ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗೋದು ಯಾರು? 6ಜನರಲ್ಲಿ ಯಾರಿಗೆ ಮುಗಿಯಲಿದೆ ಬಿಗ್ ಬಾಸ್ ಪ್ರಯಾಣ…

ಕಿರುತೆರೆಯಲ್ಲಿ ಸಕತ್ ಮಜಾ ಕೊಡೊ ಕಾರ್ಯಕ್ರಮ ಅಂದ್ರೆ ಬಿಗ್ ಬಾಸ್. ಹೌದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಿ 2 ವಾರ ಕಳೆಯುತ್ತಿದೆ. ಈಗಾಗಲೇ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದರ ಜೊತೆಗೆ ನಾಮಿನೇಟ್‌ ಪ್ರಕ್ರಿಯೆ ಕೂಡ ಮುಗಿದಿದೆ. ಅಲ್ಲದೇ, ಕ್ಯಾಪ್ಟನ್‌ ಆಯ್ಕೆ ಕೂಡ ಆಗಿದೆ. ಇನ್ನು ಆಟದ ಮಧ್ಯೆ 2ನೇ ವಾರದ ಮುಕ್ತಾಯ ಗೊಳ್ಳುತ್ತಿದೆ. ವೀಕೆಂಡ್‌ ಹತ್ತಿರವಾಗುತ್ತಿದ್ದಂತೆ ನಾಮಿನೆಟ್ ಆಗಿರೋರ ಎದೆಯಲ್ಲಿ ಢವ ಢವ ಶುರುವಾಗ್ತಿದೆ. ಹೌದು ಈ ವಾರದ ಎಲಿಮಿನೇಷನ್‌ಗೆ ಕ್ಷಣಗಣನೆ ಶುರುವಾಗಿದೆ. ಈಗಾಗ್ಲೇ ಮೊದಲ ವಾರದಲ್ಲಿ ಸ್ನೇಕ್ ಶ್ಯಾಮ್ ಹೊರ ಬಂದಿದ್ದು, 2ನೇ ವಾರದಲ್ಲಿ ವೀಕ್ಷಕರ ಮನಗೆದ್ದು ಯಾರು ಸೇಫ್‌ ಆಗಲಿದ್ದಾರೆ. ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬುದು ಕುತೂಹಲಕರವಾಗಿದೆ. ವಾರದ ಕೊನೆಯಲ್ಲಿ ಶನಿವಾರ ಮತ್ತು ಭಾನುವಾರ ಎಲ್ಲಿಮಿನೆಷನ್ ಪ್ರಕ್ರಿಯೆ ನಡೆಯಲಿದೆ. ಇನ್ನು ಮೊದಲ ವಾರ ನಿರೀಕ್ಷೆಯಂತೆ ಸ್ನೇಕ್ ಸ್ಯಾಮ್ ಹೊರಬಂದಿದ್ದಾರೆ.

WhatsApp Group Join Now
Telegram Group Join Now

ಇನ್ನು ಇದೀಗ 2ನೇ ವಾರಕ್ಕೆ 6ಮಂದಿ ನಾಮಿನೆಟ್ ಆಗಿದ್ದು 6ಜನರಲ್ಲಿ ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ತಿಳಿಯಲಿದೆ. ಕಡಿಮೆ ಅವಧಿಯಲ್ಲಿ ಯಾರು ವೀಕ್ಷಕರ ಮನಗೆದ್ದು ಅತಿ ಹೆಚ್ಚು ವೋಟ್‌ ಪಡೆದಿದ್ದಾರೆ ಯಾರು ಕಡಿಮೆ ಓಟ್ ಪಡೆದು ಮನೆಯಿಂದ ಹೊರ ಹೋಗ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದ್ದು, ಈ ವಾರ ಇಬ್ಬರ ಹೆಸರು ಮನೆಯಿಂದ ಈ ಇಬ್ಬರಲ್ಲಿ ಒಬ್ಬರು ಹೊರ ಹೋಗ್ತಾರೆ ಅಂತ ಹೇಳಲಾಗ್ತಿದೆ.

Image Credit: Colors Kannada

ಹೌದು 2ನೇ ವಾರದ ಮೊದಲ ದಿನ ಸ್ಪರ್ಧಿಗಳಿಗೆ ಶಾಕ್ ಕಾದಿತ್ತು ಬೆಳಗೆದ್ದು ಯಾರ ಹೆಸರು ನಾಮಿನೇಟ್‌ ಮಾಡಿದೇʼ ಅನ್ನೋದೇ ಎರಡನೆಯ ವಾರದ ಮೊದಲ ದಿನದ ವೇಕಪ್‌ ಸಾಂಗ್ ಆಗಿತ್ತು. ಚಂದದ ಹಾಡಿಗೆ ಅಷ್ಟೇ ಉತ್ಸಾಹದಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗ್ಗೆನ್ನು ಬರಮಾಡಿಕೊಂಡಿದ್ದಾರೆ. ಆದರೆ ಬಿಗ್‌ಬಾಸ್‌ನ ಸೆಕೆಂಡ್‌ ವೀಕ್‌ನ ಮೊದಲ ದಿನ ಬೆಳಗ್ಗೆ ಬಿಗ್‌ಬಾಸ್‌, ಎದ್ದು ಕೂತ ಜಾಗದಿಂದಲೇ ಮನೆಯ ಸದಸ್ಯರಿಗೆ ನಾಮಿನೇಷನ್‌ ಮಾಡಲು ಹೇಳಿದರು. ಬಿಗ್‌ಬಾಸ್‌ ಸೂಚನೆಯಂತೆ ದೊಡ್ಮನೆಯ ಮಂದಿ ನಾಮಿನೇಷನ್‌ ಮಾಡಿದ್ದಾರೆ. ಸಂತೋಷದಿಂದ ಬೆಳಗನ್ನು ಬರಮಾಡಿಕೊಳ್ಳುತ್ತಿದ್ದ ಬಿಗ್‌ಬಾಸ್‌ ಮನೆಯ ಜನರು, ಎರಡನೆಯ ವಾರದ ನಾಮಿನೇಷನ್‌ ಪ್ರಕ್ರಿಯೆಯಿಂದ ಮನೆಯ ಸದಸ್ಯರ ಮದ್ಯೆ ಮನಸ್ತಾಪ ಉಂಟಾಗಿದೆ.

ಬೆಳಗ್ಗೆ ಬೆಳಗ್ಗೆ ಬಿಗ್‌ಬಾಸ್‌ ಸ್ಪರ್ದಿಗಳು ಕಿತಾಡಲು ಶುರು ಮಾಡಿದ್ದರು. ಏನೇ ಆದ್ರೂ ಕೊನೆಗೆ ಸದಸ್ಯರ ಒಪ್ಪಿಗೆಯಂತೆ ಈ ವಾರ ಮನೆಯಿಂದ ಹೊರಹೋಗಲು ಕಾರ್ತಿಕ್, ಸಂಗೀತ, ಗೌರೀಶ್ ಅಕ್ಕಿ, ಭಾಗ್ಯಶ್ರೀ, ತನಿಷಾ, ತುಕಾಲಿ ಸಂತು ನಾಮಿನೆಟ್ ಆದ್ರು. ಹೀಗಾಗಿ ಇದೀಗ ಈ 6 ಜನರಲ್ಲಿ ಒಬ್ಬರು ಈ ವಾರ ತಮ್ಮ ಬಿಗ್ ಬಾಸ್ ಜರ್ನಿಯನ್ನ ಮುಗಿಸಲೇ ಬೇಕು. ಹಾಗಾದ್ರೆ 6ಮಂದಿಯಲ್ಲಿ ಮನೆಯಿಂದ ಹೊರ ಹೋಗೋರು ಯಾರು ಎಂದು ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದೂ ಮೂಲಗಳ ಪ್ರಕಾರ ಕಾರ್ತಿಕ್, ಸಂಗೀತ, ತನಿಷಾ, ತುಕಾಲಿ ಸಂತು ಸೇಫ್ ಆಗಿ ಮುಂದಿನ ವಾರಕ್ಕೆ ಹೋಗಲಿದ್ದಾರೆ ಅಂತ ಹೇಳಲಾಗ್ತಿದ್ದು. ಉಳಿದಂತೆ ಗೌರೀಶ್ ಅಕ್ಕಿ ಹಾಗೂ ಭಾಗ್ಯ ಶ್ರೀ ಮಧ್ಯೆ ಎಲಿಮಿನೇಷನ್ ತೂಗು ಗತ್ತಿ ತೂಗಲಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಭಾಗ್ಯಶ್ರೀನಾ ಇಲ್ಲ ಗೌರೀಶ್ ಅಕ್ಕಿನಾ ಇಬ್ಬರಲ್ಲಿ ಹೊರಬರೋರು ಯಾರು?

ಹೌದು ಇದೀಗ ಯಾರು ಜನರಲ್ಲಿ ಭಾಗ್ಯಶ್ರೀ ಮತ್ತು ಗೌರೀಶ ಅಕ್ಕಿ, ಇಬ್ಬರು ಚಟುವಟಿಕೆ ಆಗಿರಬಹುದು ಬಿಗ್ ಬಾಸ್ ನೀಡಿರ್ತಕ್ಕಂತ ಗೇಮ್ ಆಗಿರಬಹುದು ಆರು ಜನರಲ್ಲಿ ಈ ಇಬ್ಬರು ಅವರಿಗಿಂತ ಕಡಿಮೆ ಪರ್ಫಾರ್ಮೆನ್ಸ್ ಅಂತ ಹೇಳಬಹುದು. ಇನ್ನು ಭಾಗ್ಯಶ್ರೀ ಅವರು ಕಳೆದ ವಾರ ಕೂಡ ಕಳಪೆ ಬೋರ್ಡನ್ನು ಹಾಕಿಕೊಂಡು ಜೈಲಿಗೆ ಹೋಗಿದ್ದರು. ಇನ್ನು ಈ ವಾರವು ಕೂಡ ಗೇಂನಲ್ಲಿ ಸ್ವಲ್ಪ ಎಡವಿದಂತೆ ಕಾಣ್ತಾ ಇದೆ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ಭಾಗ್ಯಶ್ರೀ ಅವರು ನೀಡಲಿಲ್ಲ. ಹೀಗಾಗಿಯೇ ರಣಶಕ್ತಿ ತಂಡದವರು ಅವರನ್ನು ಮತ್ತೊಂದು ತಂಡಕ್ಕೆ ಕಳಿಸಿಕೊಟ್ಟರು ಅಲ್ಲಿಯೂ ಕೂಡ ಭಾಗ್ಯಶ್ರೀ ಅವರು ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಲಿಲ್ಲ ಹೀಗಾಗಿ ಜೊತೆಗೆ ಮನೆಯವರೊಟ್ಟಿಗೆ ಅವರು ಬೆರಿತಾಯಿಲ್ಲ ಸುಮ್ಮ ಸುಮ್ಮನೆ ಜಗಳ ಮಾಡುತ್ತಾರೆ ಅನ್ನುವಂತಹ ಮಾತುಗಳು ಕೇಳಿ ಬರ್ತಾ ಇದೆ.

ಮತ್ತೊಂದೆಡೆ ಮಗನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸ್ವತಹ ಅವರೇ ಹೇಳುತ್ತಿರುವ ಕಾರಣ ಈ ವಾರ ಬಿಗ್ ಬಿ ಮನೆಯಿಂದ ಭಾಗ್ಯಶ್ರೀ ಅವರು ಔಟ್ ಆಗಬಹುದು. ಇಲ್ಲವೇ ಗೌರೀಶ ಅಕ್ಕಿಯವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದು ಅನ್ನುವಂತಹ ಚರ್ಚೆಗಳು ಶುರುವಾಗಿದೆ. ಗೌರೀಶ್ ಅಕ್ಕಿ ಅವರು ಅಷ್ಟೇ ಮನೆಯಲ್ಲಿ ತುಂಬಾನೇ ಸೈಲೆಂಟ್ ಆಗಿರುತ್ತಾರೆ ಓಪನ್ ಅಪ್ ಆಗಿಲ್ಲ , ಜೊತೆಗೆ ಟಾಸ್ಕ್ ಗಳಲ್ಲೂ ಕೂಡ ಅವರು ಅಂತಹ ಪ್ರದರ್ಶನವನ್ನು ನೀಡಿಲ್ಲ. ಹೀಗಾಗಿ ಗೌರೀಶ್ ಅಕ್ಕಿ ಅವರು ಈ ವಾರ ಮನೆಯಿಂದ ಔಟ್ ಆಗುವ ಸಾಧ್ಯತೆಗಳು ಇದೆ. ಆದರೆ ವೀಕ್ಷಕ ಪ್ರಭುಗಳು ವೋಟಿಂಗ್ನಲ್ಲಿ ಯಾರನ್ನು ಉಳಿಸಿಕೊಳ್ಳುತ್ತಾರೆ, ಯಾರು ಬಿಗ್ ಬಾಸ್ ಮನೆಯಿಂದ ಹೊರ ಹಾಕ್ತಾರೆ ಅನ್ನೋದು ಇವತ್ತು ಹಾಗೂ ನಾಳೆಯ ಕಿಚ್ಚನ ಪಂಚಾಯಿತಿಯಲ್ಲಿ ಗೊತ್ತಾಗ್ಲಿದೆ.

ಇದನ್ನೂ ಓದಿ: ವಿಕೇಂಡ್ ನಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಆಭರಣಗಳ ದರ?

ಇದನ್ನೂ ಓದಿ: ಕಾಮಿಡಿ ಕಿಲಾಡಿ ನಯನಾ ಅದ್ದೂರಿ ಸೀಮಂತ; ಸೀಮಂತದ ಜೊತೆಗೆ ಬೇಬಿ ಬಂಪ್ ಫೋಟೋಶೂಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram