ಭಾರತದಲ್ಲಿ ಬುಲೆಟ್ ಟ್ರೈನ್ ಓಡಾಡಲಿದೆ ಎಂಬುದು ಎಷ್ಟೋ ವರುಷಗಳಿಂದ ಕೇಳುತ್ತಾ ಇದ್ದೇವೆ. ಆದರೆ ಅದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದಿತ್ತು. 2023 ರಲ್ಲಿಯೇ ಭಾರತದಲ್ಲಿ ಬುಲೆಟ್ ಟ್ರೈನ್ ಓಡಾಡಲಿದೆ ಎಂಬ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದರೆ ಬುಲೆಟ್ ಟ್ರೈನ್ ಬಿಡುಗಡೆ ಆಗಿರಲಿಲ್ಲ. ಈಗ ಬುಲೆಟ್ ಟ್ರೈನ್ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ.
ಗಂಟೆಗೆ 250 ಕಿಲೋಮೀಟರ್ ಸಂಚರಿಸಲಿದೆ ಬುಲೆಟ್ ಟ್ರೈನ್ :- ದೂರದ ಪ್ರಯಾಣವನ್ನು ಹತ್ತಿರ ಗೊಳಿಸುವಲ್ಲಿ ಸಹಕಾರಿ ಆಗುವ ಬುಲೆಟ್ ಟ್ರೈನ್ ಗಂಟೆಗೆ ಬರೋಬ್ಬರಿ 250 ಕಿಲೋಮೀಟರ್ ಸಂಚರಿಸಲಿದೆ. ಇದು ಮೆಕ್ ಇನ್ ಇಂಡಿಯಾದ ಬಹುದೊಡ್ಡ ಯೋಜನೆ ಆಗಿದೆ. ಈ ಬಗ್ಗೆ ಮಾತನಾಡಿದ ಟ್ವೆಶ್ ಮಿಶ್ರಾ ಅವರು ಮೊದಲ ಬಾರಿಗೆ 250 ಕಿಲೋಮೀಟರ್ ಸ್ಪೀಡ್ ನಲ್ಲಿ ಸಂಚರಿಸಲಿದೆ. ಮೊದಲ ಹಂತದಲ್ಲಿ ಎರಡು ಬುಲೆಟ್ ಟ್ರೈನ್ ಸಂಚರಿಸಲಿದ್ದು ಎರಡು ಟ್ರೈನ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಅಂದಾಜು 1.08 ಲಕ್ಷ ಕೋಟಿ ರೂಪಾಯಿ ಆಗಿರುತ್ತದೆ. ಈ ರೈಲು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ನಲ್ಲಿ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆ.
ಈ ವರ್ಷ ಬಿಡುಗಡೆ ಮಾಡುವುದು ಸವಾಲಿನ ಸಂಗತಿ ಆಗಿದೆ. :- ಬುಲೆಟ್ ಟ್ರೈನ್ ಬಿಡುಗಡೆ ಯಾವಾಗ ಆಗಲಿದೆ ಎಂಬುದು ಇಡೀ ಭಾರತೀಯರು ಕಾತುರದಿಂದ ಕಾಯುತ್ತಾ ಇದ್ದಾರೆ. ಬುಲೆಟ್ ಟ್ರೈನ್ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಆದರೆ ಈ ವರ್ಷ ಮುಗಿಯುವುದರ ಒಳಗೆ ಬುಲೆಟ್ ಟ್ರೈನ್ ಬಿಡುಗಡೆ ಮಾಡುವುದು ರೈಲ್ವೆ ಇಲಾಖೆಗೆ ಸವಾಲಿನ ಸಂಗತಿ ಆಗಿದೆ. ರೈಲು ಸೆಟ್‌ಗಳನ್ನು ಸಾಗಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಇದಕ್ಕೆ ಐಸಿಎಫ್‌ಗೆ ಸಹಾಯವನ್ನು ತೆಗೆದುಕೊಳ್ಳುತ್ತೇವೆ, ಎಂಬ ಬಗ್ಗೆ ಮಾಹಿತಿಯನ್ನು ಇಲಾಖೆ ನೀಡಿದೆ.
ಒಂದೇ ಭಾರತ್ ಪ್ಲಾಟ್ ಫಿರ್ಮ್ ಬಳಸಿ ಬುಲೆಟ್ ಟ್ರೈನ್ ನಿರ್ಮಿಸುವ ಸಾಧ್ಯತೆ :- ಸಧ್ಯಕ್ಕೆ ಬುಲೆಟ್ ಟ್ರೈನ್ ಗೆ ವಿಶೇಷವಾಗಿ ಪ್ಲಾಟ್ ಫಾರ್ಮ್ ಇಲ್ಲದೆ ಇರುವ ಕಾರಣ ಒಂದೇ ಭಾರತ್ ಟ್ರೈನ್ ಗೆ ಇರುವ ಪ್ಲಾಟ್ ಫಾರ್ಮ್ ಬಳಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೇವಲ 500 ರೂ. ಹೂಡಿಕೆ ಮಾಡುವುದರ ಮೂಲಕ, ಉತ್ತಮ ಲಾಭ ಗಳಿಸಿ!
ಪ್ರಸ್ತುತ ಹಣಕಾಸು ವರ್ಷದಲ್ಲಿ ಎರಡು ಬುಲೆಟ್ ಟ್ರೈನ್
2023-24 ರ ಹಣಕಾಸು ವರ್ಷದಲ್ಲಿ ಇತ್ತು ಎರಡು ಸ್ಟ್ಯಾಂಡರ್ಡ್-ಗೇಜ್ ಬುಲೆಟ್ ರೈಲುಗಳನ್ನು ದೇಶೀಯವಾಗಿ ಉತ್ಪಾದಿಸುವ ಕಾರ್ಯವನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಅಂದರೆ ICF ಗೆ ಭಾರತೀಯ ರೈಲ್ವೇ ನೀಡಿದೆ. ಈಗಾಗಲೆ ಜಪಾನಿನ ಪೂರೈಕೆದಾರ ಬಳಿ ಮಾತುಕತೆ ನಡೆಸಿದ್ದು. ಅದರ ನಂತರ ಈ ವರ್ಷ ಬಿಡುಗಡೆ ಆಗುವ ಬಗ್ಗೆ ನಿರ್ಧರಿಸಲಾಗಿದೆ ಎಂಬುದಾಗಿ ರೈಲ್ವೆ ಇಲಾಖೆ ಮಾಹಿತಿ ತಿಳಿಸಿದೆ.
ಬೆಳವಣಿಗೆಯ ಪರಿಚಯ ನೀಡಿದ ರೈಲ್ವೆ ಇಲಾಖೆ :- ಬುಲೆಟ್ ಟ್ರೈನ್ ನಿರ್ಮಾಣದ ಬಗ್ಗೆ ಮಾತನಾಡಿದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಐಸಿಎಫ್ ಸಹಾಯದಿಂದ ಚೆನ್ನೈ ಎಂಟು ಕಾರುಗಳ ಎರಡು ಸ್ಟ್ಯಾಂಡರ್ಡ್-ಗೇಜ್ ರೈಲುಸೆಟ್‌ಗಳನ್ನು ನಿರ್ಮಾಣ ಆಗುತ್ತದೆ. ಇದನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಪ್ರತಿಯೊಂದೂ ಸ್ಟೀಲ್ ಕಾರ್ ಬಾಡಿಯು 250 ಕಿಲೋಮೀಟರ್ ಸ್ಪೀಡ್ ನಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಎಲ್ಲ ಅಡೆತಡೆಗಳ ನಡುವೆ ಭಾರತದಲ್ಲಿ 2024 ರ ಅಂತ್ಯದ ವೇಳೆಗೆ ಬುಲೆಟ್ ಟ್ರೈನ್ ಸಂಚಾರ ಮಾಡಲಿದೆ.
ಇದನ್ನೂ ಓದಿ: ಹೋಮ್ ಲೋನ್ ಗೆ EMI ಕಟ್ಟುವ ಹೊರೆಯನ್ನು ಕಡಿಮೆ ಮಾಡುವ ಐದು ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.