ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2576 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ ಮಾಡಿದ್ದು. ಅದರಲ್ಲಿ 2500 ಬಿಎಂಟಿಸಿ ಹುದ್ದೆಗಳು ಹಾಗೂ ಜಿಟಿಟಿಸಿ ನಲ್ಲಿ 76 ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಹುದ್ದೆಯ ಬಗ್ಗೆ ಪೂರ್ಣ ವಿವರ :- ಹುದ್ದೆಯ ನೇಮಕಾತಿ ಮಾಡುತ್ತಾ ಇರುವ ಸಂಸ್ಥೆಯ ಹೆಸರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕ (ಕಂಡಕ್ಟರ್) ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಒಟ್ಟು 2500 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ದ್ವಿತೀಯ ಪಿಯುಸಿ ಅಥವಾ ಐಸಿಎಸ್‌ಇ ಅಥವಾ ಸಿಬಿಎಸ್‌ಇ ದ್ವಿತೀಯ ಪಿಯುಸಿ ಉತ್ತೀರ್ಣ ಆಗಿರಬೇಕು. ಇಲ್ಲವೇ ಮೂರು ವರುಷದ ಡಿಪ್ಲೊಮ ಓದಿರಬೇಕು. ಮುಕ್ತ ಶಾಲೆ ಅಥವಾ ಮುಕ್ತ ವಿವಿಯಿಂದ ಪಿಯುಸಿ ಮತ್ತು ಜೆಒಸಿ ಅಥವಾ ಜೆಎಲ್‌ಸಿ ಕೋರ್ಸ್ ಮಾಡಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಹತೆಯ ಪಟ್ಟಿ:-
- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರಬೇಕು.
- ಪುರುಷ ಅಭ್ಯರ್ಥಿಗಳ ಕನಿಷ್ಟ ಎತ್ತರ 160 CM ಇರಬೇಕು. ಹಾಗೂ ಮಹಿಳಾ ಅಭ್ಯರ್ಥಿಗಳ ಎತ್ತರ 150 CM ಇರಬೇಕು.
- ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ವರ್ಷಗಳ ವರೆಗೆ ವೃತ್ತಿ ತರಬೇತಿಯಾಗಿ ಪಡೆಯಬೇಕು. ಆ ಸಮಯದಲ್ಲಿ 9,100 ರೂಪಾಯಿ ತರಬೇತಿ ಭತ್ಯೆ ನೀಡಲಾಗುವುದು. ತರಬೇತಿಯ ನಂತರ 18,660- ದಿಂದ 25,300 ರೂಪಾಯಿ ವೇತನ ನೀಡಲಾಗುವುದು.
- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಕನಿಷ್ಟ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 35. 2A ಅಥವಾ 2B ಅಥವಾ 3A ಅಥವಾ 3B ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 38 ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ-1 ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ಹಾಗೂ ಮಾಜಿ ಸೈನಿಕ ಅಥವಾ ಇಲಾಖಾ ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷ ಇರಬೇಕು.
ಅರ್ಜಿ ಶುಲ್ಕದ ವಿವರಗಳು :- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಾಮಾನ್ಯ ವರ್ಗಕ್ಕೆ ಅಥವಾ ಇತರೆ ಹಿಂದುಳಿದ ಪ್ರವರ್ಗಗಳಿಗೆ ಸೇರಿದವರು ಆಗಿದ್ದರೆ ಅರ್ಜಿ ಶುಲ್ಕ ರೂ.750 ಆಗಿರುತ್ತದೆ. ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ-1 ಅಥವಾ ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ :-
ವೆಬ್ಸೈಟ್ ಗೆ ಹೋಗಿ ನಿಮ್ಮ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವೀಕ್ಷಣೆ ಮಾಡಿ ಅಥವಾ ಮುಂದಿನ ಆದೇಶ ಪ್ರತಿ ಬರುವ ವರೆಗೆ ಕಾಯಬೇಕು. ನಂತರ ನಿಮ್ಮ ಪೂರ್ಣ ವಿವರವನ್ನು ನೀಡುವುದರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪರೀಕ್ಷೆ ನಡೆಸಿ ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ಮಾಡುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
ಇದನ್ನೂ ಓದಿ: ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗುವಂತಹ, ಬ್ಯಾಟರಿಯನ್ನು ಉಳಿಸುವ ಸುಲಭ ವಿಧಾನಗಳನ್ನು ತಿಳಿಯಿರಿ
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ; ಡೈರೆಕ್ಟರ್ ಲಿಂಕ್ ಇಲ್ಲಿದೆ