BMTC ವಿದ್ಯಾರ್ಥಿ ಬಸ್ ಪಾಸ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆ ಬೇಕು?

BMTC Student Bus Pass

ಜೂನ್ ತಿಂಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಆರಂಭ ಆಗಿದೆ. ಶಾಲೆಗೆ ಮತ್ತು ಕಾಲೇಜುಗಳಿಗೆ ಬಸ್ ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಬಸ್ ಪಾಸ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. 2024-25 ರ ಶೈಕ್ಷಣಿಕ ವರ್ಷದ ಪಾಸ್ ಗೆ ಅರ್ಜಿ ಸಲ್ಲಿಸಲು ಈಗಾಗಲೇ ಶುರುವಾಗಿದ್ದು. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಆನ್ಲೈನ್ ಮೂಲಕ ಬಿಎಂಟಿಸಿ ಬಸ್ ಪಾಸ್ ಸ್ಟೇಟಸ್ ನೀಡುವುದು ಹೇಗೆ ಎಂಬುದನ್ನು ನೋಡಿ.

WhatsApp Group Join Now
Telegram Group Join Now

ಜೂನ್ ಒಂದರಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ :- ಜೂನ್ 1 ರಿಂದ ಆನ್‌ಲೈನ್ ಮೂಲಕ ಬೆಂಗಳೂರಿನಲ್ಲಿ ಓದುತ್ತಿರುವ ಎಲ್ಲಾ ತರಗತಿಯ ವಿದ್ಯಾರ್ಥಿಗಳಗೆ ಬಿಎಂಟಿಸಿಯು ವಿದ್ಯಾರ್ಥಿ ಪಾಸ್ ಅರ್ಜಿಯನ್ನು ಸ್ವೀಕರಿಸಲು ಆರಂಭ ಮಾಡಿದೆ. ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಬಿಎಂಟಿಸಿ ಸೂಚನೆಗಳನ್ನು ಅಧಿಸೂಚನೆ ಪಾಲನೆ ಮಾಡಿ ಅರ್ಜಿಗಳನ್ನು ಸೇವಾ ಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯಾರು ಈ ಪವಿತ್ರ ಗೌಡ? ಪವಿತ್ರ ಗೌಡ ಅವರ ಮೊದಲನೇ ಗಂಡ ದೂರವಾಗಿದ್ದು ಏಕೆ?

ಶುಲ್ಕದ ವಿವರಗಳು ಮತ್ತು ಪಾಸ್ ಮಾನ್ಯತೆಯ ವಿವರ:-

  • ಪ್ರಾಥಮಿಕ ವಿದ್ಯಾರ್ಥಿಗಳಿಗೆ 150 ರೂಪಾಯಿ ಜೂನ್ 2024 ರಿಂದ ಮಾರ್ಚ್ 2025 ಮಾನ್ಯ ಆಗಿರುತ್ತದೆ.
  • ಪ್ರೌಢಶಾಲಾ ಬಾಲಕಿಯರ ವಿದ್ಯಾರ್ಥಿಗಳಿಗೆ 550 ರೂಪಾಯಿ. ಈ ಪಾಸ್ ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ಮಾನ್ಯತೆ ಪಡೆದಿದೆ.
  • ಪ್ರೌಢಶಾಲಾ ಬಾಲಕರ ವಿದ್ಯಾರ್ಥಿಗಳಿಗೆ 750 ರೂಪಾಯಿ. ಈ ಪಾಸ್ ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ಮಾನ್ಯತೆ ಪಡೆಯಿದೆ.
  • ಪಿಯುಸಿ ವಿದ್ಯಾರ್ಥಿಗಳಿಗೆ 1050 ರೂಪಾಯಿ. ಇದು ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ಮಾನ್ಯತೆ ಪಡೆದಿದೆ.
  • ಪದವಿ ಮತ್ತು ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 1300 ರೂಪಾಯಿ. ಈ ಲಾಸ್ ಜುಲೈ 2024 ರಿಂದ ಜೂನ್ 2025 ರ ವರೆಗೆ ಮಾನ್ಯತೆ ಪಡೆಯಿದೇ.
  • ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್ ವಿದ್ಯಾರ್ಥಿಗಳಿಗೆ 1830 ರೂಪಾಯಿ. ಈ ಪಾಸ್ ಆಗಸ್ಟ್ 2024 ರಿಂದ ಜುಲೈ 2025 ಈ ವರೆಗೆ ಮಾನ್ಯತೆ ಪಡೆದಿದೆ.
  • ಸಂಜೆ ಕಾಲೇಜ್ ಮತ್ತು PHD ಓದುವ ವಿದ್ಯಾರ್ಥಿಗಳಿಗೆ 1630 ರೂಪಾಯಿ. ಈ Paas ಜುಲೈ 2024 ರಿಂದ ಜೂನ್ 2025 ರ ವರೆಗೆ ಮಾನ್ಯತೆ ಪಡೆದಿದೆ.
  • ಎಲ್ಲಾ ತರಗತಿಗಳ SC ಅಥವಾ ST ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರ 150 ರೂಪಾಯಿ ಆಗಿರುತ್ತದೆ.

ಬಸ್ ಪಾಸ್ ಪಡೆಯಲು ನೀಡಬೇಕಾದ ದಾಖಲೆಗಳು :-

  • ಶುಲ್ಕ ನೀಡಿದ ರಶೀದಿ.
  • ವಿದ್ಯಾರ್ಥಿಯ ಪಾಸ್ ಪೋರ್ಟ್ ಸೈಜ್ ಫೋಟೋ.
  • ಜಾತಿ ಪ್ರಮಾಣಪತ್ರ.
  • ಆಧಾರ್ ಕಾರ್ಡ್.
  • ಕುಟುಂಬದ ಪಡಿತರ ಚೀಟಿ ಸಂಖ್ಯೆ.
  • ಮೇಲ್ ಐಡಿ ಮತ್ತು ಫೋನ್ ನಂಬರ್.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?: ಸೇವಾ ಸಿಂಧು ಪೋರ್ಟಲ್ ಗೆ ಹೋಗಿ ಆಧಾರ್ ಮತ್ತು ಕ್ಯಾಪ್ತ್ಟ ಕೋಡ್ ನಮೂದಿಸಿ. ನಂತರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ. ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಹಾಕಿ ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ನಿಮ್ಮ ಖಾತೆ ರಚಿಸಿ. ನಂತರ ನೀವು ಆನ್ಲೈನ್ ನಲ್ಲಿ ಬಸ್ ಪಾಸ್ ಅರ್ಜಿಯನ್ನು ಭರ್ತಿ ಮಾಡಿ ನಂತರ ನೀವು ದಾಖಲೆಗಳನ್ನು ಸಲ್ಲಿಸಬೇಕು. ನಂತರ ನಿಮ್ಮ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: SBI ಮತ್ತು HDFC ಬ್ಯಾಂಕ್ ನಲ್ಲಿ 10 ಲಕ್ಷ ರೂಪಾಯಿ FD ಹೂಡಿಕೆ ಮಾಡಿದರೆ ಯಾವ ಬ್ಯಾಂಕ್ ನಲ್ಲಿ ಏಷ್ಟು ಲಾಭ ಗಳಿಸಲು ಸಾಧ್ಯ?

Leave a Reply

Your email address will not be published. Required fields are marked *