ಎಲ್ಲರಿಗೂ ಕಾರು ಕೊಂಡುಕೊಳ್ಳಬೇಕು ಎಂಬ ಕನಸು ಇದ್ದೆ ಇರುತ್ತದೆ. ಆದರೆ ನಮ್ಮ ಕನಸಿನ ಕಾರು ನಮಗೆ ಕೈಗೆಟುಕದ ಬೆಲೆಯಲ್ಲಿ ಇದ್ದಾಗ ನಾವು ನಿರಾಶೆ ಗೊಳ್ಳುತ್ತೇವೆ. ಮಾರ್ಚ್ ತಿಂಗಳು ಹಣಕಾಸು ವರ್ಷದ ಕೊನೆಯ ತಿಂಗಳು ಈ ಸಮಯದಲ್ಲಿ ಹಲವಾರು ಕಂಪನಿಗಳು ಅಥವಾ ಅಂಗಡಿಗಳು ಹಲವಾರು ಉಡುಗೆಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಅದರಂತೆ ಈಗ ರಿಯಾಯಿತಿ ದರದಲ್ಲಿ ಕಾರ್ ಸಿಗಲಿದೆ.
ಯಾವ ಕಂಪನಿಯಿಂದ ರಿಯಾಯಿತಿ ದರವು ಸಿಗಲಿದೆ?: ಸಾಮಾನ್ಯವಾಗಿ ಹೊಸ ಹಣಕಾಸು ವರ್ಷ ಬಂದರೆ ಹಲವಾರು ಕಾರು ಕಂಪನಿಗಳು ಬೆಲೆ ಏರಿಸುತ್ತವೆ. ಆದರೆ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಈಗ ಮಾರುತಿ ಸುಜುಕಿ ಕಂಪನಿಯ ಗ್ರಾಹಕರಿಗೆ ಮಾರ್ಚ್ ತಿಂಗಳಲ್ಲಿ ಕೆಲವು ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಇದರಿಂದ ನೀವು ಹಣವನ್ನು ಉಳಿಸುವ ಜೊತೆಗೆ ನಿಮ್ಮ ಇಷ್ಟದ ಕಾರುಗಳನ್ನು ಕೊಂಡುಕೊಳ್ಳಬಹುದು.
ಏಷ್ಟು ರಿಯಾಯಿತಿ ಸಿಗುತ್ತಿದೆ ?
ಅರೆನಾ ಡೀಲರ್‌ಶಿಪ್‌ಗಳಲ್ಲಿ ಮಾರಾಟವಾಗುವ ಕೆಲವು ಮಾರುತಿ ಕಾರುಗಳ ಮೇಲೆ 67,000 ರೂಪಾಯಿಗಳಿಗೆ ರಿಯಾಯಿತಿ ಸಿಗುತ್ತಿದೆ. ಈ ರಿಯಾಯಿತಿ ಕೊಡುಗೆಗಳು ಮಾರ್ಚ್ ತಿಂಗಳ ಕೊನೆಯವರೆಗೆ ಮಾತ್ರ ಲಭ್ಯವಿರುತ್ತವೆ. ನಂತರ ನೀವು ಮೂಲ ಬೆಲೆಯನ್ನು ಕೊಟ್ಟು ಕಾರ್ ತೆಗೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರಿಯಾಯಿತಿ ಪಡೆಯಬಹುದಾದ ಕಾರುಗಳು ಹೆಸರು ಮತ್ತು ರಿಯಾಯಿತಿ ಬೆಲೆ :-
- ಆಲ್ಟೊ ಕೆ10: 67,000 ರೂ. ರಿಯಾಯಿತಿ ಸಿಗುತ್ತಿದೆ.
- ಎಸ್-ಪ್ರೆಸ್ಸೊ: 66,000 ರೂ. ರಿಯಾಯಿತಿ ಸಿಗುತ್ತಿದೆ.
- ವ್ಯಾಗನ್ ಆರ್: 66,000 ರೂ. ರಿಯಾಯಿತಿ ಸಿಗುತ್ತಿದೆ.
- ಸೆಲೆರಿಯೊ: 61,000 ರೂ. ರಿಯಾಯಿತಿ ಸಿಗುತ್ತಿದೆ.
ಕಾರ್ ಗಳ ಮೂಲ ಬೆಲೆ :-
- ವ್ಯಾಗನ್ ಆರ್: 5.54 ಲಕ್ಷದಿಂದ ₹7.38 ಲಕ್ಷ ರೂಪಾಯಿ.
- ಸೆಲೆರಿಯೊ: 5.37 ಲಕ್ಷದಿಂದ 7.09 ಲಕ್ಷ ರೂಪಾಯಿ.
- ಎಸ್-ಪ್ರೆಸ್ಸೋ: 4.26 ಲಕ್ಷದಿಂದ 6.12 ಲಕ್ಷ ರೂಪಾಯಿ.
- ಆಲ್ಟೊ ಕೆ10: 3.99 ಲಕ್ಷದಿಂದ 5.96 ಲಕ್ಷ ರೂಪಾಯಿ.
ಇದನ್ನೂ ಓದಿ: 128GB ಸ್ಟೋರೇಜ್ ಮತ್ತು ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟಕ್ಕಿರುವ ಈ ಹೊಸ ಸ್ಮಾರ್ಟ್ ಫೋನ್ ಯಾವುದು?
ಇನ್ನು ಹಲವು ಕೊಡುಗೆಗಳು ಸಿಗುತ್ತವೆ. :-
ನಗದು ರಿಯಾಯಿತಿಯನ್ನು ನೀಡುವ ಜೊತೆಗೆ ಕೆಲವು ಕೊಡುಗೆಗಳು ಸಿಗಲಿದ್ದು, ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಸಿಗುತ್ತವೆ ಆದರೆ ಎಲ್ಲಾ ರಿಯಾಯಿತಿಗಳು ಡೀಲರ್‌ಶಿಪ್ ಗಳು ಹಾಗೂ ನಗರವನ್ನು ಅವಲಂಬಿಸಿ ರಿಯಾಯಿತಿ ಕೊಡುಗೆಗಳು ಬೇರೆ ಬೇರೆ ಇರಬಹುದು.ಆದ್ದರಿಂದ ನೀವು ಕಾರನ್ನು ಖರೀದಿಸುವ ಮೊದಲು ಡೀಲರ್‌ಶಿಪ್‌ನಿಂದ ರಿಯಾಯಿತಿ ಕೊಡುಗೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆದ ನಂತರ ಕಾರ್ ಕೊಂಡುಕೊಳ್ಳಿ.
ಕಾರ್ ಗಳ ಮಾರ್ಕೆಟಿಂಗ್ ವಿವರ :- ಮಾರುತಿ ಸುಜುಕಿ ವ್ಯಾಗನ್ ಆರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಆಗಿದ್ದು ಹಲವಾರು ತಿಂಗಳುಗಳಿಂದ ಈ ಕಾರು ಭಾರೀ ಮಾರಾಟವನ್ನು ಕಾಣುತ್ತಿದೆ. ಮಾರಾಟದ ವಿಚಾರದಲ್ಲಿ ಆಲ್ಟೊ ಕೂಡ ಉತ್ತಮ ಸಾಧನೆ ತೋರಿದೆ. ಆದರೆ, ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ಮತ್ತು ಸಾಮಾನ್ಯವಾಗಿ ಟಾಪ್-20 ಮಾರಾಟದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಕಾರ್ ಕೊಂಡುಕೊಳ್ಳುವ ಮುನ್ನ ಎಲ್ಲಾ ಕಾರ್ ಬಗ್ಗೆ ಪೂರ್ಣ ಮಾಹಿತಿ ಮತ್ತು ನಿಮಗೆ ಸಿಗುವ ರಿಯಾಯಿತಿ ಕೊಡುಗೆ ಹಾಗೂ ನಿಯಮಗಳ ಬಗ್ಗೆ ಪೂರ್ಣವಾಗಿ ತಿಳಿಯುವುದು ಉತ್ತಮವಾಗಿದೆ. ನಿಮ್ಮ ಹಣದ ಉಳಿತಾಯದ ಜೊತೆಗೆ ಮೋಸ ಹೋಗದಂತೆ ತಡೆಯಬಹುದು.
ಇದನ್ನೂ ಓದಿ: ನಿಮ್ಮ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಏಕೈಕ ಕಾರು ಎಂದರೆ ಅದುವೇ ಟಾಟಾ ಪಂಚ್, ಇದರ ಬಿಡುಗಡೆ ಯಾವಾಗ?