BMTC 2500 ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಪ್ಲಿಕೇಶನ್ ಲಿಂಕ್ ಬಿಡುಗಡೆ ಮಾಡಿದೆ.

BMTC Conductor Recruitment 2024

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ್ದ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಲಿಂಕ್‌ ಅನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡುವ ವಿಧಾನ ಹಾಗೂ ಹುದ್ದೆಗೆ ಬಗ್ಗೆ ಪೂರ್ಣ ವಿವರಗಳು ಇಲ್ಲಿವೆ.

WhatsApp Group Join Now
Telegram Group Join Now

ಹುದ್ದೆಯ ಬಗ್ಗೆ ವಿವರಗಳು :- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉಳಿಕೆ ವೃಂದದ 2286 ನಿರ್ವಾಹಕ ಹುದ್ದೆ ಹಾಗೂ ಸ್ಥಳೀಯ ವೃಂದದಲ್ಲಿ 214 ನಿರ್ವಾಹಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯ ಪಡೆದ ವಿದ್ಯಾಲಯದಿಂದ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಇಲ್ಲವೇ ಮೂರು ವರ್ಷದ ಡಿಪ್ಲೊಮಾ ಮೂಗಿಸಿರಬೇಕು.

ವಯಸ್ಸಿನ ವಿವರಗಳು :- ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಆಗಿರಬೇಕು. ಹಾಗೂ ಗರಿಷ್ಠ ವಯಸ್ಸು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, 2A ಅಥವಾ 2B ಅಥವಾ 3A ಅಥವಾ 3B ವರ್ಗದ ಅಭ್ಯರ್ಥಿಯಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದ ಹಾಗೂ ಪ್ರವರ್ಗ -1 ರ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸಿನ ಮಿತಿ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎತ್ತರ ನಿಯಮ :- ಹುದ್ದೆಗೆ ಅರ್ಜಿ ಸಲ್ಲಿಸುವ ಪುರುಷ ಅಭ್ಯರ್ಥಿಗಳ ಕನಿಷ್ಠ ಎತ್ತರ 160 ಸೆಂ. ಮೀ. ಹಾಗೂ ಮಹಿಳಾ ಅಭ್ಯರ್ಥಿಗಳ ಕನಿಷ್ಠ ಎತ್ತರ 150 ಸೆಂ. ಮೀ.

ಮಾಸಿಕ ವೇತನ :- ಬಿಎಂಟಿಸಿ ನಿರ್ವಾಹಕ ಹುದ್ದೆಗೆ ಮಾಸಿಕ ವೇತನ 18,660 ರೂಪಾಯಿಯಿಂದ 25,300 ರೂಪಾಯಿ ಆಗಿರುತ್ತದೆ.

ಇದನ್ನೂ ಓದಿ: ಆಂಪಿಯರ್ ನೆಕ್ಸಸ್ EV ಸ್ಕೂಟರ್, ಅತ್ಯುತ್ತಮ ಮೈಲೇಜ್ ನೊಂದಿಗೆ ಶಕ್ತಿಯುತ ಸವಾರಿ!

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :-

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-05-2024 ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19-05-2024.

ಅರ್ಜಿ ಶುಲ್ಕದ ವಿವರ :- ಜೆನೆರಲ್ ಕೆಟಗರಿ ಹಾಗೂ ಇತರೆ ಹಿಂದುಳಿದ ಪ್ರವರ್ಗಗಳ ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಹಾಗೂ ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ಪಾವತಿಸಬೇಕು. 

ಅರ್ಜಿ ಸಲ್ಲಿಸ ವಿಧಾನ :- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಲಿಂಕ್ ಓಪನ್ ಮಾಡಿ “BMTC ಆನ್‌ಲೈನ್ ಅಪ್ಲಿಕೇಶನ್ ಲಿಂಕ್ (NHK)” ಬಟನ್ ಕ್ಲಿಕ್ ಮಾಡಿ ಈಗಾಗಲೇ ನೋಂದಾಯಿತ ಅರ್ಜಿದಾರ ಆಗಿದ್ದರೆ ಅಪ್ಲಿಕೇಶನ್ ಸಂಖ್ಯೆ/RegNo ಹಾಗೂ ನಿಮ್ಮ ಹೆಸರಿನ ಮೊದಲ 5 ಅಕ್ಷರಗಳನ್ನು ಬಳಸಿಕೊಂಡು ಪೋರ್ಟಲ್‌ಗೆ ಲಾಗಿನ್ ಮಾಡಬೇಕು. ಹಾಗೂ ಇಲ್ಲವೇ ಇಲಾಖೆ ಹಾಗೂ ಅರ್ಜಿ ಸಲ್ಲಿಸುವ ಪೋಸ್ಟ್ ಹಾಗೂ ಸ್ಕ್ಯಾನ್ ಮಾಡಿದ ಭಾವಚಿತ್ರ ಹಾಗೂ ನಿಮ್ಮ ಸಿಗ್ನೇಚರ್ ಹಾಕಿ ರಿಜಿಸ್ಟರ್ ಆಗಿ. ನಂತರ ಅಪ್ಲಿಕೇಶನ್ ಲಿಂಕ್ ನಲ್ಲಿ ನಿಮ್ಮ ಹೆಸರು ವಿಳಾಸ ನೀವು ಹುಟ್ಟಿದ ದಿನಾಂಕ, ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ವಿದ್ಯಾರ್ಹತೆ ಎಲ್ಲವನ್ನೂ ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಯಾವುದೇ ತಪ್ಪು ಮಾಹಿತಿ ನೀಡಿದರೆ ನಿಮ್ಮ ಅರ್ಜಿ ತಿರಸ್ಕಾರ ಆಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಇನ್ನೂ ಮುಂದೆ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ ಗಂಧದಗುಡಿ ಅಗರಬತ್ತಿ; ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್..