ಈಗಾಗಲೆ ಡೀಸೆಲ್ ಮತ್ತು ಪೆಟ್ರೋಲ್ ದರಗಳ ಜೊತೆಗೆ ದಿನಸಿ ಸಾಮಾಗ್ರಿಗಳ ಬೆಲೆಗಳು ಏರಿಕೆ ಆಗುತ್ತಿವೆ. ಮೂಲಗಳ ಈಗ ಇದರ ಬೆನ್ನಲ್ಲೇ ರಾಜ್ಯದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ದರಗಳು ಜಾಸ್ತಿ ಆಗುವ ಸಾಧ್ಯತೆ ಇದೆ. ರಾಜ್ಯದ ಜನರಿಗೆ ಇದು ಬರೆಯಾಗಿ ಪರಿಣಮಿಸಲಿದೆ.
ಆದಾಯಕ್ಕಿಂತ ಖರ್ಚು ಹೆಚ್ಚಾದ ಪರಿಣಾಮ ಬಸ್ ದರ ಹೆಚ್ಚಳ :- ಡೀಸೆಲ್ ಮತ್ತು ಪೆಟ್ರೋಲ್ ದರಗಳ ಜೊತೆಗೆ ಬಸ್ ನಾ ಬಿಡಿ ಭಾಗಗಳ ದರ ಹೆಚ್ಚಳ ಆಗಿದೆ. ಜಾರ್ಜ್ ಸಿಬ್ಬಂದಿ ವೇತನ ಹೆಚ್ಚಳ ಮಾಡಿರುವ ಕಾರಣ ಎಲ್ಲವೂ ಸೇರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಖರ್ಚು ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದ 2022-23 ನೇ ಸಾಲಿನಲ್ಲಿ ನಿಗಮಗಳ ಸಾಲದ ಮೊತ್ತ ಹಾಗೂ ನಿರ್ವಹಣೆಯ ವೆಚ್ಚವು 4 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿಗಿದೆ. ಇದರ ಜೊತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ರಾಜ್ಯದಲ್ಲಿ ಹೆಚ್ಚುವರಿ ಬಸ್ ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್ಚುವರಿ ಬಸ್ ನೀಡಿದರು ಸಹ ಆದಾಯದಲ್ಲಿ ಯಾವುದೇ ಏಕೆ ಕಂಡು ಬಾರದೆ ಇರುವ ಕಾರಣದಿಂದ ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡಬೇಕೆಂದು ಮಾತುಕತೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ಶೇಕಡಾ 39% ಬಸ್ ಪ್ರಯಾಣ ದರ ಏರಿಕೆ ಆಗಬೇಕಿತ್ತು ಎಂದು ರಸ್ತೆ ನಿಗಮ ಮಂಡಳಿಗಳು ಹೇಳಿವೆ :- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಪ್ರಯಾಣ ದರ ಏರಿಸುವ ಅಧಿಕಾರವನ್ನು ನೀಡುವ ನಿಯಮ ಇದೆ. ಆದರೆ 2020ರಲ್ಲಿ ಬಿಎಂಟಿಸಿ ಹಾಗೂ ಉಳಿದ ರಸ್ತೆ ಸಾರಿಗೆ ನಿಗಮಗಳು ಬಸ್‌ಗಳ ಪ್ರಯಾಣ ದರವನ್ನು ಶೇಕಡಾ 12% ಹೆಚ್ಚಳ ಮಾಡಿತ್ತು. ಅದಾದ ನಂತರ ಯಾವುದೇ ರೀತಿಯ ದರ ಬದಲಾವಣೆ ಆಗಿರ್ಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಶೇಕಡಾ 39% ಪ್ರಯಾಣ ದರ ಹೆಚ್ಚಿಸ ಬೇಕಾಗಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೇವಲ 500 ರೂ. ಹೂಡಿಕೆ ಮಾಡುವುದರ ಮೂಲಕ, ಉತ್ತಮ ಲಾಭ ಗಳಿಸಿ!
ಪ್ರತಿ ವರ್ಷ ಒಂದು ಸಾವಿರ ಕೋಟಿ ಹೆಚ್ಚು ವೆಚ್ಚ ಆಗುತ್ತಿರುವ ಲೆಕ್ಕಾಚಾರಗಳ ಮಾಹಿತಿ :-
- ಡೀಸೆಲ್ ಬೆಲೆ ಏರಿಕೆ: 2020 ರಿಂದ 2024ರವರೆಗೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 61 ರೂಪಾಯಿಗಳಿಂದ 88 ರೂಪಾಯಿಗಳಿಗೆ ಏರಿಕೆಯಾಗಿದೆ . ನಾಲ್ಕು ವರ್ಷದಲ್ಲಿ ಡೀಸೆಲ್ ಏರಿಕೆ ಆಗಿರುವ ಮೊತ್ತ 21 ರೂಪಾಯಿ.
- ವೆಚ್ಚ ಏರಿಕೆ: ಸಿಬ್ಬಂದಿ ವೇತನ ಮತ್ತು ಭತ್ಯೆಗಳು ಶೇಕಡಾ 20% ಏರಿಕೆ ಆಗಿದೆ.
- ksrtc ಮೇಲಿನ ಪರಿಣಾಮ: ಡೀಸೆಲ್ ಖರ್ಚು ಪ್ರತಿದಿನ 3.10 ಕೋಟಿ ರೂಪಾಯಿಗಳಿಂದ 5.30 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಒಟ್ಟು ಆದಾಯದ ಶೇಕಡಾ 45% ರಷ್ಟು ಡೀಸೆಲ್ ಗೆ ಬೇಕಾಗುತ್ತದೆ. ಜೊತೆಗೆ ಸಿಬ್ಬಂದಿ ವೇತನಕ್ಕೆ ವಾರ್ಷಿಕ 300 ಕೋಟಿ ರೂಪಾಯಿ ಹೆಚ್ಚುವರಿ ಖರ್ಚು ಆಗುತ್ತದೆ. ಇದರ ಪರಿಣಾಮವಾಗಿ.
ಒಂದು ವರ್ಷಕ್ಕೆ 1,000 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹೊರೆ ಆಗುತ್ತಿದೆ.
ಹೆಚ್ಚಾದ ವೆಚ್ಚದಿಂದ ಈಗ ನಾಲ್ಕು ಸಾರಿಗೆ ನಿಗಮ ಮಂಡಳಿಗಳು ಸಹ ಬಸ್ ದರವನ್ನು ಏರಿಕೆ ಮಾಡುವ ಸಂದರ್ಭ ಎದುರಾಗಿದೆ. ದರ ಏರಿಕೆಯ ಬಗ್ಗೆ ಇನ್ನು ಮಾತುಕತೆಯ ಹಂತದಲ್ಲಿ ಇದ್ದು ದರ ನಿರ್ಧಾರ ಇನ್ನು ಆಗಿಲ್ಲ. ಕೆಎಸ್ಸಾರ್ಟಿಸಿ ದರ ಏರಿಕೆಯ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಬೇಕಿದೆ.
ಇದನ್ನೂ ಓದಿ: ಸ್ಮಾರ್ಟ್ ಮತ್ತು ಕಾಂಪೋಸಿಟ್ ಗ್ಯಾಸ್ ಸಿಲಿಂಡರ್‌ಗಳು; ಭವಿಷ್ಯದ ಅಡುಗೆಮನೆಗೆ ಸುರಕ್ಷಿತ ಮತ್ತು ಅನುಕೂಲಕರ ಆಯ್ಕೆಗಳು!