ಯುವಕ-ಯುವತಿಯರೇ ಗಮನಿಸಿ; BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

BMTC Free Driving Training

ಯಾವುದೇ ವಾಹನವನ್ನು ಓಡಿಸುವ ಮೊದಲು ಹೇಗೆ ಓಡಿಸಬೇಕು ಹಾಗೂ ರಸ್ತೆಯ ನಿಯಮಗಳು ಏನು ಎಂಬುದನ್ನು ಕಲಿಯಬೇಕು. ಕಲಿಯಬೇಕು ಎಂದರೆ ಯಾವುದಾದರೂ ಒಂದು ಡ್ರೈವಿಂಗ್ ಕ್ಲಾಸ್ ಗೆ ಜಾಯಿನ್ ಆಗಬೇಕು. ಪ್ರೈವೇಟ್ ನಲ್ಲಿ ಕಾರ್ ಡ್ರೈವಿಂಗ್ ಅಥವಾ ಲಾರಿ, ಬಸ್ ಡ್ರೈವಿಂಗ್ ಕಲಿಸಲು ಸಾವಿರಾರು ರೂಪಾಯಿ ಫೀಸ್ ಕಟ್ಟಬೇಕು. ಮಧ್ಯಮ ವರ್ಗದ ಹಾಗೂ ಬಡ ವರ್ಗದ ಜನರಿಗೆ ಅಷ್ಟೊಂದು ಹಣವನ್ನು ಕೊಟ್ಟು ಡ್ರೈವಿಂಗ್ ಕಲಿಯುವುದು ಕಷ್ಟ ಆಗುತ್ತದೆ. ಹಾಗೂ ಪ್ರೈವೇಟ್ ಡ್ರೈವಿಂಗ್ ಸ್ಕೂಲ್ ನವರು ಹಣಕ್ಕಾಗಿ ಅರ್ಧ ಕಲಿಸಿ ಪರವಾನಿಗೆ ಪತ್ರವನ್ನು ಹಣ ನೀಡಿ ಕೊಡಿಸಿ ಬಿಡುತ್ತಾರೆ. ಆದರೆ ಪೂರ್ಣ ಮಾಹಿತಿ ಇಲ್ಲದೆ ಯಾವುದೇ ವಾಹನವನ್ನು ಓಡಿಸಿದರೆ ಅಪಾಯ ಆಗುವ ಸಾಧ್ಯತೆ ಹೆಚ್ಚು. ಇವೆಲ್ಲ ಅಂಶಗಳನ್ನು ಗಮನಿಸಿದ ಸರ್ಕಾರ ಉಚಿತವಾಗಿ ಯುವಕ ಯುವತಿಯರಿಗೆ ತರಬೇತಿ ನೀಡಲು ಮುಂದಾಗಿದೆ.

WhatsApp Group Join Now
Telegram Group Join Now

ತರಬೇತಿ ಎಲ್ಲಿ ನಡೆಯುತ್ತದೆ?: ಬಿಎಂಟಿಸಿ ವತಿಯಿಂದ ತರಬೇತಿ ನಡೆಯುತ್ತಿದೆ. ಬೆಂಗಳೂರಿನ ವಡ್ದರಹಳ್ಳಿಯಲ್ಲಿ ಈ ತರಬೇತಿಯನ್ನು ನಡೆಸಲಾಗುತ್ತದೆ. 30 ದಿನಗಳ ಕ್ಲಾಸ್ ಇದಾಗಿದೆ. ಸುಲಿಗೆ ಮಾಡುವ ಪ್ರೈವೇಟ್ ಡ್ರೈವಿಂಗ್ ಸ್ಕೂಲ್ ಗಳಿಗೆ ಕಡಿವಾಣ ಹಾಕಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನ ಭಾಗವಹಿಸಬಹುದು. ಹೊರ ಜಿಲ್ಲೆಯಿಂದ ಬರುವ ಅಭ್ಯರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ತರಬೇತಿಯಿಂದ ಆಗುವ ಉಪಯೋಗಗಳು ಏನು?

  • ಉಚಿತವಾಗಿ ತರಬೇತಿ ಇರುವುದರಿಂದ ಮಧ್ಯಮ ವರ್ಗದ ಹಾಗೂ ಬಡ ವರ್ಗದ ಜನರಿಗೆ ಆರ್ಥಿಕ ಹೊರೆ ಇಲ್ಲದೆಯೇ ಡ್ರೈವಿಂಗ್ ಕಲಿಯಬಹುದು.
  • ಸ್ವಂತ ಕ್ಯಾಬ್ ಉದ್ಯಮ ನಡೆಸಲು ಇಚ್ಛಿಸುವ ಯುವಕರಿಗೆ ಇದು ಉಪಯೋಗ ಆಗಲಿದೆ.
  • ಡ್ರೈವಿಂಗ್ ಲೈಸೆನ್ಸ್ ಸಹ ಉಚಿತವಾಗಿ ಪಡೆಯುವ ವ್ಯವಸ್ಥೆ ಇರುವುದರಿಂದ ಸಾವಿರಾರು ರೂಪಾಯಿ ಲೈಸೆನ್ಸ್ ಪಡೆಯಲು ಹಣವನ್ನು ನೀಡಬೇಕಾಗಿಲ್ಲ.
  • ಸಾರಿಗೆ ಸಂಸ್ಥೆಯ ಡ್ರೈವರ್ ಆಗಿ ನೇಮಕ ಆಗುವ ಸಾಧ್ಯತೆ ಇರುತ್ತದೆ.

ಡ್ರೈವಿಂಗ್ ಹೇಳಿಕೊಡುವ ರೋಡ್ ಗಳ ಬಗ್ಗೆ ಮಾಹಿತಿ :- ಡ್ರೈವಿಂಗ್ ಕ್ಲಾಸ್ ಗೆ ಬರುವ ಯುವಕ ಯುವತಿಯರಿಗೆ ಮೊದಲ ಮತ್ತು ಎರಡನೇ ವಾರದಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರದಲ್ಲಿಯೇ ಡ್ರೈವಿಂಗ್ ಹೇಳಿಕೊಡಲಾಗುವುದು. ಮೂರನೇ ವಾರದಲ್ಲಿ ಹಳ್ಳಿ ರಸ್ತೆಯಲ್ಲಿ ಡ್ರೈವಿಂಗ್ ಹೇಳಿಕೊಡಲಾಗುತ್ತದೆ. ಕೊನೆಯ ವಾರದಲ್ಲಿ ಟ್ರಾಫಿಕ್ ಇರುವ ಬೆಂಗಳೂರಿನ ನಗರದಲ್ಲಿ ಡ್ರೈವಿಂಗ್ ಹೇಳಿಕೊಡಲಾಗುತ್ತದೆ. 

ಡ್ರೈವಿಂಗ್ ಕ್ಲಾಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

Driving ಕ್ಲಾಸ್ ಸೇರುವ BPL Card ಹೊಂದಿರುವ ಯುವಕ ಯುವತಿಯರು ಬೆಂಗಳೂರಿನ ಶಾಂತಿನಗರ ಬಿಎಂಟಿಸಿ ಮುಖ್ಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹಾಗೂ ಎಸೆಸೆಲ್ಸಿ ಸರ್ಟಿಫಿಕೇಟ್ ಹಾಗೂ passport size photo ಸಲ್ಲಿಸಬೇಕು.

2023-24 ಸಾಲಿನಲ್ಲಿ 970 ಅಭ್ಯರ್ಥಿಗಳಿಗೆ ಡ್ರೈವಿಂಗ್ ಕ್ಲಾಸ್ ನಡೆಸಲು ಸರ್ಕಾರವು ಅನುಮತಿ ಸೂಚಿಸಿದೆ. ಜನವರಿ ತಿಂಗಳಲ್ಲಿ 104 ಜನರಿಗೆ ತರಬೇತಿ ನೀಡಿ ಉಚಿತ ಲೈಸೆನ್ಸ್ ಬಿಎಂಟಿಸಿ ವತಿಯಿಂದ ನೀಡಲಾಗಿದೆ. ಫೆಬ್ರುವರಿಯಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದಾರೆ. ಉಚಿತ ತರಬೇತಿ ಯೋಜನೆಯಿಂದ ಡ್ರೈವಿಂಗ್ ಕಲಿಯುವ ಬಡ ಕುಟುಂಬದ ಯುವಕರಿಗೆ ಬಹಳ ಉಪಯೋಗ ಆಗುತ್ತದೆ. ಹಾಗೂ ಬಿಎಂಟಿಸಿ ಚಾಲಕರ ನೇಮಕಾತಿಗೆ ಅನುಕೂಲ ಆಗುತ್ತದೆ. ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗ ಮಾಡಲೇ ಇಚ್ಛೆ ಇರುವ ಯುವಕ ಯುವತಿಯರು ಈಗಲೇ ಬೆಂಗಳೂರಿನ ಶಾಂತಿನಗರ ಬಿಎಂಟಿಸಿ ಮುಖ್ಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: 8GB RAM, ಹಾಗೂ 5000mAh ಬ್ಯಾಟರಿ ಹೊಂದಿರುವ ಈ ಫೋನ್ ನ್ನು ಕೇವಲ 6,999 ರೂಪಾಯಿಗೆ ಖರೀದಿಸಿ..

ಇದನ್ನೂ ಓದಿ: UPI ಮುಖಾಂತರ ನಿಮ್ಮ ಹಣವನ್ನು ತಪ್ಪಾಗಿ ಬೇರೆಯವರಿಗೆ ಕಳುಹಿಸಿದ್ದಾರೆ ಈ ರೀತಿ ವಾಪಸ್ ಪಡೆಯಿರಿ..