ಬಿಗ್ ಬಾಸ್ ಶೋ ಲಕ್ಷಾಂತರ ಜನರ ಫೇವರೇಟ್ ಶೋ ದಿನವೂ ಬಿಗ್ ಬಾಸ್ ನಲ್ಲಿ ಏನೇನು ಆಗಿದೆ ಎಂಬುದರ ಅಪ್ಡೇಟ್ ಸೋಶಿಯಲ್ ಮೀಡಿಯಾ ದಲ್ಲಿ ಹಾಕಲು ತುದಿಗಾಲಿನಲ್ಲಿ ಇರುತ್ತಾರೆ. Troll pages ಅಂತು ದಿನಕ್ಕೆ ಒಬ್ಬೊಬ್ಬರ ಬಗ್ಗೆ ಟೀಕೆ ಮಾಡುವುದು, ಹೊಗಳುವುದು, ಇದ್ದೆ ಇರುತ್ತದೆ. ಬಿಗ್ ಬಾಸ್ ನೋಡಲು ಇಷ್ಟ ಇಲ್ಲದೆ ಇದ್ದವರು ಸಹಾ ಕಿಚ್ಚ ಸುದೀಪ್ ಅವರ ಮಾತು ಕೇಳಲು ಶನಿವಾರ ಮತ್ತು ಭಾನುವಾರ ಮಾತ್ರ ಬಿಗ್ ಬಾಸ್ ನೋಡುವವರು ಸಹ ಇದ್ದಾರೆ. ಜನವರಿ 27 ಮತ್ತು 28 ರಂದು ಬಿಗ್ ಬಾಸ್ ಬಾಸ್ ಗ್ರಾಂಡ್ ಫೈನಲ್ ನಡೆಯಿತು. ಸಂಗೀತಾ, ಪ್ರತಾಪ್, ವಿನಯ್, ಕಾರ್ತಿಕ್, ತಕಾಲಿ ಸಂತೋಷ್, ಹಾಗೂ ವರ್ತೂರ್ ಸಂತೋಷ್ ಫೈನಲಿಸ್ಟ್ ಆಗಿದ್ದರು.
ಬಿಗ್ ಬಾಸ್ ರನ್ನರ್ ಅಪ್ ಗೆ ಸಿಕ್ಕಿರುವ ಬಹುಮಾನ ಗಳೇನು?: ಬಿಗ್ ಬಾಸ್ ಹತ್ತರ ಐದನೇ ರನ್ನರ್ ಅಪ್ ತುಕಾಲಿ ಸಂತೋಷ್ ಅವರಿಗೆ 2 ಲಕ್ಷ ರೂಪಾಯಿ ಹಣ ಬಹುಮಾನವಾಗಿ ಸಿಕ್ಕಿದೆ. ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ವರ್ತೂರ್ ಸಂತೋಷ್ ಅವರಿಗೆ ಎರಡು ಲಕ್ಷ ರೂಪಾಯಿ ಸಿಕ್ಕಿದೆ. ಇವರೇ winner ಎಂದು ಎಲ್ಲರೂ ಹೇಳುತ್ತಿದ್ದರು ಆದರೆ ಎಲ್ಲರಿಗೂ ಶಾಕ್ ಆಗುವಂತೆ ಮೂರನೇ ರನ್ನರ್ ಅಪ್ ಅನೌನ್ಸ್ ಮಾಡಿದ್ದು ವಿನಯ್ ಅವರನ್ನು. ವಿನಯ್ ಅವರಿಗೆ ಸಿಕ್ಕಿರುವ ಬಹುಮಾನ ಐದು ಲಕ್ಷ ರೂಪಾಯಿ. ಟಾಪ್ 3 ಫೈನಲಿಸ್ಟ್ ಆಗಿ ವಿನ್ನರ್ ಯಾರು ಎಂಬ ಕುತೂಹಲದಲ್ಲಿ ಇದ್ದಾಗ ಸಂಗೀತ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದರು. ಸಂಗೀತಾ ಅವರಿಗೆ 7 ಲಕ್ಷ ರೂಪಾಯಿ ಸಿಕ್ಕಿದೆ.
BigBoss Season 10 ರ ವಿನ್ನರ್ ಯಾರೆಂದು ಕುತೂಹಲದಲ್ಲಿ ಇದ್ದಾಗ ಕಾರ್ತಿಕ್ ಮಹೇಶ್ ಅವರು ವಿನ್ನರ್ ಆಗಿ ಹೊರಹೊಮ್ಮಿದರು. ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಹಾಗೂ ಬೌನ್ಸ್ ಬೈಕ್ ಬಹುಮಾನವಾಗಿ ಸಿಕ್ಕಿದೆ. ವಿನ್ನರ್ ಆದ ಕಾರ್ತಿಕ್ ಮಹೇಶ್ ಅವರಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಹಾಗೂ ಮಾರುತಿ ಸುಜುಕಿ ಬ್ರೇಜಾ ಕಾರು , ಮತ್ತು ಒಂದು ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಿದೆ. ಇದರ ಜೊತೆ ಇನ್ನಷ್ಟು ಚಿಕ್ಕಪುಟ್ಟ ಬಹುಮಾನಗಳು ಸಹ ಸಿಕ್ಕಿವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಟೈಟಲ್ ವಿನ್ನರ್ ಕಾರ್ತಿಕ್ ಮಹೇಶ್ ಯಾರು?
ಕಾರ್ತಿಕ್ ಮಹೇಶ್ ಅವರು ಈಗಾಗಲೇ ನಟರಾಗಿ ಎಲ್ಲರೂ ಪರಿಚಿತಾಗಿದ್ದರೆ. ಇವರು ಮೈಸೂರಿನವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಪದವಿಪಡೆದು, ನಟನಾಗುವ ಆಸೆಯಿಂದ ಬೆಂಗಳೂರಿಗೆ ಬಂದರು. ಮಾಡಲಿಂಗ್ ಕ್ಷೇತ್ರದಲ್ಲಿ ಮೊದಲು ಗುರುತಿಸಿಕೊಂಡ ಇವರು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡ ದ ಟಾಪ್ ಧಾರಾವಾಹಿ ಅಕ್ಕ, ಸುವರ್ಣ ಚಾನೆಲ್ ನಲ್ಲಿ ಪ್ರಸಾರಗೊಂಡ ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ, ಇತ್ತೀಚಿಗೆ ಅಂತರಪಟ ಧಾರವಾಹಿಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಇವರು ಸಿನಿ ರಂಗದಲ್ಲಿ ಹೆಜ್ಜೆಯಿಟ್ಟು ಸಾಗರ್ ಪುರಾಣಿಕ ಅವರ ನಿರ್ದೇಶನದ ‘ಡೊಳ್ಳು’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 10 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿ ದರ ನಂಬಲಾಗದಷ್ಟು ಕಡಿಮೆ! ಸರ್ಕಾರದ ಬೃಹತ್ ಪ್ರಯೋಜನಗಳನ್ನು ಪಡೆದುಕೊಳ್ಳಿ
ಇದನ್ನೂ ಓದಿ: ಜನವರಿ 29 ರಂದು ಬಿಡುಗಡೆಗೊಳ್ಳಲಿರುವ Realme 12 Pro ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಿರಿ