ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ಹುದ್ದೆಯೂ ಖಾಲಿ ಇದೆ. ನಿರ್ವಾಹಕ ಹುದ್ದೆಯಲ್ಲಿ ಕೆಲಸ ಮಾಡಲು ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ಪ್ರಕಟಣೆಯನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲಾಖೆಯು ತಿಳಿಸಿದೆ.
ಹುದ್ದೆಯ ಬಗ್ಗೆ ಪೂರ್ಣ ವಿವರ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 2500 ಕಂಡಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಎಸೆಸೆಲ್ಸಿ ನಂತರ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಪೂರ್ಣ ಗೊಳಿಸಿರಬೇಕು. ಇದರ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಸಂಸ್ಥೆಯ ನಿಯಮದ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವವ ಪುರುಷ ಅಭ್ಯರ್ಥಿಗಳ ಎತ್ತರ 160 CM ಹಾಗೂ ಮಹಿಳೆಯರ ಎತ್ತರ 150 CM ಎತ್ತರ ಇರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ:- ಅರ್ಜಿ ಸಲ್ಲಿಸಲು 10-04-2024 ಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಡಿರಬೇಕು. ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿಯೂ ಜಾತಿ ವರ್ಗದ ಪ್ರಕಾರ ನಿಗದಿ ಪಡಿಸಲಾಗಿದೆ. ಇಲಾಖೆಯ ನಿಯಮದ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2A , 2B , 3A , 3B ಅಭ್ಯರ್ಥಿಗಳಿಗೆ 38 ವರ್ಷ, ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಹಾಗೂ ಮಾಜಿ ಸೈನಿಕ ಹಾಗೂ ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ಮಿತಿ ಇದೆ.3
ವೇತನ ವಿವರ :- ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ಟ್ರೇನಿಂಗ್ ಪೀರಿಯಡ್ ಇರುತ್ತದೆ ಆ ಸಮಯದಲ್ಲಿ 9,100 ರೂಪಾಯಿ ಭತ್ಯೆ ನೀಡಲಾಗುವುದು.
ಇದನ್ನೂ ಓದಿ: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ
ಅರ್ಜಿ ಸಲ್ಲಿಸುವ ವಿಧಾನ :-
ಮಾರ್ಚ್ 10 ರಂದು ಅರ್ಜಿ ನಮೂನೆ ಓಪನ್ ಆಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕದ ವಿವರ :- ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 750 ರೂಪಾಯಿ ಫೀಸ್ ಕಟ್ಟಬೇಕು. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳು 500 ರೂಪಾಯಿ ಫೀಸ್ ಕಟ್ಟಬೇಕು. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
ನಿರ್ವಾಹಕ ಹುದ್ದೆಯ ನೇಮಕಾತಿ ನಡೆಯುವ ಪ್ರಕ್ರಿಯೆ :- ಇಲಾಖೆ ನಡೆಸುವ ಲಿಖಿತ ಪರೀಕ್ಷೆ ಅಂಕಗಳು ಹಾಗೂ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಹಾಗೂ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ ಮಾರ್ಚ್ 10 2024 ಹಾಗೂ ಕೊನೆಯ ದಿನಾಂಕ ಏಪ್ರಿಲ್ 10 2024 ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಏಪ್ರಿಲ್ 13 2024.
ವಿಶೇಷ ಸೂಚನೆ :- ಮುಕ್ತ ಶಾಲೆ ಅಥವಾ ಮುಕ್ತ ವಿವಿಯಿಂದ ಪಿಯುಸಿಯನ್ನು ಮುಗಿಸಿದ ಅಥವಾ ಜೆಒಸಿ ,ಜೆಎಲ್‌ಸಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದರು ಸಲ್ಲಿಸಲು ಅರ್ಹರಲ್ಲ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತದ ಅತ್ಯಂತ ವೇಗವಾಗಿ ಚಾರ್ಜ್ ಆಗುವ 5G ಫೋನ್! ಯಾವುದು ಎಂದು ತಿಳಿಯಬೇಕಾ? ಇಲ್ಲಿದೆ ನೋಡಿ Vivo Y100t 5G