ಬಿಗ್ ಬಾಸ್ ಗೆ ಶುರುವಾಯ್ತು ಕ್ಷಣಗಣನೆ, 10ನೇ ಸೀಸನ್ ಗೆ ಸಮಯ ನಿಗಧಿಯಾಯ್ತು? ಪ್ರಮುಖ 2 ಧಾರಾವಾಹಿಗಳು ಮುಕ್ತಾಯವಾಯಿತು?

ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ರಸದೌತಣ ಉಣಬಡಿಸಲು ಶುರುವಾಗ್ತಿದೆ ಬಿಗ್ ಬಾಸ್. ಹೌದು ಇನ್ನೇನು ಕೆಲ ದಿನಗಳಲ್ಲೇ ಬಿಗ್ ಬಾಸ್ ಕನ್ನಡ 10’(Big Boss Kannada season 10) ಕಾರ್ಯಕ್ರಮ ಆರಂಭವಾಗ್ತಿದೆ. ಈ ಬಾರಿ ದೊಡ್ಮನೆಯಲ್ಲಿ ಲಾಕ್ ಆಗುವ ಸ್ಪರ್ಧಿಗಳು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಅಕ್ಟೋಬರ್ 8 ರಿಂದ ‘ಬಿಗ್ ಬಾಸ್ ಕನ್ನಡ 10’ ಆರಂಭವಾಗಲಿದ್ದು, ದಿನಾಂಕ ಘೋಷಣೆ ಆಗ್ತಿದ್ದಂತೆ, ಸ್ಪರ್ಧಿಗಳು ಯಾರು ಅನ್ನೋ ಕೂತುಹಲದ ಜೊತೆಗೆ ಬಿಗ್ ಬಾಸ್ ಪ್ರಾರಂಭ ಆಗೋ ಸಮಯಕ್ಕೆ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಕಥೆ ಏನ್ನೊ. ಚರ್ಚೆ ಕೂಡ ನಡೀತಿದೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗ್ಲೇ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದ್ದ ‘ತ್ರಿಪುರ ಸುಂದರಿ’ ಹಾಗೂ 10ಗಂಟೆಗೆ ಪ್ರಸಾರವಾಗುತ್ತಿದ್ದ ಪುಣ್ಯವತಿ ಧಾರಾವಾಹಿಯನ್ನು ಅಂತ್ಯಗೊಳಿಸಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯ ಆಗ್ತಿದ್ದು, ಧಾರವಾಹಿಗಳ ಸಂಚಿಕೆಗಳನ್ನ ನೋಡ್ತಿದ್ರೆ ಧಾರವಾಹಿ ಕೊನೆಗೊಳ್ಳೋದು ಪಕ್ಕ ಅನ್ಸ್ತಿದೆ. ಹೌದು ಬಿಗ್ ಬಾಸ್ ಶೋ ಇದೇ ಅಕ್ಟೋಬರ್ 8 ಭಾನುವಾರದಂದು ಸಂಜೆ 6 ಗಂಟೆಗೆ ಲಾಂಚ್ ಆಗುತ್ತಿದು. ಕಾರ್ಯಕ್ರಮ ಪ್ರತಿದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ ಎಂದು ಪ್ರೋಮೋ ಒಂದನ್ನು ವಾಹಿನಿ ಹಂಚಿಕೊಂಡಿದೆ.

WhatsApp Group Join Now
Telegram Group Join Now

ಇದೇ ವರ್ಷದಾರಂಭದಲ್ಲಿ… ಅಂದ್ರೆ ಜನವರಿ 2 ರಿಂದ ‘ತ್ರಿಪುರ ಸುಂದರಿ’ ಧಾರಾವಾಹಿಯ ಪ್ರಸಾರ ಆರಂಭವಾಯಿತು. ಕೇವಲ 9 ತಿಂಗಳಲ್ಲಿ ‘ತ್ರಿಪುರ ಸುಂದರಿ’ ಸೀರಿಯಲ್‌ಗೆ ಅಂತ್ಯ ಹಾಡಲಾಗುತ್ತಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಫ್ಯಾಂಟಸಿ ಧಾರಾವಾಹಿ ತ್ರಿಪುರ ಸುಂದರಿ. ಇಂಟ್ರೆಸ್ಟಿಂಗ್ ಅಂಶಗಳು ಹಾಗೂ ವಿಶುವಲ್ ಎಫೆಕ್ಟ್ಸ್ ಮೂಲಕ ಆರಂಭದಲ್ಲಿ ಗಮನ ಸೆಳೆದ ಧಾರಾವಾಹಿ ತ್ರಿಪುರ ಸುಂದರಿ, ಒಂದು ಮನೆ ಕಥೆ, ಅದೇ ಮನೆಯಲ್ಲಿದ್ದುಕೊಂಡೇ ಹಗೆ ಸಾಧಿಸುವ ದ್ವೇಷದ ಕಥೆಯನ್ನ ನೋಡಿ ನೋಡಿ ಬೇಸರ ಆಗಿದ್ದವರಿಗೆ ‘ತ್ರಿಪುರ ಸುಂದರಿ’ ಸೀರಿಯಲ್ ಅಕ್ಷರಶಃ ರಿಫ್ರೆಶ್ಶಿಂಗ್ ಆಗಿತ್ತು. ಆದ್ರೀಗ ‘ತ್ರಿಪುರ ಸುಂದರಿ’ ಧಾರಾವಾಹಿಯ ವೀಕ್ಷಕರಿಗೆ ಬೇಸರದ ಸುದ್ದಿ ಇಲ್ಲಿದೆ. ತ್ರಿಪುರ ಸುಂದರಿ’ ಧಾರಾವಾಹಿ ಸದ್ಯದಲ್ಲೇ ಅಂತ್ಯವಾಗಲಿದೆ. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮ ಅಕ್ಟೋಬರ್ 8 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ‘ತ್ರಿಪುರ ಸುಂದರಿ’ ಸೀರಿಯಲ್‌ ಅನ್ನು ಅಂತ್ಯಗೊಳಿಸಲಾಗುತ್ತಿದೆ ಎನ್ನಲಾಗಿದೆ. ‘ತ್ರಿಪುರ ಸುಂದರಿ’ ಧಾರಾವಾಹಿಯ ಕ್ಲೈಮ್ಯಾಕ್ಸ್ ಸಂಚಿಕೆಗಳ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆಯಂತೆ. ಹೀಗಾಗಿ ಈ ಧಾರವಾಹಿ ಅಂತ್ಯ ಅಗಿಲಿದೆ ಅನ್ನೋ ಸೂಚನೆ ಕೊಟ್ಟಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮತ್ತೊಂದು ಟಾಪ್ ರೇಟಿಂಗ್ ಧಾರಾವಾಹಿ ಅಂತ್ಯ?

ಬಿಗ್ ಬಾಸ್’ ಬರ್ತಿರೋದ್ರಿಂದ ಕೆಲವು ಧಾರಾವಾಹಿಗಳನ್ನ ಅನಿವಾರ್ಯವಾಗಿ ಮುಕ್ತಾಯಗೊಳಿಸಲಾಗುತ್ತಿದೆ. ಟಿಆರ್‌ಪಿ ಹಾಗೂ ಜನಪ್ರಿಯತೆ ಆಧಾರದ ಮೇಲೆ ಕೆಲವು ಧಾರಾವಾಹಿಗಳನ್ನ ಕಲರ್ಸ್ ಕನ್ನಡ ವಾಹಿನಿ ಅಂತ್ಯ ಹಾಡುತ್ತಿದೆ. ಈ ಪೈಕಿ ‘ಪುಣ್ಯವತಿ’ ಧಾರಾವಾಹಿಯೂ ಒಂದು. ಜನವರಿ 3 ರಂದು ‘ಪುಣ್ಯವತಿ’ ಧಾರಾವಾಹಿಯ ಪ್ರಸಾರ ಆರಂಭವಾಯಿತು. ಕೇವಲ 9 ತಿಂಗಳಲ್ಲಿ ‘ಪುಣ್ಯವತಿ’ ಸೀರಿಯಲ್‌ಗೆ ಅಂತ್ಯ ಹಾಡಲಾಗುತ್ತಿದೆ. ಹೌದು, ‘ಪುಣ್ಯವತಿ’ ಧಾರಾವಾಹಿ ಅಂತ್ಯವಾಗಲಿದೆ. ‘ಪುಣ್ಯವತಿ’ ಧಾರಾವಾಹಿಯ ಮೇನ್ ಸೀಕ್ರೆಟ್ ಈಗಾಗಲೇ ರಿವೀಲ್ ಆಗಿದೆ. ಕ್ಲೈಮ್ಯಾಕ್ಸ್ ಸಂಚಿಕೆಗಳ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ ಎನ್ನಲಾಗಿದೆ.

‘ಬಿಗ್ ಬಾಸ್’ ಶುರುವಾಗೋದ್ರೊಳಗೆ ‘ಪುಣ್ಯವತಿ’ ಎಂಡ್ ಆಗಲಿದೆ. ಪೂರ್ವಿಗೆ ನಂದನ್ ತಾಳಿ ಕಟ್ಟಿರೋದ್ರಿಂದ, ಅವಳೇ ನಿಜವಾದ ಹೆಂಡತಿ ಎಂದು ಮೊದಲು ಪದ್ಮಿನಿ ದೂರ ಸರಿಯುತ್ತಾಳೆ. ಬಳಿಕ ಪದ್ಮಿನಿಗೆ ನಂದನ್‌ ಪ್ರೀತಿ ಅರಿವಾಗುತ್ತದೆ. ಅಷ್ಟರಲ್ಲಿ, ನಂದನ್‌ನ ಪಡೆಯುವ ಹಠಕ್ಕೆ ಬೀಳುತ್ತಾಳೆ ಪೂರ್ವಿ. ಗಣೇಶ ಹಬ್ಬದ ವೇಳೆ ಪೂರ್ವಿ ಮಾಡಿದ ಡ್ರಾಮಾದಿಂದ ತಾಳಿ ರಹಸ್ಯ ಹೊರಗೆ ಬಂದಿದೆ. ನಂದನ್‌ ತಾಳಿ ಕಟ್ಟಿರೋದು ಪೂರ್ವಿಗೆ ಅಂತ ಇಡೀ ಕುಟುಂಬದ ಮುಂದೆ ಬಯಲಾಗಿದೆ. ಆಗ ಪದ್ಮಿನಿ ಯನ್ನ ಅಪ್ಪ ಅವ್ರ ಮನೆಗೆ ಕರೆದುಕೊಂಡು ಹೋಗೋವಾಗ ಮತ್ತೆ ನಂದನ್ ಪದ್ಮಿನಿಗೆ ತಾಳಿ ಕಟ್ಟಿದ್ದಾನೆ, ಆಗ ಪೂರ್ವಿಯು ನಿಮ್ಮಿಬ್ಬರ ಮಧ್ಯೆ ನಾನು ಬರಲ್ಲ ಅಂತ ಅವಳ ಕೊರಳಿನಲ್ಲಿರುವ ತಾಳಿ ತೆಗೆಯಲು ಮುಂದಾಗಿದ್ದಾಳೆ. ಹಾಗಾದ್ರೆ ಮುಂದೇನಾಗುತ್ತೆ? ನಂದನ್‌ ಪ್ರೀತಿಗೆ ಪ್ರಾಮುಖ್ಯತೆ ಸಿಗುತ್ತೋ, ತಾಳಿಗೆ ಬೆಲೆ ಸಿಗುತ್ತೋ ಎಂಬುದಕ್ಕೆ ಉತ್ತರ ‘ಪುಣ್ಯವತಿ’ ಧಾರಾವಾಹಿಯ ಕ್ಲೈಮ್ಯಾಕ್ಸ್‌ನಲ್ಲಿ ಸಿಗಲಿದ್ದು ಅಲ್ಲಿಗೆ ಧಾರವಾಹಿ ಮುಕ್ತಾಯವಾಗಿ ಬಿಗ್ ಬಾಸ್ ಶುರುವಾಗುತ್ತೆ ಅನ್ನೋದು ಈಗೀನ ಮಾತು.

ಇದನ್ನೂ ಓದಿ: ನಟನೆ ಜೊತೆ ಹೊಸ ಉದ್ಯಮ ಆರಂಭಿಸಿದ ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾದವ್

ಇದನ್ನೂ ಓದಿ: ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram