Breaking News: ಮೊದಲ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಗಳಿಗೆ ಅಸ್ತು.5 ಗ್ಯಾರಂಟಿಗಳಿಗೆ ಕಡಿಷನ್ಸ್ ಏನು, ಯಾರಿಗೆ ಏನು ಸಿಗುತ್ತೆ?

ಇಂದು ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ(Siddaramaiah )ಅವರು, ಡಿಸಿಎಂ ಡಿಕೆ ಶಿವಕುಮಾರ್, 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಹೌದು ಚುನಾವಣೆಗೂ ಮೊದಲೇ ನೀಡಿದ್ದ 5 ಗ್ಯಾರಂಟಿ ಗಳಿಗೆ ಇಂದು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಪ್ರಣಾಣಿಕೆಯಲ್ಲಿ ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಭೆಯಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಮ್ಮತಿ ನೀಡಲಾಗುವುದು ಅಂತ ನೂತನ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದ್ರೆ 5 ಗ್ಯಾರಂಟಿ ಗಳಿಗೆ ಅನ್ವಯಿಸುವ ಕಂಡೀಷನ್ಸ್ ಏನು? ಸಿದ್ದರಾಮಯ್ಯ ಗ್ಯಾರಂಟಿಗಳ ಬಗ್ಗೆ ಕೊಟ್ಟ ಭರವಸೆ ಏನು ನೋಡೋಣ.

WhatsApp Group Join Now
Telegram Group Join Now

ಮೊದಲಿಗೆ ಸಚಿವ ಸಂಪುಟದ ಆರಂಭದಲ್ಲಿ ಮಾತನಾಡಿದರೆ ಸಿಎಂ ಸಿದ್ದರಾಮಯ್ಯ ತಾವು ಕೊಟ್ಟಿದ್ದ ಅಷ್ಟು ಭರವಸೆಗಳನ್ನ ಮೊದಲ ವರ್ಷದಲ್ಲೇ ಈಡೇರಿಸಲು ಆಗೋದಿಲ್ಲ 5ವರ್ಷಗಳ ಅವಧಿಯಲ್ಲಿ ಆ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ. ಜನರಿಗೆ ನಮ್ಮ ಭರವಸೆಗಳ ಮೇಲೆ ನಂಬಿಕೆ ಇದೆ ಯಾಕಂದ್ರೆ ಈ ಹಿಂದಿನ ಸರ್ಕಾರದಲ್ಲಿ ನಾವು ನೀಡಿದ್ದ ಬಹುತೇಕ ಎಲ್ಲ ಭರವಸೆಗಳನ್ನ ನಾವು ಈಡೇರಿಸಿದ್ದೇವೆ, ಇನ್ನು ಈಗಲೂ ಅಷ್ಟೆ ಎಲ್ಲವನ್ನು ಈಡೇರಿಸುತ್ತೇವೆ ಆದರೆ ಅದಕ್ಕೆ ಕಾಲವಾಕಾಶ ಬೇಕು, ಇನ್ನು ಚುನಾವಣಾ ಸಂದರ್ಭದಲ್ಲಿ ಮೊದಲ ಸಂಪುಟದಲ್ಲೇ 5 ಗ್ಯಾರಂಟಿಗಳನ್ನ ಈಡೇರಿಸುವ ಭರವಸೆಯನ್ನ ಏನ್ ಕೊಟ್ಟಿದ್ದೀವಿ ಆ ಮಾತಿಗೆ ಬದ್ಧರಾಗಿದ್ದೇವೆ, ಇಂದು ತಾಟ್ವಿಕವಾಗಿ 5 ಗ್ಯಾರಂಟಿ ಗಳಿಗೆ ಒಪ್ಪಿಗೆಯನ್ನ ಸುಚಿಸುತ್ತಿದ್ದು, ಮುಂದಿನ ಸಭೆಯಲ್ಲಿ ಅಧಿಕೃತ ಆದೇಶ ಹೊರಡಿಸಲಾಗುತ್ತೆ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನು 5ಗ್ಯಾರಂಟಿಗಳಿಗೆ ವರ್ಷಕ್ಕೆ 50ಸಾವಿರ ಕೋಟಿಗಳು ಬೇಕಾಗುತ್ತದೆ, ಆದ್ರೆ ರಾಜ್ಯದ ಬಜೆಟ್ ಕೇವಲ 3ಲಕ್ಷದ 10ಸಾವಿರ ಕೋಟಿ, ಹೀಗಾಗಿ ಪ್ರತಿ ವರ್ಷವೂ ಬಜೆಟ್ ನಾ ಗಾತ್ರ ದೊಡ್ಡದು ಮಾಡಿ, ಯಾವ ಇಲಾಖೆಯಲ್ಲಿ ತೆರಿಗೆ ಹೆಚ್ಚಳ ಸಾಧ್ಯವೋ ಅಲ್ಲಿ ತೆರಿಗೆ ಹೆಚ್ಚು ಮಾಡಿ, ಎಲ್ಲ ಕಡೆಗಳಿಂದಲೂ ತೆರಿಗೆಯನ್ನ ಕಟ್ಟು ನಿಟ್ಟಾಗಿ ವಸೂಲಿ ಮಾಡುದ್ರೆ, ಖಂಡಿತಾ ಈ ಯೋಜನೆಗಳ ಅನುಷ್ಠಾನ ಸುಲಭವಾಗಲಿದೆ ಅಂತ ಸಿದ್ದರಾಮಯ್ಯ ವಿವರಿಸಿದ್ದಾರೆ.

ಇದನ್ನೂ ಓದಿ: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು?

5 ಗ್ಯಾರಂಟಿಗಳಿಗೆ ಎಷ್ಟು ಕೋಟಿ ಹಣ ಬೇಕು?

ಅಲ್ಲದೇ ಪ್ರತಿ ಯೋಜನೆಗೆ ಎಷ್ಟೆಷ್ಟು ಹಣ ಬೇಕಾಗುತ್ತದೆ ಅಂತಲೂ ಹೇಳಿರುವ ಸಿದ್ದರಾಮಯ್ಯ(Siddaramaiah), ಪ್ರತಿ ಮನೆಗೂ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200ಯುನಿಟ್ ವಿದ್ಯುತ್ ಅನ್ನ ಫ್ರೀ ಆಗಿ ಕೊಡಲಾಗುವುದು ಇದಕ್ಕೆ ತಿಂಗಳಿಗೆ 1200ಕೋಟಿ ಬೇಕಾಗುತ್ತೆ, ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯಡಿಯಲ್ಲಿ ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2000 ಹಾಕುತ್ತೇವೆ, ಅನ್ನ ಭಾಗ್ಯ ಯೋಜನೆಯಡಿಯಲ್ಲಿ 7ಕೆಜಿ ಇದ್ದ ಅಕ್ಕಿಯನ್ನ 10ಕೆಜಿಗೆ ಹೆಚ್ಚಿಸುತ್ತೇವೆ. ಅಲ್ಲದೇ 2ವರ್ಷದ ಅವಧಿಗೆ ಪಧವಿದರ ನಿರುದ್ಯೋಗಿ ಯುವಕರಿಗೆ 3000 ಮತ್ತು ಡಿಪ್ಲೊಮೊ ಪಧವಿಧರರಿಗೆ 1500 ರೂಪಾಯಿಯನ್ನ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯಂತ ಅವ್ರ ಖಾತೆಗೆ ಹಾಕಲಾಗುತ್ತದೆ, ಕರ್ನಾಟಕ ರಾಜ್ಯದ ಪ್ರತಿ ಮಹಿಳೆಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು, ಇದು ಬೇರೆ ರಾಜ್ಯದ ಮಹಿಳೆಯರಿಗೆ ಅನ್ವಯವಾಗೋದಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಯೋಜನೆಗಳಿಗೆ ಅನ್ವಯವಾಗುವ ಯಾವುದೇ ಕಂಡೀಷನ್ ಬಗ್ಗೆ ಸಿದ್ದರಾಮಯ್ಯ ಮಾತಾನಾಡಿಲ್ಲ ಆದರೆ 5ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತರುವುದು ಖಚಿತ ಅಂತ ಹೇಳಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬಂದು ಸಂಪುಟ ಸಭೆಯಲ್ಲಿ ಅಧಿಕೃತ ಆದೇಶ ಹೊರಡಿಸುತ್ತೇನೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್! 2ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram