ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಕಾಲೇಜ್ ಗೆ ಪ್ರಯಾಣ ಮಾಡುವಂತೆ ಆಗಲಿ ಎಂದು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಬಸ್ ಪಾಸ್ ವಿತರಣೆ ಮಾಡುತ್ತಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ನೀಡುತ್ತಿಲ್ಲ. ಆದರೆ ಹುಡುಗರು ಬಸ್ ಪಾಸ್ ಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯುವ ಅವಕಾಶ ಇರುತ್ತದೆ. ಇದೇ ಜೂನ್ ಒಂದರಿಂದ ಬಿಎಂಟಿಸಿ ಬಸ್ ಪಾಸ್ ವಿತರಣೆ ಮಾಡುತ್ತಿದ್ದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ.
ವಿದ್ಯಾರ್ಥಿಗಳು ಬಸ್ ಪಾಸ್ ಅರ್ಜಿ ಪಡೆಯುವುದು ಹೇಗೆ?: ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಬಿಎಂಟಿಸಿ ಬಸ್ ಪಾಸ್ ಅರ್ಜಿಯನ್ನು ಪಡೆಯಬಹುದು. ಬಸ್ ಪಾಸ್ ಪಡೆಯಲು ಆನ್ಲೈನ್ ಪೋರ್ಟಲ್ https://sevasindhu.karnataka.gov.in ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇಲ್ಲವೇ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಾದ ಗ್ರಾಮ್ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಪಡೆಯಬಹುದು.
ಬಸ್ ಪಾಸ್ ಪಡೆಯುವ ವಿಧಾನ. :- ವಿದ್ಯಾರ್ಥಿಗಳು ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಬೆಂಗಳೂರು ಒನ್ ಕೇಂದ್ರಗಳು ಅಥವಾ ಕೆಂಪೇಗೌಡ ಬಸ್ ನಿಲ್ದಾಣ ಇಲ್ಲವೇ ಕೆಂಗೇರಿ ಟಿಟಿಎಂಸಿ ಹಾಗೂ ಶಾಂತಿನಗರ ಟಿಟಿಎಂಸಿ, ಹೊಸಕೋಟೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ-19 ಇಲ್ಲವೇ ಆನೇಕಲ್ ಬಸ್ ನಿಲ್ದಾಣದಲ್ಲಿ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯಬಹುದು. ಬಸ್ ಪಾಸ್ ಪಡೆಯಲು ಬೆಳಿಗ್ಗೆ ಗಂಟೆಯಿಂದ ಸಂಜೆ 6.30 ರವರೆಗೆ ಸಮಯಾವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಎಂಟಿಸಿ ಬಸ್ ಪಾಸ್ ಪಡೆಯಲು ಇರುವ ಅರ್ಹತೆ:-
ಬಿಎಂಟಿಸಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು. ಒಂದನೇ ತರಗತಿಯಿಂದ ಯಾವುದೇ ಪದವಿ ಹಾಗೂ ವೈದ್ಯಕೀಯ ಹಾಗೂ ಮಾಸ್ಟರ್ ಡಿಗ್ರಿ ಓದುವ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಬಹುದು. ಹಾಗೂ ಬಿಎಂಟಿಸಿ ಬಸ್ ಪಾಸ್ ಪಡೆಯುವವರು ಕಡ್ಡಾಯವಾಗಿ ಬೆಂಗಳೂರು ನಗರ ಅಥವಾ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿಎಂಟಿಸಿ ಬಸ್ ಪಾಸ್ ಕೇವಲ ಬೆಂಗಳೂರಿನಲ್ಲಿ ವಾಸಿಸುವರಿಗೆ ಮಾತ್ರ ಲಭ್ಯ ಇದೆ.
ಇದನ್ನೂ ಓದಿ: ಲಗೇಜ್ ಚಿಂತೆ ಇಲ್ಲದೆ ಪ್ರಯಾಣಿಸಿ; ಅತ್ಯಧಿಕ ಸಂಗ್ರಹಣೆಯೊಂದಿಗೆ ಭಾರತದ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು!
ಬಸ್ ಪಾಸ್ ನ ನಿಯಮಗಳು :-
- ಬಸ್ ಪಾಸ್ ನಲ್ಲಿ ನಿಗದಿ ಪಡಿಸಿದ ಸ್ಥಳದ ಹೊರತು ಬೇರೆ ಕಡೆ ಈ ಪಾಸ್ ಬಳಿಸಿ ಉಚಿತ ಪ್ರಯಾಣ ಮಾಡಬಾರದು.
- ಬಸ್ ಪಾಸ್ ನಲ್ಲಿ ನಮೂದಿಸಿದ ದಿನಾಂಕದ ವರೆಗೆ ಮಾತ್ರ ಈ ಪಾಸ್ ಲಭ್ಯ ಇರುತ್ತದೆ. ಪಾಸ್ ಅವಧಿ ಮುಗಿದ ಬಳಿಕ ಹಣ ನೀಡಿ ಪ್ರಯಾಣಿಸಬೇಕು.
ಬಸ್ ಪಾಸ್ ಪಡೆಯಲು ನೀಡಬೇಕಾದ ಅಗತ್ಯ ದಾಖಲೆಗಳು :- ವಿದ್ಯಾರ್ಥಿಗಳು ಅರ್ಜಿ ನಮೂನೆಯ ಜೊತೆಗೆ ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿ, ನಿವಾಸ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣಪತ್ರಗಳ ಪ್ರತಿ ಜೊತೆಗೆ ಮೊಬೈಲ್ ನಂಬರ್ ನೀಡಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :-
ಬಸ್ ಪಾಸ್ ವಿತರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಬಸ್ ಸ್ಟೇಷನ್ ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹದಾಗಿದೆ ಇಲ್ಲವೇ ಬಿಎಂಟಿಸಿ ದೂರವಾಣಿ ಸಂಖ್ಯೆ 080-22483777 ಕರೆ ಮಾಡಿ ಮಾಹಿತಿ ಪಡೆಯಿರಿ ಅಥವಾ ಬಿಎಂಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.