ಬಂದೇ ಬಿಡ್ತು ಬಿಗ್ ಬಾಸ್ ಮೊದಲ ಪ್ರೋಮೋ; ಬಿಗ್ ಬಾಸ್ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್?

ಕಿರುತೆರೆ ಲೋಕದ ನಂಬರ್ ಒನ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಪ್ರತಿ ಸೀಸನ್ ನಲ್ಲೂ ಹೊಸದೆನೋ ಪ್ರಯತ್ನ ಮಾಡುತ್ತಾ ಇಷ್ಟು ಸೀಸನ್ ಗಳು ಮೂಡಿಬಂದಿದೆ ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆಯಲ್ಲಿ ಬರುತ್ತಿರುವ ಬಿಗ್ ಬಾಸ್. ಮೊದಲ ಸೀಸನ್ ನಿಂದಲ್ಲೂ ಬಿಗ್ ಬಾಸ್ ನ ಬಾಸ್ ಆಗಿ ಸುದೀಪ್ ಅವರು ನಿರೂಪಕರಾಗಿ ಮುನ್ನಡೆಸುತ್ತಿದ್ದಾರೆ. ಇಂದು ಸೆಪ್ಟೆಂಬರ್ 2ನೇ ತಾರೀಕು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಜೋರಾಗಿಯೇ ನಡೆದಿದ್ದು ನಿನ್ನೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳನ್ನು ಭೇಟಿ ಮಾಡಿದರು. ಸುದೀಪ್ ನಟನೆಯ ಹೊಸ ಸಿನಿಮಾದ ಟೀಸರ್ ಕೂಡ ಬಂತು. ಕಿಚ್ಚ ನಡೆಸಿಕೊಡುವ ಬಿಗ್ ಬಾಸ್ ಶೋನ ಸೀಸನ್ 10ರ ಪ್ರೋಮೋ ಕೂಡ ಇಂದು ಕಿಚ್ಚನ ಬರ್ತಡೇ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಬಿಗ್ ಬಾಸ್ ಸೀಸನ್ 10ರ ಪ್ರೋಮೋದಲ್ಲಿ ಈ ಬಾರಿ Something special ಏನೋ ಇರುತ್ತದೆ ಎಂದು ಬರೆದುಕೊಂಡಿದೆ. ‘ನಮಸ್ತೆ ಕರ್ನಾಟಕ ಹೇಗಿದ್ದೀರಾ?’ ಎಂದು ಬಿಗ್ ಬಾಸ್ ನ ಧ್ವನಿಯಲ್ಲಿ ಪ್ರೋಮೋ ಶುರುವಾಗುತ್ತದೆ. ‘ಇಟ್ಟ ನೋಟ ಗಟ್ಟಿಯಾಗಿದೆ ಆಟ ಮತ್ತೆ ಶುರುವಾಗುತ್ತಿದೆ ಈ ಬಾರಿ Something special ವೆಲ್ ಕಮ್ ಟು ಬಿಗ್ ಬಾಸ್ ಸೀಸನ್ 10’ ಎಂದು ಪ್ರೋಮೋ ದಲ್ಲಿ ನೋಡಬಹುದು. ಕಳೆದ ವರ್ಷ ಮೊದಲು OTT ಸೀಸನ್ 1 ಶುರುವಾಗಿತ್ತು ಮೊದಲು OTT ಯ ಪ್ರೋಮೋ ಬಿಟ್ಟಿದ್ದ ವಾಹಿನಿ ಈ ವರ್ಷ ಬಿಗ್ ಬಾಸ್ ಸೀಸನ್ 10ರ ಪ್ರೋಮೋನೆ ಬಿಟ್ಟಿದ್ದಾರೆ ಹಾಗಾಗಿ ಈ ಸಲ OTT ಸೀಸನ್ ಬರಲ್ವಾ ಅಥವಾ ಮುಂದಿನ ದಿನದಲ್ಲಿ OTT ಪ್ರೋಮೋ ಬರುತ್ತಾ ಎಂದು ಕಾದುನೋಡಬೇಕು. ಬಿಗ್ ಬಾಸ್ ಶುರುವಾಗುತ್ತಿರುವುದು ಸಾಕಷ್ಟು ವೀಕ್ಷಕರಿಗೆ ಇಷ್ಟವಾದರೆ ಇನ್ನಷ್ಟು ವೀಕ್ಷಕರಿಗೆ ಬಿಗ್ ಬಾಸ್ ಬಂದರೆ ಯಾವ ಧಾರಾವಾಹಿ ಮುಕ್ತಾಯವಾಗುತ್ತದೆ ಎಂದು ಬೇಸರ ಕೂಡ ಆಗುತ್ತದೆ.

ಇದನ್ನೂ ಓದಿ: ದರ್ಶನ್ ಬಗ್ಗೆ ಮನ ಬಿಚ್ಚಿ ಸುದೀಪ್ ಮಾತಾನಾಡಿದ್ದೇನು ಗೊತ್ತಾ? ನೀವಿಬ್ಬರು ಒಂದಾಗಿ ಅಂತ ಹೇಳಿದೋರಿಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಯಾವಾಗ ಬರುತ್ತೆ ಬಿಗ್ ಬಾಸ್?

ಈ ಸಲ ಬಿಗ್ ಬಾಸ್ ಮನೆಗೆ ಘಟಾನುಘಟಿಗಳೆ ಬರುತ್ತಾರೆ ಎಂದು ಸುದ್ದಿಗಳು ಆಗುತ್ತಿದೆ. ಕಲಾವಿದರು, ಸೋಶಿಯಲ್ ಮೀಡಿಯಾ ‍ಸ್ಟಾರ್ ಸ್ , ಮತ್ತು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಬಿಗ್ ಬಿ ಮನೆಗೆ ಎಂಟ್ರಿ ಕೊಡುತ್ತಾರಂತೆ. ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ಮನೆ ಒಳಗಡೆಗಿಂತ ಹೊರಗಡೆಯೇ ಸಾಕಷ್ಟು ಕಾಂಟ್ರವರ್ಸಿಗಳು ಆಗಿದ್ದವು. ಕಲರ್ಸ್ ಕನ್ನಡ ವಾಹಿನಿಯು ಈಗ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸಜ್ಜಾಗಿದು ಸೆಪ್ಟೆಂಬರ್ ನ ಮೂರು ಅಥವಾ ನಾಲ್ಕನೇ ವಾರದಲ್ಲಿ ಅನುಬಂಧ ಟಿವಿಯಲ್ಲಿ ಬರುತ್ತಿದು ಈ ಕಾರ್ಯಕ್ರಮ ಮುಗಿದ ಬಳಿಕ ಬಿಗ್ ಬಾಸ್ ಶುರುವಾಗಲಿದೆ. ಮುಂದಿನ ಪ್ರೋಮೋಗಳಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಬಿಗ್ ಬಿ ನೋಡಲು ಬಿಗ್ ಬಾಸ್ ಅಭಿಮಾನಿಗಳು ಕಾಯುತ್ತಿದ್ದಾರೆ ಅಂತಾನೇ ಹೇಳಬಹುದು.

ಇದನ್ನೂ ಓದಿ: ಡಿಕೆಡಿ ಶೋಗೆ ವಾಪಸ್ ಎಂಟ್ರಿ ಕೊಟ್ಟ ರಾಘು! ಶೋಗೆ ಬಂದ ರಾಘು ನ ನೋಡಿ ಶಿವಣ್ಣ ಹೇಳಿದ್ದೇನು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram