ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿದ BSNL; ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡುತ್ತಿದೆ.

BSNL Unlimited Recharge Plan

ಭಾರತದಲ್ಲಿ ಮೊಬೈಲ್ ಸಿಮ್ ಎನ್ನುವುದನ್ನು ಆರಂಭ ಮಾಡಿದ್ದು ಬಿಎಸ್ಎನ್ಎಲ್. ನಂತರ ಪ್ರೈವೇಟ್ ಸಿಮ್ ಗಳು ಬಂದಿವೆ. ಆದರೆ ಈಗ ಬಿಎಸ್ಎನ್ಎಲ್ ಬಳಕೆದಾರರು ಕಡಿಮೆ ಆಗುತ್ತಾ ಇದ್ದಾರೆ. ಸಿಗ್ನಲ್ ಕೊರತೆ ಹಾಗೂ ದುಬಾರಿ ಆಗಿರುವ ಕಾರಣ ಜೊತೆಗೆ ಹತ್ತು ಹಲವು ಟೆಲಿಕಾಂ ಕಂಪನಿಗಳು ಆಫರ್ ನೀಡಿ ಜನರನ್ನು ಬಿಎಸ್ಎನ್ಎಲ್ ನಿಂದ ಬೇರೆ ಕಂಪನಿಯ ಸಿಮ್ ಕಾರ್ಡ್ ಗೆ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಈಗ ಭಾರತದಲ್ಲಿ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಈಗ ಜನರನ್ನು ತನ್ನತ್ತ ಸೆಳೆಯುವ ದೃಷ್ಟಿಯಿಂದ ಈಗ ಹೊಸದಾಗಿ ಉತ್ತಮ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ.

WhatsApp Group Join Now
Telegram Group Join Now

150 ದಿನಗಳ ವ್ಯಾಲಿಡಿಟಿ ಪ್ಲಾನ್ :-

ಬಿಎನ್ಎಸ್ಎಲ್ 150 ದಿನಗಳ ವ್ಯಾಲಿಡಿಟಿ ಪ್ಲಾನ್ ತಂದಿದ್ದು ಈ ಪ್ಲಾನ್ ನ ಮೊತ್ತ 365 ರೂಪಾಯಿಗಳ ರೀಚಾರ್ಜ್ ಮಾಡಿಸಬೇಕು. ಆನ್ಲೈನ್ ಮೂಲಕ ಅಥವಾ ಯಾವುದೇ ರೀಚಾರ್ಜ್ ಸೆಂಟರ್ ನಲ್ಲಿ ರೀಚಾರ್ಜ್ ಮಾಡಿಸಬಹುದು. ಡಾಟಾ ಹಾಗೂ ಅನಿಯಮಿತ ಕರೆಗಳು ಲಭ್ಯವಿದೆ.

365 ರೂಪಾಯಿ ರೀಚಾರ್ಜ್ ಪ್ಲಾನ್ ನ ಡೇಟಾ ಪ್ಲಾನ್ :-

ಮೊಬೈಲ್ ನಲ್ಲಿ ಇಂಟರ್ನೆಟ್ ಬಳಕೆ ಮಾಡಲು ಡೇಟಾ ಪ್ಲಾನ್ ಬೇಕೆ ಬೇಕು. ರೀಚಾರ್ಜ್ ಮಾಡಿಸುವ ಮೊದಲು ದಿನಕ್ಕೆ ಎಷ್ಟು GB ಡೇಟಾ ಸಿಗುತ್ತದೆ ಎಂಬುದನ್ನು ಪರಿಶೀಲನೆ ಮಾಡಿದ ನಂತರವೇ ನಾವು ಮೊಬೈಲ್ ಗೆ ರೀಚಾರ್ಜ್ ಮಾಡಿಸುತ್ತೇವೆ. 365 ರೂಪಾಯಿ ರೀಚಾರ್ಜ್ ಪ್ಲಾನ್ ನಲ್ಲಿ 30 ದಿನಗಳ ವರೆಗೆ ಉಚಿತ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ ಹಾಗೂ 30 ದಿನಗಳ ವರೆಗೆ ದಿನಕ್ಕೆ 2 GB ಡೇಟಾ ಬಳಸಬಹುದು. ಅಂದರೆ ಒಟ್ಟು 60 GB ಡೇಟಾ ಸಿಗುತ್ತದೆ. ದಿನಕ್ಕೆ 2 GB ಉಪಯೋಗಿಸಿದ ನಂತರ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಲಿದೆ. ಜೊತೆಗೆ ದಿನಕ್ಕೆ 100 SMS ಉಚಿತವಾಗಿ ಕಳುಹಿಸಬಹುದು. 30 ದಿನಗಳ ನಂತರ ಇನ್ಕಮಿಂಗ್ ಕರೆಗಳನ್ನು ಸ್ವೀಕರಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

699 ರೂಪಾಯಿ ರೀಚಾರ್ಜ್ ಪ್ಲಾನ್ :-

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 699 ರೂಪಾಯಿಯ ಇನ್ನೊಂದು ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು, 699 ರೂಪಾಯಿ ಪ್ಲಾನ್ ನಲ್ಲಿ ನಿಮಗೆ 150 ದಿನಗಳ ವ್ಯಾಲಿಡಿಟಿ ಇರಲಿದೆ. ಹಾಗೂ ದಿನಕ್ಕೆ 100 SMS ಉಚಿತವಾಗಿ ಇರಲಿದೆ ಜೊತೆಗೆ ದಿನಕ್ಕೆ 0.5 GB ಉಚಿತವಾಗಿ ನೀಡುತ್ತಿವೆ.

ಬಿಎಸ್ಎನ್ಎಲ್ ನ ಕಡಿಮೆ ಮೊತ್ತದ ಪ್ಲಾನ್ ಗಳು :-

ನೀವು ಬಿಎಸ್ಎನ್ಎಲ್ ಬಳಕೆದಾರರಗಿದ್ದರೆ ನೀವು ನಿಮ್ಮ ಮೊಬೈಲ್ ನಿಂದ ಗೂಗಲ್ ಪೇ, ಫೋನ್ ಪೇ ಅಥವಾ ಬಿಎಸ್ಎನ್ಎಲ್ ವೆಬ್ಸೈಟ್ ನಲ್ಲಿ ರೀಚಾರ್ಜ್ ಮಾಡಿಸಬಹುದು. ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದ್ದು, ದಿನಕ್ಕೆ 16 ರೂಪಾಯಿ ರೀಚಾರ್ಜ್ ಮಾಡಿಸಿದರೆ 2 GB ಡೇಟಾ ಸಿಗುತ್ತದೆ. ಕಡಿಮೆ ಎಂದರೆ 107 ರೂಪಾಯಿ ರೀಚಾರ್ಜ್ ಮಾಡಿಸಿದರೆ ನಿಮಗೆ 35 ದಿನಗಳ ವ್ಯಾಲಿಡಿಟಿ ಜೊತೆಗೆ 200 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶ ಇದೆ. ಹಾಗೂ 35 ದಿನಗಳ ಕಾಲ ಒಟ್ಟು 3 GB ಉಚಿತ ಡೇಟಾ ಸಿಗಲಿದೆ. 147 ರೀಚಾರ್ಜ್ ಪ್ಲಾನ್ ನಲ್ಲಿ 30 ದಿನಗಳ ವರೆಗೆ ಸಿಮ್ ವ್ಯಾಲಿಡಿಟಿ ಜೊತೆಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಹಾಗೂ 10 GB ಡೇಟಾ ಸಿಗಲಿದೆ.

ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣಿಸುವವರ ಗಮನಕ್ಕೆ; ಊಟ ಹಾಗೂ ಉಪಹಾರಕ್ಕೆ ಬಸ್ ನಿಲುಗಡೆಯ ನಿಯಮಗಳ ಬಗ್ಗೆ ತಿಳಿಯಿರಿ

ಇದನ್ನೂ ಓದಿ:ಲಗೇಜ್ ಚಿಂತೆ ಇಲ್ಲದೆ ಪ್ರಯಾಣಿಸಿ; ಅತ್ಯಧಿಕ ಸಂಗ್ರಹಣೆಯೊಂದಿಗೆ ಭಾರತದ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು!