ಅತಿ ಶ್ರೀಘದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10; ಸ್ಪರ್ಧಿಗಳ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಯಾವಾಗ ಪ್ರಸಾರ ಆಗಲಿದೆ ಎಂಬ ಬಗ್ಗೆ ವಾಹಿನಿ ಇನ್ನೂ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಆದರೆ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಬಿಗ್ ಬಾಸ್ ಶೋ ಶುರುವಾಗಲಿದೆ ಎನ್ನಲಾಗುತ್ತಿದೆ. ಹೌದು ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಶುರುವಾಗುತ್ತದೆ ಎನ್ನಲಾಗಿದೆ. ಇನ್ನು ಅನುಬಂಧ ಅವಾರ್ಡ್ಸ್ ಮುಗಿದ ನಂತರ ಈ ರಿಯಾಲಿಟಿ ಶೋ ಶುರುವಾಗೋದು ಬಹುತೇಕ ಖಚಿತವಾಗಿದೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10 ಶೋ 1.5 ಗಂಟೆಗಳ ಕಾಲ ಪ್ರಸಾರ ಆಗುತ್ತದೆ ಹೌದು 24 ಗಂಟೆ ನಡೆಯೋದನ್ನು 1.5 ಗಂಟೆಗಳ ಕಾಲ ಮಾತ್ರ ಪ್ರಸಾರ ಮಾಡುತ್ತಾರೆ.

WhatsApp Group Join Now
Telegram Group Join Now

ಆದ್ರೆ ಒಟಿಟಿಯಲ್ಲಿ ಕಂಪ್ಲೀಟ್ ಆಗಿ 24 ಗಂಟೆಗಳ ಕಾಲ ಲೈವ್ ಕೊಡುತ್ತಿದ್ದರು, ಆದರೆ ಈ ಬಾರಿ ಓಟಿಟಿ ಬರೋದು ಡೌಟ್ ಆದ್ರೆ ಟಿವಿಯಲ್ಲಿ ಬರೋದು ಪಕ್ಕ ಆಗಿದೆ. ಇನ್ನು ಕನ್ನಡ ಕಿರುತೆರೆ ಪ್ರೇಕ್ಷಕರು ಭಾರೀ ಕುತೂಹಲದಿಂದ ಕನ್ನಡ ಬಿಗ್​ಬಾಸ್ ಸೀಸನ್ 10ಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ಯಾರು ಮನೆಯೊಳಗೆ ಹೋಗುತ್ತಾರೆ, ಯಾರೆಲ್ಲಾ ಸೆಲೆಕ್ಟ್ ಆಗಿದ್ದಾರೆ ಎಂದು ಲೆಕ್ಕ ಹಾಕುತ್ತಿದ್ದಾರೆ ಜನರು. ಹೌದು ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡದಲ್ಲಿ ಭಾಗವಹಿಸಲು ಬಹಳಷ್ಟು ಜನರ ಪ್ರಯತ್ನಿಸುತ್ತಾರೆ. ಆದ್ರೆ ಲಕ್ ಇಲ್ಲಿ ಎಲ್ಲರ ಕೈ ಹಿಡಿಯಲ್ಲ.. ಹಾಗಾದ್ರೆ ಈ ಬಾರಿ ಬಿಗ್ ಬಾಸ್ ಗೆ ಹೋಗ್ತಿರೋ ಫೈನಲಿಸ್ಟ್ ಯಾರ್ ಗೊತ್ತಾ… ನೋಡೋಣ ಬನ್ನಿ.

ಹೌದು ಈ ಬಾರಿ ಬಿಗ್ ಬಾಸ್ ಸೀಸನ್ ಶುರು ಮಾಡುದ್ರೆ… ಈ ಮೊದಲು ಓಟಿಟಿ ಗೆ ಸ್ಪರ್ಧಿಗಳ ಆಯ್ಕೆಯಲ್ಲಿ ಮಾಡಿದ ಯಡವಟ್ಟನ್ನ ಈಗ ಮಾಡಿದ್ರೆ ಶೋ ಪ್ಲಾಪ್ ಆಗುತ್ತೆ ಈಗಾಗಿ ಸ್ಪರ್ಧೆಗಳ ಆಯ್ಕೆ ವಿಚಾರದಲ್ಲಿ ವಾಹಿನಿ ಸಾಕಷ್ಟು ಕಸರತ್ತು ನಡೆಸಿದ್ದು ಕುಖ್ಯಾತಿ ಪಡೆದು ಫೇಮಸ್ ಆದವರನ್ನ ಬಿಟ್ಟು ಒಳ್ಳೆ ರೀತಿಯಲ್ಲಿ ಫೇಮಸ್ ಆಗಿರೋರನ್ನ ಬಿಗ್ ಬಾಸ್ ಗೆ ಕರೆತರಲು ವಾಹಿನಿ ರೆಡಿಯಾಗಿದ್ದು ಈಗಾಗಲೇ ಹಲವರಿಗೆ ವಾಹಿನಿ ಕಡೆಯಿಂದ ಅಹ್ವಾನ ಹೋಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ, ಇಂದು ಸ್ಟಾರ್ ನಟಿ

ಫೈನಲಿಸ್ಟ್ ಯಾರ್ ಯಾರ್ ಗೊತ್ತಾ?

ಬಟ್ಟೆ ಬಿಚ್ಚಿ ಅರೆ ಬಾರೆ ಬಟ್ಟೆ ತೊಟ್ಟು ಜನರಿಂದ ಹುಗಿಸಿಕೊಳ್ಳೋರನ್ನ ಹೊರಗಿಟ್ರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯದು ಅನ್ನೋದು ಸಾಕಷ್ಟು ಜನರ ಅಭಿಪ್ರಾಯ.. ಹೀಗಾಗಿ ಶಿವರಾಜ್ ಕೆ ಆರ್ ಪೇಟೆ ಅವ್ರಿಗೆ ಇರುವಂತಹ ಹಾಸ್ಯ ಪ್ರಜ್ಞೆ ಅವ್ರಿಗಿರುವಂತ ಜನ ಮನ್ನಣೆಯಿಂದಾಗಿ ವಾಹಿನಿ ಇವ್ರನ್ನ ಬಿಗ್ ಬಾಸ್ ಗೆ ಬರುವಂತೆ ಅಹ್ವಾನ ನೀಡಿದೆ ಅಂತ ಹೇಳಲಾಗಿದೆ. ಇನ್ನು ಯುವಕರ ಹಾರ್ಟ್ ಫೇವರೇಟ್ ಮಾತ್ರವಲ್ಲ ಎಲ್ಲರ ಮನ ಗೆದ್ದ ಡಾ. ಬ್ರೋ ಗು ಕೂಡ ಅಹ್ವಾನ ಹೋಗಿದ್ಯಂತೆ. ಯಾಕಂದ್ರೆ ವೀಕೆಂಡ್ ಕಾರ್ಯಕ್ರಮಕ್ಕೆ ಇವ್ರನ್ನ ಕರೆಸುವಂತೆ ಕೇಳಿಕೊಂಡಿದ್ದಾಗ ಅದನ್ನ ವಾಹಿನಿಯವರು ತಿರಸ್ಕರಿಸಿದ್ರು ಹೀಗಾಗಿ ಇದು ಬಿಗ್ ಬಾಸ್ ಗೆ ವರ್ಕೌಟ್ ಆಗುತ್ತೆ ಹೀಗಾಗಿ ಡಾ. ಬ್ರೋ ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಾರಂತೆ. 

ಇನ್ನು ಕಲರ್ಸ್ ಕನ್ನಡದ ಕಾಮಿಡಿ ಶೋ ಗಳಿಂದಲೇ ಫೇಮಸ್ ಆಗಿ ಮದುವೆ ಆಗಿರೋ ಚಂದ್ರಪ್ರಭಾ ಕೂಡ ಈ ಬಾರಿಯ ಬಿಗ್ ಬಾಸ್ ಫೈನಲಿಸ್ಟ್ ಅಂತೇ. ಇನ್ನು ಸ್ಯಾಂಡಲ್ವುಡ್ ಗೆ ಹೀರೋಹಿನ್ ಆಗಿ ಎಂಟ್ರಿ ಕೊಡ್ತಿರುವ ನಿರೂಪಕಿ ಹಾಗೂ ನಟಿ ಜಾಹ್ನವಿ ಕೂಡ ಈ ಬಾರಿಯ ಬಿಗ್ ಬಾಸ್ ಸ್ಪರ್ದಿಯಾಗಿದ್ದಾರೆ. ಇನ್ನು ಶನಿ ಸೀರಿಯಲ್ ಮೂಲಕ ಕಿರುತರೆ ಲೋಕಕ್ಕೆ ಎಂಟ್ರಿ ಕೊಟ್ಟು ಕೆಂಡ ಸಂಪಿಗೆ ರಾಜೇಶ ಆಗಿ ಎಲ್ಲರ ಗಮನ ಸೆಳೆದಿರುವ ಸುನಿಲ್ ಗೆ ಬಿಗ್ ಬಾಸ್ ವೇದಿಕೆ ನೀಡಲಿದ್ಯಂತೆ.

ಇನ್ನು ಕಲರ್ಸ್ ಕನ್ನಡದ ಜೊತೆ ಅಸೋಶಿಯೇಟ್ ಆಗಿರುವ ಮಾಸ್ಟರ್ ಆನಂದ್ ಅವ್ರ ತಮ್ಮ ಅರುಣ್ ಹರಿಹರನ್ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಮೋಡಿ ಮಾಡಲಿದ್ದಾರಂತೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ರಕ್ಷಕ್ ಬುಲೆಟ್ ಕೂಡ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಅಂತ ಹೇಳಲಾಗ್ತಿದ್ದು, ಸಾಕಷ್ಟು ಟ್ರೊಲ್ ಹಾಗೂ ರೋಸ್ಟ್ ಆಗ್ತಿರೋ ರಕ್ಷಕ್ ಇದ್ರೆ ಶೋ ಚೆನ್ನಾಗಿರುತ್ತೆ ಅನ್ನೋದು ವಾಹಿನಿಯ ಲೆಕ್ಕಾಚಾರ. ಇನ್ನು ಮೊನ್ನೆಯಷ್ಟೇ ಕೌಟುಂಬಿಕ ವಿಚಾರದಲ್ಲಿ ಜೈಲು ವಾಸಕ್ಕೆ ಗುರಿಯಾಗಿದ್ದ ಅಭಿನಯ ಕೂಡ ಬಿಗ್ ಬಾಸ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸರಿಗಮಪ ಅಖಿಲ ಪಜೀಮಣ್ಣು ಕೂಡ ಸಂಗೀತ ಕ್ಷೇತ್ರದಿಂದ ಬಿಗ್ ಬಿ ಅಂಗಳಕ್ಕೆ ಎಂಟ್ರಿ ಕೊಡೋದು ಕನ್ಫರ್ಮ್ ಆಗಿದೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿರುವ ಖ್ಯಾತಿ ಪಡೆದಿರುವ ಡ್ರೋನ್ ಪ್ರತಾಪ್ ನನ್ನ ಕೂಡ ಬಿಗ್ ಬಾಸ್ ಮನೆಗೆ ಕರೆಸುತ್ತಾರಂತೆ.. ಇನ್ನು ಉತ್ತರ ಕರ್ನಾಟಕದ ಮಲ್ಲು ಜಮಖಂಡಿ ಅವ್ರಿಲ್ಲ ಅಂದ್ರೆ ಸಾಕಷ್ಟು ಕಿರುಚಿತ್ರಗಳ ಮೂಲಕ ಒಳ್ಳೆ ಹೆಸರು ಮಾಡಿರೋ ನಿಂಗ ರಾಜ್ ಸಿಂಗಡಿ ಅವ್ರನ್ನ ಬಿಗ್ ಬಾಸ್ ಮನೆಗೆ ಕಳುಹಿಸುವ ಪ್ಲಾನ್ ನಲ್ಲಿ ವಾಹಿನಿಯಿದ್ದು… ಒಳ್ಳೆ ಸ್ಪರ್ಧಿಗಳಿದ್ರೆ ಒಳ್ಳೆಯದ್ದು ಇಲ್ಲವಾದ್ರೆ ಜನ ಬಿಗ್ ಬಾಸ್ ಶೋ ನ ನೋಡ್ದೆ ತಿರಸ್ಕಾರ ಮಾಡ್ತಾರೆ ಅನ್ನೋ ಭಯ ಕೂಡ ಆಯೋಜಕರಿಗೆ ಇರೋದ್ರಿಂದ ಸ್ಪರ್ಧೆಗಳ ಆಯ್ಕೆ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಿದೆ.

ಇದನ್ನೂ ಓದಿ: ಕರಿಮಣಿ ಮಾಲೀಕ ಇನ್ಮುಂದೆ ನಾನಲ್ಲ; ಅಧಿಕೃತವಾಗಿ ವಿಚ್ಚೇಧನದ ಬಗ್ಗೆ ಹೇಳಿಕೊಂಡ ಕಿರಿಕ್ ಕೀರ್ತಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram