ಕರ್ನಾಟಕದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆ ಭಾರಿ ಸದ್ದು, ಮಾಡುತ್ತಿದೆ. ನಮ್ಮನ್ನು ಗೆಲ್ಲಿಸಿದರೆ, ಉಚಿತ ವಿದ್ಯುತ್ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು, ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತಗಳಿಂದ ಜಯಗಳಿಸಿದ್ದು,ಸರ್ಕಾರ ರಚನೆಯ ಪ್ರಹಸನದ ತಲೆನೋವು ಮುಗಿದಿದ್ದು, ಎಲ್ಲವು ನಿರಾಳವಾಗಿದೆ. ಸರ್ಕಾರ ರಚನೆಗೂ ಮೊದಲೇ ಜನರು ಕರೆಂಟ್ ಬಿಲ್ ಕಟ್ಟಲ್ಲ ಅಂತ ಕೆಲವೊಂದು ಕಡೆ ಪಟ್ಟು ಹಿಡಿದು ಕೂತಿದ್ರು. ಹೌದು ಹಲವೆಡೆ ಜನರು ವಿದ್ಯುತ್ ಬಿಲ್ ಕಲೆಕ್ಟರ್ ಮುಂದೆ ಬಿಲ್ ಪಾವತಿಸುವುದಿಲ್ಲ ಏನ್ ಬೇಕಾದ್ರೂ ಮಾಡಿಕೊಳ್ಳಿ ಅಂತ ಅವಾಜ್ ಹಾಕಿದ್ದು ಉಂಟು.ಇನ್ನು ಕೆಲ ಜನರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ. ಹೌದು ಕಾಂಗ್ರೆಸ್ ಸರ್ಕಾರ ನೀಡಿದ್ದ 5ಪ್ರಮುಖ ಗ್ಯಾರಂಟಿಗಳಲ್ಲಿ ಉಚಿತ 200ಯುನಿಟ್ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಮೊದಲೇ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಇದಷ್ಟೇ ಅಲ್ಲದೇ ಕಾಂಗ್ರೆಸ್ ನೀಡಿರುವ ಕೆಲವೊಂದು ಉಚಿತ ಯೋಜನೆಗಳು ಇದೀಗ ಕಾಂಗ್ರೆಸ್ ಬುಡಕ್ಕೆ ಬಂದಿದೆ. ಅದ್ರಲ್ಲಿ ಪ್ರಮುಖವಾಗಿ ಉಚಿತ ವಿದ್ಯುತ್ ಯೋಜನೆ ಮಾತ್ರ ಹೆಸ್ಕಾಂ ಸಿಬ್ಬಂದಿಗಳಿಗಂತೂ ತಲೆನೋವಾಗಿದ್ದು. ಕೆಲವೊಂದು ಕಡೆ ಸಿಬ್ಬಂದಿಗಳು ಹೋಗಿ ಬಿಲ್ ಕೇಳೋಕೂ ಅಂಜುವಂತಾಗಿದೆ. ಹೌದು ಎಲ್ಲಿ ಜನ ಏನ್ ಮಾಡ್ತಾರೋ ಏನೋ ಅಂತ ಭಯ ಪಟ್ಟು ಸುಮ್ಮನೆ ಕೂರುವಂತೆ ಕೆಲ ಘಟನೆಗಳು ಮಾಡಿದ್ದಾವೆ. ಹೀಗಾಗಿ ಇಂಧನ ಸಚಿವಾಲಯ ಇದೀಗ ಹೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸಂದೇಶ ಒಂದನ್ನ ರವಾನಿಸಿದೆ.
ಬಾಕಿ ಹಾಗೂ ಪ್ರಸ್ತುತ ಬಿಲ್ ಪಾವತಿಸಲೇಬೇಕು ಎಂದ ಸರ್ಕಾರ
ಹೌದು ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗೃಹಜ್ಯೋತಿ ಯೋಜನೆ ಇನ್ನೂ ಕೂಡ ಜಾರಿಯಾಗಿಲ್ಲ.ಹೀಗಾಗಿ ಕರೆಂಟ್ ಬಿಲ್ ಕಟ್ಟದ ಜನತೆಗೆ ಇಂಧನ ಇಲಾಖೆ ಶಾಕ್ ನೀಡಿದ್ದು, ಕರೆಂಟ್ ಬಿಲ್ ಕಟ್ಟದಿದ್ದರೆ ಕನೆಕ್ಷನ್ ಕಟ್ ಮಾಡುವಂತೆ ಎಲ್ಲಾ ಹೆಸ್ಕಾಂಗಳಿಗೆ ಖಡಕ್ ಸೂಚನೆ ನೀಡಿದೆ. ಜನರು ಬಾಕಿ ಇರುವ, ಪ್ರಸ್ತುತ ವಿದ್ಯುತ್ ಬಿಲ್ ಪಾವತಿಸಬೇಕು. ಬಳಸಿರುವ ವಿದ್ಯುತ್ ಬಿಲ್ ಪಾವತಿಸಬೇಕು ಅಂತಲೂ ಸೂಚನೆ ನೀಡಿದೆ. ಇನ್ನು ಕರೆಂಟ್ ಬಿಲ್ ಪಾವತಿ ಮಾಡಲು ವಿಳಂಬ ಮಾಡಿದ್ರೂ ಅಂತವರಿಗೆ ದಂಡ ಹಾಕಲಾಗುವುದು. ಜೊತೆಗೆ 3 ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡು ಕಟ್ಟದಿದ್ದರೆ ಅಂತವರ ಲೈಸೆನ್ಸ್ ರದ್ದು ಮಾಡಲಾಗುವುದು ಅಂತ ಇದೀಗ ಇಂಧನ ಸಚಿವಾಲಯ ಖಡಕ್ ಎಚ್ಚರಿಕೆ ನೀಡಿದೆ. ಹೌದು ಕಾಂಗ್ರೆಸ್ ಚುನಾವಣೆಗೂ ಮುನ್ನ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿತ್ತು. ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈವರೆಗೂ ಗೃಹಜ್ಯೋತಿ ಯೋಜನೆಯ ಆದೇಶ ಹೊರಡಿಸಿಲ್ಲ. ಹೀಗಾಗಿ ಆದೇಶ ಬರೋವರೆಗೂ ಕರೆಂಟ್ ಬಿಲ್ ಪಾವತಿಸದಿದ್ದರೆ ದಂಡ ಹಾಕಲಾಗುವುದು ಎಂದು ಇಂಧನ ಇಲಾಖೆ ಎಚ್ಚರಿಕೆ ನೀಡಿದ್ದು, ಹೆಸ್ಕಾಂ ಸಿಬ್ಬಂದಿಗಳಿಗೆ ಬಿಲ್ ಕಟ್ಟಿಸಿಕೊಳ್ಳುವಂತೆ ಸೂಚನೆಯನ್ನ ಕೊಟ್ಟಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಅದು ಫ್ರೀ ಇದು ಫ್ರೀ ನಾವು ಅಧಿಕಾರಕ್ಕೆ ಬಂದ್ರೆ ಇಲ್ಲ ಫ್ರೀ ಅಂತ ಹೇಳಿ ಉಂಡೆ ನಾಮ ಹಾಕ್ತಿದ್ದಾರೆ ಅಂತ ಜನ ಮಾತಾನಾಡಿಕೊಳ್ಳುವಂತಾಗಿದ್ದು, ವಿರೋಧ ಪಕ್ಷದ ನಾಯಕರಂತು ಗ್ಯಾರಂಟಿಗಳು ಜಾರಿ ಆಗುತ್ತೆ ಆದ್ರೆ ಯೋಜನೆಗಳ ಲಾಭ ಸಿಗದೇ ಇರೋತರ ಕಂಡೀಶನ್ ಕೂಡ ಅಪ್ಲೈ ಆಗುತ್ತೆ ಅಂತ ರಾಜ್ಯ ಸರ್ಕಾರವನ್ನ ಆಡಿಕೊಳ್ಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ನವರು ಮಾತ್ರ ತಲೆ ಕೆಡಿಸಿಕೊಳ್ಳದೆ ನಾವು ಜೂನ್ 1ರ ಕ್ಯಾಬಿನೆಟ್ ಮೀಟಿಂಗ್ ನಂತರ ಇಲ್ಲ 5ಗ್ಯಾರಂಟಿಗಳನ್ನ ಕೊಟ್ಟೆ ಕೊಡ್ತೀವಿ ಅಂತ ಹೇಳ್ತಿದ್ದು, ಇದೀಗ ಇಂಧನ ಸಚಿವಾಲಯ ಕೊಟ್ಟಿರುವ ಎಚ್ಚರಿಕೆಯ ಸಂದೇಶಕ್ಕೆ ಜನ ಇನ್ಯಾವ ರೀತಿ ಉತ್ತರಿಸುತ್ತಾರೋ ಅಥವಾ ನಾವು ಕರೆಂಟ್ ಬಿಲ್ ಕಟ್ಟೋದೇ ಇಲ್ಲ ಹೋಗು ಅಂತ ಮತ್ತೆ ಅದೇ ರಾಗ ಹಾಡ್ತಾರೆ ಕಾದು ನೋಡಬೇಕು.
ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಾಂಡ ಹೊಸ ಮನೆಗೆ ಕಾಲಿಟ್ಟಿದ್ದಾರೆ- ಮನೆಯ ಗೃಹ ಪ್ರವೇಶ ಫೋಟೋ ಹಂಚಿಕೊಂಡು ಖುಷಿ ಪಟ್ಟ ನಟಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram