ಬಿಗ್ ಬಾಸ್ ಗ್ರಾಂಡ್ ಪ್ರೀಮಿಯರ್ ಶುರು; ರಕ್ಷಕ್ ಹಾಗೂ ಡ್ರೋನ್ ಪ್ರತಾಪ್ ಗೆ ನೇರವಾಗಿ ಪ್ರಶ್ನೆ ಮಾಡಿದ ಸುದೀಪ್

ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಟಿ ಆರ್ ಪಿ ಪಡೆದುಕೊಂಡು ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡುವ ಪಕ್ಕ ಹಬ್ಬದ ರಾಸದೌತಣ ಉಣಬಡಿಸುವ ಕಾರ್ಯಕ್ರಮ ಅಥವಾ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್(Big Boss). ಹೌದು ಇಂದಿನಿಂದ ಪ್ರೇಕ್ಷಕರಿಗೆ ಹಬ್ಬ ಶುರುವಾದಂತೆ ಲೆಕ್ಕ. ಹೌದು ಇಂದಿನಿಂದ ಬಹುನೀರಿಕ್ಷಿತ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಲಿದೆ. ಬಿಗ್‌ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಈ ಬೆನ್ನಲ್ಲೇ ಮನೆಯೊಳಗೆ ಎಂಟ್ರಿ ಕೊಟ್ಟ ಕೆಲವರ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಸಂಬಂಧ ವೈರಲ್ ಆಗಿರೋ ಒಂದು ಪ್ರೋಮೊ ಸಖತ್ ವೈರಲ್ ಆಗಿದ್ದು ಬಿಗ್ ಬಾಸ್ ಮನೆಯೊಳಗಿನ ಎಂಟ್ರಿ ಅಷ್ಟು ಸುಲಭ ಅಲ್ಲ ಅನ್ನೋದನ್ನ ಸರಿ ಹೇಳ್ತಿದೆ. ಹೌದು ಈ ಬಾರಿ ಹತ್ತನೇ ಸೀಸನ್‌ ಆದ ಕಾರಣ ಒಂದು ವಿಶೇಷವಿದೆ ಎಂದು ಬಿಗ್‌ ಬಾಸ್‌ ತಂಡ ತಿಳಿಸಿತ್ತು.

WhatsApp Group Join Now
Telegram Group Join Now

ಹಾಗೆಯೇ ಈ ಸಲ ಇನೋವೇಟಿವ್ ಫಿಲ್ಮ್ ಸಿಟಿ ಬಿಟ್ಟು ದೊಡ್ಡ ಆಲದ ಮರದ ಬಳಿ ಬಿಗ್‌ ಬಾಸ್‌ ಮನೆಯ ಸೆಟ್ ಹಾಕಲಾಗಿದೆ. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಾಣವಾಗಿದ್ದು, ಅಲ್ಲಿಯೇ ಬಿಗ್‌ ಬಾಸ್‌ ನಡೆಯಲಿದೆ. ಇನ್ನು ಇಂದು ಸಂಜೆ 6 ಗಂಟೆಗೆ ಬಿಗ್‌ಬಾಸ್ ಕನ್ನಡ ಸೀಸನ್ 10ರ(BigBoss Season 10) ಗ್ರ್ಯಾಂಡ್ ಪ್ರೀಮಿಯರ್ ಆರಂಭವಾಗಲಿದೆ. ಆಗ ಯಾರೆಲ್ಲ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ ಎಂಬ ಖಚಿತ ಮಾಹಿತಿ ಸಿಗಲಿದೆ. ಜೊತೆಗೆ ಸೋಮವಾರದಿಂದ 100 ದಿನಗಳ ಅಸಲಿ ಆಟ ಶುರುವಾಗಲಿದೆ. ಆದ್ರೆ ಈಗ ವೈರಲ್ ಆಗಿರೋ ಒಂದು ಪ್ರೊಮೊದಲ್ಲಿ 3ವರ ಹೆಸರು ಇದ್ದು ಅದ್ರಲ್ಲಿ ಯಾರು ಬಿಗ್ ಬಿ ಮನೆಗೆ ಎಂಟ್ರಿ ಕೊಡ್ತಾರೆ ಅನ್ನೋದು ಸದ್ಯದ ಕುತೂಹಲ.

Image Credit: Colors Kannada

ಜನರು ಅತ್ಯಂತ ಕುತೂಹಲದಲ್ಲಿ ಕಾಯುತ್ತಿರುವ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಎಲ್ಲಾ ಭಾಷೆಗಳಲ್ಲಿ ತನ್ನ ಜನಪ್ರಿಯತೆಯನ್ನು ಗಳಿಸಿದೆ. ಅದೇ ರೀತಿ ಕನ್ನಡದಲ್ಲಿ ಇಂದಿನಿಂದ ಬಿಗ್​ ಬಾಸ್​ ಸೀಸನ್ 10 ಆರಂಭವಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಕನ್ನಡ ಕಿರುತೆರೆ ವೀಕ್ಷಕರಿಗೆ ವಿಶೇಷ ರಿಯಾಲಿಟಿ ಶೋ ಆಗಲಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳನ್ನು ಹೊತ್ತು ಬರಲಿದೆ. ಈ ಹಿಂದಿನ 9 ಸೀಸನ್‌ಗಳಿಗೆ ಹೋಲಿಸಿದೆ ಈ ಸೀಸನ್ ವಿಶೇಷವಾಗಿರುತ್ತೆ. ಅಲ್ಲದೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಿಂದ ಹಿಡಿದ ಅವರನ್ನು ಮನೆಯೊಳಗೆ ಕಳುಹಿಸುವ ಹಂತದವರೆಗೂ ಕಿರುತೆರೆ ವೀಕ್ಷಕರಿಗೆ ಸರ್ಪ್ರೈಸ್ ಹಾಕಿದೆ.

ಇನ್ನು ಬಿಗ್ ಬಾಸ್ ಮನೆಯೊಳಗೆ ವಿಭಿನ್ನ ಮನ:ಸ್ಥಿತಿ ಸೆಲೆಬ್ರೆಟಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಸೋಮವಾರದಿಂದ 100 ದಿನಗಳ ಕಾಲ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಇರುತ್ತಾರೆ. ವಾರಕ್ಕೊಬ್ಬರು ಎಲಿಮಿನೇಟ್ ಆಗುತ್ತಾರೆ. ಕೊನೆಯವರೆಗೂ ಉಳಿದುಕೊಂಡವರಲ್ಲಿ ಒಬ್ಬರು ಬಿಗ್‌ಬಾಸ್ ಕನ್ನಡ ಸೀಸನ್ 10 ಟ್ರೋಫಿಗೆ ಮುತ್ತಿಡಲಿದ್ದಾರೆ. ವಿನ್ನರ್‌ಗೆ 50 ಲಕ್ಷ ರೂ. ಬಹುಮಾನದ ಹಣ ಸಿಗಲಿದೆ. ರನ್ನರ್ ಅಪ್‌ಗಳಿಗೂ ಬಹುಮಾನಗಳು ಸಿಗಲಿವೆ. ಹೀಗಾಗಿ ಈ ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಸ್ಪೆಷಲ್ ಎಂದು ಆಯೋಜಕರು ಹೇಳಿದ್ದರು ಅದ್ರಂತೆ ವೈರಲ್ ಆಗಿರೋ ಪ್ರೋಮೊ ನಿಜಕ್ಕೂ ವಿಭಿನ್ನ ಅನ್ನಬಹುದು.

ವೈರಲ್ ಆಯ್ತು ಮೂವರು ಸ್ಪರ್ಧೆಗಳಿರುವ ಪ್ರೋಮೊ

ಸ್ನೇಹಿತರೆ ಈಗ ರಿಲೀಸ್ ಆಗಿರೋ ಈ ಪ್ರೊಮೋ ದಲ್ಲಿ ದಿವಗಂತ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ ಬುಲೆಟ್ ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳುಗಳ ಮೂಲಕ ಸಾಕಷ್ಟು ಪಬ್ಲಿಸಿಟಿ ಪಡೆದುಕೊಂಡಿದ್ದ ಡ್ರೋನ್ ಪ್ರತಾಪ್ ಇದರ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ವರ್ತೂರ್ ಸಂತೋಷ್ ಎಂಟ್ರಿ ಕೊಟ್ಟಿರೋದನ್ನ ನೋಡಬಹುದು. ಬಂದಂತಹ ಈ ಮೂರು ಜನ ಸ್ಪರ್ಧಿಗಳಿಗೂ ಕೂಡ ಕಿಚ್ಚ ಸುದೀಪ್(Kiccha Sudeep) ಅಷ್ಟೇ ಅದ್ದೂರಿಯಾಗಿ ವೆಲ್ಕಮ್ ಮಾಡಿರುವುದದ ನಾವಿಲ್ಲಿ ನೋಡಬಹುದು. ಆನಂತರ ಕಿಚ್ಚ ಸುದೀಪ್ ತಮ್ಮ ಮಾತಿನ ಚಾಟಿಯನ್ನು ಬೀಸಿದ್ದಾರೆ. ಹೌದು ಯಾವ ಯಾವ ಕ್ಷೇತ್ರದಿಂದ ಬಂದಿದ್ದೀರಾ ಅಂತ ನಿಮಗೆ ಮನೆಯೊಳಗೆ ಎಂಟ್ರಿ ಕೊಡಬೇಕು ಅಂತ ನೇರವಾಗಿ ಕೇಳ್ತಾರೆ. ನೀನು ಯಾವ ಕ್ಷೇತ್ರದಿಂದ ಬಂದಿದ್ಯ ಅಂತ ನಿನ್ನನ್ನು ಸ್ಪರ್ಧಿ ಮಾಡಿಕೊಳ್ಳಬೇಕು ಅನ್ನುವಂತ ಪ್ರಶ್ನೆ ಕೂಡ ರಕ್ಷಕ ಅವರ ಮುಂದೆ ಇಡ್ತಾರೆ, ಇನ್ನು ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದಂತಹ ಮತ್ತೊಬ್ಬ ಸ್ಪರ್ಧಿ ಅಂತ ಹೇಳಿದ್ರೆ ಅದು ಡ್ರೋನ್ ಪ್ರತಾಪ್. ಮೊದಮೊದಲಿಗೆ ಎಲ್ಲರಿಗೂ ಇಷ್ಟುವಾಗುತ್ತಿದ್ದ ಡ್ರೋನ್ ಪ್ರತಾಪ್ ಆನಂತರದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳಿಂದ ಅವಮಾನಕ್ಕೆ, ಟ್ರೋಲ್ಗೆ ಗುರಿಯಾದ್ರು.

ಇವರನ್ನು ಕೂಡ ನೀವು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳುಗಳಿಂದಲೇ ಸಾಕಷ್ಟು ಮುನ್ನೆಲೆಗೆ ಬಂದಿದ್ದೀರಾ ಅಲ್ವಾ ಅಂತ ಕಿಚ್ಚ ಸುದೀಪ್ ಕೇಳಿದ್ದಾರೆ. ಇನು ವರ್ತುರ್ ಸಂತೋಷ ಅವರು ಕೂಡ ಈ ಒಂದು ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು ಇವ್ರು ಮೂರು ಜನ್ರು ಕೂಡ ವೇದಿಕೆಯ ಮೇಲೆ ಬಂದ ನಂತರ, ಕಿಚ್ಚ ಸುದೀಪ್ ಒಂದು ಟಾಸ್ಕ್ ಅನ್ನ ಕೊಡ್ತಾರೆ. ಅದೇನಪ್ಪ ಅಂತ ಅಂದ್ರೆ ಅಲ್ಲಿರತಕ್ಕಂತಹ ವೀಕ್ಷಕ ಮಹಾಪ್ರಭುಗಳು ವೋಟಿಂಗ್ ಮಾಡುತ್ತಾರೆ, ಅದರಲ್ಲಿ 40% ಗಿಂತ ಮೇಲೆ ವೋಟಿಂಗ್ ಬಂದರೆ ಅಂತವರು ಮಾತ್ರ ಸೀಸನ್ 10ರ ಸ್ಪರ್ಧಿಗಳಾಗಿ ಬಿಗ್ ಬಿ ಮನೆಗೆ ಎಂಟ್ರಿ ಕೊಡ್ತಾರೆ. ಜೊತೆಗೆ ಕಡಿಮೆ ವೋಟಿಂಗ್ ಪಡುದುಕೊಂಡವರು ನೇರವಾಗಿ ಅವರವರ ಮನೆಗೆ ವಾಪಾಸ್ ಹೋಗ್ತಾರೆ ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಗೃಹಪ್ರವೇಶ ಮಾಡಲು ಯಾರೆಲ್ಲಾ ಬಲಗಾಲಿಟ್ಟು ಎಂಟ್ರಿ ಕೊಡ್ತಾರೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಗೃಹಲಕ್ಷ್ಮೀ 2ನೇ ಕಂತಿ ಹಣ ಯಾವಾಗ ಬರುತ್ತೆ ಗೊತ್ತಾ? ಮೊದಲ ಕಂತಿನ ಹಣ ಬರೆದೆ ಇರೋರು ಏನ್ ಮಾಡಬೇಕು?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram