರಣವಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ. ಇನ್ನೊಂದೆಡೆ ಮೈಕಲ್‌ ಕಳೆದ 2 ವಾರಗಳಿಂದ ಕೊನೆಯಲ್ಲಿ ಎರಡನೇಯವರಾಗಿ ಸೇವ್‌ ಆಗುತ್ತಿದ್ದಾರೆ. ಮೊದಲಿನಷ್ಟು ಮೈಕಲ್‌ ಆಕ್ಟಿವ್‌ ಆಗಿಲ್ಲ ಎಂದು ವೀಕ್ಷಕರಿಗೆ ಭಾಸವಾಗುತ್ತಿದೆ. ಸಿರಿ ಮತ್ತು ಮೈಕಲ್‌ಗೆ ಹೋಲಿಸಿದರೆ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಗೇಮ್‌ ಚೇಂಜರ್‌ ಆಗಿ ಎಂಟ್ರಿ ಕೊಟ್ಟ ಪವಿ ಪೂವಪ್ಪ ಎಲಿಮಿನೇಟ್‌ ಆಗುವ ಚಾನ್ಸ್‌ ಹೆಚ್ಚಾಗಿದೆ ಎನ್ನಲಾಗುತ್ತಿದೆ.

WhatsApp Group Join Now
Telegram Group Join Now

ಪವಿ ಪೂವಪ್ಪ ಇನ್ನೂ ಬಿಗ್‌ ಬಾಸ್‌ ಆಟ ಶುರು ಮಾಡಿದಂತೆ ಕಾಣುತ್ತಿಲ್ಲ. ಸಾಕಷ್ಟು ಎನರ್ಜಿ ಇದ್ದರೂ ಅದನ್ನು ಅವರು ಬಳಸಿಕೊಳ್ಳುತ್ತಿಲ್ಲ ಅಂತ ಹೇಳಲಾಗ್ತಿದೆ. ಹಾಗಾದ್ರೆ ಈ ವಾರದ ಎಲಿಮಿನೆಷನ್ ತೂಗುಗತ್ತಿ ಯಾರ ಮೇಲೆ ತೂಗಲಿದೆ, ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲಾ ನಡೀಬಹುದು ಅನ್ನೋ ಕುತೂಹಲದಲ್ಲಿ ಬಿಗ್ ಬಾಸ್ ವೀಕ್ಷಕರಿದ್ದು ಈ ವಾರ ಯಾರು ಸೇಫ್ ಆಗ್ತಾರೆ, ಯಾರು ಮನೆಯಿಂದ ಗೇಟ್ ಪಾಸ್ ಪಡೆದುಕೊಳ್ಳುತ್ತಾರೆ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

image Credit: Colors kannada

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ವಾರದ ಕಥೆಯಲ್ಲಿ ಯಾರಿಗೆ ಕಾದಿದೆ ಎಲಿಮಿನೆಷನ್ ಭೀತಿ

ಹೌದು ಬಿಗ್‌ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾದಾಗಿನಿಂದ ಕಿರುತೆರೆ ಪ್ರೇಕ್ಷಕರಿಗೆ ಕ್ಷಣ ಕ್ಷಣಕ್ಕೂ ಬಿಗ್‌ಹೌಸ್‌ನಲ್ಲಿ ಏನಾಗುತ್ತಿದೆ ಎಂಬ ವಿಚಾರ ತಿಳಿದುಕೊಳ್ಳುವ ಕಾತುರ. ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲಲಿ ಅಂತ ಟಿವಿ ಮುಂದೆ ಕುಳಿತು ಕ್ಯೂರಿಯಾಸಿಟಿಯಿಂದ ಶೋ ನೋಡುತ್ತಿದ್ದಾರೆ. ಸ್ಪರ್ಧಿಗಳು ಸಹ ಅಷ್ಟೇ ಗೆಲ್ಲಲೇಬೇಕು ಎಂಬ ಹಠದಿಂದ ಟಾಸ್ಕ್‌ನಲ್ಲಿ ಭಾಗವಹಿಸಿಸುತ್ತಿದ್ದಾರೆ. ಆದ್ರೆ ಬಿಗ್‌ಹೌಸ್‌ನಲ್ಲಿ ಎಲ್ಲವೂ ಅಂದುಕೊಂಡತೆ ನಡೆಯೋದಿಲ್ಲ. ಅದರಂತೆ ಈ ವಾರವು ಸಹ ಎಲಿಮಿನೇಷನ್ ಭೂತ ಮನೆಯಲ್ಲಿರತಕ್ಕಂತ ನಾಮಿನೇಟ್ ಆಗಿರುವ ಸದಸ್ಯರನ್ನು ಕಾಡ್ತಾ ಇದ್ದು, ಇವರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಪ್ರತಾಪ್, ಸಿರಿ, ಪವಿ, ಸಂಗೀತ, ವಿನಯ್, ಮೈಕಲ್ ಯಾರು ಮನೆಯಿಂದ ಹೊರ ಹೋಗಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದ್ದು ಮನೆಯಿಂದ ಹೊರ ಹೋಗುವುದರಲ್ಲಿ ಸಿರಿ ಪವಿ ಹಾಗೂ ಮೈಕಲ್ ನಡುವೆ ಟಫ್ ಫೈಟ್ ನಡಿತಿದೆ ಅಂತ ಹೇಳಲಾಗುತ್ತಿದೆ.

ಹೌದು ಈಗ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಆರು ಸದಸ್ಯರಲ್ಲಿ ಮೈಕಲ್, ಪವಿ ಹಾಗೂ ಸಿರಿ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಳ್ಳುವಂತಹ ಪರ್ಫಾರ್ಮೆನ್ಸ್ ಏನು ಕೊಟ್ಟಿಲ್ಲ ಅನ್ನುವ ಮಾತುಗಳು ಕೇಳಿ ಬರ್ತಾ ಇದ್ದು, ಈ ಮೂವರಲ್ಲಿ ಒಬ್ಬರಿಗೆ ಈ ವಾರ ಅಂದ್ರೆ ನಾಳೆ ಬಿಗ್ ಬಾಸ್ ಜರ್ನಿ ಮುಗಿಯಲಿದೆ ಅಂತ ಹೇಳಲಾಗುತ್ತಿದೆ. ಅದರಲ್ಲೂ ಪವಿಯವರು ಈ ವಾರ ಮನೆಯಿಂದ ಹೊರ ಹೋಗೋದು ಖಚಿತ ಅಂತ ವೀಕ್ಷಕರು ಹೇಳ್ತಾಯಿದ್ದು ಆದರೆ ನಾವು ಅಂದುಕೊಂಡಂತೆ ಯಾವುದೂ ಕೂಡ ಬಿಗ್ ಬಾಸ್ ಮನೆಯಲ್ಲಿ ನಡೆಯುವುದಿಲ್ಲ. ಹೀಗಾಗಿ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಅನ್ನೋ ಕುತೂಹಲ ಕಾಡ್ತಾ ಇದೆ.

ಸಿರಿಯವರು ಬಿಗ್ ಬಾಸ್ ಸೀಸನ್ 10 ಗೆ ಸ್ಪರ್ಧಿಯಾಗಿ ಬಂದಾಗಿನಿಂದಲೂ ಕೂಡ ಬಹಳ ಸೇಫ್ ಆಗಿ ಬಹಳ ಸೈಲೆಂಟಾಗಿ ಆಟ ಆಡುತ್ತಿದ್ದಾರೆ ಅನ್ನೋದು ಡೇ ಒನ್ ಇಂದಲೂ ಕೇಳಿ ಬರುತ್ತಿರತಕ್ಕಂತ ಮಾತು ಆದರೆ ಎಲ್ಲೋ ಒಂದು ಕಡೆ ಅವರ ಒಳ್ಳೆತನ ಅವರನ್ನ ಇಷ್ಟು ದಿನ ಮನೆಯಲ್ಲಿ ಉಳಿಸುತ್ತಿದೆ ಅಂತ ಕೂಡ ಒಂದಷ್ಟು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಮೈಕಲ್ ಕೂಡ ಪ್ರತಿ ಬಾರಿ ನಾಮಿನೇಟ್ ಆದಾಗಿನಿಂದಲೂ ಕೊನೆಯಲ್ಲಿ ಎರಡನೆಯವರಾಗಿ ಸೇವ್ ಆಗ್ತಾಯಿದ್ದಾರೆ ಹೀಗಾಗಿ ಈ ಬಾರಿ ಅವರು ಮನೆಯಲ್ಲಿ ಉಳಿದುಕೊಳ್ಳುವುದು ಡೌಟ್ ಅಂತ ವೀಕ್ಷಕರು ಹೇಳ್ತಾ ಇದ್ದಾರೆ. ಇನ್ನೊಂದು ಕಡೆ ವೈಲ್ ಕಾರ್ಡ್ ಎಂಟ್ರಿ ಮೂಲಕ ಬಂದಿರತಕ್ಕಂಥ ಪವಿ ಅವರು ಹೇಳಿಕೊಳ್ಳುವಂತಹ ಆಟವೇನು ಆಡ್ತಾ ಇಲ್ಲ ಮನೆಯಲ್ಲಿ ಉಳಿದುಕೊಳ್ಳೋಕೆ ಸಾಕಷ್ಟು ಸರ್ಕಸನ ಮಾಡ್ತಾ ಇದ್ರು ಕೂಡ ಅವರ ಆಟ ವೀಕ್ಷಕರಿಗೆ ಎಲ್ಲೂ ಕೂಡ ಕಾಣ್ತಾ ಇಲ್ಲ ಹೀಗಾಗಿ ಈ ವಾರ ಅವರು ಮನೆಯಿಂದ ಹೋದರೂ ಕೂಡ ಆಶ್ಚರ್ಯ ಪಡುವಂತಿಲ್ಲ. ಹೀಗಾಗಿ ಮೊದಲು ಪ್ರತಾಪ್ ಸೇವಾಗಬಹುದು ನಂತರ ಸಂಗೀತ ಆಮೇಲೆ ವಿನಯ್ ಸೇವಾಗಿ ಈ ಮೂವರ ಮೇಲೆ ಎಲಿಮಿನೇಷನ್ ತೂಗು ಗೊತ್ತಿತ್ತು ಅಂತ ಹೇಳಲಾಗುತ್ತಿದೆ. ಆದರೆ ಈ ಮೂವರಲ್ಲಿ ಯಾರು ಮನೆಯಿಂದ ಹೊರ ಹೋಗ್ತಾರೆ ಅನ್ನೋದು ನಾಳೆ ವೀಕೆಂಡ್ ಶೋ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ.

ಇದನ್ನೂ ಓದಿ: ಕೇಂದ್ರದಿಂದ ಬಂತು ಮಹತ್ವದ ರೂಲ್ಸ್, ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಅಪಾರ್ ಕಾರ್ಡ್, ಇದರ ಉಪಯೋಗವನ್ನು ತಿಳಿಯಿರಿ