ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರು ಮನೆಯನ್ನ ಸ್ವಚ್ಛವಾಗಿಡಬೇಕು ಅನ್ನೋ ಮನಸ್ಥಿತಿಯಲ್ಲಿರುತ್ತಾರೆ ಹೀಗಾಗಿ ನಮ್ಮೆಲ್ಲರ ಮನೆಯಲ್ಲಿ ಮನೆ ಕ್ಲೀನರ್ ಇದ್ದೇ ಇರುತ್ತೆ. ಹೌದು ಎಲ್ಲರ ಮನೆಗೂ ಪೊರಕೆ ಅತ್ಯಂತ ಅವಶ್ಯಕ. ಇನ್ನು ಕಸ ತೆಗೆಯಲು ಯಾವ ವಸ್ತುವನ್ನೇ ಬಳಸಿದರೂ ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಪೊರಕೆಯನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅಂತಹ ಪೊರಕೆಯನ್ನು ಮನೆಗಳಲ್ಲಿ ಇರಿಸಿದಾಗ ಅದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಪೊರಕೆಯನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ವಿವಿಧ ಸಮಸ್ಯೆಗಳು ಉಂಟಾಗಬಹುದು. ಮುಖ್ಯವಾಗಿ ಪೊರಕೆಯನ್ನು ತಪ್ಪಾದ ಸ್ಥಳದಲ್ಲಿ ಇಡುವುದರಿಂದ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗುವುದಲ್ಲದೆ ಮನೆಯಲ್ಲಿ ಹಣ ಸಂಗ್ರಹಣೆಗೆ ಅಡ್ಡಿಯಾಗುತ್ತದೆ.
ಇನ್ನು ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವಾಗಲೂ ಪೊರಕೆ ಮೇಲೆ ಕಾಲಿಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅದು ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ. ಪರಿಣಾಮವಾಗಿ ನೀವು ಗಂಭೀರ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಪೊರಕೆಯನ್ನು ಇರಿಸಲು ಉತ್ತಮವಾದ ದಿಕ್ಕು ವಾಯುವ್ಯ ಅಥವಾ ಪಶ್ಚಿಮ ಮೂಲೆಯಾಗಿದೆ. ಈ ಸ್ಥಳದಲ್ಲಿ ಪೊರಕೆಯನ್ನು ಇರಿಸಿದಾಗ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಆದರೆ ಯಾವಾಗಲೂ ಪೊರಕೆಯನ್ನು ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯ ಬಳಿ ಇರಿಸಿ. ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರ ಜೊತೆಗೆ ನಾವು ಹೇಳುವ ಈ ಒಂದು ಸಣ್ಣ ಕೆಲಸವನ್ನ ನೀವು ತಪ್ಪದೆ ಮಾಡಿದ್ರೆ ನಿಮ್ಮ ಮನೆಗೆ ಲಕ್ಷ್ಮೀ ದೇವಿಯ ಆಗಮನವಾಗುತ್ತದೆ ಹಣದ ಹರಿವು ಹೆಚ್ಚಾಗುತ್ತದೆ.
ಇನ್ನು ಮುಖ್ಯವಾಗಿ ಯಾರಾದರೂ ಮನೆಯಿಂದ ಹೊರಗೆ ಹೋದ ತಕ್ಷಣ ಪೊರಕೆಯಿಂದ ಮನೆಯನ್ನ ಗುಡಿಸಬೇಡಿ. ಹೀಗೆ ಮಾಡುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚುತ್ತದೆ. ಅಲ್ದೇ ನೀವು ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡಾಗ, ಸ್ಥಳವನ್ನು ಸ್ವಚ್ಛಗೊಳಿಸಲು ಹೊಸ ಪೊರಕೆಯನ್ನು ಬಳಸಿ. ಹಾಗೆ ಮಾಡುವುದರಿಂದ ಉತ್ತಮ ವಾಸ್ತುವಿನ ಮೊದಲ ಹೆಜ್ಜೆಯಾಗುತ್ತದೆ. ಇನ್ನು ನಿಮ್ಮ ಕಾಲುಗಳು ಪೊರಕೆಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ, ನೀವು ಉದ್ದೇಶಪೂರ್ವಕವಾಗಿ ಮಾಡಿದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಅಂತ ಹೇಳಲಾಗುತ್ತದೆ. ಮುಖ್ಯವಾಗಿ ದೀಪಾವಳಿಯು ಪೊರಕೆಯನ್ನು ಖರೀದಿಸಲು ಉತ್ತಮ ದಿನಗಳಲ್ಲಿ ಒಂದಾಗಿದೆ.
ಹೀಗಾಗಿ ಅಂದು ಮನೆಗೆ ಪೊರಕೆಯನ್ನ ತನ್ನಿ. ಜೊತೆಗೆ ಪೊರಕೆಯನ್ನು ಎಲ್ಲರ ಕಣ್ಣಿಗೆ ಬೀಳುವ ಜಾಗದಲ್ಲಿ ಇಡಬಾರದು. ಪೊರಕೆಯನ್ನು ಯಾವಾಗಲೂ ಮರೆಮಾಡಿ ಇಡಬೇಕು. ಅಂದ್ರೆ ಹೊರಗಿನಿಂದ ಬಂದವರಿಗೆ ಕಾಣದಂಥಹ ಜಾಗದಲ್ಲಿ ಪೊರಕೆ ಇಡಬೇಕು. ಮುಖ್ಯವಾಗಿ ಅಡುಗೆಮನೆಯಲ್ಲಿ ಅಥವಾ ತಿಜೋರಿ ಬಳಿ ಪೊರಕೆ ಇಡಬೇಡಿ. ಇದರಿಂದ ತಾಯಿ ಅನ್ನಪೂರ್ಣೆ ಹಾಗೂ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಬಡತನ ಮತ್ತು ನಕಾರಾತ್ಮಕತೆ ನೆಲೆಯಾಗುತ್ತದೆ. ಗೋವು ಅಥವಾ ಯಾವುದೇ ಪ್ರಾಣಿಗೆ ಪೊರಕೆಯಿಂದ ಹೊಡೆಯಬೇಡಿ. ಮುಖ್ಯವಾಗಿ ಪೊರಕೆಯನ್ನು ಯಾವತ್ತೂ ನಿಂತ ಸ್ಥಿತಿಯಲ್ಲಿ ಇಡಬೇಡಿ. ಪಾದಗಳನ್ನು ಪೊರಕೆಗೆ ತಾಗಿಸಬೇಡಿ. ಮೊದಲೇ ಹೇಳಿದಂತೆ ಪೊರಕೆಯನ್ನು ಲಕ್ಷ್ಮೀ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ತಪ್ಪಿಯು ಪೊರಕೆಗೆ ಕಾಲು ತಾಗಿದರೆ ಲಕ್ಷ್ಮೀ ದೇವಿಯ ಕ್ಷಮೆಯಾಚಿಸಿ ನಂತರ ಸ್ವಚ್ಛಗೊಳಿಸಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ರಾತ್ರಿ ಮಲಗುವಾಗ ಈ ಕೆಲಸ ಮಾಡಿ ನೋಡಿ
ಸ್ನೇಹಿತ್ರೆ ಲಕ್ಷ್ಮೀದೇವಿಯ ಅನುಗ್ರಹ ಜೊತೆಗೆ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಇರಬೇಕು ಅಂತ ಅಂದ್ರೆ ನಾವು ಹೇಳುವ ಈ ಸಣ್ಣ ಉಪಾಯವನ್ನು ಪೊರಕೆಯಿಂದ ನೀವು ತಪ್ಪದೆ ಪಾಲಿಸಬೇಕು. ಮೊದಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅಂದ್ರೆ ಊಟದ ನಂತರ ನೀವು ಮಲಗುವಾಗ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಮುಚ್ಚಬೇಕು ಆನಂತರ ಆ ಮುಖ್ಯ ದ್ವಾರದ ಬಳಿ ಪೊರಕಕೆಯನ್ನ ಅಡ್ಡಲಾಗಿ ಇಡಬೇಕು. ನಂತರ ಜೀರಿಗೆಯನ್ನು ತೆಗೆದುಕೊಂಡು ಅದನ್ನ ಪೊರಕೆಯ ಕೆಳಗೆ ಹಾಕಬೇಕು. ಜೀರಿಗೆನ ಚಿಟಿಕೆಯಷ್ಟು ಹಾಕಿದ್ರು ಸಾಕು. ಇನ್ನು ಪೊರಕಿಯ ಕೆಳಗಡೆ ಜೀರಿಗೆನ ಬಚ್ಚಿಟ್ಟ ನಂತರ ಓಂ ಕ್ಲೀಂ ಕೃಷ್ಣಾಯ ನಮಃ ಅನ್ನೋ ಈ ಒಂದು ಮಂತ್ರವನ್ನು ನೀವು ಕೇವಲ ಆರು ಬಾರಿ ಪಠಿಸಿದರೆ ಸಾಕು ಅದಾದ ನಂತರ ನೀವು ರಾತ್ರಿ ಮಲ್ಕೊಂಡು ಮಾರನೇ ದಿನ ಎದ್ದ ನಂತರ ಇಡೀ ಮನೆಯನ್ನ ಕಸ ಗುಡಿಸಿ ಆ ಜೀರಿಗೆಯನ್ನು ಕಸದ ಜೊತೆಗೆ ತೆಗೆದುಕೊಂಡ್ ಹೋಗಿ ಆಚೆ ಹಾಕ್ಬೇಕು.
ಈ ಒಂದು ರೆಮಿಡಿಯನ್ನ 30 ದಿನಗಳ ಕಾಲ ಅಥವಾ 41 ದಿನಗಳ ಕಾಲ ಮಾಡಿ ನೋಡಿದರೆ ಇದರ ಲಾಭ ಏನು ಅನ್ನೋದು ನಿಮಗೆ ಗೊತ್ತಾಗುತ್ತೆ. ಹೌದು ರಾತ್ರಿ ಊಟದ ನಂತರ ಈ ಒಂದು ರೆಮಿಡಿಯನ್ನ ಯಾರು ಮಾಡಿ ಮಲಗುತ್ತಾರೋ ಅವರ ಮನೆಗೆ ದುಷ್ಟ ಶಕ್ತಿಗಳ ಪ್ರಭಾವ ಬೀರುವುದಿಲ್ಲ, ದುಷ್ಟ ಶಕ್ತಿಗಳು ಮನೆಗೆ ಪ್ರವೇಶವನ್ನು ಮಾಡೋದಿಲ್ಲ. ಅಂಥವರ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಇರೋದಿಲ್ಲ ಹೀಗಾಗಿ ಈ ಒಂದು ಉಪಾಯವನ್ನ ನೀವು ಕೂಡ ಒಮ್ಮೆ ಮಾಡಿ ನೋಡಿ ಇದರಿಂದಾಗುವ ಪ್ರಯೋಜನ ನಿಮಗೆ ತಿಳಿಯುತ್ತೆ.
ಇದನ್ನೂ ಓದಿ: ಗೃಹಲಕ್ಷ್ಮೀ 2ನೇ ಕಂತಿ ಹಣ ಯಾವಾಗ ಬರುತ್ತೆ ಗೊತ್ತಾ? ಮೊದಲ ಕಂತಿನ ಹಣ ಬರೆದೆ ಇರೋರು ಏನ್ ಮಾಡಬೇಕು?
ಇದನ್ನೂ ಓದಿ: ದರ್ಶನ್ ಜೊತೆಗೆ ಮನಸ್ತಾಪ ಇರೋದನ್ನ ಒಪ್ಪಿಕೊಂಡ ದ್ರುವ! ಮಾತನಾಡಿ ಬಗೆಹರಿಸಿಕೊಳ್ಳೋಕೆ ನೋಡ್ತೀನಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram