ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ; ವಿಳಂಬ ಮಾಡೋರಿಗೆ ಶುಲ್ಕ ಹೆಚ್ಚಿಸಿದ ರಾಜ್ಯ ಸರ್ಕಾರ

ಜನನ-ಮರಣ ಪ್ರಮಾಣ ಪತ್ರ ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಜನನ ಮರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜನನ & ಮರಣ ಸಕ್ಷಮ ಪ್ರಾಧಿಕಾರದ ಎಲ್ಲಾ ಸ್ಥಳಿಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ ಕಡ್ಡಾಯವಾಗಿದೆ. ಆದ್ರೆ ಇದೀಗ ಈ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಸರಿಯಾದ ಸಮಯದಲ್ಲಿ ಅಥವಾ ಸಮಯಕ್ಕೆ ಸರಿಯಾಗಿ ಜನನ ಮತ್ತು ಮರಣ ನೋಂದಣಿ ಮಾಡಿಸಿಕೊಳ್ಳದಿದ್ರೆ ಹೆಚ್ಚುವರಿ ಶುಲ್ಕ ವಿಧಿಸುವಂತೆ ಸೂಚಿಸಿದೆ.

WhatsApp Group Join Now
Telegram Group Join Now

ಹೌದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಂತ ಜನತೆಗೆ, ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ ಅಂತಲೇ ಹೇಳಬಹುದು. ಹೌದು ಜನನ, ಮರಣ ನೋಂದಣಿ ವಿಳಂಬ ಶುಲ್ಕವನ್ನು ಹೆಚ್ಚಿಸಿ, ಅಧಿಕೃತ ಆದೇಶ ಹೊರಡಿಸಿದೆ. ಅಂದೇ ಜನನ ಮತ್ತು ಮರಣ ನೋಂದಣಿಗಳಲ್ಲಿ ತಡ ಮಾಡುದ್ರೆ ಹೆಚ್ಚುವರಿ ದಂಡ ವಸೂಲಿಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಜನನ ಮರಣ ನೊಂದಣಿ ತಡ ಮಾಡೋರಿಗೆ ಬಿಗ್ ಶಾಕ್

ಹೌದು ಭಾರತ ಸರ್ಕಾರದ ಜನನ, ಮರಣಗಳ ನೋಂದಣಿ ಅಧಿನಿಯಮ 2023ಕ್ಕೆ ಅನುಗುಣವಾಗಿ ಕರ್ನಾಟಕದಲ್ಲಿ ಜನನ, ಮರಣಗಳ ನೋಂದಣಿ ನಿಯಮ 9ಕ್ಕೆ, ತಿದ್ದುಪಡಿ ಮಾಡಿ, ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 2023 ರನ್ನು ಉಲ್ಲೇಖ ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ. ಈ ಅಧಿಸೂಚನೆಯನ್ವಯ ಒಂದು ವರ್ಷದ ನಂತರ ನೋಂದಾಯಿಸುವ ಜನನ, ಮರಣ ಘಟನೆಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಯ ಆದೇಶದ ಬದಲಿಗೆ ಇನ್ನು ಮುಂದೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಯವರ ಆದೇಶವನ್ನು ಪಡೆಯುವ ಬಗ್ಗೆ ಹಾಗೂ ವಿಳಂಬ ಶುಲ್ಕವನ್ನು ಕ್ರಮವಾಗಿ ನಿಯಮ 9(1), 9(2) ಮತ್ತು 9(3)ಕ್ಕೆ ರೂ.100/-, ರೂ.200/- ಮತ್ತು ರೂ.500/- ಗಳಿಗೆ ಪರಿಷ್ಕರಿಸಲಾಗಿದೆ. ಸದರಿ ಅಧಿಸೂಚನೆಯ ಲಭ್ಯವಾಗಿದ್ದು, ಈ ಕುರಿತು ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಪ್ರಭಾರ ನಿರ್ದೇಶಕರು ಎಲ್ಲಾ ಜಿಲ್ಲಾಧಿಕಾರಿಗಳು, ಜನನ, ಮರಣ ನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಆದೇಶ ಪ್ರತಿಯಲ್ಲಿ ಏನಿದೆ ಅಂದ್ರೆ, ಜನನ, ಮರಣ ಘಟಿಸಿದ 21 ದಿನಗಳ ನಂತ್ರ ಹಾಗೂ 30 ದಿನಗಳೊಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಹಾಲಿ ಶುಲ್ಕ ರೂ.2ರಿಂದ ರೂ.100ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗೂ ಜನನ, ಮರಣ ಘಟಿಸಿದ 30 ದಿನಗಳ ನಂತ್ರ ಹಾಗೂ 1 ವರ್ಷದ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು ರೂ.5 ರಿಂದ 200ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಜನನ, ಮರಣ ಘಟಿಸಿದ 1 ವರ್ಷದ ನಂತರದ ವಿಳಂಬ ನೋಂದಣಿ ಶುಲ್ಕವನ್ನು ಹಾಲಿ ಇರುವ ರೂ.10ರಿಂದ ರೂ.500ಕ್ಕೆ ಪರಿಷ್ಕರಿಸಲಾಗಿದೆ. ಅಂದಹಾಗೇ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜನನ, ಮರಣ ನೋಂದಣಿ ನಿಯಮಗಳು 1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲು ಅನುಮೋದಿಸಿತ್ತು.

ಅದರಂತೆ ಇದೀಗ ಅಧಿಕೃತವಾಗಿ ವಿಳಂಬ ಶುಲ್ಕವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಇನ್ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನ ನಿಧಾನವಾಗಿ ಮಾಡಿಸಿಕೊಂಡ್ರೆ ಆಯ್ತು ಬಿಡು ಅಥವಾ ಅಗತ್ಯ ಬಿದ್ದಾಗ ಮಾಡಿಸೋಣ ಅಂತ ಸುಮ್ಮನಾಗುವ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆಯಾಗಿದ್ದು, ಆಯಾ ಕೆಲ್ಸಗಳನ್ನ ಸರಿಯಾದ ಸಮಯಕ್ಕೆ ಮಾಡಿಸಿಕೊಂಡಲ್ಲಿ ಮಾತ್ರ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲವಾದಲ್ಲಿ ಸರ್ಕಾರಿ ಫೀಜ್ ಜೊತೆಗೆ ಮತ್ತಷ್ಟು ಹೆಚ್ಚಿನ ಶುಲ್ಕ ಪಾವತಿ ಮಾಡಲೇಬೇಕಾದ ಸ್ಥಿತಿ ಇದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, SBIF ಆಶಾ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ವಾರ್ಷಿಕ ವೇತನ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram