ಬಿಗ್ ಬಾಸ್ ಸೀಸನ್ 10 ಪ್ರೀಮಿಯರ್ ನಿನ್ನೆ ಶುರುವಾಗಿ ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಬರಮಾಡಿಕೊಂಡರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಈ ಸಲ ಟ್ವಿಸ್ಟ್ ಇತ್ತು ಅದೇನೆಂದರೆ ಸ್ಪರ್ಧಿಗಳನ್ನು ಜನರೇ ವೋಟ್ ಮಾಡಿ ಬಿಗ್ ಬಾಸ್ ಮನೆ ಒಳಗೆ ಕಳುಹಿಸಬೇಕಿತ್ತು. 80% ಗಿಂತ ಜಾಸ್ತಿ ವೋಟ್ ಬಂದರೆ ಮಾತ್ರ ಬಿಗ್ ಬಾಸ್ ಮನೆಗೆ ಡೈರೆಕ್ಟ್ ಆಗಿ ಹೋಗಬಹುದಿತ್ತು. 40% ಯಿಂದ 80% ಬಂದರೆ ಆ ಸ್ಪರ್ಧಿಗಳನ್ನು ಹೋಲ್ಡ್(Hold) ನಲ್ಲಿ ಇಟ್ಟಿದ್ದರು. 40% ಗಿಂತ ಕಡಿಮೆ ಬಂದರೆ ಅಂತ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದರು. ಇಬ್ಬರು 40% ಗಿಂತ ಕಡಿಮೆ ಬಂದು ಡೈರೆಕ್ಟ್ ಎಲಿಮಿನೇಷನ್ ಆದರೂ. ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ನಾಗಿಣಿ 2 ಧಾರಾವಾಹಿ ಖ್ಯಾತಿಯ ನಮ್ರತ ಗೌಡ ಎಂಟ್ರಿ ಕೊಟ್ಟರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಪ್ರಣವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ನೇಹಿತ್ ಎರಡನೇ ಸ್ಪರ್ಧಿಯಾಗಿ ಬಂದರು. ಮೂರನೇ ಸ್ಪರ್ಧಿಯಾಗಿ ರಾಪರ್(Rapper) ಈಶಾನಿ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಬಂದರು. ಹರ ಹರ ಮಹಾದೇವ ಹಾಗೂ ಲಚ್ಚಿ ಧಾರಾವಾಹಿಯಲ್ಲಿ ನಟಿಸಿದ್ದ ವಿನಯ್ ಗೌಡ ನಾಲ್ಕನೆಯ ಸ್ಪರ್ಧಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟರು. ಕಾಮಿಡಿ ಕಿಲಾಡಿ ಖ್ಯಾತಿಯ ತುಕಾಲಿ ಸ್ಟಾರ್ ಸಂತೋಷ್ ಐದನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದರು. ಆರನೇ ಸ್ಪರ್ಧಿಯಾಗಿ ನೀತು ವನಜಾಕ್ಷಿ ಅವರು ಗ್ರಾಂಡ್ ಎಂಟ್ರಿ ಕೊಟ್ಟರು.
ಕಿರುತೆರೆಯಲ್ಲಿ ರಂಗೋಲಿ, ಬದುಕು ಮುಂತಾದ ಧಾರವಾಹಿಗಳ ಮೂಲಕ ಕರ್ನಾಟಕದ ಮನೆ ಮಂದಿಯ ಫೇಮಸ್ ನಟಿ ಸಿರಿ ಬಿಗ್ ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಬಂದರು. ಎಂಟನೇ ಸ್ಪರ್ಧಿಯಾಗಿ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದರು. ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದ ಭಾಗ್ಯಶ್ರೀ 9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಪತ್ರಕರ್ತರಾದ ಗೌರೀಶ್ ಅಕ್ಕಿ ಅವರು ಬಿಗ್ ಬಾಸ್ ಮನೆಗೆ ಹತ್ತನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. 11ನೇ ಸ್ಪರ್ಧಿಯಾಗಿ ಮೈಕಲ್ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿಕ್ ಪಡೆದರು.
80% ಗಿಂತ ಕಡಿಮೆ ವೋಟ್ ಪಡೆದಿದ್ದ ಡ್ರೋನ್ ಪ್ರತಾಪ್, ತನಿಷ, ರಕ್ಷಕ್ ಬುಲೆಟ್, ಸಂಗೀತ ಶೃಂಗೇರಿ, ವರ್ತೂರ್ ಸಂತೋಷ್ ಹಾಗೂ ಕಾರ್ತಿಕ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಆದರೆ ಈ ವಾರ ಆ ಆರು ಸ್ಪರ್ಧಿಗಳು ಡೇಂಜರ್ ಜೋನ್ ನಲ್ಲಿ ಇದ್ದು ಇವರಲ್ಲಿ ಯಾರಾದರೂ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಬಹುದು. ಪ್ರತಿ ದಿನ 9:30ಕ್ಕೆ ಪ್ರಸಾರವಾಗುವ ಬಿಗ್ ಬಾಸ್ ಏನೆಲ್ಲಾ ಕುತೂಹಲವನ್ನು ತರುತ್ತದೆ ಎಂದು ಕಾದು ನೋಡಬೇಕು. ವಾಹಿನಿ ಈ ಸೀಸನ್ ನಲ್ಲಿ ಮೊದಲ ಸ್ಪರ್ಧಿಯಾಗಿ ಚಾರ್ಲಿ ಎಂಟ್ರಿ ಕೊಡುತ್ತೆ ಎಂದು ಹೇಳಿದ್ದಾರು. ಆದರೆ ಎಲ್ಲಾ ಸ್ಪರ್ಧಿಗಳು ಬಂದರೂ ಕೂಡ ಚಾರ್ಲಿ ಯಾಕೆ ಬರಲಿಲ್ಲ ಎಂದು ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಗೃಹಲಕ್ಷ್ಮೀ 2ನೇ ಕಂತಿ ಹಣ ಯಾವಾಗ ಬರುತ್ತೆ ಗೊತ್ತಾ? ಮೊದಲ ಕಂತಿನ ಹಣ ಬರೆದೆ ಇರೋರು ಏನ್ ಮಾಡಬೇಕು?