Bullet Prakash Daughter Marriage: ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ.ಮೆಹಂದಿ ಶಾಸ್ತ್ರ ಹೇಗಿತ್ತು. ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

Bullet Prakash Daughter Marriage: ಬುಲೆಟ್ ಪ್ರಕಾಶ್ ಅವ್ರ ಮಗಳ ಮದುವೆ ನಿಶ್ಚಯವಾಗಿದೆ. ಹೀಗಾಗಿ ಅಕ್ಕನ ಮದುವೆಗೆ ತಮ್ಮ ರಕ್ಷಕ್ ತುಂಬಾನೇ ಓಡಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೆ ತಿಂಗಳಿನಲ್ಲಿ ಅಕ್ಕನ ಮದುವೆ ನಿಶ್ಚಯವಾಗಿದ್ದು ನಟ ರಕ್ಷಕ್ ಎಲ್ಲ ಸೆಲಬ್ರೆಟಿಗಳ ಮನೆಗೆ ಹೋಗಿ ಅಹ್ವಾನ ಪತ್ರಿಕೆಯನ್ನ ಕೊಟ್ಟು ಬಂದಿದ್ರು. ಅಲ್ಲದೆ ಆಹ್ವಾನ ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ಫೋಟೋಗಳನ್ನ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಸಿಕೊಳುತ್ತಿದ್ದಾರೆ. ಇದೀಗ ನಟ ರಕ್ಷಕ್ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದು, ಅಕ್ಕನ ಮದುವೆಯ ಅಪ್ಡೇಟ್ಸ್ ನ್ನ ಕೊಡ್ತಾ ಇರ್ತಾರೆ. ಇದೀಗ ಕ್ಯೂಟ್ ಫೋಟೋಗಳನ್ನ ಹಂಚಿಕೊಂಡಿರುವ ರಕ್ಷಕ್ ಖುಷಿಯಲ್ಲಿದ್ದಾರೆ. ಹಾಗಾದ್ರೆ ಮದುವೆ ಸಂಭ್ರಮ ಹೇಗಿದೆ, ಯಾವೆಲ್ಲ ಶಾಸ್ತ್ರಗಳು ನಡೆದಿದೆ. ಮದುವೆ ಯಾವಾಗ ಯಾರೆಲ್ಲ ಬರಬಹುದು ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ಬುಲೆಟ್ ಪ್ರಕಾಶ್ ಅವ್ರು ಕೊರೋನ ಸಂದರ್ಭದಲ್ಲಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ರು. ಇಬ್ಬರು ಮಕ್ಕಳು ಹಾಗೂ ಮಡದಿಯನ್ನ ಬಿಟ್ಟು ಇಹಲೋಕ ತ್ಯಜಿಸಿದ್ರು. ಸಾವಿಗೂ ಮೊದಲೇ ಮಗನ ಸಿನಿಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿದ್ರು. ಅದೆಲ್ಲವೂ ನನಸಾಗುವ ಮುನ್ನವೇ ಬುಲೆಟ್ ಇನ್ನಿಲ್ಲವಾದ್ರೂ. ಆದರೂ ಅಪ್ಪನ ಸಾವಿನ ನಡುವೆಯೂ ಗುರುಶಿಷ್ಯರು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ರಕ್ಷಕ್ ಅವ್ರು. ಇದರ ಜೊತೆಗೆ ಅಕ್ಕನ ಮದುವೆ ಬಗ್ಗೆ ಸಾಕಷ್ಟು ಕನಸ್ಸು ಕಂಡಿದ್ದ ಬುಲೆಟ್ ಅವ್ರ ಕನಸ್ಸು ನೆರವೇರಿಸಲು ಮಗ ರಕ್ಷಕ್ ಬಹಳಷ್ಟು ಶ್ರಮ ವಹಿಸಿದ್ರು. ಇದೀಗ ಅಕ್ಕನಿಗೆ ಹುಡುಗನನ್ನ ಹುಡುಕಿ ಮದುವೆ ತಯಾರಿಯಲ್ಲಿರುವ ರಕ್ಷಕ್ ಮದುವೆ ಕುರಿತಾದ ಪ್ರತಿಯೊಂದು ವಿಷಯಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೌದು ಕಳೆದು 1ವಾರದ ಹಿಂದೆ ಸೆಲಬ್ರೇಟಿಗಳನ್ನ ಭೇಟಿ ಮಾಡಿ ಅಕ್ಕ ನಾ ಮದುವೆಯ ಆಮಂತ್ರಣ ಪತ್ರಿಕೆಯನ್ನ ನೀಡಿದ್ರು. ಇದೀಗ ಮದುವೆ ತಯಾರಿ ಹಾಗೂ ಶಾಸ್ತ್ರಗಳ ಒಂದೊಂದೇ ಫೋಟೋಗಳನ್ನ ರಕ್ಷಕ್ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಇಂದು SSLC ರಿಸಲ್ಟ್ ಬರುತ್ತಾ!? ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ರಿಸಲ್ಟ್ ನೋಡೋದೇಗೆ?

ಮೋನಿಕಾ ಅವರ ಮೆಹಂದಿ ಶಾಸ್ತ್ರ ಹೇಗಿತ್ತು ನೋಡಿ

ಈಗಾಗಲೇ ಮೋನಿಕಾ ವರ್ಷಿಣಿ ಅವ್ರ ಮದುವೆ ತಯಾರಿ ಜೋರಾಗಿ ನಡೆಯುತ್ತಿದ್ದು, ಬುಲೆಟ್ ಪ್ರಕಾಶ್ ಅವ್ರ ಮನೆಯಲ್ಲಿ ಹಬ್ಬದ ವಾತಾವರಣ ಜೋರಾಗಿದೆ, ಸಂಭ್ರಮ ಮನೆ ಮಾಡಿದ್ದು, ಅಕ್ಕನ ಮದುವೆಯ ಜವಾಬ್ದಾರಿ ಜೊತೆಗೆ ಇದೀಗ ಖುಷಿಯ ಕ್ಷಣಗಳನ್ನ ರಕ್ಷಕ್ ಕೂಡಿಡುತ್ತಿದ್ದಾರೆ. ಹೌದು ಅಕ್ಕನ ಬಳೆ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರವನ್ನ ಅದ್ದೂರಿಯಾಗಿ ಅಷ್ಟೆ ಸಂಪ್ರದಾಯ ಬದ್ಧವಾಗಿ ಮಾಡಿದ್ದಾರೆ. ಅದ್ದೂರಿಯಾಗಿ ಡೆಕೋರೇಷನ್ ಮಾಡಿಸಿ, ಶಾಸ್ತ್ರಗಳ ಕಳೆ ಹೆಚ್ಚಿಸಿ ಅಕ್ಕನ ಕೈಗೆ ರಂಗನ್ನ ಹಚ್ಚಿಸಿದ್ದಾರೆ. ಹೌದು ನಿನ್ನೆಯಷ್ಟೇ ಬುಲೆಟ್ ಪ್ರಕಾಶ್ ಅವ್ರ ಮಗಳಿಗೆ ಮೆಹಂದಿ ಹಾಗೂ ಬಳೆ ಶಾಸ್ತ್ರವನ್ನ ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಮೆಹಂದಿ ಶಾಸ್ತ್ರಕ್ಕೆ ಹೊಂದುವಂತೆ ಸ್ಟೇಜ್ ನಿರ್ಮಿಸಿ ಅಲಂಕಾರ ಮಾಡಿ ಅಕ್ಕನನ್ನ ಕೂರಿಸಿ ರಂಗನ್ನು ಹೆಚ್ಚಿಸಿದ್ದಾರೆ. ಜೊತೆಗೆ ಬಳೆಶಾಸ್ತ್ರ ಕೂಡ ಮಾಡಿಸಿದ್ದಾರೆ ನಟ ರಕ್ಷಕ್.

ಅಕ್ಕನ ಮದುವೆ ಬಗ್ಗೆ ರಕ್ಷಕ್ ಬುಲೆಟ್ ಹೇಳಿದ್ದೇನು?

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿರೋ ನಟ ರಕ್ಷಕ್ ಅಕ್ಕನ ಮದುವೆ ಕುರಿತು ಹಲವು ವಿಚಾರಗಳನ್ನ ಹಂಚಿಕೊಂಡಿದ್ರು. ಅದರಲ್ಲೂ ಬುಲೆಟ್ ಪ್ರಕಾಶ್ ಸಾವಿನ ನಂತರ ಸಾಕಷ್ಟು ವಿಚಾರಗಳು ವೈರಲ್ ಆಗಿ ಬುಲೆಟ್ ಅವ್ರ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ಇನ್ನು ಈ ವಿಚಾರವಾಗಿ ಅಂದ್ರೆ ತಮಗೆ ಯಾರೋ ದುಡ್ಡು ನೀಡಿದ್ದಾರೆ ಅನ್ನೋ ವಿಚಾರವಾಗಿ ಮಾತನಾಡಿರೋ ರಕ್ಷಕ್ ಎಲ್ಲದಕ್ಕೂ ಸ್ಪಷ್ಟಕರಣ ನೀಡಿದ್ದಾರೆ. ಹೌದು ನಮಗೆ ಯಾರು ದುಡ್ಡು ಕೊಟ್ಟಿಲ್ಲ ಯಾಕೆ ಇಂತ ಉಹಾಪೋಹಾಗಳನ್ನ ಅಬ್ಬಿಸ್ತೀರಾ ದಯವಿಟ್ಟು ಅದಕ್ಕೆ ಬ್ರೇಕ್ ಹಾಕಿ ಅಂತ ಹೇಳಿ. ನಮ್ಮ ಅಪ್ಪ ಬುಲೆಟ್ ಪ್ರಕಾಶ್ ಅವ್ರು 450ಕ್ಕೂ ಅಧಿಕ ಸಿನಿಮಾಗಳನ್ನ ಮಾಡಿದ್ದಾರೆ ಯಾಕೆ ಅವ್ರು ದುಡ್ಡು ಮಾಡಿರಲ್ವ? ಯಾವ ನಿರ್ಮಾಪಕರು ದುಡ್ಡಿಲ್ದೆ ಸಿನಿಮಾ ಕೆಲ್ಸಕ್ಕೆ ಕೈ ಹಾಕೋಲ್ಲ, ಅದೇ ರೀತಿ ಕಲಾವಿದರು ಅಂದ ಮೇಲೆ ಅವ್ರಿಗೆ ಆಸೆ ಕನಸ್ಸು ಕೆಲವೊಂದಷ್ಟು ಉಳಿತಾಯ ಅನ್ನೋದು ಇರುತ್ತಲ್ವಾ? ಅದೇ ರೀತಿ ನಮ್ಮ ಅಪ್ಪನಿಗೆ ನಮ್ಮ ಅಕ್ಕನ ಮದುವೆನಾ ಹಿಂಗೇ ಮಾಡಬೇಕು ಅನ್ನೋ ಕನಸ್ಸಿತ್ತು. ಹಾಗಾಗಿ ಆ ಕನಸನ್ನ ಸುಮ್ನೆ ಕಾಣೋಕಾಗುತ್ತಾ..

ಅದಕ್ಕಾಗಿ ಅವ್ರು ಕೆಲವೊಂದಷ್ಟು ಉಳಿತಾಯ ಅನ್ನೋದನ್ನ ಮಾಡಿರ್ತಾರೆ. ಅದರಲ್ಲೇ ಈಗ ನಾನು ನಮ್ಮಕ್ಕನ ಮದುವೆ ಮಾಡುತ್ತಿರೋದು ಹಾಗಾಗಿ ಅವ್ರು ಕೊಟ್ರು ಇವ್ರು ಕೊಟ್ರು ಅನ್ನೋದನ್ನ ದಯವಿಟ್ಟು ವೈರಲ್ ಮಾಡ್ಬೇಡಿ. ನಮಗೆ ಯಾರು ಕೊಟ್ಟಿಲ್ಲ. ನಮ್ಮ ಅಪ್ಪ ಅಂದು ಕೊಂಡಾಗೆ ಮದುವೆ ಮಾಡೋಕೆ ಆಗಲ್ಲ ಅಂದ್ರು ಅದ್ರಲ್ಲಿ 50% ಆದ್ರೂ ಮಾಡೇ ಮಾಡ್ತೀನಿ, ಎಲ್ಲರು ಬಂದು ಹರಸಿ ಆರೈಸಿ ಅಂತ ಹೇಳಿದ್ದಾರೆ. ಅಲ್ದೇ ನಟ ದರ್ಶನ್ ಅವ್ರ ಕಡೆಯಿಂದ ನಿಮಗೆ ನಮ್ಮ ಅಕ್ಕನ ಮದುವೆಗೆ ಸಿಕ್ಕಿರೋ ಸಹಾಯ ಏನು ಅಂದಾಗ ಅದಕ್ಕೂ ಕೂಡ ಬಹಳ ಜಾಣರಂತೆ ಮದುವೆಯ ನಂತರ ಗೊತ್ತಾಗುತ್ತೆ ಅಂತ ಹೇಳಿದ್ದಾರೆ. ಇನ್ನು ಕೆಲವೊಂದಷ್ಟು ಉಹಾಪೋಗಳ ಮಧ್ಯೆಯೇ ನಟ ರಕ್ಷಕ್ ಇದೀಗ ಅಕ್ಕನ ಮದುವೆಯ ಶಾಸ್ತ್ರಗಳನ್ನ ಮಾಡಿ ಮುಗಿಸಿದ್ದು, ಮದುವೆ ತಯಾರಿ ಕೂಡ ಜೋರಾಗಿ ಮಾಡುತ್ತಿದ್ದಾರೆ.

ಹೌದು ಇದೆ ಮೇ 6&7 ರಂದು ಅಂದ್ರೆ ನಾಳೆ ಮಾತು ನಾಳೆಯದ್ದು ವರ್ಷಿಣಿ ಮೋನಿಕಾ ಅವ್ರ ಮದುವೆ ನಡೆಯಲ್ಲಿದ್ದು, ಬುಲೆಟ್ ಅವ್ರ ಕನಸಿನಂತೆ ಮದುವೆಯನ್ನ ಅಚ್ಚುಕಟ್ಟಾಗಿ ಮಾಡಲು ನಟ ರಕ್ಷಕ್ ಭರ್ಜರಿ ತಯಾರಿ ನಡೆಸಿದ್ದಾರೆ. ಹೌದು ಸ್ವರ್ಗ ಹೇರಿಟೆಜ್ ವೆಡ್ಡಿಂಗ್ ವೆನ್ಯೂ ಬೆಂಗಳೂರಿನಲ್ಲಿ ಈಗಾಗ್ಲೇ ಮದುವೆಗೆ ಸಕಲ ಸಿದ್ಧತೆಗಳು ಆಗಿದ್ದು. ಮದುವೆ ಶಾಸ್ತ್ರಗಳು ಶುರುವಾಗಿವೆ. ಇನ್ನು ಮದುವೆಗೆ ಸಾಧ್ಯವಾದಷ್ಟು ಚಿತ್ರರಂಗದ ಎಲ್ಲಾ ಗಣ್ಯರು, ಸೆಲಬ್ರೇಟಿಗಳು ಬರ್ತಾರೆ ಅಂತ ಹೇಳಲಾಗುತ್ತಿದ್ದು. ಬುಲೆಟ್ ಅವ್ರ ಮಗ ನಟ ರಕ್ಷಕ್ ಈಗಾಗ್ಲೇ ಎಲ್ಲರಿಗೂ ಸ್ವತಃ ತಾವೇ ಖುದ್ದಾಗಿ ಹೋಗಿ ಮದುವೆ ಆಮಂತ್ರಣ ಪತ್ರಿಕೆಯನ್ನ ಕೊಟ್ಟು ಬಂದಿದ್ರು. ಆ ಫೋಟೋಗಳು ಕೂಡ ಸಾಕಷ್ಟು ವೈರಲ್ ಆಗಿದ್ವು. ಇದರ ಜೊತೆ ನಟ ದರ್ಶನ್ ಅವ್ರು ಮದುವೆಗೆ ಏನ್ ಕೊಟ್ಟಿದ್ದಾರೆ? ಅಥವಾ ಕೊಡುತ್ತಾರೆ ಅನ್ನೋದು ಕೂಡ ಈಗ ಸಾಕಷ್ಟು ಚರ್ಚೆಯಲ್ಲಿರುವ ವಿಷಯ. ಒಟ್ಟಿನಲ್ಲಿ ಇನ್ನೆರಡು ದಿನದಲ್ಲಿ ಇದೆಲ್ಲದಕ್ಕೂ ಉತ್ತರ ಸಿಗುವುದಂತೂ ಖಚಿತ.

ಇದನ್ನೂ ಓದಿ: ರೈಲ್ವೆನಲ್ಲಿ ರಾತ್ರಿ ಸಮಯ ಜರ್ನಿ ಮಾಡುವವರಿಗೆ, ರೈಲ್ವೆ ಇಲಾಖೆಯು ಹೊಸ ನಿಯಮಗಳನ್ನು ರೂಪಿಸಿದೆ