Bullet Prakash Daughter Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬುಲೆಟ್ ಪ್ರಕಾಶ್ ಮಗಳು.. ಯಾರೆಲ್ಲ ಬಂದಿದ್ರು?

Bullet Prakash Daughter Marriage: ಕನ್ನಡದ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಮಗಳ ಮದುವೆ ಇಂದು ಅದ್ದೂರಿಯಾಗಿ ನಡೆದಿದೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಈಗ ಅದರಂತೆ ಮಗಳ ಮೋನಿಕ ವರ್ಷಿಣಿ ಶ್ರವಣ್ ಕುಮಾರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

WhatsApp Group Join Now
Telegram Group Join Now
Image Credit: Cinibuzz

ಇನ್ನು ಕಳೆದ ಮೂರು ದಿನದಿಂದ ಬುಲೆಟ್ ಪ್ರಕಾಶ್ ಅವರ ಮನೆಯಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಜೋರಾಗಿ ನಡೆದಿದೆ ಮೆಹಂದಿ, ಅರಿಶಿನ ಶಾಸ್ತ್ರದ ಫೋಟೋಗಳನ್ನು ಬುಲೆಟ್ ಪ್ರಕಾಶ್ ಮಗ ರಕ್ಷಕ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಿನ್ನೆ ಸಂಜೆ ಆರತಕ್ಷತೆ ನಡೆದಿದ್ದು ಆರತಕ್ಷತೆಗೆ ಕನ್ನಡದ ಸಾಕಷ್ಟು ನಟ ನಟಿಯರು ಬಂದು ನವ ಜೋಡಿಗೆ ಆಶೀರ್ವಾದ ಮಾಡಿದ್ದರು ಇವರ ವಿವಾಹ ಶ್ರೀ ಸ್ವರ್ಗ ಹೆರಿಟೇಜ್ ವೆಡ್ಡಿಂಗ್ ವೆನ್ಯೂ ನಲ್ಲಿ ನಡೆದಿದೆ, ಇಂದು ಬೆಳ್ಳಗೆ 9:10 ರಿಂದ 10:10 ಇದ್ದ ಶುಭ ಮುಹೂರ್ತದಲ್ಲಿ ಮದುವೆ ನಡೆದಿದೆ. ಇಂದು ಬೆಳ್ಳಗೆ ಕೂಡ ನಟಿ ನಿಶ್ವಿಕಾ ನಾಯ್ಡು ಸೇರಿದಂತೆ ಸಾಂಡಲ್ ವುಡ್ ಕಲಾವಿದರು ಆಗಮಿಸಿದ್ದಾರು..

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮನೆಯಲ್ಲಿ ಮದುವೆ ಸಂಭ್ರಮ ಮಗಳ ಮೆಹಂದಿ ಶಾಸ್ತ್ರ ಹೇಗಿತ್ತು ಗೊತ್ತಾ ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

ಬುಲೆಟ್ ಪ್ರಕಾಶ್ ಮಗ ಅಕ್ಕನ ಮದುವೆಯ ಜವಾಬ್ದಾರಿಯನ್ನು ಹೊತ್ತು ಮದುವೆ ಎಲ್ಲ ಕೆಲಸಗಳನ್ನು ಮುಂದೆ ನಿಂತು ಮಾಡಿದ್ದಾರೆ. ಹೌದು ಅಕ್ಕನ ಮದುವೆ ಲಗ್ನ ಪತ್ರಿಕೆಗಳನ್ನು ಸ್ಯಾಂಡಲ್ ಕಲಾವಿದರಿಗೆ ಮತ್ತು ಅವರ ಆಪ್ತ ವಲಯಗಳಿಗೆ ಹಂಚುವ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಕ್ಕನ ಮದುವೆ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ರಕ್ಷಕ್ ನಮಗೆ ಅವರು ದುಡ್ಡು ಕೊಟ್ಟಿದ್ದಾರೆ ಇವರು ಸಹಾಯ ಮಾಡಿದ್ದಾರೆ ಎಂದು ಗಾಳಿ ಸುದ್ದಿಗಳನ್ನು ಯಾರು ನಂಬಬೇಡಿ ನಮ್ಮ ಅಪ್ಪ ಕೂಡ 500ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ ಅವರು ಕೂಡ ಸಂಭಾವನೆ ಪಡೆದಿದ್ದಾರೆ ಆ ದುಡ್ಡಿನಲ್ಲಿ ನಮ್ಮ ಅಕ್ಕನ ಮದುವೆಯನ್ನು ಅವರ ಆಸೆಯಂತೆ ಮಾಡುತ್ತಿದ್ದೇವೆ ಎಂದು ಸಂದರ್ಶನದಲ್ಲಿ ರಕ್ಷಕ್ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಬುಲೆಟ್ ಪ್ರಕಾಶ್ ಅವರ ಆಸೆಯಂತೆ ಮಗಳ ಮದುವೆ ಅದ್ದೂರಿಯಾಗಿ ನಡೆದಿದೆ.

ಇದನ್ನೂ ಓದಿ: ‘ನನ್ನ ರಸಿ ರಾಧೆ’ ದಾರಾವಾಹಿ ಸಹನಾ ಶೆಟ್ಟಿ ಅರಿಶಿಣ ಶಾಸ್ತ್ರ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram